145 ಎಂ777 ಹೊವಿಟ್ಜರ್ ಗನ್ ಖರೀದಿಸಲು ಭಾರತ ಅಮೆರಿಕ ಒಪ್ಪಂದಕ್ಕೆ ಸಹಿ
ಭಾರತ ಮತ್ತು ಅಮೆರಿಕದೊಂದಿಗೆ ಸುಮಾರು 500 ಕೋಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದಡಿ 145 “ಎಂ777 ಅಲ್ಟ್ರಾ ಲೈಟ್ ಹೊವಿಟ್ಟರ್” ಗನ್ ಗಳನ್ನು ಭಾರತ ಅಮೆರಿದಿಂದ ಖರೀದಿಸಲಿದೆ. ಇದು 750 ಮಿಲಿಯನ್ ಡಾಲರ್ ಮೌಲ್ಯದ ಒಪ್ಪಂದ ಎನ್ನಲಾಗಿದೆ. 1980ರ ಬೊಫೋರ್ಸ್ ಹಗರಣದ ಬಳಿಕ ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಖರೀದಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆ ಮೇಲಿನ ಸಂಪುಟ ಸಮಿತಿ ಒಪ್ಪಂದಕ್ಕೆ ಹಸಿರು ನಿಶಾನೆ ತೋರಿದೆ.
- ಹೌವಿಟ್ಜರ್ ಗನ್ ಗಳನ್ನು ಅಮೆರಿಕದ BAE ಸಿಸ್ಟಂ ಸಂಸ್ಥೆ ತಯಾರಿಸುತ್ತಿದೆ. 145 ಗನ್ ಗಳ ಪೈಕಿ 25 ಗಳನ್ನು ಅಮೆರಿಕದಿಂದ ನೇರವಾಗಿ ಆಮದು ಮಾಡಿಕೊಳ್ಳಲಾಗುವುದು. ಉಳಿದ 120 ಗನ್ ಗಳನ್ನು ಭಾರತದಲ್ಲಿ ತಯಾರಿಸಲಾಗುವುದು.
- BAE ಸಿಸ್ಟಂ ಈಗಾಗಲೇ ಭಾರತದ ಮಹೀಂದ್ರ ಗ್ರೂಫ್ ಅನ್ನು ತನ್ನ ಸ್ಥಳೀಯ ಪಾಲುದಾರಿಕೆ ಸಂಸ್ಥೆಯಾಗಿ ಆಯ್ಕೆಮಾಡಿಕೊಂಡಿದೆ.
ಹೂವಿಟ್ಜರ್ ಗನ್:
ಹೂವಿಟ್ಜರ್ ಗನ್ಅನ್ನು ಅಮೆರಿಕದ ಬಿಎಇ ಸಿಸ್ಟಮ್ಸ್ ಗ್ಲೋಬಲ್ ಕಂಬಾಟ್ ಡಿವಿಷನ್ ಅಭಿವೃದ್ದಿಪಡಿಸುತ್ತಿದೆ. ಹೊವಿಟ್ಜರ್ ಗನ್ ಗಳು ಸಣ್ಣ ಮತ್ತು ಲಘು ತೂಕದ ಗನ್ ಗಳಾಗಿವೆ. ಇದರ ತೂಕ 4,100 ಕೆ.ಜಿಯಾಗಿದ್ದು ಹೆಲಿಕಾಪ್ಟರ್ ನಲ್ಲಿ ಸಾಗಿಸಬಹುದಾಗಿದೆ. 24 ಕಿ.ಮೀ ದೂರ ಪೈರಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಗಡಿ ಭದ್ರತಾ ಪಡೆ 51ನೇ ಸಂಸ್ಥಾಪನ ದಿನಾಚರಣೆ
ವಿಶ್ವದ ಅತಿ ದೊಡ್ಡ ಗಡಿ ಕಾಯುವ ಸೇನಾಪಡೆಯಾದ ಗಡಿ ಭದ್ರತಾ ಪಡೆಯ 51ನೇ ಸಂಸ್ಥಾಪನ ದಿನವನ್ನು ಡಿಸೆಂಬರ್ 1 ರಂದು ಆಚರಿಸಲಾಯಿತು. ಸಂಸ್ಥಾಪನ ದಿನದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಿಎಸ್ಎಫ್ ಸಿಬ್ಬಂದಿ ಆಯೋಜಿಸಿದ್ದರು. ಸಂಸ್ಥಾಪನ ದಿನದ ಅಂಗವಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರವರು “ಮಹಾರಾಣ ಪ್ರತಾಪ್ ಸಿಂಗ್ ಟ್ರೋಫಿ-2016” ಅನ್ನು ಬಿಎಸ್ಎಫ್ ಪಂಜಾಬ್ ತುಕಡಿಗೆ ಪ್ರಧಾನ ಮಾಡಿದರು.
ಗಡಿ ಭದ್ರತಾ ಪಡೆ:
- ಗಡಿ ಭದ್ರತಾ ಪಡೆಯನ್ನು ಡಿಸೆಂಬರ್ 1, 1965 ರಲ್ಲಿ ಸ್ಥಾಪಿಸಲಾಗಿದೆ. ಭಾರತ-ಪಾಕಿಸ್ತಾನ ಮತ್ತು ಭಾರತ-ಬಾಂಗ್ಲದೇಶ ನಡುವಿನ ಗಡಿ ಕಾಯುವ ಜವಬ್ದಾರಿ ಬಿಎಸ್ಎಫ್ ಮೇಲಿದೆ.
- ವಿವಿಧ ರಾಜ್ಯಗಳ ಸಶಸ್ತ್ರ ಪೊಲೀಸ್ ಪಡೆಗಳನ್ನು ವಿಲೀನಗೊಳಿಸಿ ಗಡಿ ಭ್ರದತಾ ಪಡೆಯನ್ನು ಸ್ಥಾಪಿಸಲಾಗಿದೆ.
- ಪ್ರಸ್ತುತ ಬಿಎಸ್ಎಫ್ ಭಾರತ-ಪಾಕಿಸ್ತಾನ, ಭಾರತ-ಬಾಂಗ್ಲದೇಶ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಕಾಯಲು ಮತ್ತು ನಕ್ಸಲ್ ವಿರೋಧ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
- ಪರಿಸರ ವಿಕೋಪ ಸಂದರ್ಭದಲ್ಲಿ, ಯುದ್ದ ಕಾರ್ಯಾಚರಣೆಗಳಲ್ಲಿ, ಭಯೋತ್ಪಾದಕರನ್ನು ಹತ್ತಿಕ್ಕುವಲ್ಲಿ ಗಡಿ ಭದ್ರತಾ ಪಡೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದೆ.
ಸಿಬಿಐನ ಹಂಗಾಮಿ ನಿರ್ದೇಶಕರಾಗಿ ರಾಕೇಶ್ ಆಸ್ಥಾನ ನೇಮಕ
ಹಿರಿಯ ಐಪಿಎಸ್ ಅಧಿಕಾರಿ ರಾಕೇಶ್ ಆಸ್ಥಾನ ಅವರು ಕೇಂದ್ರ ತನಿಖಾ ದಳ (ಸಿಬಿಐ)ದ ಹಂಗಾಮಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿಬಿಐ ನಿರ್ದೇಶಕ ಅನಿಲ್ ಸಿನ್ಹಾ ಅವರು ಸೇವೆಯಿಂದ ನಿವೃತ್ತರಾದ ಕಾರಣ ಈ ಹುದ್ದೆ ತೆರವಾಗಿತ್ತು. ಸಿಬಿಐ ಮುಖ್ಯಸ್ಥರೊಬ್ಬರ ನಿವೃತ್ತಿಯ ಬಳಿಕ ಅಧಿಕೃತವಾಗಿ ಬೇರೆ ಮುಖ್ಯಸ್ಥರನ್ನು ನೇಮಿಸದೆಯೇ ಇರುವುದು ಕಳೆದ 10 ವರ್ಷದಲ್ಲಿ ಇದೇ ಮೊದಲ ಬಾರಿ.
ರಾಕೇಶ್ ಆಸ್ಥಾನ:
- 1984ರ ಗುಜರಾತ್ ಕೇಡರ್ ಅಧಿಕಾರಿಯಾದ ಆಸ್ಥಾನ ಅವರನ್ನು ಸಿಬಿಐನ ಉಪ ಮುಖ್ಯಸ್ಥರನ್ನಾಗಿ ಎರಡು ದಿನಗಳ ಹಿಂದಷ್ಟೇ ನೇಮಿಸಲಾಗಿತ್ತು.
- ಗುಜರಾತಿನ ಮಹತ್ವದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಆಸ್ಥಾನ ರವರು ಸೂರತ್ ಮತ್ತು ವಡೋದರದ ಪೊಲೀಸ್ ಕಮೀಷನರ್ ಆಗಿ ಸೇವೆ ಸಲ್ಲಿಸಿದ್ದರು.
- ಫೆಬ್ರವರಿ 2002ರಲ್ಲಿ ಗೋದ್ರಾ ರೈಲು ಬೆಂಕಿ ದುರಂತದ ವಿಶೇಷ ತನಿಖಾದ ದಳದ ಮುಖ್ಯಸ್ಥರಾಗಿ ಆಸ್ಥಾನರವರನ್ನು ನೇಮಿಸಲಾಗಿತ್ತು.
ಕೇಂದ್ರ ತನಿಖಾ ದಳ:
- ಕೇಂದ್ರೀಯ ತನಿಖಾ ದಳ (ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್-CBI ) ಭಾರತದ ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ಒಂದು ಅಪರಾಧದ ತನಿಖಾ ಘಟಕವಾಗಿ, ರಾಷ್ಟ್ರೀಯ ಭದ್ರತಾ ಸಂಸ್ಥೆಯಾಗಿ ಮತ್ತು ಗುಪ್ತಚರ ಸಂಸ್ಥೆಯಾಗಿ ಅದು ಸೇವೆ ಸಲ್ಲಿಸುತ್ತದೆ.
- 1963ರ ಏಪ್ರಿಲ್ 1ರಂದು ಇದು ಸ್ಥಾಪಿಸಲಾಗಿದೆ. 1941ರಲ್ಲಿ ಸಂಸ್ಥಾಪಿಸಲ್ಪಟ್ಟ ವಿಶೇಷ ಆರಕ್ಷಕ ಸಂಸ್ಥೆ ಯಿಂದ (ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ಮೆಂಟ್) ಇದು ವಿಕಸನಗೊಂಡಿತು. “ದುಡಿಮೆ, ನಿಷ್ಪಕ್ಷಪಾತತೆ, ಸಮಗ್ರತೆ” ಎಂಬುದು ಇದರ ಧ್ಯೇಯವಾಕ್ಯವಾಗಿದೆ.
- ಇದರ ಕೇಂದ್ರ ಕಚೇರಿ: ನವದೆಹಲಿಯಲ್ಲಿದೆ.