ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,11, 2016
Question 1 |
ಐಶ್ವರ್ಯ ಧನುಷ್ | |
ಪ್ರಿಯಾಂಕಾ ಚೋಪ್ರಾ | |
ಐಶ್ವರ್ಯ ರೈ | |
ಕರೀನಾ ಕಪೂರ್ |
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ನಿಧಿಗೆ (ಯುನಿಸೆಫ್) ನೂತನ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಫುಟ್ಬಾಲ್ ಆಟಗಾರ ಇಂಗ್ಲೆಂಡ್ನ ಡೇವಿಡ್ ಬೆಕಂ ಮತ್ತು ನಟಿ ಮಿಲ್ಲಿ ಬೊಬಿ ಬ್ರೌನ್ ಅವರು ಪ್ರಿಯಾಂಕಾ ಆಯ್ಕೆಯನ್ನು ಘೋಷಿಸಿದ್ದಾರೆ.
Question 2 |
2. ಇತ್ತೀಚೆಗೆ ತಮಿಳುನಾಡಿನ ಉತ್ತರ ಭಾಗ ಹಾಗೂ ದಕ್ಷಿಣ ಆಂಧ್ರದಲ್ಲಿ ಅಪ್ಪಳಿಸಿದ ಚಂಡಮಾರುತಕ್ಕೆ “ವಾರ್ದಾ” ಎಂದು ಹೆಸರು ನೀಡಿದ ದೇಶ ಯಾವುದು?
ಒಮನ್ | |
ಪಾಕಿಸ್ತಾನ | |
ಬಾಂಗ್ಲದೇಶ | |
ಶ್ರೀಲಂಕಾ |
ತಮಿಳುನಾಡಿನ ಉತ್ತರ ಭಾಗ ಹಾಗೂ ದಕ್ಷಿಣ ಆಂಧ್ರದಲ್ಲಿ ‘ವಾರ್ದಾ’ ಚಂಡಮಾರುತ ಅಪ್ಪಳಿಸಿದ್ದು ತಮಿಳುನಾಡು, ಪುದುಚೇರಿ ಹಾಗೂ ಆಂಧ್ರದಲ್ಲಿ ಭಾರಿ ಮಳೆಯಾಗುತ್ತಿದೆ. ಚಂಡುಮಾರುತಕ್ಕೆ ‘ವಾರ್ದಾ’ ಹೆಸರು ನೀಡಿರುವುದು ಪಾಕಿಸ್ತಾನ. ವಾರ್ದಾ ಎಂದರೆ ಕೆಂಪು ಗುಲಾಬಿ ಎನ್ನುವ ಅರ್ಥವಿದೆ.
Question 3 |
3. ನರ್ಮದಾ ನದಿಯನ್ನು ಸ್ವಚ್ಚಗೊಳಿಸುವ ಸಲುವಾಗಿ “ನರ್ಮದಾ ಸೇವಾ ಯಾತ್ರ”ಆರಂಭಿಸಿದ ರಾಜ್ಯ ಯಾವುದು?
ಮಧ್ಯ ಪ್ರದೇಶ | |
ಗುಜರಾತ್ | |
ಮಹಾರಾಷ್ಟ್ರ | |
ಚತ್ತೀಸಘರ್ |
ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಣ್ ರವರು “ನರ್ಮದಾ ಸೇವಾ ಯಾತ್ರ”ಗೆ ಚಾಲನೆ ನೀಡಿದರು. ಐದು ತಿಂಗಳ ಅವಧಿಯ ಈ ಯಾತ್ರಾದ ಪ್ರಮುಖ ಉದ್ದೇಶವೆಂದರೆ ನರ್ಮದಾ ನದಿಯನ್ನು ಮಾಲಿನ್ಯದಿಂದ ಮುಕ್ತಗೊಳಿಸುವುದು. ನರ್ಮದಾ ಸೇವಾ ಯಾತ್ರ ಮೂಲಕ ನರ್ಮದಾ ನದಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುವುದು.
Question 4 |
4. “ಲಾರೇಟ್ಸ್ ಅಂಡ್ ಲೀಡರ್ಸ್ ಫಾರ್ ಚಿಲ್ಡ್ರನ್ಸ್ ಶೃಂಗಸಭೆ (Laureates and Leaders for Children’s Summit)-2016” ನಡೆದ ದೇಶ ಯಾವುದು?
ಭಾರತ | |
ರಷ್ಯಾ | |
ಪಾಕಿಸ್ತಾನ | |
ಶ್ರೀಲಂಕಾ |
ನೊಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಫೌಂಡೇಶನ್ ನ “ಲಾರೇಟ್ಸ್ ಅಂಡ್ ಲೀಡರ್ಸ್ ಫಾರ್ ಚಿಲ್ಡ್ರನ್ಸ್ ಶೃಂಗಸಭೆ-2016” ನವದೆಹಲಿಯಲ್ಲಿ ಆಯೋಜಿಸಲಾಗಿತ್ತು. ಕೈಲಾಶ್ ಸತ್ಯಾರ್ಥಿ ಸೇರಿದಂತೆ ಐದು ನೊಬೆಲ್ ಪ್ರಶಸ್ತಿ ವಿಜೇತರು ಈ ಶೃಂಗಸಭೆಯನ್ನು ಆಯೋಜಿಸಿದ್ದರು. ವಿಶ್ವದಾದ್ಯಂತ ಬಾಲ ಕಾರ್ಮಿಕ ಪದ್ದತಿಯನ್ನು ಕೊನೆಗಾಣಿಸಲು “ವಿಲ್ ಫಾರ್ ಚಿಲ್ದ್ರನ್ (Will for Children)” ಘೋಷಣೆಯನ್ನು ಅಳವಡಿಸಿಕೊಳ್ಳಲಾಯಿತು. ಬಾಲ ಕಾರ್ಮಿಕ ಪದ್ದತಿ, ಮಕ್ಕಳ ಗುಲಾಮಗಿರಿ, ಅಪ್ರಾಪ್ತರ ವಿರುದ್ದ ಶೋಷಣೆಯನ್ನು ತಡೆಯುವುದು ವಿಲ್ ಫಾರ್ ಚಿಲ್ಡ್ರನ್ ಧ್ಯೇಯವಾಗಿದೆ.
Question 5 |
5. “Many Everest” An Inspiring Journey of Transforming Dream into Reality” ಪುಸ್ತಕದ ಲೇಖಕರು _______?
ಅರುಣಿಮಾ ಸಿನ್ಹಾ | |
ರವೀಂದ್ರ ಕುಮಾರ್ | |
ಪಿ ಕೆ ಸಿನ್ಹಾ | |
ಕಿಶೋರ್ ಚಂದ್ರ |
Many Everest” An Inspiring Journey of Transforming Dream into Reality” ಪುಸ್ತಕದ ಲೇಖಕರು ರವೀಂದ್ರ ಕುಮಾರ್. ರವೀಂದ್ರ ಕುಮಾರ್ ರವರು 2011ನೇ ಬ್ಯಾಚ್ ನ ಐಎಎಸ್ ಅಧಿಕಾರಿ. ಕುಮಾರ್ ರವರು ಮೌಂಟ್ ಎವರೆಸ್ಟ್ ಹೇರಿದ ಮೊದಲ ಐಎಎಸ್ ಅಧಿಕಾರಿ. ಸಂಪುಟ ಕಾರ್ಯದರ್ಶಿ ಎ.ಕೆ.ಸಿನ್ಹಾ ರವರು ಈ ಪುಸ್ತಕವನ್ನು ಡಿಸೆಂಬರ್ 12, 2016 ರಂದು ಬಿಡುಗಡೆಗೊಳಿಸಿದರು.
Question 6 |
6. ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿರುವ ಅಮೆರಿಕದ 40 ವರ್ಷದೊಳಗಿನ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇಬ್ಬರು ಭಾರತ ಮೂಲದವರನ್ನು ಗುರುತಿಸಿ?
ವಿವೇಕ್ ರಾಮಸ್ವಾಮಿ, ಅಪೂರ್ವ ಮೆಹ್ತಾ | |
ರಾಜೇಂದ್ರ ಕೃಷ್ಣನ್, ಅಪೂರ್ವ ಮೆಹ್ತಾ | |
ಸುರೇಂದ್ರ ಚಂದ್ರ, ಕೋಮಲ ಸಿಂಗ್ | |
ರಜನಿ ಚೌಧರಿ, ಅಪೂರ್ವ ಮೆಹ್ತಾ |
ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿರುವ ಅಮೆರಿಕದ 40 ವರ್ಷದೊಳಗಿನ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಭಾರತ ಮೂಲದ ಜೈವಿಕ ತಂತ್ರಜ್ಞಾನ ಉದ್ಯಮಿ ವಿವೇಕ್ ರಾಮಸ್ವಾಮಿ ಮತ್ತು ಅಪೂರ್ವ ಮೆಹ್ತಾ ಸ್ಥಾನ ಪಡೆಡಿದ್ದಾರೆ. ರಾಮಸ್ವಾಮಿ ರವರು (60 ಕೋಟಿ ಡಾಲರ್) ಸುಮಾರು ₹4200 ಸಾವಿರ ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದು 24ನೇಸ್ಥಾನದಲ್ಲಿದ್ದಾರೆ. ಅಪೂರ್ವಾ ಮೆಹ್ತಾ ಅವರು 31ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ‘ಫೇಸ್ಬುಕ್’ ಸ್ಥಾಪಕ ಮಾರ್ಕ್ ಜುಕರ್ಬರ್ಗ್ ಎಂದಿನಂತೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
Question 7 |
7. ಈ ಕೆಳಗಿನ ಚಂಡಮಾರುತಗಳನ್ನು ಗಮನಿಸಿ:
I) ಸೈಕ್ಲೋನ್ ರೌಣು
II) ಸೈಕ್ಲೋನ್ ಕ್ಯಾಂಟ್
III) ಸೈಕ್ಲೋನ್ ನಾಡಾ
IV) ಸೈಕ್ಲೋನ್ ವಾರ್ದಾ
ಈ ಮೇಲಿನ ಯಾವ ಚಂಡಮಾರುತಗಳು 2016 ರಲ್ಲಿ ಭಾರತಕ್ಕೆ ಅಪ್ಪಳಿಸಿವೆ?
I & II | |
I, II & IV | |
II, III & IV | |
I, II, III & IV |
Question 8 |
ದೇವೇಂದ್ರೊ ಸಿಂಗ್ | |
ಶಿವ ಥಾಪಾ | |
ಅಂಕುಶ್ ದಹಿಯಾ | |
ಮನೋಜ್ ಕುಮಾರ್ |
ಅಸ್ಸಾಂನ ಗುವಾಹಟಿಯಲ್ಲಿ ನಡೆದ 2016 ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಶಿವ ಥಾಪಾ ರವರು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. 52 ಕೆ.ಜಿ. ವಿಭಾಗದಲ್ಲಿ ದೇವೇಂದ್ರೊ ಸಿಂಗ್ ರವರನ್ನು ಫೈನಲ್ನಲ್ಲಿ ಮಣಿಸಿ ಚಿನ್ನದ ಪದಕವನ್ನು ಗೆದ್ದುಕೊಂಡರು. ಆಘಾತ ಅನುಭವಿಸಿದ ದೇವೇಂದ್ರೊ ಸಿಂಗ್ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡರು.
Question 9 |
9. ಯಾವ ನಗರದಲ್ಲಿ “ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯೂರಿಟೀಸ್ ಮಾರ್ಕೆಟ್ಸ್ (NISM)” ಅನ್ನು ಪ್ರಧಾನಿ ಮೋದಿರವರು ಉದ್ಘಾಟಿಸಿಲಿದ್ದಾರೆ?
ನವದೆಹಲಿ | |
ಚೆನ್ನೈ | |
ಮುಂಬೈ | |
ಹೈದ್ರಾಬಾದ್ |
ಮುಂಬೈ, ಮಹಾರಾಷ್ಟ್ರದಲ್ಲಿ ಸ್ಥಾಪಿಸಲಾಗಿರುವ “ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯೂರಿಟೀಸ್ ಮಾರ್ಕೆಟ್ಸ್ (NISM)”ನೂತನ ಕ್ಯಾಂಪಸ್ ಅನ್ನು ನರೇಂದ್ರ ಮೋದಿ ಡಿಸೆಂಬರ್ 24 ರಂದು ಉದ್ಘಾಟಿಸಲಿದ್ದಾರೆ. NISM ನೂತನ ಕ್ಯಾಂಪಸ್ 70 ಎಕರೆ ವಿಸ್ತೀರ್ಣವಿದ್ದು, 5000 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಿದೆ.
Question 10 |
10. “ಪಾವೊಲೊ ಗೆಂಟಿಲೊನಿ (Paolo Gentiloni)” ರವರು ಯಾವ ದೇಶದ ನೂತನ ಪ್ರಧಾನಿಯಾಗಿ ನೇಮಕಗೊಂಡಿದ್ದಾರೆ?
ಇಟಲಿ | |
ಫ್ರಾನ್ಸ್ | |
ಮೆಕ್ಸಿಕೊ | |
ಜರ್ಮನಿ |
ಪಾವೊಲೊ ಗೆಂಟಿಲೊನಿ ರವರನ್ನು ಇಟಲಿಯ ನೂತನ ಪ್ರಧಾನಿಯಾಗಿ ಇಟಲಿಯ ಅಧ್ಯಕ್ಷ ಸೆರ್ಗಿಯೊ ಮಟ್ಟೆರೆಲ್ಲಾ ನೇಮಕ ಮಾಡಿದ್ದಾರೆ. ಇಟಲಿಯ ಪ್ರಧಾನಿಯಾಗಿದ್ದ ಮಟ್ಟೆಯೊ ರೆಂಜಿ ರವರು ಇತ್ತೀಚೆಗೆ ರಾಜೀನಾಮೆ ನೀಡಿದ್ದ ಕಾರಣ ಪ್ರಧಾನಿ ಹುದ್ದೆ ತೆರವಾಗಿತ್ತು. ಗೆಂಟಿಲೊನಿ ರವರು 2006 ರಿಂದ 2008 ರವರೆಗೆ ಸಂಪರ್ಕ ಸಚಿವರಾಗಿ ಸೇವೆ ಸಲ್ಲಿಸಿದ್ದರು.
[button link=”http://www.karunaduexams.com/wp-content/uploads/2016/12/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್11-2016.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Comment