ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,6, 2016
Question 1 |
1. “ವಿಶ್ವ ಪ್ರಭಾವಿ ಭಾಷಾ ಸೂಚ್ಯಂಕ (World Power Language Index)-2016” ಪ್ರಕಾರ ವಿಶ್ವದ ಅತ್ಯಂತ ಪ್ರಭಾವಿ ಭಾಷೆ ಯಾವುದು?
ಇಂಗ್ಲೀಷ್ | |
ಫ್ರೆಂಚ್ | |
ಸ್ಪಾನಿಷ್ | |
ಹಿಂದಿ |
ವಿಶ್ವ ಪ್ರಭಾವಿ ಭಾಷಾ ಸೂಚ್ಯಂಕ-2016 ಪ್ರಕಾರ ಇಂಗ್ಲೀಷ್ ಭಾಷೆ ವಿಶ್ವದ ಅತ್ಯಂತ ಪ್ರಭಾವಿ ಭಾಷೆಯಾಗಿ ಹೊರಹೊಮ್ಮಿದ್ದು, ಸೂಚ್ಯಂಕದಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ. ವಿಶ್ವ ಪ್ರಭಾವಿ ಭಾಷ್ಯ ಸೂಚ್ಯಂಕವನ್ನು ವಿಶ್ವ ಆರ್ಥಿಕ ವೇದಿಕೆ ಹೊರತಂದಿದೆ. ಜಿ-7 ಗುಂಪಿನ ರಾಷ್ಟ್ರಗಳ ಪೈಕಿ ಯುಎಸ್, ಯುಕೆ ಮತ್ತು ಕೆನಡಾದಲ್ಲಿ ಇಂಗ್ಲೀಷ್ ಭಾಷೆ ಅತಿ ಹೆಚ್ಚು ಪ್ರಾತಿನಿಧ್ಯ ಹೊಂದಿದೆ. ಸೂಚ್ಯಂಕದಲ್ಲಿ ಇಂಗ್ಲೀಷ್ ನಂತರ ಮ್ಯಾಂಡ್ರಿನ್, ಫ್ರೆಂಚ್ ಮತ್ತು ಸ್ಪಾನಿಷ್ ಭಾಷೆಗಳು ಸ್ಥಾನ ಪಡೆದಿವೆ.
Question 2 |
2. ಈ ಕೆಳಗಿನ ಯಾರು ಉಜ್ಬೇಕಿಸ್ತಾನದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
ಶವ್ಕತ್ ಮಿರ್ಝಿಯೊಯೆವ್ | |
ನರಿಮೊನ್ ಉಮರೊವ್ | |
ಇಸ್ಲಾಂ ಕರಿಮೊವ್ | |
ಬೆಂಜಮಿನ್ ಉಮರೊವ್ |
ಉಜ್ಬೇಕಿಸ್ತಾನದ ಹಂಗಾಮಿ ಅಧ್ಯಕ್ಷರಾದ ಶವ್ಕತ್ ಮಿರ್ಝಿಯೊಯೆವ್ ರವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಜ್ಬೇಕಿಸ್ತಾನದ ಅಧ್ಯಕ್ಷರಾಗಿದ್ದ ಇಸ್ಲಾಂ ಕರಿಮೊವ್ ನಿಧನರಾದ ನಂತರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಶವ್ಕತ್ ರವರು ಜಯಶೀಲರಾಗುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Question 3 |
3. ಈ ಕೆಳಗಿನ ಯಾವ ಕಂಪನಿಗಳು ದೇಶದ ಅತಿ ದೊಡ್ಡ ತೈಲ ಶುದ್ದೀಕರಣ ಘಟಕ ಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿವೆ?
I) ಇಂಡಿಯನ್ ಆಯಿಲ್ ಕಾರ್ಪೋರೇಷನ್
II) ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್
III) ರಿಲಾಯನ್ಸ್ ಕಾರ್ಪೋರೇಷನ್
IV) ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್
ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ:
I, II & III | |
II, III & IV | |
I, III & IV | |
I, II, III & IV |
ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ದೇಶದ ಅತಿ ದೊಡ್ಡ ತೈಲ ಶುದ್ದೀಕರಣ ಘಟಕ ಸ್ಥಾಪಿಸಲು ಒಪ್ಪಂದಕ್ಕೆ ಸಹಿಹಾಕಿವೆ. ಈ ಯೋಜನೆಯ ಅಂದಾಜು ವೆಚ್ಚ $ 30 ಬಿಲಿಯನ್.
Question 4 |
4. ಈ ಕೆಳಗಿನ ಯಾರು “2016 ಏಷ್ಯಾ ವರ್ಷದ ವ್ಯಕ್ತಿ(Asian of the Year)” ಗೌರವಕ್ಕೆ ಪಾತ್ರರಾಗಿದ್ದಾರೆ?
ರತನ್ ಟಾಟ | |
ನರೇಂದ್ರ ಮೋದಿ | |
ಸಚಿನ್ ಬನ್ಸಲ್ | |
ಮುಖೇಶ್ ಅಂಬಾನಿ |
ಸಿಂಗಾಪುರ ಮೂಲದ “ದಿ ಸ್ಟೈಟ್ ಟೈಮ್ಸ್” ಸುದ್ದಿಪತ್ರಿಕೆಯು ಫ್ಲಿಫ್ ಕಾರ್ಟ್ ಸಂಸ್ಥೆಯ ಸಂಸ್ಥಾಪಕರಾದ ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ರವರನ್ನು ಜಂಟಿಯಾಗಿ “2016 ಏಷ್ಯಾ ವರ್ಷದ ವ್ಯಕ್ತಿ” ಎಂದು ಬಣ್ಣಿಸಿದೆ. ಅತ್ಯುತ್ತಮ ತಂತ್ರಜ್ಞಾನ ಬಳಸಿ ಗ್ರಾಹಕರಿಗೆ ಉಪಯೋಗವಾಗುವ ಉದ್ದಿಮೆಯನ್ನು ಆರಂಭಿಸಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
Question 5 |
5. 2016 “ವಿಶ್ವ ಮಣ್ಣು ದಿನ”ದ ಧ್ಯೇಯ ವಾಕ್ಯ _________?
Soils, a solid ground for life | |
Soils and Pulses, a symbiosis for life | |
Soil is precious as water | |
Protect soil for feature |
ವಿಶ್ವ ಮಣ್ಣು ದಿನವನ್ನು ಪ್ರತಿವರ್ಷ ಡಿಸೆಂಬರ್ 5 ರಂದು ಆಚರಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜೇವಿಕ್ಕೆ ಮಣ್ಣಿನ ಅಗತ್ಯತೆ ಬಗ್ಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶ. Soils and Pulses, a symbiosis for life ಇದು ಈ ವರ್ಷದ ವಿಶ್ವ ಮಣ್ಣಿನ ದಿನದ ಧ್ಯೇಯವಾಕ್ಯ.
Question 6 |
6. “2016 ಇಂದ್ರ ನೌಕಪಡೆ” ಸಮರಭ್ಯಾಸ ಭಾರತ ಮತ್ತು ಯಾವ ದೇಶದ ನಡುವೆ ನಡೆಯಲಿದೆ?
ಜಪಾನ್ | |
ರಷ್ಯಾ | |
ಶ್ರೀಲಂಕಾ | |
ಆಸ್ಟ್ರೇಲಿಯಾ |
2016 ಇಂದ್ರ ನೌಕಪಡೆ ಸಮರಭ್ಯಾಸ ಭಾರತ ಮತ್ತು ರಷ್ಯಾ ನಡುವೆ ಡಿಸೆಂಬರ್ 14 ರಿಂದ 21 ರವರೆಗೆ ವಿಶಾಖಪಟ್ಟಣ ಮತ್ತು ಬಂಗಾಳ ಕೊಲ್ಲಿಯಲ್ಲಿ ನಡೆಯಲಿದೆ. ಕರಾವಳಿ ತೀರಾ ಮತ್ತು ಸಾಗರದಲ್ಲಿ ಎರಡು ಹಂತದಲ್ಲಿ ಈ ಸಮರಭ್ಯಾಸ ನಡೆಯಲಿದೆ. ಡಿಸೆಂಬರ್ 14-18 ರವರೆಗೆ ವಿಶಾಖಪಟ್ಟಣದಲ್ಲಿ ಹಾಗೂ ಡಿಸೆಂಬರ್ 19-21 ರವರೆಗೆ ಬಂಗಾಳ ಕೊಲ್ಲಿಯಲ್ಲಿ ನಡೆಯಲಿದೆ.
Question 7 |
7. ನಾಗರಿಕ ವಿಮಾನಯಾನ ನಿರ್ದೇಶನಾಲಯದ ನೂತನ ಮುಖ್ಯಸ್ಥರಾಗಿ ಯಾರು ನೇಮಗೊಂಡಿದ್ದಾರೆ?
ಸುರೇಂದ್ರ | |
ಬಿ ಎಸ್ ಬುಲ್ಲರ್ | |
ಸತ್ಯೇಂದ್ರ ವರ್ಮಾ | |
ಚಂದ್ರಬಾಬು ನಾಯಕ್ |
ಬಿ ಎಸ್ ಬುಲ್ಲರ್, 1986ನೇ ಬ್ಯಾಚ್ ಐಎಎಸ್ ಅಧಿಕಾರಿ ರವರನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯದ ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಕಳೆದ ನಾಲ್ಕು ತಿಂಗಳಿಂದ ಈ ಹುದ್ದೆ ಖಾಲಿ ಉಳಿದಿತ್ತು. ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದಂತೆ ಸುರಕ್ಷತೆ ಗುಣಮಟ್ಟ ಅನುಷ್ಠಾನ, ಕಾರ್ಯಾಚರಣೆ ಮತ್ತು ಸಿಬ್ಬಂದಿಗೆ ತರಭೇತಿ ನೀಡುವುದು ಹೊಣೆಗಾರಿಕೆಯನ್ನು ನಿರ್ದೇಶನಾಲಯ ಹೊಂದಿದೆ.
Question 8 |
8. ಫೋರ್ಬ್ಸ್ ನಿಯತಕಾಲಿಕೆ ಪ್ರಕಾರ ಅತ್ಯಧಿಕ ಸಂಭಾವನೆ ಪಡೆಯುವ ಸಾರ್ವಕಾಲಿಕ ಕ್ರೀಡಾಪಟು ಯಾರು?
ಟೈಗರ್ ವುಡ್ | |
ಕ್ರಿಸ್ಟಿಯಾನೋ ರೊನಾಲ್ಡೊ | |
ಟೈಗರ್ ವುಡ್ಸ್ | |
ಮೈಕೆಲ್ ಜೋರ್ಡನ್ |
ಮಾಜಿ ಬ್ಯಾಸ್ಕೆಟ್ ಬಾಲ್ ಆಟಗಾರ ಮೈಕೆಲ್ ಜೋರ್ಡನ್ ರವರು ಅತ್ಯಧಿಕ ಸಂಭಾವನೆ ಪಡೆಯುವ ಸಾರ್ವಕಾಲಿಕ ಕ್ರೀಡಾಪಟು ಎಂದು ಫೋರ್ಬ್ಸ್ ನಿಯತಕಾಲಿಕೆ ಬಣ್ಣಿಸಿದೆ. ಟೈಗರ್ ವುಡ್, ಲಿಯೊನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ಅತ್ಯಧಿಕ ಸಂಭಾವನೆ ಪಡೆಯುವ ಆಟಗಾರರಾಗಿದ್ದಾರೆ.
Question 9 |
9. “ಬರ್ನಾಡ್ ಕಝೆನುವೆ (Bernard Cazeneuve)” ಯಾವ ದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ?
ಸ್ಪೇನ್ | |
ಫ್ರಾನ್ಸ್ | |
ಮೆಕ್ಸಿಕೊ | |
ನ್ಯೂಜಿಲ್ಯಾಂಡ್ |
ಬರ್ನಾಡ್ ಕಝೆನುವೆ ರವರನ್ನು ಫ್ರಾನ್ಸ್ ನ ನೂತನ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ. ಮ್ಯಾನುಯೆಲ್ ವಾಲ್ಸ್ ರವರು 2017 ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಸಲುವಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಕಾರಣ ಪ್ರಧಾನಿ ಹುದ್ದೆ ತೆರವಾಗಿತ್ತು.
Question 10 |
10. “ಮಂಚರ್ ಸರೋವರ (Manchar Lake)” ಯಾವ ದೇಶದ ಅತಿ ದೊಡ್ಡ ಸರೋವರ?
ಪಾಕಿಸ್ತಾನ | |
ಬಾಂಗ್ಲದೇಶ | |
ನೇಪಾಳ | |
ಶ್ರೀಲಂಕಾ |
ಮಂಚರ್ ಸರೋವರ ಪಾಕಿಸ್ತಾನದ ಅತಿ ದೊಡ್ಡ ಹಾಗೂ ಏಷ್ಯಾದ ದೊಡ್ಡ ಸಿಹಿ ನೀರಿನ ಸರೋವರಗಳಲ್ಲಿ ಒಂದಾಗಿದೆ. ಸಿಂಧ್ ನ ಜಮಶೊರೊ ಜಿಲ್ಲೆಯಲ್ಲಿ ಈ ಸರೋವರ ಇದೆ.
[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-6.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
thanks sir
These are very precious to competative examies