ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,4, 2016
Question 1 |
1. ಇತ್ತೀಚೆಗೆ ದಕ್ಷಿಣ ಆಫ್ರಿಕಾದ ವ್ಯಾಪಾರ ಸಂಘಟನೆ “ಮರ್ಕೊಸರ್ (Mercosur)” ನಿಂದ ಯಾವ ದೇಶದ ಸದಸ್ಯತ್ವವನ್ನು ತೆಗೆದುಹಾಕಲಾಯಿತು?
ವೆನೆಜುವೆಲಾ | |
ಬ್ರೆಜಿಲ್ | |
ಅರ್ಜೇಂಟಿನಾ | |
ಪರಾಗ್ವೆ |
ದಕ್ಷಿಣ ಆಫ್ರಿಕಾದ ಪ್ರಮುಖ ವ್ಯಾಪಾರ ಸಂಘಟನೆಯಾದ “ಮರ್ಕೊಸರ್”ನಿಂದ ವೆನೆಜುವೆಲಾ ರಾಷ್ಟ್ರದ ಸದಸ್ಯತ್ವವನ್ನು ತೆಗೆದುಹಾಕಲಾಗಿದೆ. ವೆನೆಜುವೆಲಾ 2012 ರಲ್ಲಿ ಸಂಘಟನೆಯನ್ನು ಸೇರುವ ಅವಧಿಯಲ್ಲಿ ವಿಧಿಸಲಾಗಿದ್ದ ನಿಯಮವನ್ನು ಪಾಲಿಸಲು ವಿಫಲವಾಗಿರುವ ಕಾರಣ ಸದಸ್ಯತ್ವ ರದ್ದುಮಾಡಲಾಗಿದೆ ಎನ್ನಲಾಗಿದೆ. ಮರ್ಕೊಸರ್ ದಕ್ಷಿಣ ಆಫ್ರಿಕಾದ ವ್ಯಾಪಾರ ಸಂಘಟನೆ. ಅರ್ಜೇಂಟೆನಾ, ಬ್ರೆಜಿಲ್, ಉರುಗ್ವೆ ಮತ್ತು ಪರಾಗ್ವೆ ಈ ಸಂಘಟನೆಯ ಸಂಸ್ಥಾಪನ ರಾಷ್ಟ್ರಗಳು.
Question 2 |
2. 2016 ಕತಾರ್ ಓಪನ್ ಮಹಿಳಾ ಗಾಲ್ಫ್ ಚಾಂಪಿಯನ್ ಷಿಪ್ನಲ್ಲಿ ಪ್ರಶಸ್ತಿ ಗೆದ್ದ ಭಾರತದ ಗಾಲ್ಫ್ ಆಟಗಾರ್ತಿ ಯಾರು?
ಕಿಶಿ ಸಿನ್ಹಾ | |
ಅದಿತಿ ಅಶೋಕ್ | |
ಶರ್ಮಿಳಾ ನಿಕೊಲೆಟ್ | |
ವಾಣಿ |
ಕರ್ನಾಟಕದ ಅದಿತಿ ಅಶೋಕ್ ಅವರು ಕತಾರ್ ಓಪನ್ ಮಹಿಳಾ ಗಾಲ್ಫ್ ಚಾಂಪಿಯನ್ ಷಿಪ್ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಈ ಮೂಲಕ ಮಹಿಳಾ ಯುರೋಪಿಯನ್ ಟೂರ್ನಲ್ಲಿ ಸತತ ಎರಡು ಟ್ರೋಫಿ ಎತ್ತಿಹಿಡಿದ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರಿನ ಅದಿತಿ ಇಂಡಿಯನ್ ಓಪನ್ನಲ್ಲಿ ಚಾಂಪಿಯನ್ ಆಗಿದ್ದರು. ದೋಹಾ ಗಾಲ್ಫ್ ಕ್ಲಬ್ನಲ್ಲಿ ಅದಿತಿ ಅವರು ಲಿಡಿಯಾ ಹಾಲ್ ಮತ್ತು ಕ್ಯಾರೊಲಿನ್ ಹೆಡ್ವಾಲ್ ವಿರುದ್ಧ ಜಯ ಸಾಧಿಸಿದರು.
Question 3 |
3. ಅಂತಾರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ (ಐಎಎಎಫ್) ವರ್ಷದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಪ್ರಶಸ್ತಿ ಯಾರಿಗೆ ಲಭಿಸಿದೆ?
ಟಾಮ್ ಬ್ರಾಡಿ | |
ಉಸೇನ್ ಬೋಲ್ಟ್ | |
ಲೆಬ್ರಾನ್ ಜೇಮ್ಸ್ | |
ಕೆವಿನ್ ಡ್ಯುರಂಟ್ |
ಜಮೈಕಾದ ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಅವರು ಅಂತಾರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ (ಐಎಎಎಫ್) ನೀಡುವ ವರ್ಷದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಗೌರವಕ್ಕೆ ಭಾಜನರಾಗಿದ್ದಾರೆ. ಬೋಲ್ಟ್ ಆರನೇ ಬಾರಿ ಈ ಪ್ರಶಸ್ತಿ ಪಡೆ ಅಥ್ಲೀಟ್ ಎಂಬ ಶ್ರೇಯ ತಮ್ಮದಾಗಿಸಿಕೊಂಡಿದ್ದಾರೆ. ಒಲಿಂಪಿಕ್ಸ್ನ 10,000 ಮೀಟರ್ಸ್ ಓಟದಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದ ಇಥಿಯೋಪಿಯಾದ ಅಲಮಜ್ ಅಯಾನ ಅವರು ‘ವರ್ಷದ ಶ್ರೇಷ್ಠ ಮಹಿಳಾ ಅಥ್ಲೀಟ್’ ಪ್ರಶಸ್ತಿ ಪಡೆದುಕೊಂಡಿದ್ದಾರೆ.
Question 4 |
4. ಬೆಂಗಳೂರು ಕ್ರೀಡಾ ಬರಹಗಾರರ ಸಂಘವು (ಸ್ವಾಬ್) ಜೀವಮಾನ ಸಾಧನೆ ಪುರಸ್ಕಾರವನ್ನು ಪಡೆದುಕೊಂಡ ಭಾರತದ ಮಾಜಿ ಕ್ರಿಕೆಟ್ ಆಟಗಾರ ಯಾರು?
ಅನಿಲ್ ಕುಂಬ್ಳೆ | |
ಬಿ ಎಸ್ ಚಂದ್ರಶೇಖರ್ | |
ಸಚಿನ್ ತೆಂಡೂಲ್ಕರ್ | |
ಜಾವಗಲ್ ಶ್ರೀನಾಥ್ |
ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ ಬೌಲರ್ ಬಿ.ಎಸ್. ಚಂದ್ರಶೇಖರ್ ಅವರಿಗೆ ಬೆಂಗಳೂರು ಕ್ರೀಡಾ ಬರಹಗಾರರ ಸಂಘವು (ಸ್ವಾಬ್) ಜೀವಮಾನ ಸಾಧನೆ ಪುರಸ್ಕಾರ ನೀಡಿ ಗೌರವಿಸಿದೆ.. ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ದಲ್ಲಿ ಐಸಿಸಿ ರೆಫರಿ ಜಾವಗಲ್ ಶ್ರೀನಾಥ್ ಅವರು ಚಂದ್ರಶೇಖರ್ ಅವರಿಗೆ ಪುರಸ್ಕಾರ ನೀಡಿದರು.
Question 5 |
5. ಇತ್ತೀಚೆಗೆ ಈ ಕೆಳಗಿನ ಯಾರು ಫಾರ್ಮೂಲಾ-1 ರೇಸ್ ವಿಶ್ವ ಚಾಂಪಿಯನ್ ಷಿಪ್ ಗೆ ನಿವೃತ್ತಿ ಘೋಷಿಸಿದರು?
ಲೇವಿಸ್ ಹ್ಯಾಮಿಲ್ಟನ್ | |
ನಿಕೊ ರೊಸ್ಬರ್ಗ್ | |
ಸೆಬಾಸ್ಟಿಯನ್ ವೆಟ್ಟಲ್ | |
ಡೇವಿಡ್ ಜಾನ್ |
ಫಾರ್ಮುಲಾ ಒನ್ ರೇಸ್ನ ವಿಶ್ವ ಚಾಂಪಿಯನ್ ನಿಕೊ ರೋಸ್ಬರ್ಗ್ ಅವರು ನಿವೃತ್ತಿ ಘೋಷಿಸಿದ್ದಾರೆ. ಅಂತರರಾಷ್ಟ್ರೀಯ ಆಟೊಮೊಬೈಲ್ ಫೆಡರೇಷನ್ (ಎಫ್ಐಎ) ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜರ್ಮನಿಯ 31 ವರ್ಷದ ರೋಸ್ಬರ್ಗ್ ಅವರು ತಮ್ಮ ನಿವೃತ್ತಿಯ ವಿಷಯ ಬಹಿರಂಗಪಡಿಸಿದರು. ಇತ್ತೀಚೆಗೆ ಅವರು ಅಬುಧಾಬಿಯಲ್ಲಿ ನಡೆದಿದ್ದ ಗ್ರ್ಯಾನ್ಪ್ರಿ ರೇಸ್ನಲ್ಲಿ ವಿಶ್ವ ಕಿರೀಟ ಧರಿಸಿದ್ದರು.
Question 6 |
6. 2016 ವಿಶ್ವ ಚೆಸ್ ಚಾಂಪಿಯನ್ ಷಿಪ್ ಗೆದ್ದವರು ಯಾರು?
ಮ್ಯಾಗ್ನಸ್ ಕಾರ್ಲಸನ್ | |
ವಿಶ್ವನಾಥ್ ಆನಂದ್ | |
ಸರ್ಗೆಯ್ ಕರ್ಜಾಕಿನ್ | |
ಕೆಮರೂನ್ ಜಾಕ್ |
ವಿಶ್ವ ಚೆಸ್ ಜಗತ್ತಿನ ದೊರೆ ಮ್ಯಾಗ್ನಸ್ ಕಾರ್ಲ್ಸನ್ ರವರು ರಷ್ಯಾದ ಸರ್ಗೆಯ್ ಕರ್ಜಾಕಿನ್ ವಿರುದ್ಧ ಅದ್ಭುತ ಗೆಲುವು ಸಾಧಿಸುವ ಮೂಲಕ 2016 ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಚೆಸ್ ಜಗತ್ತಿನ ಅತಿ ಕಿರಿಯ ವಿಶ್ವ ಚಾಂಪಿ ಯನ್ ಎಂಬ ಹೆಗ್ಗಳಿಕೆ ಹೊಂದಿರುವ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ಗೆ ಇದು ಸತತ 3ನೇ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿ. ಇದಕ್ಕೂ ಮುನ್ನ ಅವರು 2013, 2014ರಲ್ಲಿ ಭಾರತದ ವಿಶ್ವನಾಥನ್ ಆನಂದ್ರನ್ನು ಸೋಲಿಸಿ ಚಾಂಪಿಯನ್ ಆಗಿದ್ದರು.
Question 7 |
7. "ಎಂ-777 ಹೌವಿಟ್ಜರ್' ಫಿರಂಗಿಗಳನ್ನು ಖರೀದಿಸುವ ಸಲುವಾಗಿ ಭಾರತ ಯಾವ ದೇಶದೊಂದಿಗೆ ಸಹಿ ಹಾಕಿದೆ?
ಅಮೆರಿಕ | |
ರಷ್ಯಾ | |
ಇಸ್ರೇಲ್ | |
ಜಪಾನ್ |
ಭಾರತ 145 “ಎಂ-777 ಹೌವಿಟ್ಜರ್” ಫಿರಂಗಿಗಳನ್ನು ಅಮೆರಿಕದಿಂದ ಖರೀದಿಸಲು ಸಹಿ ಹಾಕಿದೆ. ಅಮೆರಿಕದ ಬಿಎಇ ಸಿಸ್ಟಮ್ಸ್ ಈ ಫಿರಂಗಿಗಳನ್ನು ಅಭಿವೃದ್ದಿಪಡಿಸಿದೆ. ಮ2017ರ ಮಧ್ಯಂತರದ ನಂತರ 155 ಎಂಎಂ ಸಾಮರ್ಥ್ಯದ 145 "ಎಂ-777 ಹೌವಿಟ್ಜರ್' ಫಿರಂಗಿಗಳು ಭಾರತದಿಂದ ಖರೀದಿಯಾಗಿವೆ. ಇದುನಸುಮಾರು 5,500 ಕೋಟಿ ರೂ. ಮೊತ್ತದ ಒಪ್ಪಂದ ಆಗಲಿದೆ ಎನ್ನಲಾಗಿದೆ.
Question 8 |
8. 2016 ಮಿಸ್ಟರ್ ಸುಪ್ರಾನ್ಯಾಷನಲ್ ಕಿರೀಟ ಗೆದ್ದ “ಡಿಯಾಗೋ ಗಾರ್ಸಿ” ಯಾವ ದೇಶದವರು?
ಮೆಕ್ಸಿಕೊ | |
ಭಾರತ | |
ಅಮೆರಿಕ | |
ರಷ್ಯಾ |
ಮೆಕ್ಸಿಕೊದ “ಡಿಯಾಗೋ ಗಾರ್ಸಿ” ರವರು 2016 ಮಿಸ್ಟರ್ ಸುಪ್ರಾನ್ಯಾಷನಲ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಭಾರತದ ಜಿತೇಶ್ ಠಾಕೂರ್ ರವರು ಎರಡನೇ ಸ್ಥಾನವನ್ನು ಪಡೆದುಕೊಂಡು ರನ್ನರ್ ಆಫ್ ಆದರು. ಮಿಸ್ ಸುಪ್ರಾನ್ಯಾಷನಲ್ ಕಿರೀಟವನ್ನು ಕರ್ನಾಟಕದ ಶ್ರೀನಿಧಿ ಶೆಟ್ಟಿ ತಮ್ಮದಾಗಿಸಿಕೊಂಡರು.
Question 9 |
9. ಮಹಾ ವಾಜಿರಲಾಂಗ್ಕೊರ್ನ್ ರವರು ಯಾವ ದೇಶದ ಹೊಸ ರಾಜನಾಗಿ ಘೋಷಿಸಲಾಗಿದೆ?
ಥಾಯ್ಲೆಂಡ್ | |
ಇರಾನ್ | |
ಯುಎಇ | |
ಭೂತಾನ್ |
ಥಾಯ್ಲೆಂಡ್ನ ಹೊಸ ರಾಜನಾಗಿ ಯುವರಾಜ ಮಹಾ ವಾಜಿರಲಾಂಗ್ಕೊರ್ನ್ ಅವರ ಹೆಸರನ್ನು ಘೋಷಿಸಲಾಗಿದೆ. ಅತಿಹೆಚ್ಚು ಅವಧಿಗೆ ಸಿಂಹಾಸನ ಅಲಂಕರಿಸಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಥಾಯ್ಲೆಂಡ್ ರಾಜ ಭೂಮಿಬೊಲ್ ಅದುಲ್ಯದೆಜ್ ಅವರು ಇತ್ತೀಚೆಗೆ ಮೃತಪಟ್ಟಿದ್ದರು.ವಾಜಿರಲಾಂಗ್ಕೊರ್ನ್ ಅವರು ಚಕ್ರಿ ವಂಶದ 10ನೇ ದೊರೆಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ರಾಷ್ಟ್ರೀಯ ಶಾಸಕಾಂಗ ಸಭೆಯ ಮುಖ್ಯಸ್ಥ ಪ್ರಯೂತ್ ಚಾನ್ ಒ ಚಾತ್ ಅವರು ಆಹ್ವಾನ ನೀಡಿದರು. ಇದನ್ನು ವಾಜಿರಲಾಂಗ್ಕೊರ್ನ್ ಒಪ್ಪಿಕೊಂಡಿದ್ದಾರೆ.
Question 10 |
10. ಇತ್ತೀಚೆಗೆ ನಿಧನರಾದ “ಫುಲೆಲ್ ಸಿಂಗ್ ಸುಜ್ಲಾನ” ಯಾವ ಕ್ರೀಡೆಯ ಮಾಜಿ ಅಂತಾರಾಷ್ಟ್ರೀಯ ಅಂಪೈರ್?
ಕ್ರಿಕೆಟ್ | |
ಹಾಕಿ | |
ಬಾಕ್ಸಿಂಗ್ | |
ಬ್ಯಾಡ್ಮಿಂಟನ್ |
[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-4.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
reeeeeeeeufvh