ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,1, 2016

Question 1

1. ಅಖಿಲ ಭಾರತ ಟೆನ್ನಿಸ್ ಒಕ್ಕೂಟದ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಯಾರು ನೇಮಕಗೊಂಡಿದ್ದಾರೆ?

A
ಪ್ರವೀಣ ಮಹಾಜನ್
B
ಸುಶೀಲಾ ರಮೇಶ್
C
ಸುರಭಿ ಭಟ್ಟಚಾರ್ಯ
D
ಗೀತಾ ಪ್ರಮೋದಿನಿ
Question 1 Explanation: 
ಪ್ರವೀಣ ಮಹಾಜನ್:

ಪ್ರವೀಣ ಮಹಾಜನ್ ಅವರು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ)ಗೆ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ. ಎಐಟಿಎ ಅಧ್ಯಕ್ಷ ಸ್ಥಾನ ಅಲಂಕರಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಕೇಂದ್ರ ಅಬಕಾರಿ ಮತ್ತು ಸುಂಕ ಇಲಾಖೆಯ ಮೊದಲ ಮಹಿಳಾ ಮುಖಸ್ಥ ರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ಜೋಧಪುರದಲ್ಲಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯ (ಸಿಎಟಿ) ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Question 2

2. “ಗಡಿ ಭದ್ರತಾ ಪಡೆ (Border Security Force)” ಸಂಸ್ಥಾಪನ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

A
ನವೆಂಬರ್ 30
B
ಡಿಸೆಂಬರ್ 1
C
ಡಿಸೆಂಬರ್ 2
D
ಡಿಸೆಂಬರ್ 3
Question 2 Explanation: 
ಡಿಸೆಂಬರ್ 1:

ಗಡಿ ಭದ್ರತಾ ಪಡೆ ಸಂಸ್ಥಾಪನ ದಿನವನ್ನು ಡಿಸೆಂಬರ್ 1 ರಂದು ಆಚರಿಸಲಾಗುತ್ತದೆ. ಗಡಿ ಭದ್ರತಾ ಪಡೆಯನ್ನು ಡಿಸೆಂಬರ್ 1, 1965 ರಲ್ಲಿ ಸ್ಥಾಪಿಸಲಾಗಿದೆ. ಬಿಎಸ್ಎಫ್ ವಿಶ್ವದ ಅತಿ ದೊಡ್ಡ ಗಡಿ ಕಾವಲು ಪಡೆಯಾಗಿದೆ. ಪ್ರಸ್ತುತ ಬಿಎಸ್ಎಪ್ ಅನ್ನು ಬಾಂಗ್ಲ-ಭಾರತ, ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಕಾವಲಿಗೆ ನಿಯೋಜಿಸಲಾಗಿದೆ.

Question 3

3. 2016 ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ (India International Science Festival) ಯಾವ ನಗರದಲ್ಲಿ ನಡೆಯಲಿದೆ?

A
ನವ ದೆಹಲಿ
B
ಜೈಪುರ
C
ಉದಯ್ ಪುರ
D
ಚೆನ್ನೈ
Question 3 Explanation: 
ನವ ದೆಹಲಿ:

2016 ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ ನವದೆಹಲಿಯಲ್ಲಿ ಡಿಸೆಂಬರ್ 7 ರಿಂದ 11 ರವರೆಗೆ ನಡೆಯಲಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವಾಲಯ ಹಾಗೂ ವಿಜ್ಞಾನ ಭಾರತಿ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ. “Science for the Masses” ಇದು ಈ ಉತ್ಸವದ ಥೀಮ್. ಸರಿಸುಮಾರು 5000 ಯುವ ವಿಜ್ಞಾನಿಗಳು ತಮ್ಮ ವಿಜ್ಞಾನ ಪ್ರತಿಭೆಯನ್ನ ಈ ಉತ್ಸವದಲ್ಲಿ ಪ್ರದರ್ಶಿಸಲಿದ್ದಾರೆ.

Question 4

4. ಇತ್ತೀಚೆಗೆ ನಿಧನರಾದ “ಮಕ್ಕಲ್ ಪವಲರ್ ಇನ್ಕುಲಬ್” ಯಾವ ಭಾಷೆಯ ಪ್ರಸಿದ್ದ ಕವಿ?

A
ಮಲೆಯಾಳಂ
B
ತಮಿಳು
C
ಗುಜರಾತಿ
D
ರಾಜಸ್ತಾನಿ
Question 4 Explanation: 
ತಮಿಳು:

ಪ್ರಖ್ಯಾತ ತಮಿಳು ಕವಿ ಮತ್ತು ಹೋರಾಟಗಾರ “ಮಕ್ಕಲ್ ಪವಲರ್ ಇನ್ಕುಲಬ್” ರವರು ಚೆನ್ನೈನಲ್ಲಿ ನಿಧನರಾದರು. ಮಕ್ಕಲ್ ರವರು ತಮ್ಮ ಕವನಗಳಾದ “ನಾಂಗ ಮನುಷಾಂಗದ”, “ಕನ್ಮಣಿ ರಾಜಂ”, ಇತ್ಯಾದಿಗಳಿಂದ ಪ್ರಸಿದ್ದರಾಗಿದ್ದರು. ಇವರ ನಾಟಕ “ಅವೈ” ಆಧುನಿಕ ತಮಿಳಿನ ಪ್ರಸಿದ್ದ ನಾಟಕವೆಂದು ಬಣ್ಣಿಸಲಾಗಿದೆ ಹಾಗೂ ಕಾಲೇಜು ಪುಸ್ತಕಗಳಲ್ಲಿ ಪಠ್ಯಕ್ರಮವಾಗಿ ಅಳವಡಿಸಿಕೊಳ್ಳಲಾಗಿದೆ.

Question 5

5. ISBF ಸ್ನೂಕರ್ ಚಾಂಪಿಯನ್ ಷಿಪ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ಸ್ನೂಕರ್ ಯಾರು?

A
ಗೀತ್ ಸೇತಿ
B
ಮನನ್ ಚಂದ್ರ
C
ಆದಿತ್ಯ ಮೆಹ್ತಾ
D
ಪಂಕಜ್ ಅಡ್ವಾಣಿ
Question 5 Explanation: 
ಪಂಕಜ್ ಅಡ್ವಾಣಿ:

15 ಬಾರಿ ವಿಶ್ವ ಚಾಂಪಿಯನ್ ಆಗಿರುವ ಪಂಕಜ್ ಅಡ್ವಾಣಿ ರವರು 2016 ISBF ಸ್ನೂಕರ್ ಚಾಂಪಿಯನ್ ಷಿಪ್ ನಲ್ಲಿ ಆಂಡ್ರ್ಯೂ ಪಗೆಟ್ ರವರ ವಿರುದ್ದ ಸೋಲುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

Question 6

6. ವಿಶ್ವ ಆರ್ಥಿಕ ವೇದಿಕೆಯ “2016-ವ್ಯಾಪಾರ ಅನುವುಗೊಳಿಸುವ ಸೂಚ್ಯಂಕ (Enabling Trade Index)”ಭಾರತ ಎಷ್ಟನೇ ಸ್ಥಾನದಲ್ಲಿದೆ?

A
105
B
102
C
96
D
85
Question 6 Explanation: 
102:

ವಿಶ್ವ ಆರ್ಥಿಕ ವೇದಿಕೆಯ 2016 ವ್ಯಾಪಾರ ಅನುವುಗೊಳಿಸುವ ಸೂಚ್ಯಂಕದಲ್ಲಿ 136 ರಾಷ್ಟ್ರಗಳ ಪೈಕಿ ಭಾರತ 102ನೇ ಸ್ಥಾನದಲ್ಲಿದೆ. ಸೂಚ್ಯಂಕದಲ್ಲಿ ಸಿಂಗಾಪುರ ಮೊದಲ ಸ್ಥಾನದಲ್ಲಿದೆ. ನೆದರ್ಲ್ಯಾಂಡ್, ಹಾಂಗ್ ಕಾಂಗ್, ಲಕ್ಸಂಬರ್ಗ್ ಮತ್ತು ಸ್ವೀಡನ್ ಪಟ್ಟಿಯಲ್ಲಿ ಮೊದಲ ಐದು ಸ್ಥಾನ ಪಡೆದುಕೊಂಡಿವೆ.

Question 7

7. 2016 ರೇಮಂಡ್ ಕ್ರಾಸ್ ವರ್ಡ್ ಬುಕ್ ಆವಾರ್ಡ್ನ ಜೀವಮಾನ ಸಾಧನೆ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?

A
ಸಲ್ಮಾನ್ ರಶ್ದಿ
B
ಅಮಿತಾವ್ ಘೋಷ್
C
ಚೇತನ್ ಭಗತ್
D
ರಸ್ಕಿನ್ ಬಾಂಡ್
Question 7 Explanation: 
ರಸ್ಕಿನ್ ಬಾಂಡ್:

ವಿಶ್ವ ಪ್ರಸಿದ್ದ ಲೇಖಕ ರಸ್ಕಿನ್ ಬಾಂಡ್ ರವರಿಗೆ 2016 ರೇಮಂಡ್ ಕ್ರಾಸ್ ವರ್ಡ್ ಬುಕ್ ಆವಾರ್ಡ್ ಸಮಾರಂಭದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Question 8

8. “2016 ವಿಶ್ವ ಆಯುರ್ವೇದ ಕಾಂಗ್ರೆಸ್” ನ ಆತಿಥ್ಯ ವಹಿಸಲಿರುವ ರಾಷ್ಟ್ರ ಯಾವುದು?

A
ಭಾರತ
B
ಸಿಂಗಾಪುರ
C
ಮ್ಯಾನ್ಮಾರ್
D
ಮಲೇಷಿಯಾ
Question 8 Explanation: 
ಭಾರತ:

7ನೇ ವಿಶ್ವ ಆಯುರ್ವೇದ ಕಾಂಗ್ರೆಸ್ ಕೊಲ್ಕತ್ತಾದಲ್ಲಿ ಡಿಸೆಂಬರ್ 2 ರಿಂದ ನಡೆಯಲಿದೆ. ವಿಶ್ವ ಆಯುರ್ವೇದ ಫೌಂಡೇಷನ್ ಈ ಕಾಂಗ್ರೆಸ್ ಅನ್ನು ಆಯುಷ್ ಸಚಿವಾಲಯ ಹಾಗೂ ಪಶ್ಚಿಮ ಬಂಗಾಳ ಸರ್ಕಾರದ ಆಶ್ರಯದಲ್ಲಿ ಆಯೋಜಿಸುತ್ತಿದೆ.

Question 9

9. ಯಾವ ದೇಶದ ಡೇವಿಸ್ ತಂಡ “2016 ಡೇವಿಸ್ ಕಪ್ ಟೆನ್ನಿಸ್” ಪ್ರಶಸ್ತಿಯನ್ನು ಗೆದ್ದುಕೊಂಡಿತು?

A
ಸ್ವಿಟ್ಜರ್ಲ್ಯಾಂಡ್
B
ಸ್ಪೇನ್
C
ಅರ್ಜೇಂಟೆನಾ
D
ಜರ್ಮನಿ
Question 9 Explanation: 
ಅರ್ಜೇಂಟೆನಾ:

ಅರ್ಜೇಂಟೆನಾ ದೇಶದ ಡೇವಿಸ್ ತಂಡ ಕ್ರೋಟಿಯಾ ತಂಡವನ್ನು 3-2 ರಲ್ಲಿ ಸೋಲಿಸುವ ಮೂಲಕ 2016 ಡೇವಿಸ್ ಕಪ್ ಟೆನ್ನಿಸ್ ಗೆದ್ದುಕೊಂಡಿತು. ಇದು ಅರ್ಜೇಂಟೆನಾಗೆ ಚೊಚ್ಚಲ ಡೇವಿಸ್ ಕಪ್ ಟೆನ್ನಿಸ್ ಪ್ರಶಸ್ತಿ.

Question 10

10. 2016 ರಾಷ್ಟ್ರೀಯ ಚೆಸ್ ಚಾಂಪಿಯನ್ ಷಿಪ್ ಪ್ರಶಸ್ತಿ ಗೆದ್ದವರು __________?

A
ಚಿದಂಬರಂ
B
ಎಂ ಕಾರ್ತಿಕೇಯನ್
C
ಆರ್ ಆರ್ ಲಕ್ಷಣ್
D
ಚಂದ್ರ ಪ್ರಸಾದ್
Question 10 Explanation: 
ಎಂ ಕಾರ್ತಿಕೇಯನ್:

ಲಕ್ನೋದಲ್ಲಿ ನಡೆದ 2016 ರಾಷ್ಟ್ರೀಯ ಚೆಸ್ ಚಾಂಪಿಯನ್ ಷಿಪ್ ನಲ್ಲಿ ಎಂ ಕಾರ್ತಿಕೇಯನ್ ರವರು ಪ್ರಶಸ್ತಿಯನ್ನು ಗೆದ್ದುಕೊಂಡರು.

There are 10 questions to complete.

[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-1.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.