ಪ್ರಖ್ಯಾತ ಮರಾಠಿ ಲೇಖಕ ಆನಂದ್ ಯಾದವ್ ನಿಧನ

ಖ್ಯಾತ ಮರಾಠಿ ಲೇಖಕ ಆನಂದ್ ಯಾದವ್ ರವರು ಪುಣೆ, ಮಹಾರಾಷ್ಟ್ರದಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಯಾದವ್ ರವರ ಆತ್ಮಚರಿತ್ರೆ “ಝೊಂಬಿ” ಅವರಿಗೆ 1991 ರಲ್ಲಿ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಝೊಂಬಿ ಒಬ್ಬ ಬಾಲಕ, ಅವನ ಪ್ರೀತಿಯ ತಾಯಿ, ಕಿತ್ತು ತಿನ್ನುವ ಬಡತನ ಆದರೂ ಓದಬೇಕು ಎನ್ನುವ ಆತನ ಆಸೆಯನ್ನು ಆಧರಿತ ಕಥೆ.

ಆನಂದ್ ಯಾದವ್:

  • ಆನಂದ್ ಯಾದವ್ ರವರು ಕೊಲ್ಹಾಪುರ ಜಿಲ್ಲೆಯ ಕಗಲ್ ಹಳ್ಳಿಯಲ್ಲಿ ನವೆಂಬರ್ 30, 1935 ರಲ್ಲಿ ಜನಿಸಿದರು.
  • ಕಥೆ, ಪ್ರಬಂಧ ಮತ್ತು ಕವಿತೆಗಳನ್ನು ಸೇರಿದಂತೆ 40ಕ್ಕೂ ಹೆಚ್ಚು ಪುಸ್ತಕಗಳನ್ನು ಅವರು ಬರೆದಿದ್ದರು.
  • 17ನೇ ಶತಮಾನದ ಸಂತ ಕವಿಯಾದ ಸಂತ ತುಕರಾಮ್ ಕುರಿತು “ಸಂತಸೂರ್ಯ ತುಕರಾಮ್” ಪುಸ್ತಕವನ್ನು ಬರೆದಿದ್ದಾರೆ.
  • 2009 ರಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಗೌರವಾನ್ವಿತ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
  • 2010 ರಲ್ಲಿ ತೆರೆಕಂಡ ನತ್ರಂಗ್ ಮರಾಠಿ ಸಿನಿಮಾ ಆನಂದ್ ರವರ ಕಾದಂಬರಿ ಆಧರಿತ ಸಿನಿಮಾವಾಗಿತ್ತು.

ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪಟಾಕಿ ಮಾರಾಟದ ಮೇಲೆ ಸುಪ್ರೀಂ ನಿಷೇಧ

ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಪಟಾಕಿಗಳನ್ನು ಮಾರಾಟ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದೆಹಲಿಯಲ್ಲಿ ಕೈಮೀರಿ ಏರುತ್ತಿರುವ ಮಾಲಿನ್ಯವನ್ನು ತಡೆಯಲು ಸುಪ್ರೀಂಕೋರ್ಟ್ ಈ ನಿರ್ಧಾರವನ್ನು ತಳಿದಿದೆ.  ಕೋರ್ಟ್ ಆದೇಶದಿಂದ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪಟಾಕಿ ಮಾರಾಟ, ಖರೀದಿ ಮತ್ತು ಸಂಗ್ರಹಿಸಿಡುವುದು ಕಾನೂನು ಬಾಹಿರ.

  • ಇದುವರೆಗೆ ಲೈಸೆನ್ಸ್ ಹೊಂದಿದ್ದ ಎಲ್ಲಾ ಮಾರಾಟಗಾರರು ದೆಹಲಿಯಲ್ಲಿ ಪಟಾಕಿಗಳನ್ನು ಮಾರಾಟ ಮಾಡಬಹುದಾಗಿತ್ತು. ಎಲ್ಲಾ ಮಾರಾಟಗಾರರ ಅನುಮತಿ ಪತ್ರವನ್ನು ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ಅದೇ ರೀತಿ ಹೊಸ ಲೈಸೆನ್ಸ್ ಅನ್ನು ನೀಡಬಾರದು.
  • ಪಟಾಕಿಯಲ್ಲಿ ಬಳಸಲಾಗುವ ಪದಾರ್ಥಗಳ ಹಾನಿಕಾರಕ ಪರಿಣಾಮವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CBPC) ಅಧ್ಯಯನ ನಡೆಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ.
  • ಆದರೆ ಪಟಾಕಿ ಸುಡುವುದರ ಮೇಲೆ ಯಾವುದೇ ನಿಷೇಧವನ್ನು ಹೇರಲಾಗಿಲ್ಲ. ಏಕೆಂದರೆ ನಿಗಾವಹಿಸುವುದು ಮತ್ತು ಅನುಷ್ಠಾನಗೊಳಿಸುವುದು ಅಷ್ಟು ಸುಲಭವಲ್ಲ.

ಏನಿದು ಪ್ರಕರಣ?

ದೆಹಲಿಯಲ್ಲಿ ಮಾಲಿನ್ಯವನ್ನು ನಿಯಂತ್ರಿಸಲು ಏನಾದರೊಂದು ಪ್ರಯತ್ನ ಮಾಡಬೇಕೆಂದು ನ್ಯಾಯಾಲಯ ಈ ಹಿಂದೆ ಹೇಳಿತ್ತು. ದೀಪಾವಳಿ ಕಳೆದ ನಂತರ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮಾಲಿನ್ಯದ ಪ್ರಮಾಣ ಅಪಾಯದ ಮಟ್ಟ ಮೀರುತ್ತಿತ್ತು.ದೇಶದ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ದೀಪಾವಳಿ ಸಂದರ್ಭದಲ್ಲಿ ಮಿತಿಮೀರುತ್ತಿದ್ದು ಪಟಾಕಿಗಳ ಮಾರಾಟ ಮತ್ತು ಕೊಳ್ಳುವಿಕೆಗೆ ನಿಷೇಧ ಹೇರಬೇಕೆಂದು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.

ಲೆಪ್ಟಿನೆಂಟ್ ಜನರಲ್ ಜಾವೇದ್ ಬಾಜ್ವ ಪಾಕಿಸ್ತಾನದ ನೂತನ ಸೇನಾ ಮುಖ್ಯಸ್ಥ

ಲೆಪ್ಟಿನೆಂಟ್ ಜನರಲ್ ಕಮರ್ ಜಾವೇದ್ ಬಾಜ್ವ ಪಾಕಿಸ್ತಾನದ ನೂತನ ಸೇನಾ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಜಾವೇದ್ ಬಾಜ್ವ ಅವರನ್ನು ಜನರಲ್ ರಹೀಲ್ ಷರೀಪ್ ನಿವೃತ್ತರಾದ ಕಾರಣ ಅವರ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಲೆಪ್ಟಿನೆಂಟ್ ಜನರಲ್ ಪಾಕಿಸ್ತಾನದ ಅತ್ಯಂತ ಮಹತ್ವದ ಹುದ್ದೆಯಾಗಿದೆ. ಪಾಕಿಸ್ತಾನ ಸೇನೆ ವಿಶ್ವದ ಆರನೇ ಅತಿ ದೊಡ್ಡ ಸೇನಾಪಡೆ ಎನಿಸಿದೆ.

ಜಾವೇದ್ ಬಾಜ್ವ ಬಗ್ಗೆ:

  • ಪಾಕಿಸ್ತಾನ ಆಕ್ರಮಿತಿ ಕಾಶ್ಮೀರ ಮತ್ತು ಪಾಕಿಸ್ತಾನದ ಉತ್ತರ ಭಾಗದಲ್ಲಿ ಕಾರ್ಯನಿರ್ವಹಿಸಿರುವ ಅನುಭವವನ್ನು ಬಾಜ್ವ ಹೊಂದಿದ್ದಾರೆ.
  • ಪಾಕಿಸ್ತಾನದ ಅತಿ ದೊಡ್ಡ ಸೇನಾ ಪಡೆ “10 ಕಾರ್ಪ್ಸ್” ಮುನ್ನಡೆಸಿರುವ ಅನುಭವ ಇವರಿಗಿದೆ. 10 ಕಾರ್ಪ್ಸ್ ಗಡಿ ನಿಯಂತ್ರಣ ರೇಖೆ ಕಾಯುವ ಅತಿ ದೊಡ್ಡ ಸೇನಾ ಪಡೆ.
  • ಲೆಪ್ಟಿನೆಂಟ್ ಜನರಲ್ ಆಗಿ ನೇಮಕಗೊಳ್ಳುವ ಮುಂಚೆ ಇವರು ಇನ್ಸಪೆಕ್ಟರ್ ಜನರಲ್ ಆಫ್ ಟ್ರೈನಿಂಗ್ ಅಂಡ್ ಎವಲ್ಯೂಷನ್ ಆಗಿ ಸೇವೆ ಸಲ್ಲಿಸುತ್ತಿದ್ದರು.

One Thought to “ಪ್ರಚಲಿತ ವಿದ್ಯಮಾನಗಳು- ನವೆಂಬರ್-28, 2016”

  1. Dinesh

    November month full current affairs pdf bidi sir

Leave a Comment

This site uses Akismet to reduce spam. Learn how your comment data is processed.