ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.
ಕ್ವಿಜ್-31 ಸಂವಿಧಾನ
Question 1 |
1. ಭಾರತದ ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕರಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:
I) ಇವರನ್ನು ಪ್ರಧಾನ ಮಂತ್ರಿಗಳ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಗಳು ನೇಮಿಸುತ್ತಾರೆ
II) ಸಿಎಜಿ ರವರು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಪಡೆಯಬಹುದಾದ ಎಲ್ಲಾ ಸೇವಾ-ಸವಲತ್ತುಗಳನ್ನು ಪಡೆಯುತ್ತಾರೆ
III) ಇವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ಲೆಕ್ಕಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ
IV) ಇವರು ನಿವೃತ್ತಿ ಹೊಂದಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಉದ್ಯೋಗ ಹೊಂದಲು ಅರ್ಹರಾಗಿರುತ್ತಾರೆ.
ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
I & II | |
I, II & III | |
II, III & IV | |
ಮೇಲಿನ ಎಲ್ಲವೂ |
ಮೇಲಿನ ಒಂದು, ಎರಡು ಮತ್ತು ಮೂರನೇ ಹೇಳಿಕೆಗಳು ಸರಿಯಾಗಿವೆ. ಹೇಳಿಕೆ ನಾಲ್ಕು ತಪ್ಪಾಗಿದೆ. ಸಿಎಜಿ ರವರು ನಿವೃತ್ತಿ ಹೊಂದಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಉದ್ಯೋಗ ಹೊಂದಲು ಅನರ್ಹರಾಗಿರುತ್ತಾರೆ.
Question 2 |
2. ಹೊಸದಾಗಿ ರಚಿತವಾದ ಲೋಕಸಭೆಯ ಮೊದಲ ಅಧಿವೇಶನದ ಕಾರ್ಯಕಲಾಪ ಆರಂಭಿಸಲು ಹಿರಿಯ ಸದಸ್ಯರನ್ನು ಹಂಗಾಮಿ (Pro-term) ಸ್ಪೀಕರ್ ಆಗಿ ನೇಮಕ ಮಾಡುವವರು ಯಾರು?
ಕೇಂದ್ರ ಸಚಿವ ಸಂಪುಟ | |
ರಾಷ್ಟ್ರಪತಿಗಳು | |
ನಿಕಟಪೂರ್ವ ಸ್ಪೀಕರ್ | |
ನೂತನ ಸದಸ್ಯರು |
ಹೊಸದಾಗಿ ರಚಿತವಾದ ಲೋಕಸಭೆಯ ಮೊದಲ ಅಧಿವೇಶನದ ಕಾರ್ಯಕಲಾಪ ಆರಂಭಿಸಲು ಹಿರಿಯ ಸದಸ್ಯರನ್ನು ಹಂಗಾಮಿ (Pro-term) ಸ್ಪೀಕರ್ ಸಚಿವ ಸಂಪುಟದ ವ್ಯವಹಾರ ಸಮಿತಿ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.
Question 3 |
3. ರಾಷ್ಟ್ರಪತಿಗಳು ತಮ್ಮ ವಿವೇಚನಾಧಿಕಾರ ಬಳಸಬಹುದಾದ ಸಂದರ್ಭ ಯಾವುದು?
ತುರ್ತು ಪರಿಸ್ಥಿತಿ ಘೋಷಣೆ ಸಂದರ್ಭದಲ್ಲಿ | |
ಸಚಿವ ಸಂಪುಟದ ಸದಸ್ಯರ ಆಯ್ಕೆಯಲ್ಲಿ | |
ಲೋಕಸಭೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತಗಳಿಸದೇ ಅಸ್ಥಿರ ಪರಿಸ್ಥಿತಿ ಎದುರಾದಾಗ | |
ಯಾವುದೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಸಂದರ್ಭದಲ್ಲಿ |
ಲೋಕಸಭೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತಗಳಿಸದೇ ಅಸ್ಥಿರ ಪರಿಸ್ಥಿತಿ ಎದುರಾದಾಗ
Question 4 |
4. ಭಾರತದ ಈ ಕೆಳಕಂಡ ಸಂಸ್ಥೆಗಳಲ್ಲಿ ಯಾವುದು ಸಂವಿಧಾನಾತ್ಮಕ ಸಂಸ್ಥೆಯಿಂದ ಹೊರತಾಗಿದೆ
ಕೇಂದ್ರ ಹಣಕಾಸು ಆಯೋಗ | |
ವಲಯ ಮಂಡಳಿಗಳು (Zonal Councils) | |
ಕೇಂದ್ರ ಚುನಾವಣಾ ಆಯೋಗ | |
ಕೇಂದ್ರ ಹಿಂದುಳಿದ ವರ್ಗಗಳ ಆಯೋಗ |
ವಲಯ ಮಂಡಳಿಗಳನ್ನು ಸಂಸತ್ತಿನಿಂದ ರೂಪಿಸಲಾದ ರಾಜ್ಯ ಪುನರ್ವಿಗಂಡಣಾ ಕಾಯಿದೆ 1956ರ ಮೂಲಕ ಸ್ಥಾಪಿಸಲಾಗಿದೆ. ಕೇಂದ್ರ-ರಾಜ್ಯ ಸಂಬಂಧಗಳನ್ನು ಮತ್ತು ಅಂತರರಾಜ್ಯ ಸಂಬಂಧಗಳನ್ನು ಸುಧಾರಿಸಲು ವಲಯ ಮಂಡಳಿಗಳನ್ನು ಸ್ಥಾಪಿಸಲಾಗಿದೆ.
Question 5 |
5. ಭಾರತದ ಕೇಂದ್ರ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಈ ಹೇಳಿಕೆಗಳನ್ನು ಗಮನಿಸಿ
I) ಈ ಆಯೋಗ 1993 ರ ನಂತರ ಬಹು ಸದಸ್ಯ ಸಮಿತಿಯಾಗಿ ಮಾರ್ಪಟ್ಟಿತು
II) ಈ ಆಯೋಗದ ಮೊದಲ ಅಧ್ಯಕ್ಷರು ಕೆ.ವಿ.ಕೆ.ಸುಂದರಂ
III) ಚುನಾವಣಾ ಆಯೋಗದ ಅಧ್ಯಕ್ಷರ ಅವಧಿ 6 ವರ್ಷಗಳು
IV) ರಾಜ್ಯ ವಿಧಾನ ಪರಿಷತ್ ಚುನಾವಣೆಗಳನ್ನು ನಡೆಸುವ ಜವಾಬ್ದಾರಿ ಕೇಂದ್ರ ಚುನಾವಣಾ ಆಯೋಗದ್ದಾಗಿದೆ
ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಸಂಕೇತಾಕ್ಷರಗಳಿಂದ ಗುರುತಿಸಿ:
I, II & III | |
I & III | |
I, II & III | |
ಮೇಲಿನ ಎಲ್ಲವೂ |
ಚುನಾವಣಾ ಆಯುಕ್ತರು ತಿದ್ದುಪಡಿ ಕಾಯಿದೆ-1993ರ ಪ್ರಕಾರ ಚುನಾವಣಾ ಆಯೋಗ ಬಹು ಸದಸ್ಯ ಆಯೋಗವಾಗಿ ಮಾರ್ಪಟ್ಟಿದೆ. ಅಂದರೆ ಒಬ್ಬ ಮುಖ್ಯಚುನಾವಣಾ ಆಯುಕ್ತರು ಮತ್ತು ಇಬ್ಬರು ಚುನಾವಣಾ ಆಯುಕ್ತರನ್ನು ಒಳಗೊಂಡಿದೆ. ಸುಕುಮಾರ್ ಸೇನ್ ಚುನಾವಣಾ ಆಯೋಗದ ಮೊದಲ ಆಯುಕ್ತರು.
Question 6 |
6. ಭಾರತದಲ್ಲಿ ಸಂವಿಧಾನದ ಮೊದಲನೇ ತಿದ್ದುಪಡಿ ಈ ಕೆಳಕಂಡ ಯಾವ ದಿನಾಂಕದಂದು ಜಾರಿಗೆ ಬಂದಿತು
ಜೂನ್ 18, 1951 | |
ಜನವರಿ 26, 1950 | |
ನವೆಂಬರ್ 26, 1952 | |
ಜುಲೈ 1, 1951 |
Question 7 |
7. ಭಾರತದಲ್ಲಿ ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಿದ ಸಂವಿಧಾನದ ತಿದ್ದುಪಡಿ ಯಾವುದು
ಸಂವಿಧಾನದ ತಿದ್ದುಪಡಿ 72, 1990 | |
ಸಂವಿಧಾನದ ತಿದ್ದುಪಡಿ 61, 1989 | |
ಸಂವಿಧಾನದ ತಿದ್ದುಪಡಿ 81, 1985 | |
ಸಂವಿಧಾನದ ತಿದ್ದುಪಡಿ 75, 1991 |
Question 8 |
8. ರಾಷ್ಟ್ರೀಯ ಏಕತಾ ಮಂಡಲಿಯ (National Integration Council) ಅಧ್ಯಕ್ಷರು ಯಾರಾಗಿರುತ್ತಾರೆ?
ರಾಷ್ಟ್ರಪತಿ | |
ಕೇಂದ್ರ ಗೃಹ ಮಂತ್ರಿಗಳು | |
ಪ್ರಧಾನಮಂತ್ರಿ | |
ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು |
Question 9 |
9. ಸಂವಿಧಾನದ ತಿದ್ದುಪಡಿ 95, 2010 ರ ಪ್ರಕಾರ ಲೋಕಸಭೆ ಮತ್ತು ವಿಧಾನಸಭಾ ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ಯಾವ ವರ್ಷದವರೆಗೆ ವಿಸ್ತರಿಸಲಾಯಿತು
2025 | |
2030 | |
2015 | |
2020 |
Question 10 |
10. ಅಸ್ಸಾಂ, ನಾಗಲ್ಯಾಂಡ್, ಮಿಜೋರಾಂ ಮತ್ತು ಗೋವಾ ರಾಜ್ಯಗಳನ್ನು ಸ್ಥಾಪಿಸಿದ ಸರಿಯಾದ ಕಾಲಾನುಕ್ರಮ ಗುರುತಿಸಿ:
ಅಸ್ಸಾಂ, ನಾಗಲ್ಯಾಂಡ್, ಮಿಜೋರಾಂ, ಗೋವಾ | |
ಅಸ್ಸಾಂ, ಮಿಜೋರಾಂ, ಗೋವಾ, ನಾಗಲ್ಯಾಂಡ್ | |
ಮಿಜೋರಾಂ, ಅಸ್ಸಾಂ, ಗೋವಾ, ನಾಗಲ್ಯಾಂಡ್ | |
ಅಸ್ಸಾಂ, ಮಿಜೋರಾಂ, ನಾಗಲ್ಯಾಂಡ್, ಗೋವಾ |
ಅಸ್ಸಾಂ (15ನೇ ಆಗಸ್ಟ್ 1947), ನಾಗಲ್ಯಾಂಡ್ (1ನೇ ಡಿಸೆಂಬರ್, 1963), ಮಿಜೋರಾಂ (20ನೇ ಫೆಬ್ರವರಿ 1987) ಮತ್ತು ಗೋವಾ (30ನೇ ಮೇ, 1987).
[button link=”http://www.karunaduexams.com/wp-content/uploads/2016/12/ಕ್ವಿಜ್-31-ಸಂವಿಧಾನ.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
useful
Are are b also useful
Super
Super