ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,18,19,2016
Question 1 |
1. ದೇಶದ ಮೊಟ್ಟ ಮೊದಲ “ಭಾರತೀಯ ಕೌಶಲ್ಯ ಸಂಸ್ಥೆ (Indian Institute of Skills)” ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
ಉತ್ತರ ಪ್ರದೇಶ | |
ಮಹಾರಾಷ್ಟ್ರ | |
ಕರ್ನಾಟಕ | |
ಜಾರ್ಖಂಡ್ |
ಭಾರತದ ಮೊಟ್ಟ ಮೊದಲ “ಭಾರತೀಯ ಕೌಶಲ್ಯ ಸಂಸ್ಥೆ”ಗೆ ಪ್ರಧಾನಿ ಮೋದಿ ರವರು ಉತ್ತರ ಪ್ರದೇಶದ ಖಾನ್ಪುರದಲ್ಲಿ ಶಂಕುಸ್ಥಾಪನೆ ನೇರವೇರಿಸಿದರು. ಪ್ರಧಾನಿ ಮೋದಿರವರು ಸಿಂಗಾಪುರದ ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಎಜುಕೇಷನ್ ಗೆ ಭೇಟಿ ನೀಡಿದ ವೇಳೆ ಈ ಸಂಸ್ಥೆಯ ಸ್ಥಾಪನೆ ಬಗ್ಗೆ ನಿಲುವು ತಳಿದಿದ್ದರು. ಕೌಶಲ್ಯ ಅಭಿವೃದ್ದಿ ಸಚಿವಾಲಯ ಮತ್ತು ಸಿಂಗಾಪುರದ ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಎಜುಕೇಷನ್ ಪಾಲುದಾರಿಕೆಯೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದೆ.
Question 2 |
2. ಗುಪ್ತದಳದ (Intelligence Bureau) ನೂತನ ನಿರ್ದೇಶಕರಾಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?
ಎಸ್ ಕೆ ಶರ್ಮಾ | |
ರಾಜೀವ್ ಜೈನ್ | |
ಕುಮಾರ ಸುಂದರಂ | |
ಅನಿಲ್ ಧಸ್ಮಾನಾ |
ರಾಜೀವ್ ಜೈನ್, 1980ನೇ ಬ್ಯಾಚ್ ನ ಜಾರ್ಖಂಡ್ ಕೇಡರ್ ನ ಐಪಿಎಸ್ ಅಧಿಕಾರಿ ರವರು ಗುಪ್ತದಳದ ನೂತನ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಜೈನ್ ರವರು ಎರಡು ವರ್ಷಗಳ ಕಾಲ ಅಧಿಕಾರದಲ್ಲಿ ಇರಲಿದ್ದಾರೆ. ಪುಸ್ತತ ಜೈನ್ ರವರು ಗುಪ್ತದಳದ ವಿಶೇಷ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುಪ್ತದಳದ ನಿರ್ದೇಶಕರಾಗಿರುವ ದಿನೇಶ್ವರ್ ಶರ್ಮಾ ರವರು ಜನವರಿ 2017 ರಲ್ಲಿ ನಿವೃತ್ತಿ ಹೊಂದಲಿದ್ದು, ಅವರ ಸ್ಥಾನಕ್ಕೆ ಜೈನ್ ಅವರನ್ನು ನೇಮಕ ಮಾಡಲಾಗಿದೆ.
Question 3 |
3. ಭಾರತೀಯ ಸ್ಟೇಟ್ ಬ್ಯಾಂಕ್ ಇತ್ತೀಚೆಗೆ “ಸ್ಟೇಟ್ ಬ್ಯಾಂಕ್ ಮೊಬಿಕ್ಯಾಶ್” ಡಿಜಿಟಲ್ ವ್ಯಾಲೆಟ್ ಅನ್ನು ಯಾವ ಟೆಲಿಕಾಂ ಸಂಸ್ಥೆಯೊಂದಿಗೆ ಆರಂಭಿಸಿದೆ?
ಏರ್ ಟೆಲ್ | |
ಬಿಎಸ್ಎನ್ಎಲ್ | |
ಐಡಿಯಾ | |
ವೊಡೊಫೊನ್ |
ಭಾರತೀಯ ಸ್ಟೇಟ್ ಬ್ಯಾಂಕ್ ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಮೊಬಿಕ್ಯಾಶ್” ಡಿಜಿಟಲ್ ವ್ಯಾಲೆಟ್ ಮೊಬೈಲ್ ಅಪ್ಲೀಕೇಷನ್ ಅನ್ನು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಸಹಯೋಗದೊಂದಿಗೆ ಆರಂಭಿಸಿದೆ. ಈ ಅಪ್ಲಿಕೇಷನ್ ಮೂಲಕ ಗ್ರಾಹಕರು ಬಿಎಸ್ಎನ್ಎಲ್ ಔಟ್ ಲೆಟ್ ಗಳಲ್ಲಿ ನಗದು ಠೇವಣೆ ಮಾಡಬಹುದು ಮತ್ತು ತಮ್ಮ ಖಾತೆಯಿಂದ ಹಣವನ್ನು ಪಡೆಯಬಹುದಾಗಿದೆ. ಪ್ರಾರಂಭಿಕ ಹಂತದಲ್ಲಿ ಪಂಜಾಬ್, ಗುಜರಾತ್, ರಾಜಸ್ತಾನ ಮತ್ತು ಬಿಹಾರ್ ರಾಜ್ಯಗಳಲ್ಲಿ ಈ ಸೇವೆ ಲಭ್ಯವಿದ್ದು, ಆನಂತರ ದೇಶದಾದ್ಯಂತ ಸಿಗಲಿದೆ.
Question 4 |
4. “ಅಂತಾರಾಷ್ಟ್ರೀಯ ವಲಸಿಗರ ದಿನ”ವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಡಿಸೆಂಬರ್ 17 | |
ಡಿಸೆಂಬರ್ 18 | |
ಡಿಸೆಂಬರ್ 19 | |
ಡಿಸೆಂಬರ್ 20 |
ಅಂತಾರಾಷ್ಟ್ರೀಯ ವಲಸಿಗರ ದಿನ (International Migrants Day)ವನ್ನು ಡಿಸೆಂಬರ್ 18 ರಂದು ಪ್ರತಿ ವರ್ಷ ಆಚರಿಸಲಾಗುತ್ತಿದೆ. ವಲಸಿಗರ ಮತ್ತು ಅವರ ಕುಟುಂಬದವರ ಹಕ್ಕನ್ನು ರಕ್ಷಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುವುದು.
Question 5 |
5. 2016 ಪುರುಷರ ಜೂನಿಯರ್ ಹಾಕಿ ವಿಶ್ವ ಕಪ್ ನಲ್ಲಿ ಪ್ರಶಸ್ತಿ ಗೆದ್ದ ದೇಶ ಯಾವುದು?
ಭಾರತ | |
ಬೆಲ್ಜಿಯಂ | |
ಪಾಕಿಸ್ತಾನ | |
ಮಲೇಷಿಯಾ |
ಲಖನೌನದಲ್ಲಿ ನಡೆದ ಜೂನಿಯರ್ ಹಾಕಿ ವಿಶ್ವಕಪ್ ನಲ್ಲಿ ಭಾರತದ ಪುರುಷರ ತಂಡ ಬೆಲ್ಜಿಯಂ ತಂಡವನ್ನು ಮಣಿಸುವ ಮೂಲಕ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಭಾನುವಾರ ಸಂಜೆ ನಡೆದ ಟೂರ್ನಿಯ ಫೈನಲ್ನಲ್ಲಿ ಗುರ್ಜಂತ್ ಸಿಂಗ್ ಮತ್ತು ಸಿಮ್ರನ್ಜೀತ್ ಅವರು ಹೊಡೆದ ಗೋಲುಗಳ ಬಲದಿಂದ ಭಾರತ ತಂಡವು 2–1 ಗೋಲುಗಳಿಂದ ಬೆಲ್ಜಿಯಂ ವಿರುದ್ಧ ಗೆದ್ದು ಐತಿಹಾಸಿಕ ಸಾಧನೆ ಮಾಡಿತು. 15 ವರ್ಷಗಳ ನಂತರ ವಿಶ್ವಕಪ್ಗೆ ಮುತ್ತಿಕ್ಕಿತು. 2001ರಲ್ಲಿ ಹೋಬರ್ಟ್ನಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಭಾರತ ತಂಡವು ಪ್ರಶಸ್ತಿ ಬರ ಎದುರಿಸಿತ್ತು. ಆದರೆ, ಈ ಬಾರಿ ಹರ್ಜೀತ್ ಸಿಂಗ್ ನಾಯಕತ್ವದ ಉತ್ಸಾಹಿ ಯುವಪಡೆಯು ಮೇಜರ್ ಧ್ಯಾನ್ಚಂದ್ ಹಾಕಿ ಕ್ರೀಡಾಂಗಣದಲ್ಲಿ ಪ್ರಶಸ್ತಿ ಗೆದ್ದು ಬೀಗಿತು.
Question 6 |
6. ಈ ಕೆಳಗಿನ ಯಾವ ಬಾಲಿವುಡ್ ನಟಿ ಅಸ್ಸಾಂ ಪ್ರವಾಸೋದ್ಯಮ ಇಲಾಖೆ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ?
ಕತ್ರೀನಾ ಕೈಫ್ | |
ಪ್ರಿಯಾಂಕ ಚೋಪ್ರಾ | |
ಸೋನಾಕ್ಷಿ ಸಿನ್ಹಾ | |
ಮಲ್ಲಿಕಾ ಶೆರಾವತ್ |
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಅಸ್ಸಾಂ ಪ್ರವಾಸೋದ್ಯಮ ಇಲಾಖೆಯ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿದ್ದೇವೆ’ ಎಂದು ಅಸ್ಸಾಂನ ಪ್ರವಾಸೋದ್ಯಮ ಸಚಿವ ಹೇಮಂತ ಬಿಸ್ವ ಶರ್ಮ ತಿಳಿಸಿದ್ದಾರೆ. ಪ್ರಿಯಾಂಕಾ ಅವರು ಸಂಭಾವನೆ ಪಡೆಯದೇ ಎರಡು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
Question 7 |
7. 2016 ವಿಶ್ವ ಸುಂದರಿ ಕಿರೀಟವನ್ನು ಗೆದ್ದುಕೊಂಡ “ಸ್ಟೆಪಾನಿಯಾ ಡೆಲ್ ವೇಲ್” ಯಾವ ದೇಶದವರು?
ಅಮೆರಿಕ | |
ಪ್ಯೂರ್ಟರಿಕೊ | |
ವೆನೆಜುವೆಲಾ | |
ಕೆನಡಾ |
ಪ್ಯೂರ್ಟರಿಕೊದ ಸುಂದರಿ ಸ್ಟೆಪಾನಿಯಾ ಡೆಲ್ ವೇಲ್ ಅವರು 2016ರ ವಿಶ್ವಸುಂದರಿ ಆಗಿ ಆಯ್ಕೆಯಾಗಿದ್ದಾರೆ. ಡೊಮಿನಿಕನ್ ಗಣರಾಜ್ಯ ಮತ್ತು ಇಂಡೊನೇಷ್ಯಾ, ಕೀನ್ಯಾ ಹಾಗೂ ಫಿಲಿಪ್ಪೀನ್ಸ್ನ ಸುಂದರಿಯರು ನಂತರದ ಸ್ಥಾನಗಳನ್ನು ಪಡೆದರು. ಭಾರತ ಪ್ರತಿನಿಧಿಸಿದ್ದ ಪ್ರಿಯದರ್ಶಿನಿ ಚಟರ್ಜಿ ಟಾಪ್ 20 ಸ್ಥಾನ ಪಡೆಯಲು ಮಾತ್ರ ಸಫಲರಾದರು.
Question 8 |
8. ಈ ಕೆಳಗಿನ ಯಾರು ಗುಪ್ತಚರ ಸಂಸ್ಥೆ “ರಾ (RAW) (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್)” ನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ?
ಅನಿಲ್ ಧಸ್ಮಾನ | |
ದಿನೇಶ್ವರ್ ಶರ್ಮಾ | |
ರಾಜೀವ್ ಚಂದ್ರಶೇಖರ್ | |
ಅಮಿರ್ ಚಂದ್ರ |
1981ನೇ ಬ್ಯಾಚ್ ನ ಹಿರಿಯ ಐಪಿಎಸ್ ಅಧಿಕಾರಿ ಅನಿಲ್ ಧಸ್ಮಾನ ರವರು ಗುಪ್ತಚರ ಸಂಸ್ಥೆ ರಾ ನ ಮುಖ್ಯಸ್ಥರಾಗಿ ಎರಡು ವರ್ಷಗಳ ಅವಧಿ ನೇಮಕಗೊಂಡಿದ್ದಾರೆ. ರಾ ನ ಪ್ರಸ್ತುತ ಮುಖ್ಯಸ್ಥರಾಗಿರುವ ರಾಜಿಂದರ್ ಖನ್ನಾ ರವರು ಜನವರಿ 31, 2017 ರಂದು ನಿವೃತ್ತರಾಗಲಿದ್ದು, ಇವರ ಉತ್ತರಾಧಿಕಾರಿಯಾಗಿ ಧಸ್ಮಾನ ಅಧಿಕಾರವಹಿಸಿಕೊಳ್ಳಲಿದ್ದಾರೆ.
Question 9 |
9. ಭಾರತೀಯ ಸೇನಾಪಡೆ ನೂತನ ಮುಖ್ಯಸ್ಥರಾಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?
ಬಿಪಿನ್ ರಾವತ್ | |
ಪಿ.ಎಂ. ಹರಿಜ್ | |
ವೇಲು ನಾಯರ್ | |
ಪ್ರವೀಣ್ ಬಕ್ಷಿ |
ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಅವರನ್ನು ಸೇನಾ ಪಡೆಯ ನೂತನ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಸೇನಾ ಪಡೆಯ ಉಪ ಮುಖ್ಯಸ್ಥರಾಗಿರುವ ರಾವತ್ ಅವರು, ಇಬ್ಬರು ಹಿರಿಯ ಅಧಿಕಾರಿಗಳನ್ನು (ಅತ್ಯಂತ ಹಿರಿಯ ಸೇನಾ ಕಮಾಂಡರ್, ಪೂರ್ವ ಕಮಾಂಡ್ನ ಮುಖ್ಯಸ್ಥ ಪ್ರವೀಣ್ ಬಕ್ಷಿ ಮತ್ತು ದಕ್ಷಿಣ ಕಮಾಂಡ್ನ ಮುಖ್ಯಸ್ಥ ಪಿ.ಎಂ. ಹರಿಜ್) ಹಿಂದಿಕ್ಕಿ ಭೂ ಸೇನೆಯ ಮುಖ್ಯಸ್ಥರ ಹುದ್ದೆಗೆ ನೇಮಕವಾಗಿದ್ದಾರೆ. ಸೇನಾ ಪಡೆ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅಧಿಕಾರಾವಧಿ ಡಿಸೆಂಬರ್ 31ಕ್ಕೆ ಕೊನೆಗೊಳ್ಳಲಿದ್ದು, ರಾವತ್ ಅವರು ಸುಹಾಗ್ ಸ್ಥಾನವನ್ನು ತುಂಬಲಿದ್ದಾರೆ.
Question 10 |
10. “ಹರಕಹ್-ಅಲ್-ಯಾಕ್ವಿನ್ (Harakah-Al-Yaqin)” ಬಂಡುಕೋರ ಗುಂಪು ಯಾವ ದೇಶಕ್ಕೆ ಸಂಬಂಧಿಸಿದೆ?
ಮ್ಯಾನ್ಮಾರ್ | |
ಮಲೇಷಿಯಾ | |
ಪಾಕಿಸ್ತಾನ | |
ಶ್ರೀಲಂಕಾ |
ಹರಕಹ್-ಅಲ್-ಯಾಕ್ವಿನ್ ಬಂಡುಕೋರ ಸಂಘಟನೆ ಮ್ಯಾನ್ಮಾರ್ ನ ಉತ್ತರ ರಾಖಿನ್ ರಾಜ್ಯದಲ್ಲಿ ಸಕ್ರಿಯವಾಗಿದೆ. ಇತ್ತೀಚೆಗೆ ಇಂಟರ್ನ್ಯಾಷನಲ್ ಕ್ರಿಸಿಸ್ ಗ್ರೂಫ್ ಈ ಸಂಘಟನೆಯ ನಾಯಕರು ಸೌಧಿ ಅರೇಬಿಯಾ ಮತ್ತು ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದಾರೆ ಎಂದು ವರದಿ ಮಾಡಿದೆ.
[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-18-19.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Hi
Nice questions sir.
Thank you very good questions most expected all computuvie exam