ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,22,2016

Question 1
1. 2016ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿರುವ “ಶಂಖ ಘೋಷ್ (Shanka Ghosh)” ಯಾವ ಭಾಷೆಯ ಪ್ರಸಿದ್ದ ಕವಿ?
A
ಬಂಗಾಳಿ
B
ಗುಜರಾತಿ
C
ಮಲಯಾಳಂ
D
ಹಿಂದಿ
Question 1 Explanation: 
ಬಂಗಾಳಿ:

ಖ್ಯಾತ ಬಂಗಾಳಿ ಮತ್ತು ಭಾರತೀಯ ಕವಿ ಶಂಖ ಘೋಷ್ ಗೆ ಈ ವರ್ಷದ ಜ್ಞಾನಪೀಠದ ಗೌರವ ಲಭಿಸಿದೆ. ಆ ಮೂಲಕ ಬಂಗಾಳಿ ಭಾಷೆಗೆ ಎರಡನೇ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಮಹಾಶ್ವೇತಾ ದೇವಿ 1996ರಲ್ಲಿ ಜ್ಞಾನಪೀಠ ಗೌರವಕ್ಕೆ ಪಾತ್ರರಾಗಿದ್ದರು. ಘೋಷ್ ರವರಿಗೆ 1999 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 2011 ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ. ಇದು 52ನೇ ಜ್ಞಾನಪೀಠ ಪ್ರಶಸ್ತಿ.

Question 2

2. ಎಐಎಫ್‌ಎಫ್ (AIFF) ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾದ ಭಾರತದ ಫುಟ್ಬಾಲ್ ಆಟಗಾರ ಯಾರು?

A
ರಾಬಿನ್ ಸಿಂಗ್
B
ಸಂದೇಶ್ ಜಿಂಗ್ಯನ್
C
ಸುಬ್ರತಾ ಪಾಲ್
D
ಜೆಜೆ ಲಾಲ್ಪೆಕ್ಲುವಾ
Question 2 Explanation: 
ಜೆಜೆ ಲಾಲ್ಪೆಕ್ಲುವಾ

ಮಿಜೋರಾಂನ ಸ್ಟ್ರೈಕರ್ ಜೆಜೆ ಲಾಲ್ಪೆಕ್ಲುವಾ ಎಐಎಫ್‌ಎಫ್ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೆಜೆ 2016ರ ಸಾಲಿನಲ್ಲಿ ಮೋಹನ್ ಬಗಾನ್ ಹಾಗೂ ಚೆನ್ನೈಯಿನ್ ಎಫ್ಸಿ ಹಾಗೂ ಭಾರತೀಯ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಪ್ರಶಸ್ತಿಯು ಟ್ರೋಫಿ ಹಾಗೂ 2.5 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ.

Question 3

3. ಇತ್ತೀಚೆಗೆ ಈ ಕೆಳಗಿನ ಯಾವ ದೇಶ ಇಂಗಾಲ ಹೊರಸೂಸುವಿಕೆ ಮೇಲೆ ನಿಗಾ ಇರಿಸಲು “ಟ್ಯಾನ್‌ಸ್ಯಾಟ್ (TanSat)” ಉಪಗ್ರಹವನ್ನು ಉಡಾಯಿಸಿದೆ?

A
ಜಪಾನ್
B
ರಷ್ಯಾ
C
ಚೀನಾ
D
ಅಮೆರಿಕ
Question 3 Explanation: 
ಚೀನಾ

ಹವಾಮಾನ ಬದಲಾವಣೆಗೆ ಕಾರಣವಾಗುವ ಜಾಗತಿಕ ಇಂಗಾಲ ಹೊರಸೂಸುವಿಕೆ ಮೇಲೆ ನಿಗಾ ಇರಿಸಲು ಚೀನಾ ಟ್ಯಾನ್‌ಸ್ಯಾಟ್ ಉಪಗ್ರಹವನ್ನು ಉಡಾವಣೆ ಮಾಡಿದೆ. 620 ಕೆ.ಜಿ. ತೂಕದ ಈ ಉಪಗ್ರಹವನ್ನು ಲಾಂಗ್ ಮಾರ್ಚ್‌–2ಡಿ ರಾಕೆಟ್ ಮೂಲಕ ಜಿಯುಕ್ವಾನ್ ಉಡಾವಣಾ ಕೇಂದ್ರದಿಂದ ನಭಕ್ಕೆ ಸೇರಿಸಲಾಯಿತು.ಅಮೆರಿಕ, ಜಪಾನ್ ಬಳಿಕ ಚೀನಾ ದೇಶವು ಹಸಿರುಮನೆ ಅನಿಲ ಪರಿಣಾಮದ ಬಗ್ಗೆ ಅಧ್ಯಯನ ನಡೆಸಲು ಪ್ರತ್ಯೇಕ ಉಪಗ್ರಹ ಕಳುಹಿಸಿದ ಮೂರನೇ ದೇಶ ಎನಿಸಿದೆ.

Question 4

4. ಈ ಕೆಳಗಿನ ಯಾವ ರಾಜ್ಯದಲ್ಲಿ ದೇಶದಲ್ಲೆ ಮೊದಲ ಬಾರಿಗೆ ಅರಣ್ಯ ವಿಷಯಕ್ಕೆ ಸಂಬಂಧಿಸಿದಂತೆ 24X7 ಸಹಾಯವಾಣಿಯನ್ನು ಜಾರಿಗೊಳಿಸಲಿದೆ?

A
ಕರ್ನಾಟಕ
B
ಮಹಾರಾಷ್ಟ್ರ
C
ತಮಿಳುನಾಡು
D
ತೆಲಂಗಣ
Question 4 Explanation: 
ಮಹಾರಾಷ್ಟ್ರ

ಮಹಾರಾಷ್ಟ್ರ ಅರಣ್ಯ ಇಲಾಖೆ ಅರಣ್ಯ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ 24X7 ಸಹಾಯವಾಣಿಯನ್ನು ಜನವರಿ 6ರಂದು ರಾಜ್ಯವ್ಯಾಪ್ತಿ ಆರಂಭಿಸಲಿದೆ. ಈ ಸಹಾಯವಾಣೆ ಮೂಲಕ ಸಾರ್ವಜನಿಕರು ಅರಣ್ಯ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಅಥವಾ ಮಾಹಿತಿಯನ್ನು ದಾಖಲಿಸಬಹುದು. ಕಾಳ್ಗಿಚ್ಚು, ಕಳ್ಳಬೇಟೆ, ಅರಣ್ಯ ಭೂಮಿ ಓತ್ತುವರಿ ಸೇರಿದಂತಹ ದೂರಗಳನ್ನು ಈ ಸಹಾಯವಾಣಿ ಮೂಲಕ ದಾಖಲಿಸಬಹುದು.

Question 5

5. “ರಾಷ್ಟ್ರೀಯ ಗಣಿತ ದಿನ (National Mathematics Day)” ವನ್ನು ಎಂದು ಆಚರಿಸಲಾಗುತ್ತದೆ?

A
ಡಿಸೆಂಬರ್ 20
B
ಡಿಸೆಂಬರ್ 21
C
ಡಿಸೆಂಬರ್ 22
D
ಡಿಸೆಂಬರ್ 23
Question 5 Explanation: 
ಡಿಸೆಂಬರ್ 22

ರಾಷ್ಟ್ರೀಯ ಗಣಿತ ದಿನವನ್ನು ಡಿಸೆಂಬರ್ 22ರಂದು ಆಚರಿಸಲಾಗುತ್ತದೆ. ಭಾರತ ಕಂಡ ಶ್ರೇಷ್ಠ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮನುಜಂ ರವರ ಜನ್ಮದಿನವನ್ನು ರಾಷ್ಟ್ರೀಯ ಗಣಿತ ದಿನ್ನವನ್ನಾಗಿ ಆಚರಿಸಲಾಗುತ್ತದೆ.

Question 6

6. “2016 ಮಕ್ಕಳ ಗಾಲ್ಫ್ ವಿಶ್ವ ಚಾಂಪಿಯನ್ ಷಿಪ್ (Kids Golf World Championship)” ಗೆದ್ದುಕೊಂಡವರು ___?

A
ಮಹೇಂದ್ರ ಕಾರ್ತಿಕ್
B
ಅಮೃತ್ ಪಾಲ್
C
ಅರ್ಜುನ್ ಭಾಟಿ
D
ಮೆಥು ಡೆನಿಶ್
Question 6 Explanation: 
ಅರ್ಜುನ್ ಭಾಟಿ:

ಭಾರತದ ಅರ್ಜುನ್ ಭಾಟಿ ರವರು 2016 ಮಕ್ಕಳ ಗಾಲ್ಫ್ ವಿಶ್ವ ಚಾಂಪಿಯನ್ ಷಿಪ್ ಗೆದ್ದುಕೊಂಡರು. ಮಲೇಷಿಯಾದಲ್ಲಿ ನಡೆದ ಚಾಂಪಿಯನ್ ಷಿಪ್ ನಲ್ಲಿ ಅರ್ಜುನ್ ಭಾಟಿ ರವರು ದಕ್ಷಿಣ ಆಫ್ರಿಕಾದ ಮೆಥು ಡೆನಿಶ್ ರವರನ್ನು ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅಮೆರಿಕದ ಮಕ್ಕಳ ಗಾಲ್ಫ್ ಫೌಂಡೇಶನ್ 5 ರಿಂದ 18 ವರ್ಷದೊಳಗಿನ ಮಕ್ಕಳಿಗೆಂದೆ ಈ ಚಾಂಪಿಯನ್ ಷಿಪ್ ಅನ್ನು ಆಯೋಜಿಸಲಾಗುತ್ತದೆ.

Question 7

7. ಯಾವ ದೇಶ ಫಿಫಾ “2016 ವರ್ಷದ ತಂಡ ಪ್ರಶಸ್ತಿ (FIFA Team of the Year)ಯನ್ನು ಗೆದ್ದುಕೊಂಡಿದೆ?

A
ಬ್ರೆಜಿಲ್
B
ಫಾನ್ಸ್
C
ಅರ್ಜೇಂಟೆನಾ
D
ಜರ್ಮನಿ
Question 7 Explanation: 
ಅರ್ಜೇಂಟೆನಾ

ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೆನಾ ತಂಡ ಫಿಫಾ ವಿಶ್ವ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆಯುವುದರೊಂದಿಗೆ 22016 ವರ್ಷದ ತಂಡ ಪ್ರಶಸ್ತಿಗೆ ಭಾಜನವಾಗಿದೆ. 2016ರ ಯುರೋ ಫೈನಲ್ನಲ್ಲಿ ಸೋತಿದ್ದ ಫ್ರಾನ್ಸ್ ತಂಡ 'ಮೂವರ್ ಆಫ್ ದಿ ಇಯರ್' ಆಗಿ ಗುರುತಿಸಿಕೊಂಡಿದೆ.ಅರ್ಜೆಂಟೀನ ತಂಡ 2016ರ ಸಾಲಿನಲ್ಲಿ 15 ಪಂದ್ಯಗಳನ್ನು ಆಡಿದ್ದು, ಈ ಪೈಕಿ 10ರಲ್ಲಿ ಜಯ ಸಾಧಿಸಿದೆ. ಫಿಫಾ ಶ್ರೇಯಾಂಕದಲ್ಲಿ ಭಾರತ ತಂಡ ಎರಡು ಸ್ಥಾನ ಭಡ್ತಿ ಪಡೆದು 135ನೆ ಸ್ಥಾನಕ್ಕೇರಿದೆ.

Question 8

8. "Kohinoor: The Story of the World's Most Infamous Diamond" ಪುಸ್ತಕದ ಲೇಖಕರು ಯಾರು?

A
ಅನಿತ ಆನಂದ್
B
ಜೇಕಬ್ ವರ್ಗೀಸ್
C
ಸುರೇಶ್ ಮೆನನ್
D
ಅನಿತಾ ದೇಸಾಯಿ
Question 8 Explanation: 
ಅನಿತ ಆನಂದ್:

ಪತ್ರಕರ್ತೆ ಅನಿತ ಆನಂದ್ ಮತ್ತು ಬ್ರಿಟನ್ ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್ ರವರು "Kohinoor: The Story of the World's Most Infamous Diamond" ಪುಸ್ತಕದ ಲೇಖಕರು. ಭಾರತ ಮತ್ತು ಬ್ರಿಟನ್ ನಡುವೆ ವಿವಾದವಾಗಿ ಉಳಿದಿರುವ ಕೊಹಿನೂರ್ ವಜ್ರದ ಕುರಿತಾಗಿ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ.

Question 9

9. 2016 ಫೋರ್ಬ್ಸ್ ಇಂಡಿಯಾ ಸೆಲಿಬ್ರಿಟಿ-100 ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಬಾಲಿವುಡ್ ನಟ ಯಾರು?

A
ಸಲ್ಮಾನ್ ಖಾನ್
B
ರಣವೀರ್ ಸಿಂಗ್
C
ಅಮಿತಾಬ್ ಬಚ್ಚನ್
D
ಶಾರುಖ್ ಖಾನ್
Question 9 Explanation: 
ಸಲ್ಮಾನ್ ಖಾನ್

ಐದನೇ ಫೋರ್ಬ್ಸ್ ಇಂಡಿಯಾ ಸೆಲಿಬ್ರಿಟಿ-100 ಪಟ್ಟಿಯಲ್ಲಿ ಸಲ್ಮಾನ್ ಖಾನ್ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. 50 ವರ್ಷದ ಖಾನ್ ರವರ ಆದಾಯ 270.33 ಕೋಟಿ. ಶಾರುಖ್ ಖಾನ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

Question 10

10. 18 ವರ್ಷದೊಳಗಿನವರ 4ನೇ ಮಹಿಳಾ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ದೇಶ ಯಾವುದು?

A
ಭಾರತ
B
ಚೀನಾ
C
ಜಪಾನ್
D
ದಕ್ಷಿಣ ಕೊರಿಯಾ
Question 10 Explanation: 
ಚೀನಾ
There are 10 questions to complete.

[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-22.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,22,2016”

  1. Super
    It is much useful to all capitate R’s

  2. Vijayakumar chalageri

    Help full

  3. Rajashekhar hirekurabar

    So excellent and helpfull

  4. ಅತ್ಯುತ್ತಮ ಜ್ಞಾನದ ಅಂತರ್ಜಾಲ ತಾಣ….

Leave a Comment

This site uses Akismet to reduce spam. Learn how your comment data is processed.