ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,20,2016

Question 1

1. ಯಾವ ಕೇಂದ್ರ ಸಚಿವಾಲಯ ಹಿರಿಯ ನಾಗರಿಕರಿಗಾಗಿ “ಸಾಂಜಿ ಸಾಂಜ್ (Saanji Saanjh)” ಹೆಸರಿನ ರಾಷ್ಟ್ರೀಯ ಸುದ್ದಿಪತ್ರಿಕೆಯನ್ನು ಹೊರತಂದಿದೆ?

A
ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ
B
ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ
C
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
D
ಗ್ರಾಮೀಣಭಿವೃದ್ದಿ ಸಚಿವಾಲಯ
Question 1 Explanation: 
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ:

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಿರಿಯ ನಾಗರಿಕರಿಗಾಗಿ “ಸಾಂಜಿ ಸಾಂಜ್” ಹೆಸರಿನ ರಾಷ್ಟ್ರೀಯ ಸುದ್ದಿ ಪತ್ರಿಕೆಯನ್ನು ಹೊರತಂದಿದ್ದು, ಇದರ ಮೊದಲ ಆವೃತ್ತಿಯನ್ನು ನವದೆಹಲಿಯಲ್ಲಿ ಬಿಡುಗಡೆಗೊಳಿಸಲಾಗಿದೆ. ಹಿರಿಯ ನಾಗರಿಕರಿಗಾಗಿ ಸೇವೆ ಸಲ್ಲಿಸುತ್ತಿರುವ “ಹರಿಕೃತ್” ಹೆಸರಿನ NGO ಕಾರ್ಯದರ್ಶಿ ಜೆ.ವಿ.ಮನೀಷಾ ಬಜಾಜ್ ಈ ಸುದ್ದಿಪತ್ರಿಕೆಯ ಸಂಪಾದಕರು. ದ್ವಿಭಾಷೆಯಲ್ಲಿ ಪ್ರಕಟಣೆಗೊಳ್ಳುವ ಈ ಪತ್ರಿಕೆ 8 ಪುಟಗಳನ್ನು ಒಳಗೊಂಡಿದ್ದು, ಹಿರಿಯ ನಾಗರಿಕರಿಗೆ ಸಂಬಂಧಿಸಿದ ಸುದ್ದಿ ಸೇರಿದಂತೆ ಇತರೆ ಉಪಯೋಗಕರ ಮಾಹಿತಿಯನ್ನು ಹೊಂದಿದೆ.

Question 2

2. ಕೇಂದ್ರ ಸರ್ಕಾರ ಇತ್ತೀಚೆಗೆ ಈ ಕೆಳಗಿನ ಯಾರ ಅಧ್ಯಕ್ಷತೆಯಲ್ಲಿ ಸಿಂಧೂ ಜಲ ಒಪ್ಪಂದ ಕುರಿತಾಗಿ ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಿದೆ?

A
ಅರವಿಂಗ ಪನಗರಿಯಾ
B
ಶಶಿಕಾಂತ್ ದಾಸ್
C
ನ್ರಿಪೇಂದ್ರ ಮಿಶ್ರಾ
D
ಅಜಿತ್ ದೋವಲ್
Question 2 Explanation: 
ನ್ರಿಪೇಂದ್ರ ಮಿಶ್ರಾ:

ಕೇಂದ್ರ ಸರ್ಕಾರ ಇತ್ತೀಚೆಗೆ ಸಿಂಧೂ ಜಲ ಒಪ್ಪಂದ ಕುರಿತಾಗಿ ಅಧ್ಯಯನ ನಡೆಸಲು ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಿದ್ದು, ನರೇಂದ್ರ ಮೋದಿ ರವರ ಪ್ರಧಾನ ಕಾರ್ಯದರ್ಶಿ ನ್ರಿಪೇಂದ್ರ ಮಿಶ್ರಾ ರವರು ಕಾರ್ಯಪಡೆಯ ಅಧ್ಯಕ್ಷರಾಗಿರಲ್ಲಿದ್ದಾರೆ. ಪಾಕಿಸ್ತಾನದ ಜೊತೆಗಿನ ಸಿಂಧೂ ಜಲ ಒಪ್ಪಂದ ವಿವಿಧ ಆಯಾಮಗಳನ್ನು ಸಮಿತಿ ಅಧ್ಯಯನ ನಡೆಸಲಿದೆ. ರಾಷ್ಟ್ರೀಯ ವೈಜ್ಞಾನಿಕ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಮತ್ತು ಇಂಧನ, ಪರಿಸರ ಹಾಗೂ ಆರ್ಥಿಕ ಸಚಿವಾಲಯದ ಕಾರ್ಯದರ್ಶಿಗಳು ಸಮಿತಿಯ ಸದಸ್ಯರಾಗಿದ್ದಾರೆ.

Question 3

3. ಇತ್ತೀಚೆಗೆ ನಿಧನರಾದ “ಸೌಮಿತ್ರ ಚೌಧರಿ”ರವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?

A
ಕ್ರೀಡೆ
B
ಸಂಗೀತಾ
C
ಅರ್ಥಶಾಸ್ತ್ರ
D
ಕಲೆ
Question 3 Explanation: 
ಅರ್ಥಶಾಸ್ತ್ರ:

ಪ್ರಸಿದ್ದ ಅರ್ಥಶಾಸ್ತ್ರಜ್ಞ ಹಾಗೂ ಹಿಂದಿನ ಯೋಜನಾ ಆಯೋಗದ ಸದಸ್ಯರಾಗಿದ್ದ ಡಾ. ಸೌಮಿತ್ರ ಚೌಧರಿ ರವರು ನಿಧನರಾದರು. ಯೋಜನಾ ಆಯೋಗದ ದೀರ್ಘಕಾಲ ಸದಸ್ಯರಾಗಿ ಸೇವೆ ಸಲ್ಲಿಸಿದವರಲ್ಲಿ ಚೌಧರಿ ರವರು ಒಬ್ಬರಾಗಿದ್ದರು. ಯೋಜನಾ ಆಯೋಗದ ಸದಸ್ಯರಾಗುವ ಮುಂಚೆ ಇವರು ಕ್ರೇಡಿಟ್ ರೇಟಿಂಗ್ ಏಜೆನ್ಸಿ ICRAದ ರಿಸರ್ಚ್ ಕೋ-ಆರ್ಡಿನೇಟರ್ ಮತ್ತು ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.

Question 4

4. ಈ ಕೆಳಗಿನ ಯಾವ ಕೇಂದ್ರ ಸಚಿವಾಲಯವೂ 2016 ಡಿಟಿಜಲ್ ಇಂಡಿಯಾ ಪ್ರಶಸ್ತಿಯ ವೆಬ್ ರತ್ನ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದೆ?

A
ಪ್ರವಾಸೋದ್ಯಮ ಸಚಿವಾಲಯ
B
ಇಂಧನ ಸಚಿವಾಲಯ
C
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
D
ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ
Question 4 Explanation: 
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ:

2016 ಡಿಟಿಜಲ್ ಇಂಡಿಯಾ ಪ್ರಶಸ್ತಿಯ ವೆಬ್ ರತ್ನ ವಿಭಾಗದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಚಿನ್ನದ ಪದಕ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಡಿಜಿಟಲ್ ಇಂಡಿಯಾ ಪ್ರಶಸ್ತಿಯನ್ನು ನೀಡುತ್ತಿದೆ. ಇ-ಆಡಳಿತವನ್ನು ಪ್ರೇರಿಪಿಸುವ ಸಲುವಾಗಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

Question 5

5. ಭಾರತದ ಮೊದಲ ನಗದು ರಹಿತ (Cashless) ಬಜಾರು ಯಾವ ರಾಜ್ಯದಲ್ಲಿದೆ?

A
ಕೇರಳ
B
ಚತ್ತೀಸಘರ್
C
ಮಧ್ಯ ಪ್ರದೇಶ
D
ಹರಿಯಾಣ
Question 5 Explanation: 
ಚತ್ತೀಸಘರ್:

ಚತ್ತೀಸಘರ್ ದಲ್ಲಿ ಭಾರತದ ಮೊದಲ ನಗದು ರಹಿತ ಬಜಾರು ಆರಂಭಗೊಂಡಿದೆ. ಈ ಬಜಾರಿನಲ್ಲಿರುವ ಸುಮಾರು 900ಕ್ಕೂ ಹೆಚ್ಚು ಅಂಗಡಿಗಳು ಪಿಒಎಸ್ (ಪಾಯಿಂಟ್ ಆಫ್ ಸೇಲ್), ಯುಪಿಐ ಮತ್ತಿತ್ತರ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರೊಂದಿಗೆ ವಹಿವಾಟು ನಡೆಸುತ್ತಿವೆ. ಜನರಿಗೆ ಡಿಜಿಟಲ್ ವಹಿವಾಟು ಬಗ್ಗೆ ಅರಿವು ಮೂಡಿಸುವ ರಾಜ್ಯಗಳ ಪೈಕಿ ಚತ್ತೀಸಘರ್ ಮುಂಚೂಣಿಯಲ್ಲಿದೆ. ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಚತ್ತೀಸಘರ್ ದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರಿಗೆ ಡಿಜಿಟಲ್ ವಹಿವಾಟು ಬಗ್ಗೆ ತರಭೇತಿ ನೀಡಲಾಗಿದೆ.

Question 6

6. ಇತ್ತೀಚೆಗೆ ನಿಧನರಾದ ಅನುಪಮ್ ಮಿಶ್ರಾ ರವರು ಯಾವ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದರು?

A
ಪರಿಸರ
B
ಪತ್ರಿಕೋದ್ಯಮ
C
ಜಲ ಸಂರಕ್ಷಣೆ
D
ಮೇಲಿನ ಎಲ್ಲವೂ
Question 6 Explanation: 
ಮೇಲಿನ ಎಲ್ಲವೂ:

ಪ್ರಖ್ಯಾತ ಪರಿಸರವಾದಿ, ಗಾಂಧೀ ಅನುಯಾಯಿ, ಪತ್ರಕರ್ತ, ಲೇಖಕ ಮತ್ತು ಜಲ ಸಂರಕ್ಷಣೆಗೆ ಧ್ವನಿಯಾಗಿದ್ದ ಅನುಪಮ್ ಮಿಶ್ರಾ ರವರು ನಿಧನರಾದರು. “ಆಜ್ ಭಿ ಖರೇ ಹೈನ್ ತಾಲಬ್”, ಮತ್ತು “ರಾಜಸ್ತಾನ್ ಕಿ ರಜತ್ ಬೂಂದೇನ್” ಅವರ ಪ್ರಸಿದ್ದ ಪುಸ್ತಕಗಳು.

Question 7

7. 2015-16ನೇ ಸಾಲಿನಲ್ಲಿ ಭಾರತದಲ್ಲಿ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿರುವ ಮೊದಲ ಮೂರು ರಾಷ್ಟ್ರಗಳು ________?

A
ಮಾರಿಷಸ್, ಸಿಂಗಾಪುರ, ಅಮೆರಿಕ
B
ಮಾರಿಷಸ್, ಸಿಂಗಾಪುರ, ಯುಕೆ
C
ಸಿಂಗಾಪುರ, ಮಾರಿಷಸ್, ಯುಕೆ
D
ಸಿಂಗಾಪುರ, ಯುಕೆ, ಮಾರಿಷಸ್
Question 7 Explanation: 
ಮಾರಿಷಸ್, ಸಿಂಗಾಪುರ, ಅಮೆರಿಕ:

ವಿದೇಶಿ ನೇರ ಬಂಡವಾಳ ಆಕರ್ಷಣೆಯಲ್ಲಿ ಭಾರತ ಹೊಸ ಮೈಲುಗಲ್ಲು ಸಾಧಿಸಿದೆ. ಏಪ್ರಿಲ್ 2000 ಮತ್ತು ಸೆಪ್ಟೆಂಬರ್ 2016 ಅವಧಿಯಲ್ಲಿ ಭಾರತ ಯುಎಸ್ 300 ಬಿಲಿಯನ್ ಡಾಲರ್ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ. ಈ ಅವಧಿಯಲ್ಲಿ ಒಟ್ಟಾರೆಯಾಗಿ ಭಾರತ 310.26 ಬಿಲಿಯನ್ ಡಾಲರ್ ಬಂಡವಾಳವನ್ನು ಆಕರ್ಷಿಸಿದೆ. ಒಟ್ಟಾರೆ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಶೇ 33% ಮಾರಿಷಸ್ ನಿಂದ ಹರಿದು ಬಂದಿದೆ. ಮಾರಿಷಸ್ ನಂತರ ಸಿಂಗಾಪುರ, ಯುಎಸ್, ಯುಕೆ ಮತ್ತು ನೆದರ್ಲ್ಯಾಂಡ್ ಭಾರತಕ್ಕೆ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಹೂಡಿರುವ ರಾಷ್ಟ್ರಗಳು.

Question 8

8. ಈ ಮುಂದಿನದು ಭಾರತದ ಏಕೈಕ ಸಂಸ್ಕೃತ ದಿನಪತ್ರಿಕೆಯಾಗಿದೆ __________?

A
ಸಹಿಷ್ಣ
B
ಸುಧರ್ಮಾ
C
ಜ್ಯೋತಿರ್ಗಮ
D
ಅಹಿಂಸ
Question 8 Explanation: 
ಸುಧರ್ಮಾ:

ಸುಧರ್ಮಾ' ಭಾರತದ ಏಕೈಕ ಸಂಸ್ಕೃತ ದಿನಪತ್ರಿಕೆ. ಈ ಪತ್ರಿಕೆ ಹೊರಬರುವುದು ಮೈಸೂರಿನಿಂದ. ಕೆ.ವಿ.ಸಂಪತ್ ಕುಮಾರ್ ಸಂಪಾದಕರು. ಇತ್ತೀಚೆಗೆ ಈ ದಿನಪತ್ರಿಕೆ ತುಂಬಾ ನಷ್ಟದಲ್ಲಿರುವ ಕಾರಣ ಮುಚ್ಚುವ ಸ್ಥಿತಿಗೆ ತಲುಪಿದೆ.

Question 9

9. ಗ್ರಾಮೀಣ ವಿದ್ಯುದ್ದೀಕರಣದ ಮೇಲೆ ನಿಗಾವಹಿಸುವ ಸಲುವಾಗಿ ಕೇಂದ್ರ ಇಂಧನ ಸಚಿವಾಲಯ ಈ ಕೆಳಗಿನ ಯಾವ ಆ್ಯಪ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ?

A
SAMVAD
B
GARV-II
C
UJWALA
D
POWER
Question 9 Explanation: 
GARV-II:

ಗ್ರಾಮೀಣ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಾಹಿತಿಯನ್ನು ಕಲೆಹಾಕುವ ಸಲುವಾಗಿ ಕೇಂದ್ರ ಇಂಧನ ಸಚಿವಾಲಯ GARV-II ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಕೇಂದ್ರ ಇಂಧನ, ಕಲ್ಲಿದ್ದಲು, ನಾವೀನ್ಯ ಮತ್ತು ನವೀಕರಣಗೊಳಿಸಬಹುದಾದ ಇಂಧನ ಸಚಿವ ಪಿಯುಷ್ ಗೋಯಲ್ ರವರು ಈ ಆ್ಯಪ್ ಅನ್ನು ಬಿಡುಗಡೆಗೊಳಿಸಿದರು.

Question 10

10. ಬಾಹ್ಯಕಾಶದಲ್ಲಿ ಭಾರಿ ಪ್ರಮಾಣದಲ್ಲಿರುವ ತ್ಯಾಜ್ಯ ಪದಾರ್ಥಗಳನ್ನು ತೆರವುಗೊಳಿಸಲು ಯಾವ ದೇಶ ಇತ್ತೀಚೆಗೆ “ಕೌನೊಟೊರಿ (Kounotori)” ಬಾಹ್ಯಕಾಶ ನೌಕೆಯನ್ನು ಉಡಾಯಿಸಿದೆ?

A
ಅಮೆರಿಕ
B
ಜಪಾನ್
C
ಚೀನಾ
D
ರಷ್ಯಾ
Question 10 Explanation: 
ಜಪಾನ್:

ಬಾಹ್ಯಾಕಾಶದಲ್ಲಿ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಪದಾರ್ಥಗಳು ಸೇರಿಕೊಂಡಿರುವುದು ಹೊಸ ಉಪಗ್ರಹಗಳ ಉಡಾವಣೆ, ವಿವಿಧ ಸಂಶೋಧನೆಗಳಿಗೆ ಅಡ್ಡಿ ಉಂಟು ಮಾಡುತ್ತಿದೆ. ಇದನ್ನು ತೆರವುಗೊಳಿಸಲು ಜಪಾನ್ ಕೌನೊಟೊರಿ (Kounotori)” ಎಂಬ ನೌಕೆಯನ್ನು ಉಡಾಯಿಸಿದೆ. ನಿಗದಿತ ಜಾಗಕ್ಕೆ ಈ ನೌಕೆ ತಲುಪುತ್ತಿದ್ದಂತೆ ಬೃಹತ್ ಗಾತ್ರದ ಬಲೆ ಬಿಚ್ಚಿಕೊಳ್ಳಲಿದೆ. ಬಾಹ್ಯಾಕಾಶದಲ್ಲಿನ ಅಪಾರ ತ್ಯಾಜ್ಯಗಳನ್ನು ಈ ಬಲೆಯಲ್ಲಿ ಸಂಗ್ರಹಿಸಲಾಗುತ್ತದೆ. ಈ ತ್ಯಾಜ್ಯಗಳನ್ನು ಬಲೆಯ ಸಮೇತ ಸ್ಪೋಟಗೊಳಿಸುವ ಮೂಲಕ ನಾಶ ಪಡಿಸಲಾಗುತ್ತದೆ. ಈ ರೀತಿ ಒಂದು ಬಾರಿಗೆ ನೂರಾರು ಟನ್ ತ್ಯಾಜ್ಯವನ್ನು ನಾಶ

There are 10 questions to complete.

[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-20.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.