ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,16, 2016

Question 1

1. ಇಂಡಿಯನ್ ಕೌನ್ಸಿಲ್ ಆಫ್ ಪುಡ್ ಅಂಡ್ ಅಗ್ರಿಕಲ್ಚರ್ (ICAF)ನ 2016 ಜಾಗತಿಕ ಕೃಷಿ ನಾಯಕತ್ವ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?

A
ಶರದ್ ಪವರ್
B
ರತನ್ ಟಾಟಾ
C
ರಾಜೇಂದ್ರ ಸಿಂಗ್
D
ಸ್ವಾಮಿನಾಥನ್
Question 1 Explanation: 
ರತನ್ ಟಾಟಾ:

ಟಾಟಾ ಸನ್ಸ್ ನ ಹಂಗಾಮಿ ಅಧ್ಯಕ್ಷರಾದ ರತನ್ ಟಾಟಾ ರವರಿಗೆ ಇಂಡಿಯನ್ ಕೌನ್ಸಿಲ್ ಆಫ್ ಪುಡ್ ಅಂಡ್ ಅಗ್ರಿಕಲ್ಚರ್ (ICAF)ನ 2016 ಜಾಗತಿಕ ಕೃಷಿ ನಾಯಕತ್ವ ಪ್ರಶಸ್ತಿಯನ್ನು ನೀಡಲಾಗಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ತಮ್ಮ ಎರಡು ದಶಕಗಳ ಅವಧಿಯಲ್ಲಿ ಟಾಟಾ ಸನ್ಸ್ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಕೊಂಡಯ್ಯುವಲ್ಲಿ ರತನ್ ಟಾಟಾ ರವರು ನೀಡಿರುವ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

Question 2

2. ಫೋರ್ಬ್ ನಿಯತಕಾಲಿಕೆಯ “2016ನೇ ಸಾಲಿನ ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಯಾರಿಗೆ ಲಭಿಸಿದೆ?

A
ನರೇಂದ್ರ ಮೋದಿ
B
ಡೋನಾಲ್ಡ್ ಟ್ರಂಪ್
C
ವ್ಲಾದಿಮಿರ್ ಪುಟಿನ್
D
ಹಿಲರಿ ಕ್ಲಿಂಟನ್
Question 2 Explanation: 
ವ್ಲಾದಿಮಿರ್ ಪುಟಿನ್

ಫೋರ್ಬ್ ನಿಯತಕಾಲಿಕೆಯ “2016ನೇ ಸಾಲಿನ ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಗ್ರಸ್ಥಾನದಲ್ಲಿದ್ರೆ, ಎರಡನೇ ಸ್ಥಾನ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರ ಪಾಲಾಗಿದೆ. ಪುಟಿನ್ ಸತತ ನಾಲ್ಕನೇ ಬಾರಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿರೋದು ವಿಶೇಷ. ಒಟ್ಟು 74 ಪ್ರಭಾವಶಾಲಿ ನಾಯಕರನ್ನು ಫೋರ್ಬ್ಸ್ ಪಟ್ಟಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ವಿಶ್ವದ 10 ಪ್ರಭಾವಶಾಲಿ ನಾಯಕರಲ್ಲಿ ಒಬ್ಬರು. ಈ ಪಟ್ಟಿಯಲ್ಲಿ ನಮೋಗೆ 9ನೇ ಸ್ಥಾನ ಲಭಿಸಿದೆ.

Question 3

3. “2016 ದಿ ಎಕಾನಮಿಕ್ ಟೈಮ್ಸ್ ಏಷ್ಯನ್ ಬ್ಯುಸಿನೆಸ್ ಲೀಡರ್ ಸಮಾವೇಶ” ಯಾವ ದೇಶದಲ್ಲಿ ನಡೆಯಿತು?

A
ಭಾರತ
B
ಜಪಾನ್
C
ಮಲೇಷಿಯಾ
D
ಮ್ಯಾನ್ಮಾರ್
Question 3 Explanation: 
ಮಲೇಷಿಯಾ

2016 ದಿ ಎಕಾನಮಿಕ್ ಟೈಮ್ಸ್ ಏಷ್ಯನ್ ಬ್ಯುಸಿನೆಸ್ ಲೀಡರ್ ಸಮಾವೇಶ ಮಲೇಷಿಯಾದ ಕೌಲಲಾಂಪುರದಲ್ಲಿ ಡಿಸೆಂಬರ್ 14-15 ರಂದು ನಡೆಯಿತು. ಜಾಗತಿಕ ಮಟ್ಟದಲ್ಲಿ ಏಷ್ಯಾ ವಲಯವನ್ನು ವ್ಯವಹಾರ ಸ್ನೇಹಿಯನ್ನಾಗಿಸುವುದು ಈ ಸಮಾವೇಶದ ಉದ್ದೇಶ. ಸಮಾವೇಶದಲ್ಲಿ ಏಷ್ಯಾ ಮತ್ತು ಜಗತ್ತಿನ 400 ಕ್ಕೂ ಹೆಚ್ಚು ಸಿ ಮಟ್ಟದ ಕಾರ್ಯನಿರ್ವಾಹಕ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.

Question 4

4. ಇತ್ತೀಚೆಗೆ ಬ್ರೆಜಿಲ್ ನ ರಿಯೋ ಡಿ ಜನೈರೊ ನಗರವನ್ನು ಅಧಿಕೃತವಾಗಿ ವಿಶ್ವ ಪರಂಪರಿಕ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ರಿಯೋ ಡಿ ಜನೈರೊ ನಗರವನ್ನು ಈ ಹೆಸರಿನಿಂದಲೂ ಕರೆಯಲಾಗುತ್ತದೆ _________?

A
ಡೈಮೆಂಡ್ ಸಿಟಿ
B
ಮಾರ್ವಲಸ್ ಸಿಟಿ
C
ಮೌಂಟೇನ್ ಸಿಟಿ
D
ಲೇಕ್ ಸಿಟಿ
Question 4 Explanation: 
ಮಾರ್ವಲಸ್ ಸಿಟಿ

ಬ್ರೆಜಿಲ್ ನ ರಿಯೋ ಡಿ ಜನೈರೊ ನಗರವನ್ನು ಅಧಿಕೃತವಾಗಿ ವಿಶ್ವ ಪರಂಪರಿಕ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ರಿಯೊ ಡಿ ಜನೈರೊ ನಗರಕ್ಕೆ ಯುನೆಸ್ಕೊ ಮಾನ್ಯತೆಯನ್ನು 2012ರಲ್ಲಿ ನೀಡಲಾಗಿತ್ತು. ಆದರೆ ಬ್ರೆಝಿಲ್ ನ ಅಧಿಕಾರಿಗಳು ಫ್ಲೆಮೆಂಗೊ ಪಾರ್ಕ್, ಶುಗರ್ ಲೋಫ್ ಪರ್ವತ, ಕೊರ್ಕವಡೊ, ಕೊಪಕಬಾನ ಸಮುದ್ರ, ಬೊಟಾನಿಕಲ್ ಗಾರ್ಡನ್ ಮತ್ತು ತಿಜುಕಾ ಅರಣ್ಯವನ್ನು ಹೇಗೆ ರಕ್ಷಣೆ ಮಾಡುತ್ತಾರೆ ಎಂಬ ಬಗ್ಗೆ ವರದಿ ಸಲ್ಲಿಸಲು 4 ವರ್ಷಗಳ ಕಾಲ ಸಮಯ ನೀಡಲಾಗಿತ್ತು. ಹೀಗಾಗಿ ಈ ವರ್ಷ ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿ ರಿಯೊದ ಹೆಸರು ಅಧಿಕೃತವಾಗಿ ಸೇರಿಕೊಂಡಿದೆ. ರಿಯೋ ಡಿ ಜನೈರೊ ನಗರ ಮಾರ್ವಲಸ್ ಸಿಟಿ (Marvellous City ) ಎಂಬ ನಿಕ್ ನೇಮ್ ಹೊಂದಿದೆ.

Question 5

5. ಯಾವ ರಾಜ್ಯದಲ್ಲಿ ದೇಶದ ಮೊದಲ ಸ್ವಯಂಪ್ರೇರಿತ ಮಹಿಳಾ ಪೊಲೀಸ್ (Woman Police Volunteer) ಅಭಿಯಾನವನ್ನು ಆರಂಭಿಸಲಾಗಿದೆ?

A
ಹರಿಯಾಣ
B
ರಾಜಸ್ತಾನ
C
ಮಧ್ಯ ಪ್ರದೇಶ
D
ಕರ್ನಾಟಕ
Question 5 Explanation: 
ಹರಿಯಾಣ

ದೇಶದ ಮೊದಲ ಸ್ವಯಂಪ್ರೇರಿತ ಮಹಿಳಾ ಪೊಲೀಸ್ ಅಭಿಯಾನವನ್ನು ಹರಿಯಾಣದ ಕರ್ನಲ್ ಮತ್ತು ಮಹೇಂದ್ರಘರ್ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಪೊಲೀಸ್ ಮತ್ತು ನಾಗರಿಕ ಜೊತೆ ಸಂಪರ್ಕ ಕೊಂಡಿಯಂತೆ ಇವರು ಕಾರ್ಯನಿರ್ವಹಿಸಲಿದ್ದಾರೆ. ಸ್ವಯಂಪ್ರೇರಿತ ಮಹಿಳಾ ಪೊಲೀಸ್ ಅಭಿಯಾನವನ್ನು ಕೇಂದ್ರ ಗೃಹ ಸಚಿವಾಲಯದ ಸಹಯೋಗದೊಂದಿಗೆ ಪ್ರಾರಂಭಿಸಲಾಗಿದೆ. ಸ್ವಯಂಪ್ರೇರಿತ ಮಹಿಳಾ ಪೊಲೀಸರಿಗೆ ರಾಜ್ಯ ಪೊಲೀಸ್ ಅಧಿಕಾರಿಗಳಿಂದ ತರಭೇತಿ ನೀಡಲಾಗುವುದು.

Question 6

6. “2016 EKUVERIN” ಜಂಟಿ ಸಮರಭ್ಯಾಸ ಭಾರತ ಮತ್ತು ಯಾವ ದೇಶದ ನಡುವೆ ಪ್ರಾರಂಭಗೊಂಡಿದೆ?

A
ಪಾಕಿಸ್ತಾನ
B
ಆಫ್ಘಾನಿಸ್ತಾನ
C
ಮಾಲ್ಡೀವ್ಸ್
D
ಮ್ಯಾನ್ಮಾರ್
Question 6 Explanation: 
ಮಾಲ್ಡೀವ್ಸ್

ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಜಂಟಿ ಸಮರಭ್ಯಾಸ “EKUVERIN”ನ 7ನೇ ಆವೃತ್ತಿ ಮಾಲ್ಡೀವ್ಸ್ ನ ಲಾಮು ಅಟಾಲ್ ನಲ್ಲಿ ಪ್ರಾರಂಭಗೊಂಡಿತು. ಉಭಯ ದೇಶಗಳ ನಡುವಿನ ಈ ಸಮರಭ್ಯಾಸ 14 ದಿನಗಳ ಕಾಲ ನಡೆಯಲಿದೆ. ಭಯೋತ್ಪಾದನೆ ವಿರುದ್ದ ಕಾರ್ಯಾಚರಣೆ ನಡೆಸುವುದು ಸೇರಿದಂತೆ ಉಭಯ ದೇಶಗಳ ನಡುವೆ ರಕ್ಷಣಾ ಸಂಬಂಧವನ್ನು ಬಲಗೊಳಿಸುವುದು ಈ ಸಮರಭ್ಯಾಸದ ಉದ್ದೇಶವಾಗಿದೆ.

Question 7

7. ದೇಶದ ಮೊದಲ ತೃತೀಯ ಲಿಂಗಿ ಶಾಲೆ (Transgender School) ಈ ಕೆಳಗಿನ ಯಾವ ನಗರದಲ್ಲಿ ಸ್ಥಾಪನೆಗೊಳ್ಳಲಿದೆ?

A
ಕೊಚ್ಚಿ
B
ಮುಂಬೈ
C
ಕೊಲ್ಕತ್ತ
D
ಬೆಂಗಳೂರು
Question 7 Explanation: 
ಕೊಚ್ಚಿ

ದೇಶದ ಮೊದಲ ತೃತೀಯ ಲಿಂಗಿ ಶಾಲೆ ಕೇರಳದ ಕೊಚ್ಚಿಯಲ್ಲಿ ಸ್ಥಾಪನೆಯಾಗಲಿದೆ. ತೃತೀಯ ಲಿಂಗಿ ಹಕ್ಕುಗಳ ಹೋರಾಟಗಾರ ಮತ್ತು ಕಲಾವಿದ ಕಲ್ಕಿ ಸುಬ್ರಮಣ್ಯಂ ರವರು ಈ ಶಾಲೆಯನ್ನು ಕೊಚ್ಚಿಯ ಸಹಜ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಸ್ಥಾಪಿಸಲಿದ್ದಾರೆ. ಆರು ಜನ ತೃತೀಯ ಲಿಂಗಿಗಳು ಈ ಶಾಲೆಯನ್ನು ನಡೆಸಲಿದ್ದು, ಹತ್ತು ತೃತೀಯ ಲಿಂಗಿ ಮಕ್ಕಳಿಗೆ ವಿದ್ಯಾಭ್ಯಾಸ ಅವಕಾಶ ಕಲ್ಪಿಸಲಿದ್ದಾರೆ.

Question 8

8. ಭಾರತೀಯ ಬ್ಯಾಂಕ್ಸ್ ಅಸೋಸಿಯೇಶನ್ ನ ನೂತನ ಮುಖ್ಯಕಾರ್ಯನಿರ್ವಾಹಕರಾಗಿ ಯಾರು ನೇಮಕಗೊಂಡಿದ್ದಾರೆ?

A
ಮಹಾಂತೇಶ್ ಪಾಟೀಲ್
B
ವಿ ಜಿ ಕಣ್ಣನ್
C
ಕಿರಣ್ ದೇಸಾಯಿ
D
ಸರ್ಜಿತ್ ಸಿಂಗ್
Question 8 Explanation: 
ವಿ ಜಿ ಕಣ್ಣನ್

ಭಾರತೀಯ ಸ್ಟೇಟ್ ಬ್ಯಾಂಕ್ ನ ಮಾಜಿ ಮ್ಯಾನೇಜಿಂಗ್ ಡೈರೆಕ್ಟರ್ ವಿ ಜಿ ಕಣ್ಣನ್ ರವರು ಭಾರತೀಯ ಬ್ಯಾಂಕ್ಸ್ ಅಸೋಸಿಯೇಶನ್ ನ ನೂತನ ಮುಖ್ಯಕಾರ್ಯನಿರ್ವಾಹಕರಾಗಿ ನೇಮಕಗೊಂಡಿದ್ದಾರೆ. ಎಂ. ವಿ ಟಂಕಸಾಲೆ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಕಣ್ಣನ್ ನೇಮಕಗೊಂಡಿದ್ದಾರೆ.

Question 9

9. “ಐಸಿಸಿ 2016 ವರ್ಷದ ಮಹಿಳಾ ಕ್ರಿಕೆಟ್ ತಂಡ”ಕ್ಕೆ ಆಯ್ಕೆಯಾಗಿರುವ ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ಯಾರು?

A
ಜೂಲನ್ ಗೋಸ್ವಾಮಿ
B
ಮೈಥಲಿ ರಾಜ್
C
ಸ್ಮೃತಿ ಮಂದನ
D
ವೇದಾ ಕೃಷ್ಣಮೂರ್ತಿ
Question 9 Explanation: 
ಸ್ಮೃತಿ ಮಂದನ

ಭಾರತದ ಪ್ರಸಿದ್ದ ಬ್ಯಾಟ್ಸ್ ವುಮನ್ ಆದ ಸ್ಮೃತಿ ಮಂದನ ರವರು “ಐಸಿಸಿ 2016 ವರ್ಷದ ಮಹಿಳಾ ಕ್ರಿಕೆಟ್ ತಂಡ”ಕ್ಕೆ ಆಯ್ಕೆಯಾಗಿರುವ ಭಾರತದ ಏಕೈಕ ಮಹಿಳಾ ಕ್ರಿಕೆಟ್ ಆಟಗಾರ್ತಿ. ವೆಸ್ಟ್ ಇಂಡೀಸ್ ನ ಸ್ಟಫನಿ ಟೈಲರ್ ಈ ತಂಡದ ನಾಯಕಿ. ಇದೇ ಮೊದಲ ಬಾರಿಗೆ ಐಸಿಸಿ ವರ್ಷದ ಮಹಿಳಾ ಕ್ರಿಕೆಟ್ ತಂಡವನ್ನು ಘೋಷಿಸಿದೆ.

Question 10

10. “ಚಾಗೋಸ್ ದ್ವೀಪಸಮೂಹ (Chagos Archipelago)” ಎಲ್ಲಿದೆ?

A
ಫೆಸಿಫಿಕ್ ಸಾಗರ
B
ಹಿಂದೂ ಮಹಾಸಾಗರ
C
ಮೆಡಿಟರೆನಿಯನ್ ಸಮುದ್ರ
D
ಅಟ್ಲಾಂಟಿಕ್ ಸಾಗರ
Question 10 Explanation: 
ಹಿಂದೂ ಮಹಾಸಾಗರ
There are 10 questions to complete.

[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-16.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,16, 2016”

  1. lokesha b

    good infermation.

Leave a Comment

This site uses Akismet to reduce spam. Learn how your comment data is processed.