ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.
ಕ್ವಿಜ್-32
Question 1 |
1. ಕಾಲು ಮತ್ತು ಬಾಯಿ ರೋಗವು ಸಾಮಾನ್ಯವಾಗಿ ಕಂಡುಬರುವುದು
ಜಾನುವಾರುಗಳಲ್ಲಿ | |
ಜಾನುವಾರು ಮತ್ತು ಕುರಿಗಳಲ್ಲಿ | |
ಜಾನುವಾರು ಮತ್ತು ಹಂದಿಗಳಲ್ಲಿ | |
ಜಾನುವಾರು, ಹಂದಿ ಮತ್ತು ಕುರಿಗಳಲ್ಲಿ |
ಕಾಲು ಬಾಯಿ ರೋಗವು ಗೊರಸು ಕಾಲುಗಳುಳ್ಳ ಪ್ರಾಣಿಗಳಾದ ದನಗಳು, ಕುರಿ, ಆಡು ಮತ್ತು ಹಂದಿಗಳಿಗೆ ಬರುವ ಸಾಂಕ್ರಾಮಿಕ ರೋಗ. ಇದು ನಮ್ಮ ದೇಶದಲ್ಲಿ ಸ್ಥಾನಿಕವಾಗಿದ್ದು, ಆಗಾಗ್ಗೆ ಉಲ್ಬಣಗೊಳ್ಳುವುದರಿಂದ ಉತ್ಪಾದನಾ ನಷ್ಟದ ಜೊತೆಗೆ ಜಾನುವಾರು ಉತ್ಪನ್ನಗಳ ರಫ್ತಿನ ಮೇಲಿನ ನಿಷೇಧದಿಂದಾಗಿ ತೀವ್ರ ಆರ್ಥಿಕ ನಷ್ಟವನ್ನುಂಟು ಮಾಡುತ್ತಿದೆ.
Question 2 |
2. ವಿಶ್ವ ಪ್ರಖ್ಯಾತ “ಹಾರ್ನ್ ಬಿಲ್ (Horn Bill Festival)” ಹಬ್ಬವನ್ನು ಈ ಕೆಳಗಿನ ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
ಮಿಜೋರಾಂ | |
ಅಸ್ಸಾಂ | |
ನಾಗಲ್ಯಾಂಡ್ | |
ತ್ರಿಪುರ |
ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆಯುವ ಹಾರ್ನ್ ಬಿಲ್ ಫೆಸ್ಟಿವಲ್ ನಾಗಾಲ್ಯಾಂಡ್ ನ ಅತೀ ದೊಡ್ಡ ವಾರ್ಷಿಕ ಹಬ್ಬವಾಗಿದ್ದು, ಇದು ವಿಶ್ವದೆಲ್ಲೆಡೆಯಿಂದ ಬೃಹತ್ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಪ್ರವಾಸೋದ್ಯಮ, ಕಲಾ ಮತ್ತು ಸಂಸ್ಕೃತಿ ಇಲಾಖೆಗಳು ಕೊಹಿಮಾದಿಂದ 12 ಕಿ.ಮೀ. ದೂರದಲ್ಲಿರುವ ನಾಗಾ ಹೆರಿಟೇಜ್ ವಿಲೇಜ್ ನಲ್ಲಿ ಈ ಫೆಸ್ಟಿವಲ್ ನ್ನು ಆಯೋಜಿಸುತ್ತದೆ. ಇದು ನಾಗಾ ಬುಡಕಟ್ಟು ಜನರ ಜೀವನ ಮತ್ತು ಇತಿಹಾಸದ ಕಡೆ ಸಂಪೂರ್ಣ ಬೆಳಕು ಚೆಲ್ಲುತ್ತದೆ. ಏಳು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ವಿವಿಧ ನಾಗಾ ಬುಡಕಟ್ಟು ಜನಾಂಗಗಳ ಶ್ರೀಮಂತ ಮತ್ತು ಸ್ಪಂದನಶೀಲ ಸಂಸ್ಕೃತಿಯನ್ನು ತೋರಿಸುತ್ತದೆ. ಹಾರ್ನ್ ಬಿಲ್ ಹಕ್ಕಿಯ ಗರಿಯನ್ನು ನಾಗಾ ಬುಡಕಟ್ಟು ಜನರು ತಮ್ಮ ಶಿರವಸ್ತ್ರದಲ್ಲಿ ಅಳವಡಿಸಿರುವ ಕಾರಣ ಈ ಹಬ್ಬಕ್ಕೆ ಹಾರ್ನ್ ಬಿಲ್ ಹೆಸರು ಬಂದಿದೆ.
Question 3 |
3. HAART ಅಥವಾ (Highly active antiretroviral therapy) ಒಂದು ಬಹು ವಿಧದ ಲಸಿಕೆ ಇದನ್ನು ಯಾವ ರೋಗದ ತೀವ್ರತೆಯನ್ನು ಕಡಿಮೆಗೊಳಿಸಲು ಬಳಸಲಾಗುತ್ತಿದೆ?
ಮಲೇರಿಯಾ | |
ಹೆಚ್.ಐ.ವಿ/ಏಡ್ಸ್ | |
ಕಾಲರ | |
ಡೆಂಗ್ಯೂ |
Question 4 |
4. ಅಂತರರಾಷ್ಟ್ರೀಯ ವಿಕಲಚೇತನರ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ನವೆಂಬರ್ 29 | |
ನವೆಂಬರ್ 30 | |
ಡಿಸೆಂಬರ್ 1 | |
ಡಿಸೆಂಬರ್ 3 |
Question 5 |
5. ಕರ್ನಾಟಕದಲ್ಲಿ ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ರಕ್ಷಣಾ ಧಾಮಗಳನ್ನು ಹೊಂದಿರುವ ಜಿಲ್ಲೆ?
ಮೈಸೂರು | |
ಉತ್ತರ ಕನ್ನಡ | |
ಕೊಡಗು | |
ಚಿಕ್ಕಮಗಳೂರು |
Question 6 |
6. ಸಸ್ಥನಿಗಳಲ್ಲಿ ಬೆವರಿನುತ್ಪಾದನೆ/ಬೆವರು ಗ್ರಂಥಿಗಳ ಮೂಲ ಉದ್ದೇಶ____?
ಹೆಚ್ಚುವರಿ ನೀರನ್ನು ತೆಗೆದುಹಾಕುವುದು | |
ದೇಹದ ಉಷ್ಣಾಂಶದ ನಿಯಂತ್ರಣ | |
ಹೆಚ್ಚುವರಿ ಉಪ್ಪನ್ನು ತೆಗೆದುಹಾಕುವುದು | |
ಚರ್ಮದ ಮೇಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು |
Question 7 |
7. ಭಾರತದಲ್ಲಿ ಮೊತ್ತ ಮೊದಲ ಸಂಚಾರಿ ನ್ಯಾಯಾಲಯ ಉದ್ಘಾಟನೆಗೊಂಡದ್ದು
ಮಹಾರಾಷ್ಟ್ರದಲ್ಲಿ | |
ಹರ್ಯಾಣಾದಲ್ಲಿ | |
ಉತ್ತರ ಪ್ರದೇಶದಲ್ಲಿ | |
ರಾಜಸ್ಥಾನದಲ್ಲಿ |
Question 8 |
8. ದ್ರವ್ಯರಾಶಿ M ಇರುವ ವಸ್ತುವೊಂದರ ಚಂದ್ರನ ಮೇಲಿರುವಾಗದ ತೂಕ, ಭೂಮಿಯ ಮೇಲಿರುವಾಗದ ತೂಕಕ್ಕಿಂತ ಬೇರೆಯಾಗಿರುತ್ತದೆ. ಇದಕ್ಕೆ ಈ ಮುಂದಿನ ಯಾವುದು ಅತ್ಯಂತ ಸೂಕ್ತ ವಿವರಣೆ ನೀಡುತ್ತದೆ
ಚಂದ್ರನ ದ್ರವ್ಯರಾಶಿಯು ಭೂಮಿಯ ದ್ರವ್ಯರಾಶಿಗಿಂತ ಬೇರೆಯಾಗಿದೆ | |
ಚಂದ್ರ ಮತ್ತು ಭೂಮಿ ಒಂದೇ ದ್ರವ್ಯರಾಶಿ ಮತ್ತು ತ್ರಿಜ್ಯಗಳನ್ನು ಹೊಂದಿಲ್ಲ | |
ಚಂದ್ರ ಭೂಮಿಯ ಸುತ್ತ ಸುತ್ತುತ್ತದೆ | |
ದ್ರವ್ಯರಾಶಿ M, ಚಂದ್ರನ ಮೇಲೆ ಮತ್ತು ಭೂಮಿಯ ಮೇಲೆ ಬೇರೆ ಬೇರೆಯಾಗುತ್ತದೆ |
Question 9 |
9. “ರಮ್ಮನ್ (Ramman)” ಯಾವ ರಾಜ್ಯದ ಧಾರ್ಮಿಕ ಉತ್ಸವ ಮತ್ತು ಧಾರ್ಮಿಕ ನಾಟಕವಾಗಿದೆ?
ಉತ್ತರಖಂಡ್ | |
ಉತ್ತರ ಪ್ರದೇಶ | |
ಮಧ್ಯ ಪ್ರದೇಶ | |
ಜಾರ್ಖಂಡ್ |
ರಮ್ಮನ್ ಧಾರ್ಮಿಕ ಉತ್ಸವವನ್ನು ಉತ್ತರಖಂಡದ ಗರ್ವಾಲ್ ಪ್ರದೇಶದಲ್ಲಿ ಆಚರಿಸಲಾಗುತ್ತದೆ. ಉತ್ತರಖಂಡದ ಚಮೋಲಿಯ ಜಿಲ್ಲೆಯ ಸಲೂರು ದಂಗ್ರ ಹಳ್ಳಯಲ್ಲಿ ಹಿಂದೂ ಸಮುದಾಯದವರು ಈ ಉತ್ಸವವನ್ನು ಪ್ರಮುಖವಾಗಿ ಆಚರಿಸಲಾಗುತ್ತದೆ.
Question 10 |
10. ಈ ಕೆಳಗಿನ ಕಾದಂಬರಿಗಳನ್ನು ಗಮನಿಸಿ:
I) ಋತುಸಂಹಾರ
II) ಮೇಘದೂತ
III) ದಾಸಕುಮಾರಚರಿತ
IV) ಕುಮಾರಸಂಭವ
ಈ ಮೇಲಿನ ಯಾವ ಕಾದಂಬರಿಗಳನ್ನು ಕವಿ ಕಾಳಿದಾಸ ರಚಿಸಿದ್ದಾನೆ?
I, II & III | |
II, III & IV | |
I, II & IV | |
ಮೇಲಿನ ಎಲ್ಲವೂ |
ದಾಸಕುಮಾರಚರಿತ ಯನ್ನು ಸಂಸ್ಕೃತ ಕವಿ ದಂಡಿನ್ ರಚಿಸಿದ್ದಾನೆ.
[button link=”http://www.karunaduexams.com/wp-content/uploads/2016/12/ಸಾಮಾನ್ಯ-ಜ್ಞಾನ-ಕ್ವೀಜ್-30.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Good one for reader
Wat ll be cut off Pdo in tumkur sir pls
Comment
help me uinderstand why the initiative concerns only IRAN and not other countries such as china,cuba,north korea and syria..thank you for all your efforts steve greenwald6193007229
Subhas
Thanks sir ji
Thank u sir