ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,2, 2016

Question 1

1.2016 ಅತ್ಯುತ್ತಮ ಘನ ತ್ಯಾಜ್ಯ ನಿರ್ವಹಣೆ ಸುಧಾರಣೆ ಯೋಜನೆಗೆ C40 ಪ್ರಶಸ್ತಿಯನ್ನು ಪಡೆದುಕೊಂಡ ಭಾರತದ ನಗರ ಯಾವುದು?

A
ಮೈಸೂರು
B
ಕೊಲ್ಕತ್ತಾ
C
ಹೈದ್ರಾಬಾದ್
D
ಮುಂಬೈ
Question 1 Explanation: 
ಕೊಲ್ಕತ್ತಾ:

2016 ಅತ್ಯುತ್ತಮ ಘನ ತ್ಯಾಜ್ಯ ನಿರ್ವಹಣೆ ಸುಧಾರಣೆ ಯೋಜನೆಗೆ ನೀಡಲಾಗುವ C40 ಪ್ರಶಸ್ತಿಯನ್ನು ಕೊಲ್ಕತ್ತಾ ಪಡೆದುಕೊಂಡಿದೆ. ಮೆಕ್ಸಿಕೊದಲ್ಲಿ ನಡೆದ C40 ಮೇಯರ್ ಶೃಂಗಸಭೆಯಲ್ಲಿ ಪ್ರಶಸ್ತಿಯನ್ನು ನೀಡಲಾಯಿತು. ಕೊಲ್ಕತ್ತಾ ಈ ಪ್ರಶಸ್ತಿಯನ್ನು ಪಡೆದ ಭಾರತದ ಏಕೈಕ ನಗರವಾಗಿದೆ.

Question 2

2. ಕೇಂದ್ರ ತನಿಖಾ ದಳ (ಸಿಬಿಐ)ನ ಹಂಗಾಮಿ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ?

A
ರೂಪಕ್ ಕುಮಾರ್ ದತ್ತ
B
ರಾಕೇಶ್ ಆಸ್ಥಾನ
C
ಕಮಲೇಶ್ ಚಂದ್ರ
D
ನಿರೋಜ್ ಕುಮಾರ್
Question 2 Explanation: 
ರಾಕೇಶ್ ಆಸ್ಥಾನ:

ಹಿರಿಯ ಐಪಿಎಸ್ ಅಧಿಕಾರಿ ರಾಕೇಶ್ ಆಸ್ಥಾನ ಅವರು ಸಿಬಿಐನ ಹಂಗಾಮಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 1984ರ ಗುಜರಾತ್ ಕೇಡರ್ ಅಧಿಕಾರಿಯಾದ ಆಸ್ಥಾನ ಅವರನ್ನು ಸಿಬಿಐನ ಉಪ ಮುಖ್ಯಸ್ಥರನ್ನಾಗಿ ಎರಡು ದಿನಗಳ ಹಿಂದಷ್ಟೇ ನೇಮಿಸಲಾಗಿತ್ತು. ಅನಿಲ್ ಸಿನ್ಹಾ ಅವರು ಎರಡು ವರ್ಷದ ಅಧಿಕಾರಾವಧಿಯನ್ನು ಪೂರ್ಣಗೊಳಿಸಿ ನಿವೃತ್ತರಾದರು. ಸಿಬಿಐ ಮುಖ್ಯಸ್ಥರೊಬ್ಬರ ನಿವೃತ್ತಿಯ ಬಳಿಕ ಅಧಿಕೃತವಾಗಿ ಬೇರೆ ಮುಖ್ಯಸ್ಥರನ್ನು ನೇಮಿಸದೆಯೇ ಇರುವುದು ಕಳೆದ 10 ವರ್ಷದಲ್ಲಿ ಇದೇ ಮೊದಲ ಬಾರಿ.

Question 3

3. __________ ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ (National Pollution Control Day) ವನ್ನು ಆಚರಿಸಲಾಗುತ್ತದೆ?

A
ಡಿಸೆಂಬರ್ 1
B
ಡಿಸೆಂಬರ್ 2
C
ಡಿಸೆಂಬರ್ 3
D
ಡಿಸೆಂಬರ್ 4
Question 3 Explanation: 
ಡಿಸೆಂಬರ್ 2:

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಪ್ರತಿ ವರ್ಷ ಡಿಸೆಂಬರ್ 2 ರಂದು ದೇಶದಾದ್ಯಂತ ಆಚರಿಸಲಾಗುತ್ತದೆ. ಮಾಲಿನ್ಯ ನಿಯಂತ್ರಣದ ಬಗ್ಗೆ ಸಾರ್ವಜನಿಕರು ಹಾಗೂ ಕೈಗಾರಿಕೆ ವಲಯದಲ್ಲಿ ಅರಿವು ಮೂಡಿಸುವುದು ಈ ದಿನದ ಉದ್ದೇಶ. 1984ರ ಭೂಪಾಲ್ ವಿಷ ಅನಿಲ ದುರಂತದಲ್ಲಿ ಮಡಿದವರನ್ನು ಸ್ಮರಿಸುವ ಅಂಗವಾಗಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ. ಭೂಪಾಲ್ ನಗರದ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ “ಮಿಥೈಲ್ ಐಸೋಸೈಯನೆಟ್” ವಿಷ ಅನಿಲ ಸೋರಿಕೆಗೊಂಡು ಸಾವಿರಾರು ಜನರು ಸಾವನ್ನಪ್ಪಿದ್ದರು.

Question 4

4. ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಆಫ್ ಇಂಡಿಯಾ (NSE)ದ ಹಂಗಾಮಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಯಾರು ನೇಮಕಗೊಂಡಿದ್ದಾರೆ?

A
ಜೆ ರವಿಚಂದ್ರನ್
B
ಎಸ್ ಎಸ್ ನಾಡಕರ್ಣಿ
C
ಕುಶಾಲ್ ಸಿಂಗ್
D
ಅಬ್ದುಲ್ ಖಾನ್
Question 4 Explanation: 
ಜೆ ರವಿಚಂದ್ರನ್:

ಜೆ ರವಿಚಂದ್ರನ್ ರವರನ್ನು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಆಫ್ ಇಂಡಿಯಾ (NSE)ದ ಹಂಗಾಮಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ (ಸಿಇಓ) ನೇಮಕಮಾಡಲಾಗಿದೆ. ಚಿತ್ರಾ ರಾಮಕೃಷ್ಣ ರವರು ವೈಯುಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ ಕಾರಣ ಈ ಹುದ್ದೆ ತೆರವಾಗಿತ್ತು.

Question 5

5. ಭಾರತದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ರಾಜ್ಯ ಯಾವುದು?

A
ಉತ್ತರ ಪ್ರದೇಶ
B
ಮಹಾರಾಷ್ಟ್ರ
C
ಮಧ್ಯ ಪ್ರದೇಶ
D
ಗುಜರಾತ್
Question 5 Explanation: 
ಮಹಾರಾಷ್ಟ್ರ:

ಮಹಾರಾಷ್ಟ್ರ ಭಾರತದಲ್ಲಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ರಾಜ್ಯ. ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ.

Question 6

6. ದೇಶವನ್ನು ಡಿಜಿಟಲ್ ಅರ್ಥವ್ಯವಸ್ಥೆಯಾಗಿ ರೂಪಿಸುವ ನೀಲ ನಕ್ಷೆ ತಯಾರಿಸಲು ಕೇಂದ್ರ ಸರ್ಕಾರ ಯಾರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ?

A
ನವೀನ್ ಪಟ್ನಾಯಕ್
B
ನಿತೀಶ್ ಕುಮಾರ್
C
ಚಂದ್ರಬಾಬು ನಾಯ್ಡು
D
ಶಿವರಾಜ್ ಚೌಹಣ್
Question 6 Explanation: 
ಚಂದ್ರಬಾಬು ನಾಯ್ಡು:

ದೇಶವನ್ನು ಡಿಜಿಟಲ್ ಅರ್ಥವ್ಯವಸ್ಥೆಯಾಗಿ ರೂಪಿಸುವ ನೀಲ ನಕ್ಷೆ ತಯಾರಿಸಲು ಕೇಂದ್ರ ಸರ್ಕಾರ ಆರು ಮುಖ್ಯಮಂತ್ರಿಗಳಿರುವ ಸಮಿತಿಯೊಂದನ್ನು ರಚಿಸಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ನೀತಿ ಆಯೋಗದ ಉಪಾಧ್ಯಕ್ಷ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಮಿತಿಯಲ್ಲಿ ಇರುತ್ತಾರೆ. ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಅವರನ್ನೂ ಸಮಿತಿಗೆ ಸೇರಿಸಿಕೊಳ್ಳಲಾಗಿದೆ.ಭಾರತವನ್ನು ನಗದುರಹಿತ ಅರ್ಥ ವ್ಯವಸ್ಥೆಯಾಗಿಸುವುದಕ್ಕೆ ಜಾಗತಿಕ ಮಟ್ಟದ ಅತ್ಯುತ್ತಮ ಪದ್ಧತಿಗಳನ್ನು ಗುರುತಿಸಿ ಅದನ್ನು ಇಲ್ಲಿ ಜಾರಿಗೆ ತರುವುದು ಈ ಸಮಿತಿಯ ಉದ್ದೇಶವಾಗಿದೆ.

Question 7

7. ಇತ್ತೀಚೆಗೆ ನಿಧನರಾದ “ಸೈಯದ್ ಅಬ್ದುಲ್ ಸಲಾಂ”ರವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

A
ಹಾಕಿ
B
ಪುಟ್ಬಾಲ್
C
ಕ್ರಿಕೆಟ್
D
ಟೆನ್ನಿಸ್
Question 7 Explanation: 
ಪುಟ್ಬಾಲ್:

ಒಲಿಂಪಿಯನ್ ಫುಟ್ ಬಾಲ್ ಆಟಗಾರ ಸೈಯದ್ ಅಬ್ದುಲ್ ಸಲಾಂ (80) ಹೈದರಾ ಬಾದ್ನಲ್ಲಿ ನಿಧನರಾಗಿದ್ದಾರೆ. ಅತ್ಯುತ್ತಮ ಡಿಫೆಂಡರ್ ಆಗಿದ್ದ ಅಬ್ದುಲ್ ಸಲಾಂ ಅವರು 1956ರಲ್ಲಿ ಮೆಲ್ಬರ್ನ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆಗ ತಂಡ ನಾಲ್ಕನೇ ಸ್ಥಾನ ಗಳಿಸಿತ್ತು. 1970ರಲ್ಲಿ ಫಿಫಾ ಕೋಚ್ ಆಗಿದ್ದ ಅವರು ಬಂಗಾಳದ ಪ್ರತಿಷ್ಠಿತ ಕ್ಲಬ್ ಮಹಮಡನ್ ಸ್ಪೋರ್ಟಿಂಗ್ ಪರ ಆಡಿದ್ದರು.

Question 8

8. ವಿಕಲಚೇತನರ ಸವಲತ್ತುಗಳ ಅನುಷ್ಠಾನಕ್ಕಾಗಿ ಯಾವ ರಾಜ್ಯಕ್ಕೆ ಅತ್ಯುತ್ತಮ ರಾಜ್ಯ ಪ್ರಶಸ್ತಿ ಲಭಿಸಿದೆ?

A
ಮಹಾರಾಷ್ಟ್ರ
B
ಕರ್ನಾಟಕ
C
ತೆಲಂಗಣ
D
ಉತ್ತರ ಪ್ರದೇಶ
Question 8 Explanation: 
ಕರ್ನಾಟಕ:

ವಿಕಲಚೇತನರ ಸವಲತ್ತುಗಳ ಅನುಷ್ಠಾನಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ಅತ್ಯುತ್ತಮ ರಾಜ್ಯ ಪ್ರಶಸ್ತಿ ಲಭಿಸಿದೆ. ಕರ್ನಾಟ ಸರ್ಕಾರವು ವಿಕಲಚೇತನರ ಕಲ್ಯಾಣಕ್ಕಾಗಿ ಸುಮಾರು 22 ಯೋಜನೆಗಳನ್ನು ಘೋಷಿಸಿದ್ದು, ಇವುಗಳ ಅನುಷ್ಠಾನಕ್ಕೆ ತರುವಲ್ಲಿ ಕರ್ನಾಟಕಕ್ಕೆ “ಅತ್ಯುತ್ತಮ ರಾಜ್ಯ’ ಪ್ರಶಸ್ತಿ ಲಭಿಸಿದೆ ಎಂದು ಯೋಜನೆ ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ಅವರು ತಿಳಿಸಿದ್ದಾರೆ. ಕರ್ನಾಟಕವನ್ನು ವಿಕಲಚೇತನ ಸಬಲೀಕರಣ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ “ಅತ್ಯುತ್ತಮ ರಾಜ್ಯ” ಎಂಬ ರಾಷ್ಟ್ರಪ್ರಶಸ್ತಿಯನ್ನು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನೀಡಿದ್ದು, ಆ ಪ್ರಶಸ್ತಿಯನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಇಲಾಖೆಯ ಸಚಿವೆ ಶ್ರೀಮತಿ ಉಮಾಶ್ರೀ ಅವರು ಭಾಗವಹಿಸಿ ಈ ಪ್ರಶಸ್ತಿಯನ್ನು ಸರ್ಕಾರದ ಪರವಾಗಿ ಸ್ವೀಕರಿಸಲಿದ್ದಾರೆ. ವಿಕಲಚೇತನ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ಟಾಪ್ ವಿತರಣೆ, ಬ್ರೈಲ್ಯಂತ್ರ ವಿತರಣೆ, ಕೆ.ಎ.ಎಸ್ ಐ.ಎ.ಎಸ್. ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿಕಲಚೇತನರ ವಿದ್ಯಾರ್ಥಿಗಳಿಗೆ ಗರಿಷ್ಠ 1 ಲಕ್ಷದವರೆಗೆ ಧನಸಹಾಯ ನೀಡಲಾಗುತ್ತಿದೆ.

Question 9

9. 2016 ಫಾರ್ಚೂನ್ ವರ್ಷದ ಬ್ಯುಸಿನೆಸ್ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿರುವವರು ಯಾರು?

A
ಆದಿತ್ಯ ಪುರಿ
B
ಮಾರ್ಕ್ ಜುಕರ್ಬಗ್
C
ಸತ್ಯ ನದೆಲ್ಲ
D
ಅಜಯ್ ಬಂಗ
Question 9 Explanation: 
ಮಾರ್ಕ್ ಜುಕರ್ಬಗ್:

ಫೇಸ್ ಬುಕ್ ಸಿಇಓ ಮಾರ್ಕ್ ಜುಕರ್ಬಗ್ ರವರು 2016 ಫಾರ್ಚೂನ್ ನಿಯತಕಾಲಿಕೆ ವರ್ಷದ ಬ್ಯುಸಿನೆಸ್ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.

Question 10

10. “ಡೋಲ್ ಡ್ರಮ್”ಗಳು ಎಲ್ಲಿ ಉಂಟಾಗುತ್ತವೆ ____?

A
ಸಮಶೀತೋಷ್ಣ ಪ್ರದೇಶಗಳಲ್ಲಿ
B
ಧ್ರುವ ಪ್ರದೇಶಗಳಲ್ಲಿ
C
ಉಷ್ಣವಲಯ ಪ್ರದೇಶಗಳಲ್ಲಿ
D
ಸಮಭಾಜಕ ವೃತ್ತ ಪ್ರದೇಶಗಳಲ್ಲಿ
Question 10 Explanation: 
ಸಮಭಾಜಕ ವೃತ್ತ ಪ್ರದೇಶಗಳಲ್ಲಿ
There are 10 questions to complete.

[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-2.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

2 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,2, 2016”

  1. Ramsing Rajaput

    Comment

Leave a Comment

This site uses Akismet to reduce spam. Learn how your comment data is processed.