ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,3, 2016

Question 1

1.2016 ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿ (International Children’s Peace Prize) ಯಾರಿಗೆ ಲಭಿಸಿದೆ?

A
ಸುರಭಿ ಸಿಂಗ್
B
ಕೆಹ್ ಕಾಶನ್ ಬಸು
C
ಪ್ರಿಯಾಂಕ್ ರಾವತ್
D
ಅಬ್ರಹಂ ಕೆ ಖಾನ್
Question 1 Explanation: 
ಕೆಹ್ ಕಾಶನ್ ಬಸು:

ದುಬೈನಲ್ಲಿ ನೆಲೆಸಿರುವ ಭಾರತತೀಯ ಮೂಲಕ ಪರಿಸರ ಹೋರಾಟಗಾರ್ತಿ ಕೆಹ್ ಕಾಶನ್ ಬಸು ರವರಿಗೆ 2016 ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿ ಲಭಿಸಿದೆ. ದಿ ಹೇಗ್ ನಲ್ಲಿ ನಡೆದ ಸಮಾರಂಭದಲ್ಲಿ 16 ವರ್ಷದ ಕೆಹ್ ಕಾಶನ್ ಬಸು ರವರಿಗೆ ಬಾಂಗ್ಲದೇಶದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ರವರು ಪ್ರಶಸ್ತಿಯನ್ನು ವಿತರಿಸಿದರು. ಡಚ್ ಮಕ್ಕಳ ಹಕ್ಕು ಫೌಂಡೇಶನ್ ಸ್ಥಾಪಕರಾದ ಮಾರ್ಕ್ ಡುಲ್ಲೆರಟ್ ರವರು ಈ ಪ್ರಶಸ್ತಿಯನ್ನು ನೀಡುತ್ತಿದ್ದಾರೆ.

Question 2

2. 2016 ಪ್ಯಾನ್ ಸೋನಿಕ್ ಓಪನ್ ಗಾಲ್ಫ್ ಚಾಂಪಿಯನ್ ಷಿಪ್ನಲ್ಲಿ ಪ್ರಶಸ್ತಿ ಗೆದ್ದವರು ಯಾರು?

A
ಮುಕೇಶ್ ಕುಮಾರ್
B
ಚಿಕ್ಕರಂಗಪ್ಪ
C
ಗಗನಜೀತ್ ಬುಲ್ಲರ್
D
ರಶೀದ್ ಖಾನ್
Question 2 Explanation: 
ಮುಕೇಶ್ ಕುಮಾರ್:

ಭಾರತದ ಮುಕೇಶ್ ಕುಮಾರ್ ಅವರು 2016 ಪ್ಯಾನ್ ಸೋನಿಕ್ ಓಪನ್ ಗಾಲ್ಫ್ ಚಾಂಪಿಯನ್ ಷಿಪ್ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ಏಷ್ಯನ್ ಟೂರ್ನಲ್ಲಿ ಟ್ರೋಫಿ ಎತ್ತಿಹಿಡಿದ ಹಿರಿಯ ಗಾಲ್ಫರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ದೆಹಲಿ ಗಾಲ್ಫ್ ಕ್ಲಬ್ನಲ್ಲಿ ನಡೆದ ಚಾಂಪಿಯನ್ಷಿಪ್ನಲ್ಲಿ ಮುಖೇಶ್ ಅವರು 206 ಸ್ಕೋರ್ ಕಲೆಹಾಕಿ ಮೊದಲ ಸ್ಥಾನ ಗಳಿಸಿದರು.ಭಾರತದ ಜ್ಯೋತಿ ರಾಂಧವ ಮತ್ತು ರಶೀದ್ ಖಾನ್ ಅವರು ಜಂಟಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. 208 ಸ್ಕೋರ್ ಕಲೆಹಾಕಿದ ಶ್ರೀಲಂಕಾದ ಮಿಥುನ್ ಪೆರೇರಾ ನಾಲ್ಕನೇ ಸ್ಥಾನ ದೊಂದಿಗೆ ಸ್ಪರ್ಧೆ ಕೊನೆಗೊಳಿಸಿದರು.

Question 3

3. ಆನ್ ಲೈನ್ ಟಿಕೆಟ್ ಮಾರಾಟ ತಾಣ “ಅಟ್ರಾಕ್ಷನ್ ಟಿಕ್ಸ್” ಪ್ರಕಾರ ವಿಶ್ವದ ಅತ್ಯುತ್ತಮ ಆಕರ್ಷಣ ತಾಣ ಯಾವುದು?

A
ಯೂನಿವರ್ಸಲ್ ಸ್ಟುಡಿಯೋಸ್ ಹಾಲಿವುಡ್
B
ಮ್ಯಾಜಿಕ್ ಕಿಂಗ್ಡಮ್ ಪಾರ್ಕ್
C
ವಾರ್ನರ್ಸ್ ಬ್ರದರ್ಸ್ ಸ್ಟುಡಿಯೋ
D
ತಾಜ್ ಮಹಲ್
Question 3 Explanation: 
ಯೂನಿವರ್ಸಲ್ ಸ್ಟುಡಿಯೋಸ್ ಹಾಲಿವುಡ್:

ಯೂನಿವರ್ಸಲ್ ಸ್ಟುಡಿಯೋಸ್ ಹಾಲಿವುಡ್ ವಿಶ್ವದ ಅತ್ಯುತ್ತಮ ಆಕರ್ಷಣ ತಾಣವಾಗಿ ಹೊರಹೊಮ್ಮಿದೆ. ಆನ್ ಲೈನ್ ಟಿಕೆಟ್ ಮಾರಾಟ ತಾಣ “ಅಟ್ರಾಕ್ಷನ್ ಟಿಕ್ಸ್” ನಡೆಸಿದ ಸಮೀಕ್ಷೆಯಲ್ಲಿ ಯೂನಿವರ್ಸಲ್ ಸ್ಟುಡಿಯೋಸ್ ಹಾಲಿವುಡ್ ಅತಿ ಹೆಚ್ಚು ಮತಗಳನ್ನು ಗಳಿಸಿದೆ. ವಾರ್ನರ್ಸ್ ಬ್ರದರ್ಸ್ ಸ್ಟುಡಿಯೋ ಯುಕೆ ಯ ಅತ್ಯುತ್ತಮ ಆಕರ್ಷಣ ತಾಣ ಹಾಗೂ ವಾಲ್ಟ್ ಡಿಸ್ನಿಯ ಮ್ಯಾಜಿಕ್ ಕಿಂಗ್ಡಮ್ ಅತ್ಯುತ್ತಮ ಫ್ಯಾಮಿಲಿ ಆಕರ್ಷಣ ತಾಣ ಎನಿಸಿದೆ.

Question 4

4. ಪ್ರತಿಷ್ಠಿತ 2015-ಗಂಗಾಧರ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವ “ಲೀಲಾಧರ್ ಜಗೂರಿ” ಯಾವ ಭಾಷೆಯ ಪ್ರಸಿದ್ದ ಕವಿ?

A
ಮರಾಠಿ
B
ಗುಜರಾತಿ
C
ಹಿಂದಿ
D
ಭೋಜಪುರಿ
Question 4 Explanation: 
ಹಿಂದಿ:

ಪ್ರಸಿದ್ದ ಹಿಂದಿ ಕವಿ “ಲೀಲಾಧರ್ ಜಗೂರಿ” ರವರಿಗೆ 2015ನೇ ಸಾಲಿನ ಗಂಗಾಧರ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ರೂ 50,000 ನಗದು, ಶಾಲು ಹಾಗೂ ಫಲಕವನ್ನು ಒಳಗೊಂಡಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸಂಬಲ್ ಪುರ ವಿಶ್ವವಿದ್ಯಾಲಯ ಸ್ಥಾಪಿಸಿದೆ. ಜಗೂರಿ ರವರು ಈ ಪ್ರಶಸ್ತಿಯನ್ನು ಪಡೆದ 25ನೇ ಯವರು.

Question 5

5. “ಇಂಡಿಯಾ-ಯುಎಸ್ ರಿಲೇಷನ್ಸ್ ಇನ್ ದಿ ಎಜ್ ಆಫ್ ಅನ್ಸರ್ಟನಿಟಿ (India-US Relations in the Age of Uncertainty)” ಪುಸ್ತಕದ ಲೇಖಕರು ________?

A
ಬಿ ಎಂ ಜೈನ್
B
ಮೃಣಲ್ ಸಿಂಗ್
C
ಅಶೋಕ್ ಬಾದಲ್
D
ಕೃತಿಕಾ ಚಂದ್ರ
Question 5 Explanation: 
ಬಿ ಎಂ ಜೈನ್:

ಬಿ ಎಂ ಜೈನ್ ರವರು ಇಂಡಿಯಾ-ಯುಎಸ್ ರಿಲೇಷನ್ಸ್ ಇನ್ ದಿ ಎಜ್ ಆಫ್ ಅನ್ಸರ್ಟನಿಟಿ ಪುಸ್ತಕದ ಲೇಖಕರು.

Question 6

6. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರೆಸ್ಟ್ ಮ್ಯಾನೆಜ್ಮೇಂಟ್ (Indian Institute of Forest Management) ಎಲ್ಲಿದೆ?

A
ಭೂಪಾಲ್
B
ಬೆಂಗಳೂರು
C
ಕೊಲ್ಕತ್ತಾ
D
ಪುಣೆ
Question 6 Explanation: 

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರೆಸ್ಟ್ ಮ್ಯಾನೆಜ್ಮೇಂಟ್ ಅನ್ನು 1982 ರಲ್ಲಿ ಸ್ಥಾಪಿಸಲಾಗಿದ್ದು, ಭೂಪಾಲ್, ಮಧ್ಯಪ್ರದೇಶದಲ್ಲಿದೆ. ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಈ ಸಂಸ್ಥೆಯನ್ನು ಸ್ಥಾಪಿಸಿದೆ.

Question 7

7. 2016 ಮಹಿಳಾ ಏಷ್ಯಾಕಪ್ ಟಿ-20 ಟೂರ್ನಿಯಲ್ಲಿ ಚಾಂಪಿಯನ್ ಆದ ದೇಶ ಯಾವುದು?

A
ಭಾರತ
B
ಪಾಕಿಸ್ತಾನ
C
ಬಾಂಗ್ಲದೇಶ
D
ಶ್ರೀಲಂಕಾ
Question 7 Explanation: 
ಭಾರತ:

ಭಾರತ ಮಹಿಳೆಯರ ತಂಡ ಪಾಕಿಸ್ತಾನವನ್ನು ಮಣಿಸುವ ಮೂಲಕ 2016 ಮಹಿಳಾ ಏಷ್ಯಾಕಪ್ ಟಿ-20 ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಏಷ್ಯಾ ಕಪ್ ಪಂದ್ಯಗಳಲ್ಲಿ ನಾಲ್ಕು ಬಾರಿ ಭಾರತದ ಮಹಿಳಾ ಕ್ರಿಕೆಟ್ ತಂಡ ಪಾಕಿಸ್ತಾನವನ್ನು ಸೋಲಿಸಿದೆ.. ಭಾರತದ 121 ರನ್ ಗಳ ಗುರಿಯನ್ನು ಬೆನ್ನತ್ತಿ ಬ್ಯಾಟಿಂಗ್ ಮಾಡಿದ ಪಾಕಿಸ್ತಾನಕ್ಕೆ 6 ವಿಕೆಟ್ ನಷ್ಟದಲ್ಲಿ 104 ರನ್ ಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು.ಕೊನೆಯ ಓವರ್ ನಲ್ಲಿ ಪಾಕಿಸ್ತಾನಕ್ಕೆ 26 ರನ್ಗಳ ಅಗತ್ಯವಿತ್ತು. ಆದರೆ 6 ರನ್ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

Question 8

8. 2016 ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ವಿಕಲಚೇತನರದ ದಿನದ ಧ್ಯೇಯವಾಕ್ಯ _________?

A
Achieving 17 goals for the future we want
B
Disability only for physical not for dream
C
One world one people
D
Let’s come out
Question 8 Explanation: 
Achieving 17 goals for the future we want:

ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ವಿಕಲಚೇತನರ ದಿನವನ್ನು ಪ್ರತಿವರ್ಷ ಡಿಸೆಂಬರ್ 3 ರಂದು ಆಚರಿಸಲಾಗುತ್ತದೆ. ವಿಕಲಾಂಗ ವ್ಯಕ್ತಿಗಳ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ವಿಕಲಚೇತನರ ಹಕ್ಕು, ಸಮಾನತೆ ಹಾಗೂ ಘನತೆಯನ್ನು ಕಾಪಾಡುವುದಕ್ಕಾಗಿ 1992ರಿಂದ ಆಚರಿಸಲಾಗುತ್ತಿದೆ. Achieving 17 goals for the future we want ಇದು ಈ ವರ್ಷದ ಧ್ಯೇಯವಾಕ್ಯ.

Question 9

9. 2016 “ಹಾರ್ಟ್ ಆಫ್ ಏಷ್ಯಾ” ಸಚಿವರ ಸಮ್ಮೇಳನ ಯಾವ ನಗರದಲ್ಲಿ ಪ್ರಾರಂಭಗೊಂಡಿತು?

A
ಬೀಜಿಂಗ್
B
ಅಮೃತಸರ
C
ಇಸ್ಲಮಾಬಾದ್
D
ಡಾಕಾ
Question 9 Explanation: 
ಅಮೃತಸರ:

6ನೇ ‘ಹಾರ್ಟ್ ಆಫ್ ಏಷ್ಯಾ” ಸಚಿವರ ಸಮ್ಮೇಳನ ಪಂಜಾಬ್ ನ ಅಮೃತಸರದಲ್ಲಿ ಆರಂಭಗೊಂಡಿದೆ. ಭಯೋತ್ಪಾದನೆಯನ್ನು ಹತ್ತಿಕ್ಕುವುದು ಈ ಸಭೆಯ ಪ್ರಮುಖ ಚರ್ಚ ವಿಷಯವಾಗಿದೆ. ಸಚಿವರುಗಳ ಮಟ್ಟದ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಫ್ಘಾನಿಸ್ತಾನ ಅಧ್ಯಕ್ಷ ಉದ್ಘಾಟಿಸಿದರು. ರಷ್ಯಾ, ಚೀನಾ, ಪಾಕಿಸ್ತಾನ ಸೇರಿದಂತೆ 40 ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

Question 10

10. 2016 ಮಿಸ್ ಸುಪ್ರಾ ನ್ಯಾಷನಲ್ (Miss Supranational) ಕಿರೀಟವನ್ನು ಮುಡಿಗೇರಿಸಿಕೊಂಡವರು _____?

A
ಶ್ರೀನಿಧಿ ಶೆಟ್ಟಿ
B
ಶುಭಾ ಶೆಣೈ
C
ಸೋನಿ ಸುಭಾಷ್
D
ಮೇರಿ ಸಿಲೋನಿ
Question 10 Explanation: 
ಶ್ರೀನಿಧಿ ಶೆಟ್ಟಿ:

ಕರಾವಳಿಯ ಚೆಲುವೆ ಶ್ರೀನಿಧಿ ರಮೇಶ್ ಶೆಟ್ಟಿ ಅವರು 2016ನೇ ಸಾಲಿನ "ಮಿಸ್ ಸುಪ್ರ ನ್ಯಾಶನಲ್' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪೋಲೆಂಡ್ನಲ್ಲಿ ನಡೆದ ಅಂತಿಮ ಸುತ್ತಿನಲ್ಲಿ ವಿಶ್ವಾದ್ಯಂತದ 71 ಸ್ಪರ್ಧಿಗಳನ್ನು ಹಿಂದಿಕ್ಕಿ ಮಂಗಳೂರು ತಾಲೂಕಿನ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗುತ್ತಿನ ಶ್ರೀನಿಧಿ ಸೌಂದರ್ಯ ರಾಣಿಯಾಗಿ ಹೊರಹೊಮ್ಮಿದರು. ಶ್ರೀನಿಧಿ ಅವರಿಗೆ ಕಳೆದ ಬಾರಿಯ ಸುಪ್ರಾ ನ್ಯಾಶನಲ್ ವಿಜೇತೆ ಪೆರುಗ್ವೆಯ ಸ್ಟೆಫಿನಾ ಸ್ಟಗ್ನಂ ಅವರು ಕಿರೀಟವನ್ನು ಧರಿಸಿದರು. ವೆನೆಜುವೆಲಾದ ವಲೇರಿಯಾ ಪ್ರಥಮ ರನ್ನರ್ ಅಪ್, ದಕ್ಷಿಣ ಅಮೆರಿಕದ ಪುಟ್ಟ ದೇಶ ಸುರಿನಾಮ್ನ ಜಲೀಸಾ ಪಿ. ಎರಡನೇ ರನ್ನರ್ ಅಪ್, ಶ್ರೀಲಂಕಾದ ಒರೆನಾ ಮರಿಯಂ ಜಯಸಿರಿ ಮೂರನೇ ರನ್ನರ್ ಅಪ್ ಹಾಗೂ ಹಂಗೇರಿಯ ಕೊರಿನಾ ಕೆ. ಅವರು ನಾಲ್ಕನೇ ರನ್ನರ್ ಅಪ್ ಆಗಿ ಮೂಡಿಬಂದರು. ಈ ಹಿಂದೆ 2014ರಲ್ಲಿ ಮಂಗಳೂರಿನ ಆಶಾ ಭಟ್ ಈ ಪ್ರಶಸ್ತಿಯನ್ನು ಪಡೆದಿದ್ದರು.

There are 10 questions to complete.

[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-3.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.