ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,7, 2016
Question 1 |
1. ಈ ಕೆಳಗಿನ ಯಾವ ಲೋಕಸಭಾ ಕ್ಷೇತ್ರ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಕಲ್ಪಿಸಿದ ದೇಶದ ಮೊದಲ ಲೋಕಸಭಾ ಕ್ಷೇತ್ರವಾಗಿದೆ?
ಚಿಕ್ಕಬಳ್ಳಾಪುರ | |
ವಾರಂಗಲ್ | |
ವಿಜಯವಾಡ | |
ಔರಂಗಬಾದ್ |
ವಿಜಯವಾಡ ಲೋಕಸಭಾ ಕ್ಷೇತ್ರ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಕಲ್ಪಿಸಿದ ದೇಶದ ಮೊದಲ ಲೋಕಸಭಾ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಹುಟ್ಟಿದ ಮಗುವಿನಿಂದ ಹಿರಿಯ ನಾಗರಿಕರವರಿಗೆ ಪ್ರತಿಯೊಬ್ಬರು ವಿಮೆಯನ್ನು ಹೊಂದಿದ್ದಾರೆ. ವಿಜಯವಾಡ ಲೋಕಸಭಾ ಕ್ಷೇತ್ರ 245 ಹಳ್ಳಿಗಳನ್ನು ಹೊಂದಿದೆ. ಆಂಧ್ರ ಪ್ರದೇಶ ಸರ್ಕಾರ ಟಾಟಾ ಟ್ರಸ್ಟ್ ಸಹಯೋಗದೊಂದಿಗೆ “ಸ್ವಸ್ಥ ಕುಟುಂಬಂ” ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೆ ತಂದಿದ್ದು, ಇತ್ತೀಚೆಗಷ್ಟೇ ವಿಜಯವಾಡದಲ್ಲಿ ಅನುಷ್ಟಾನಗೊಳಿಸಲಾಗಿತ್ತು.
Question 2 |
2. ಡಾ. ಬಿ.ಆರ್.ಅಂಬೇಡ್ಕರ್ ಜನ್ಮದಿನವನ್ನು ಯಾವ ದಿನವೆಂದು ಆಚರಿಸಲು ತೀರ್ಮಾನಿಸಲಾಗಿದೆ?
ವಾಯು ದಿನ | |
ಜಲ ದಿನ | |
ವನ್ಯಜೀವಿ ದಿನ | |
ಕಾನೂನು ದಿನ |
ಡಾ. ಬಿ. ಆರ್. ಅಂಬೇಡ್ಕರ್ ಜನ್ಮದಿನವಾದ ಏಪ್ರಿಲ್ 14 ರಂದು ಜಲ ದಿನವೆಂದು ದೇಶದಾದ್ಯಂತ ಆಚರಿಸಲು ತೀರ್ಮಾನಿಸಲಾಗಿದೆ. ಜಲ ಸಂರಕ್ಷಣೆಗೆ ಅಂಬೇಡ್ಕರ್ ನೀಡಿರುವ ಕೊಡುಗೆಯನ್ನು ಸ್ಮರಿಸಲು ಈ ದಿನವನ್ನು ಜಲ ದಿನವೆಂದು ಆಚರಿಸಲಾಗುವುದು. ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ದಿ ಮತ್ತು ಗಂಗಾ ಪುನರ್ ಜ್ಜೀವನ ಸಚಿವೆ ಉಮಾ ಭಾರತಿರವರು ಈ ವಿಷಯವನ್ನು ಖಚಿತಪಡಿಸಿದ್ದಾರೆ.
Question 3 |
3. ಸಿಐಐ ನೀಡುವ “ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ”ಯನ್ನು 2016ನೇ ಸಾಲಿಗೆ ಯಾವ ಸಂಸ್ಥೆಗೆ ನೀಡಲಾಗಿದೆ?
ಬಿಇಎಂಎಲ್ | |
ಹೆಚ್ಎಎಲ್ | |
ಬಿಇಎಲ್ | |
ಇಸ್ರೋ |
ಕಾನ್ಪೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ಮತ್ತು ಎಕ್ಸಪೋಟ್-ಇಂಪೋರ್ಟ್ ಬ್ಯಾಂಕ್ (EXIM) ಜಂಟಿಯಾಗಿ ನೀಡುವ “ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ”ಯನ್ನು ಪ್ರಸ್ತಕ ಸಾಲಿನಲ್ಲಿ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್)ಗೆ ನೀಡಲಾಗಿದೆ.
Question 4 |
4. ಈ ಕೆಳಗಿನ ಯಾವ ಬ್ಯಾಂಕ್ “ಅತ್ಯುತ್ತಮ ಎಂಎಸ್ಎಂಇ” ಬ್ಯಾಂಕ್ ಪುರಸ್ಕಾರ ಪಡೆದುಕೊಂಡಿದೆ?
ಸಿಂಡಿಕೇಟ್ ಬ್ಯಾಂಕ್ | |
ಕರ್ಣಾಟಕ ಬ್ಯಾಂಕ್ | |
ಕೆನರಾ ಬ್ಯಾಂಕ್ | |
ವಿಜಯಾ ಬ್ಯಾಂಕ್ |
ಅಸೋಸಿಯೆಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಆಫ್ ಇಂಡಿಯಾ (ಅಸೋಚಾಂ) ನೀಡುವ ಅತ್ಯುತ್ತಮ ಎಂಎಸ್ಎಂಇ ಬ್ಯಾಂಕ್ ಪುರಸ್ಕಾರವನ್ನು ಪಡೆದುಕೊಂಡಿದೆ. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ಎಂಎಸ್ಎಂಇ ಸಚಿವಾಲಯದ ಉಪಸಚಿವ ಪರತಿಭಾಯಿ ಚೌಧರಿ ಪ್ರಶಸ್ತಿಯನ್ನು ವಿತರಿಸಿದರು.
Question 5 |
5. ಇತ್ತೀಚೆಗೆ ನಿಧನರಾದ ಶ್ರೀನಿವಾಸ ಅಯ್ಯರ್ ರಾಮಸ್ವಾಮಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?
ಕಲೆ | |
ಪತ್ರಿಕೋದ್ಯಮ | |
ವಿಜ್ಞಾನ ಮತ್ತು ತಂತ್ರಜ್ಞಾನ | |
ಸಂಗೀತ |
ಪತ್ರಕರ್ತ, ರಾಜಕೀಯ ವಿಶ್ಲೇಷಕ, ಹಾಸ್ಯ ನಟ, ಚೋ ರಾಮಸ್ವಾಮಿ ನಿಧನರಾದರು. ರಾಮಸ್ವಾಮಿ ರವರು ರಾಜ್ಯಸಭಾ ಸದಸ್ಯ, ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾ ಅವರ ಹಿತೈಷಿಯೂ ಆಗಿದ್ದರು. ತುಘಲಕ್ ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಚೋ ರಾಮಸ್ವಾಮಿ ಅವರು ಕಠಿಣ ರಾಜಕೀಯ ವಿಮರ್ಶೆಗಳಿಗೆ ಖ್ಯಾತಿ ಪಡೆದಿದ್ದರು.
Question 6 |
6. “ರಿಸೋರ್ಸ್ಸ್ಯಾಟ್–2 ಎ” ಉಪಗ್ರಹವನ್ನು ಈ ಕೆಳಗಿನ ಯಾವ ರಾಕೆಟ್ ಬಳಸಿ ಯಶಸ್ವಿಯಾಗಿ ಉಡಾಯಿಸಲಾಯಿತು?
ಪಿಎಸ್ಎಲ್ವಿ– ಸಿ 23 | |
ಪಿಎಸ್ಎಲ್ವಿ– ಸಿ 36 | |
ಪಿಎಸ್ಎಲ್ವಿ– ಡಿ 16 | |
ಪಿಎಸ್ಎಲ್ವಿ– ಸಿ 40 |
ಭಾರತೀಯ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಯೋಜನವಾಗಬಲ್ಲ ದೂರ ಸಂವೇದಿ ಉಪಗ್ರಹ ‘ರಿಸೋರ್ಸ್ಸ್ಯಾಟ್–2 ಎ’ ಅನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಯಶಸ್ವಿಯಾಗಿ ಉಡಾಯಿಸಲಾಯಿತು. 1235 ಕೆ.ಜಿ ತೂಕದ ಮೂರು ಹಂತಗಳ ಕ್ಯಾಮೆರಾ ವ್ಯವಸ್ಥೆಯ ಪೇಲೋಡ್ಗಳನ್ನು ಹೊತ್ತ ಪಿಎಸ್ಎಲ್ವಿ– ಸಿ 36 ರಾಕೆಟ್ ನಿಗದಿತ ಸಮಯಕ್ಕೆ ಸರಿಯಾಗಿ ನಭಕ್ಕೆ ಜಿಗಿಯಿತು. ಇದರೊಂದಿಗೆ ಪಿಎಸ್ಎಲ್ವಿ ಉಡ್ಡಯನ ವಾಹನವು 38 ನೇ ಉಡಾವಣಾ ಹೆಗ್ಗಳಿಕೆಗೂ ಪಾತ್ರವಾಯಿತು.
Question 7 |
7. ಪಾಕಿಸ್ತಾನದ ನೂತನ ಮುಖ್ಯ ನ್ಯಾಯಾಧೀಶರಾಗಿ ಯಾರನ್ನು ನೇಮಕ ಮಾಡಲಾಗಿದೆ?
ಮಿಯಾನ್ ಸಾಕ್ವಿಬ್ ನಿಸಾರ್ | |
ಅನ್ವರ್ ಜಹೀರ್ ಜಮಲಿ | |
ಮಿಯಾಂದರ್ ಸಾಹೀಬ್ | |
ಖುರ್ದಿಷ್ ಖಾನ್ ಜಮಲಿ |
ನ್ಯಾಯಮೂರ್ತಿ ಮಿಯಾನ್ ಸಾಕ್ವಿಬ್ ನಿಸಾರ್ ರವರು ಪಾಕಿಸ್ತಾನದ ನೂತನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದು, ಡಿಸೆಂಬರ್ 31 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಮುಖ್ಯ ನ್ಯಾಯಾಧೀಶರಾಗಿರುವ ಅನ್ವರ್ ಜಹೀರ್ ಜಮಲಿ ರವರು ಡಿಸೆಂಬರ್ 30 ರಂದು ನಿವೃತ್ತರಾಗಲಿದ್ದಾರೆ. ನಿಸಾರ್ ರವರು ಪಾಕಿಸ್ತಾನದ 25ನೇ ಮುಖ್ಯ ನ್ಯಾಯಾಧೀಶ.
Question 8 |
8. ಫಾರ್ಚೂನ್ ನಿಯತಕಾಲಿಕೆ ಈ ಕೆಳಗಿನ ಯಾವ ಸಂಸ್ಥೆಯನ್ನು “ವರ್ಷದ ಸಂಸ್ಥೆ” ಎಂದು ಹೆಸರಿಸಿದೆ?
ನಿಕೆ | |
ಆ್ಯಪಲ್ | |
ಗೂಗಲ್ ಅಲ್ಪಾಬೆಟ್ | |
ಸ್ಯಾಮಸಂಗ್ |
ಫಾರ್ಚೂನ್ ನಿಯತಕಾಲಿಕೆಯ ವರ್ಷದ ಸಂಸ್ಥೆಯಾಗಿ ಗೂಗಲ್ ಪೋಷಕ ಸಂಸ್ಥೆ ಅಲ್ಪಾಬೆಟ್ ಹೊರಹೊಮ್ಮಿದೆ. ಫಾರ್ಚೂನ್ ನಿಯತಕಾಲಿಕೆಯ ವಾರ್ಷಿಕ ಬ್ಲೂ ರಿಬ್ಬನ್ ಪಟ್ಟಿಯಲ್ಲಿ ಅಲ್ಪಾಬೆಟ್ ಪ್ರಥಮ ಸ್ಥಾನ ಪಡೆದುಕೊಂಡಿದೆ. ನಿಕೆ ಮತ್ತು ಆ್ಯಪಲ್ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
Question 9 |
9. ಈ ಕೆಳಗಿನ ಯಾರು 2016ನೇ ಸಾಲಿನ ಟೈಮ್ಸ್ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ?
ಬರಾಕ್ ಒಬಾಮ | |
ನರೇಂದ್ರ ಮೋದಿ | |
ಡೋನಾಲ್ಡ್ ಟ್ರಂಪ್ | |
ಮೈಕಲ್ ಜೋರ್ಡನ್ |
2016 ನೇ ಸಾಲಿನ ಟೈಮ್ಸ್ ವರ್ಷದ ವ್ಯಕ್ತಿಯಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದಾರೆ. ದಿನ ಪತ್ರಿಕೆಗಳಲ್ಲಿ ಯಾರು ಹೆಚ್ಚು ಪ್ರಚಲಿತದಲ್ಲಿರುತ್ತಾರೋ ಅಂತಹವರನ್ನು ಟೈಮ್ಸ್ ಸಂಪಾದಕರು ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡುತ್ತಾರೆ. ಟೈಮ್ಸ್ ವರ್ಷದ ವ್ಯಕ್ತಿ ಸ್ಪರ್ಧೆಯಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಎದುರು ಸೋತ ಹಿಲರಿ ಕ್ಲಿಂಟನ್ 2ನೇ ಸ್ಥಾನ, ಹಾಕರ್ಸ್ 3ನೇ ಸ್ಥಾನ, ಟರ್ಕಿಯ ಅಧ್ಯಕ್ಷ ಎರ್ಡೋಗನ್ 4 ನೇ ಸ್ಥಾನ, CRISPR ವಿಜ್ಞಾನಿಗಳು 5ನೇ ಸ್ಥಾನ ಹಾಗೂ ಬೆಯಾಂನ್ಸ್ 6 ನೇ ಸ್ಥಾನ ಪಡೆದಿದ್ದಾರೆ. ಇತ್ತೀಚೆಗಷ್ಟೇ ಶೇ. 18 ಮತಗಳಿಂದ ಟೈಮ್ಸ್ ವರ್ಷದ ವ್ಯಕ್ತಿ ಓದುಗರ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮುನ್ನಡೆ ಸಾಧಿಸಿದ್ದರು. ಟ್ರಂಪ್, ಜೂಲಿಯನ್ ಅಸ್ಸಾಂಜೆ, ಒಬಾಮಾ ಅವರನ್ನು ಹಿಂದಿಕ್ಕಿ ಟೈಮ್ಸ್ ಓದುಗರ ವರ್ಷದ ವ್ಯಕ್ತಿಯಾಗಿ ಆಯ್ಕೆ ಮೋದಿ ಆಯ್ಕೆ ಆಗಿದ್ದರು.
Question 10 |
10. 2016 ವಿಶ್ವ ಪ್ರಭಾವಿ ಭಾಷೆ ಸೂಚ್ಯಂಕದಲ್ಲಿ ಹಿಂದಿ ಎಷ್ಟನೇ ಸ್ಥಾನದಲ್ಲಿದೆ?
ಎರಡು | |
ಐದು | |
ಹತ್ತು | |
ಹದಿನೈದು |
ವಿಶ್ವ ಆರ್ಥಿಕ ವೇದಿಕೆ ಹೊರತಂದಿರುವ 2016 ವಿಶ್ವ ಪ್ರಭಾವಿ ಭಾಷೆ ಸೂಚ್ಯಂಕದಲ್ಲಿ ಹಿಂದಿ ಭಾಷೆ ಹತ್ತನೇ ಸ್ಥಾನದಲ್ಲಿದೆ. ಸೂಚ್ಯಂಕದಲ್ಲಿ ಇಂಗ್ಲೀಷ್ ಪ್ರಥಮ ಸ್ಥಾನದಲ್ಲಿದೆ. ವಿಶ್ವ ಆರ್ಥಿಕ ವೇದಿಕೆ ಮುನ್ನೋಟದ ಪ್ರಕಾರ 2050ರ ವೇಳೆಗೆ ಹಿಂದಿ ಭಾಷೆ 9ನೇ ಸ್ಥಾನ ಪಡೆದುಕೊಳ್ಳಲಿದೆ ಎನ್ನಲಾಗಿದೆ.
[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-7.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
thanks sir
thanks
PLEASE UPDATE NOVEMBER MONTH CURRENT AFFAIRS
Good question in that date thanks your group