ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-23, 2016
Question 1 |
1.ಭಾರತೀಯ ವಾಣಿಜೋದ್ಯಮ ಮಹಾಸಂಘಗಳ ಒಕ್ಕೂಟ (FICCI)ಯ ನೂತನ ಅಧ್ಯಕ್ಷರಾಗಿ 2017ನೇ ಸಾಲಿಗೆ ಯಾರು ಆಯ್ಕೆಯಾಗಿದ್ದಾರೆ?
ಪಂಕಜ್ ಪಟೇಲ್ | |
ಅಮೃತ ಪಾಟೀಲ | |
ನಿರಂಜನ್ ಜೈನ್ | |
ಆರುಂಧತಿ ಸಿಂಗ್ |
ಪಂಕಜ್ ಪಟೇಲ್ ರವರು ಭಾರತೀಯ ವಾಣಿಜೋದ್ಯಮ ಮಹಾಸಂಘಗಳ ಒಕ್ಕೂಟ (Federation of Indian Chamber of Commerce and Industry)ಯ 2017ನೇ ಸಾಲಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹರ್ಷವರ್ದನ್ ನಿಯೊಟಿಯ ರವರಿಂದ ತೆರವಾದ ಸ್ಥಾನವನ್ನು ಇವರು ತುಂಬಲಿದ್ದಾರೆ. ಪಟೇಲ್ ರವರು ಕ್ಯಾಡಿಲ ಹೆಲ್ತ್ಕೇರ್ ಲಿಮಿಟೆಡ್ ನ ಚೇರಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ.
Question 2 |
2.ಈ ಕೆಳಗಿನ ಯಾವುದು ದೇಶದ ಮೊದಲ ಇ-ವಿಧಾನಸಭಾ ಕ್ಷೇತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ?
ಧರ್ಮಶಾಲಾ ವಿಧಾನಸಭಾ ಕ್ಷೇತ್ರ | |
ಪಾಲಂಪುರ ವಿಧಾನಸಭಾ ಕ್ಷೇತ್ರ | |
ಚಿಂತಾಮಣಿ ವಿಧಾನಸಭಾ ಕ್ಷೇತ್ರ | |
ಮೈಸೂರು ವಿಧಾನಸಭಾ ಕ್ಷೇತ್ರ |
ಹಿಮಾಚಲ ಪ್ರದೇಶದ ಪಾಲಂಪುರ ವಿಧಾನಸಭಾ ಕ್ಷೇತ್ರ ದೇಶದ ಮೊದಲ ಇ-ವಿಧಾನಸಭಾ ಕ್ಷೇತ್ರವೆಂಬ ಗೌರವಕ್ಕೆ ಪಾತ್ರವಾಗಿದೆ. ಈ ವಿಧಾನಸಭಾ ಕ್ಷೇತ್ರದ ಜನರು ಈಗ ಈ ಕ್ಷೇತ್ರದಲ್ಲಾಗುವ ಅಭಿವೃದ್ದಿ ಕಾಮಗಾರಿಗಳನ್ನು ಕಂಪ್ಯೂಟರ್ ಮೂಲಕ ನೋಡಬಹುದು. ಅಲ್ಲದೇ ಆನ್ ಲೈನ್ ಮೂಲಕ ವಿವಿಧ ಯೋಜನೆಗಳಿಗೆ ಬೇಡಿಕೆಯನ್ನು ಇಡಬಹುದು. ಈ ವ್ಯವಸ್ಥೆಯನ್ನು ಉಳಿದ 67 ಕ್ಷೇತ್ರಗಳಿಗೆ ಮುಂದಿನ ಆರು ತಿಂಗಳೊಳಗೆ ವಿಸ್ತರಿಸಲಾಗುವುದು.
Question 3 |
3. ಸಿಪಿಜೆ 2016 ಅಂತಾರಾಷ್ಟ್ರೀಯ ಪತ್ರಿಕಾ ಸ್ವಾತ್ರಂತ್ರ್ಯ ಪ್ರಶಸ್ತಿಯನ್ನು ಪಡೆದ ಭಾರತೀಯ ಪತ್ರಕರ್ತೆ ಯಾರು?
ಮಾಲಿನಿ ಸುಬ್ರಮಣ್ಯಂ | |
ಕಮಲಾ ಚಂದ್ರಶೇಖರ್ | |
ದೀಪಾ ಚಾಂದಿನಿ | |
ಸುರೇಖಾ ಸಿಂಗ್ |
ಭಾರತೀಯ ಪತ್ರಕರ್ತೆ ಮಾಲಿನಿ ಸುಬ್ರಮಣ್ಯಂ ರವರಿಗೆ ಸಿಪಿಜೆ 2016 ಅಂತಾರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ್ಯ ಪ್ರಶಸ್ತಿ ಲಭಿಸಿದೆ. ನಕ್ಸಲ್ ಪೀಡಿತ ಬಸ್ತಾರ್ ಪ್ರದೇಶದಿಂದ ನಿರ್ಬೀತವಾಗಿ ವರದಿ ನೀಡಿದಕ್ಕಾಗಿ ಪ್ರಶಸ್ತಿ ಲಭಿಸಿದೆ. ಅಮೆರಿಕದ ಎಲ್ ಸಾಲ್ವಡರ್ ಪತ್ರಕರ್ತ ಆಸ್ಕರ್ ಮಾರ್ಟಿನೆಜ್, ಟರ್ಕಿಯ ಕ್ಯಾನ್ ದುಂಡರ್ ಮತ್ತು ಈಜಿಪ್ಟ್ ನ ಛಾಯಾಗ್ರಾಹಕ ಅಬು ಜೈದ್ ರವರಿಗೆ ಪ್ರಶಸ್ತಿ ಲಭಿಸಿದೆ.
Question 4 |
ದೂರ | |
ದ್ರವ್ಯರಾಶಿ | |
ತಾಪಮಾನ | |
ಪ್ರಕಾಶ ಮಾನತೆ |
Question 5 |
5. ಈ ಕೆಳಗಿನ ಯಾರನ್ನು ಹಾಕಿ ಇಂಡಿಯಾದ ನೂತನ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ?
ಮರಿಯಮ್ಮ ಜೋಶಿ | |
ಮೊಹಮ್ಮದ್ ಮುಸ್ತಾಕ್ ಅಹ್ಮದ್ | |
ಜಗನ್ನಾಥ್ ಕಾಳೆ | |
ಪ್ರಭಾಕರ್ ಜಿಂದಾಲೆ |
ಹಿರಿಯ ಕ್ರೀಡಾಡಳಿತಗಾರ್ತಿ ಮರಿಯಮ್ಮ ಕೋಶಿ ಅವರು ಹಾಕಿ ಇಂಡಿಯಾದ (ಎಚ್ಐ) ನೂತನ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಈ ಮೊದಲು ಅಧ್ಯಕ್ಷ ಸ್ಥಾನದಲ್ಲಿದ್ದ ನರಿಂದರ್ ಬಾತ್ರಾ ಅವರು ಅಂತರರಾಷ್ಟ್ರೀಯ ಹಾಕಿ ಫೆಡರೇ ಷನ್ನ (ಎಫ್ಐಎಚ್) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರು ಎಚ್ಐ ಅಧ್ಯಕ್ಷ ಹಾಗೂ ಹಾಕಿ ಇಂಡಿಯಾ ಲೀಗ್ ಆಡ ಳಿತ ಮಂಡಳಿಯ ಮುಖ್ಯಸ್ಥ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
Question 6 |
6. ಇತ್ತೀಚೆಗೆ ಸುದ್ದಿಯಲ್ಲಿದ್ದ “ಪೃಥ್ವಿ-2” ಜೋಡಿ ಕ್ಷಿಪಣಿ ಸಂಬಂಧಿಸಿದಂತೆ ಹೇಳಿಕೆ ಗಮನಿಸಿ:
I) ಇದು ನೆಲದಿಂದ ನೆಲಕ್ಕೆ ಜಿಗಿಯುವ, ಮಧ್ಯಮ ಶ್ರೇಣಿ ಕ್ಷಿಪಣಿ
II) 450 ಕಿ.ಮೀ ದೂರವನ್ನು ಕ್ರಮಿಸಬಲ್ಲ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ
III) ಈ ಕ್ಷಿಪಣಿ 500 ರಿಂದ 1000 ಕೆಜಿ ಭಾರದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
I & II | |
II & III | |
I & III | |
ಮೇಲಿನ ಎಲ್ಲವೂ |
ಸ್ವದೇಶಿ ನಿರ್ಮಿತ “ಪೃಥ್ವಿ-2” ಜೋಡಿ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಪೃಥ್ವಿ ಕ್ಷಿಪಣಿ ನೆಲದಿಂದ ನೆಲಕ್ಕೆ ಜಿಗಿಯುವ, ಮಧ್ಯಮ ಶ್ರೇಣಿ ಕ್ಷಿಪಣಿ. 350 ಕಿ.ಮೀ ದೂರದ ಗುರಿಯನ್ನು ತಲುಪಬಲ್ಲ, ಈ ಕ್ಷಿಪಣಿಗಳು 500 ರಿಂದ 1000 ಕೆಜಿ ಭಾರದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.
Question 7 |
7. ಈ ಕೆಳಗಿನವುಗಳನ್ನು ಗಮನಿಸಿ
I) ಆಲಿಪ್ತ ನೀತಿ
II) ಕೊಲೊಂಬೊ ಪ್ಲಾನ್
III) ಆಗ್ನೇಯ ಏಷ್ಯಾ ಒಪ್ಪಂದ ಒಕ್ಕೂಟ
ಈ ಮೇಲಿನ ಯಾವುದಕ್ಕೆ ಭಾರತ ಸದಸ್ಯ ರಾಷ್ಟ್ರವಾಗಿದೆ?
I & II | |
II & III | |
I & III | |
ಮೇಲಿನ ಎಲ್ಲವೂ |
Question 8 |
8. ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highway Authority of India)ದ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
ಯಧುವೀರ್ ಸಿಂಗ್ ಮಲ್ಲಿಕ್ | |
ರಾಘವೇಂದ್ರ ಖಪೂರ್ | |
ಮಹೇಶ್ಚಂದ್ರ ರಾಥೋಡ್ | |
ಸುಧೀಂದ್ರ ಪಣಿಕರ್ |
ಯಧುವೀರ್ ಸಿಂಗ್ ಮಲ್ಲಿಕ್, 1983 ಬ್ಯಾಚ್ ಐಎಎಸ್ ಅಧಿಕಾರಿ ರವರು ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಘವ ಚಂದ್ರ ರವರಿಂದ ತೆರವಾದ ಸ್ಥಾನವನ್ನು ಇವರು ತುಂಬಲಿದ್ದಾರೆ. ಇದಕ್ಕೂ ಮುಂಚೆ ಮಲ್ಲಿಕ್ ಅವರು ನೀತಿ ಆಯೋಗ ವಿಶೇಷ ಕಾರ್ಯದರ್ಶಿಯಾಗಿದ್ದರು.
Question 9 |
9. ಪ್ರೊಫೆಸರ್ ಹೆಚ್ ಆರ್ ನಾಗೇಂದ್ರ ಸಮಿತಿ ಯಾವುದಕ್ಕೆ ಸಂಬಂಧಿಸಿದೆ?
ಹಕ್ಕಿಜ್ವರ ನಿಯಂತ್ರಣ | |
ಯೋಗ ಶಿಕ್ಷಣ | |
ಆರ್ಥಿಕ ಸೇರ್ಪಡೆ | |
ಕೃಷಿ ಆದಾಯ ಹೆಚ್ಚಳ |
ವಿಶ್ವವಿದ್ಯಾಲಯಗಳಲ್ಲಿ ಯೋಗ ಶಿಕ್ಷಣವನ್ನು ಅಳವಡಿಸಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಪ್ರೊಫೆಸರ್ ಹೆಚ್ ಆರ್ ನಾಗೇಂದ್ರ ನೇತೃತ್ವದ 12 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು. ಸಮಿತಿಯು ವರದಿಯನ್ನು ಸಲ್ಲಿಸಿದ್ದು ಯೋಗ ಶಿಕ್ಷಣ ಪಠ್ಯಕ್ರಮ ಹಾಗೂ ತರಭೇತುದಾರ ಆಯ್ಕೆಗೆ ಬೇಕಾಗಿರುವ ಮಾನದಂಡವನ್ನು ಶಿಫಾರಸ್ಸು ಮಾಡಿದೆ.
Question 10 |
ಫ್ಲೊರಿಡಾ | |
ಕ್ಯಾಲಿಪೋರ್ನಿಯಾ | |
ಸೌತ್ ಕೆರೊಲಿನಾ | |
ನ್ಯೂಜೆರ್ಸಿ |
ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ಹುದ್ದೆಗೆ ದಕ್ಷಿಣ ಕೆರೊಲಿನಾದ ಗವರ್ನರ್, ಭಾರತ ಮೂಲದ ನಿಕಿ ಹ್ಯಾಲೆ ಅವರನ್ನು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಆಯ್ಕೆ ಮಾಡಿದ್ದಾರೆ. ಭಾರತ ಮೂಲದ ದಂಪತಿಯ ಮಗಳಾದ ನಿಕಿ ಹ್ಯಾಲೆ (44) ಅವರು, ಟ್ರಂಪ್ ಅವರ ಸಂಪುಟದಲ್ಲಿ ಉನ್ನತ ಸ್ಥಾನ ಪಡೆಯುತ್ತಿರುವ ಮೊದಲ ಮಹಿಳೆ ಮತ್ತು ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-23.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
nice