ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,24,2016

Question 1

1. ಈ ಕೆಳಗಿನವುಗಳನ್ನು ಗಮನಿಸಿ:

I) ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ (ಯುಪಿಐ)

II) ಆಧಾರ ಆಧರಿತ ಪಾವತಿ ವ್ಯವಸ್ಥೆ (ಎಇಪಿಎಸ್)

III) ಅನ್ ಸ್ಟ್ರಕ್ಚರ್ಡ್ ಸಪ್ಲೆಮೆಂಟರಿ ಸರ್ವೀಸ್ ಡಾಟ (ಯುಎಸ್ಎಸ್ ಡಿ)

IV) ಕ್ರೆಡಿಟ್ ಕಾರ್ಡ್

ಈ ಮೇಲಿನ ಯಾವ ವಿಧಾನದಡಿ ವ್ಯವಹರಿಸುವ ವ್ಯಾಪರಸ್ಥರು “ಡಿಜಿ ಧನ್ ಯೋಜನೆ”ಯಡಿ ಬಹುಮಾನ ಗೆಲ್ಲಲ್ಲು ಅರ್ಹರಾಗಿರುತ್ತಾರೆ?

A
I, II & III
B
II, III & IV
C
I, II & IV
D
ಮೇಲಿನ ಎಲ್ಲವೂ
Question 1 Explanation: 
I, II & III:

ನಗದುರಹಿತ ವಹಿವಾಟಿಗೆ ಉತ್ತೇಜನ ನೀಡುವ ಸಲುವಾಗಿ ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ‘ಲಕ್ಕಿ ಗ್ರಾಹಕ ಯೋಜನೆ’ ಮತ್ತು ‘ಡಿಜಿ ಧನ ವ್ಯಾಪಾರ ಯೋಜನೆ’ಗಳನ್ನು ಜಾರಿಗೊಳಿಸಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ) ಈ ಎರಡು ಯೋಜನೆಗಳನ್ನು ಅನುಷ್ಠಾನ ಮಾಡುವ ಹೊಣೆ ಹೊತ್ತುಕೊಂಡಿದೆ. ಯುಪಿಐ, ಸಾಮಾನ್ಯ ಮೊಬೈಲ್ ಮೂಲಕ (ಸ್ಮಾರ್ಟ್ಫೋನ್ ಬಿಟ್ಟು) ಹಣಪಾವತಿ ವ್ಯವಸ್ಥೆ (ಯುಎಸ್ಎಸ್ಡಿ), ಆಧಾರ್ ಆಧರಿತ ಪಾವತಿ ವ್ಯವಸ್ಥೆ (ಎಇಪಿಎಸ್) ಮತ್ತು ರೂಪೇ ಕಾರ್ಡ್ಗಳ ಮೂಲಕ ಹಣ ಪಾವತಿ ಮಾಡುವ ಗ್ರಾಹಕರು ಬಹುಮಾನ ಪಡೆಯಲು ಅರ್ಹರು. ಖಾಸಗಿ ಕ್ರೆಡಿಟ್ ಕಾರ್ಡುಗಳು ಮತ್ತು ಖಾಸಗಿ ಮೊಬೈಲ್–ವಾಲೆಟ್ಗಳ ಮೂಲಕ ಮಾಡುವ ಪಾವತಿ ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ.

Question 2

2. ಈ ಮುಂದಿನ ಯಾವ ದೇಶ ಏಷ್ಯಾದ ಅತಿ ದೊಡ್ಡ ಕ್ಯಾಥೊಲಿಕ್ ರಾಷ್ಟ್ರವಾಗಿದೆ?

A
ಫಿಲಿಫೈನ್ಸ್
B
ಸೈಪ್ರಸ್
C
ಜಪಾನ್
D
ಜಾರ್ಜಿಯಾ
Question 2 Explanation: 
ಫಿಲಿಫೈನ್ಸ್

ಫಿಲಿಫೈನ್ಸ್ ಏಷ್ಯಾದ ಅತಿ ದೊಡ್ಡ ಕ್ಯಾಥೊಲಿಕ್ ರಾಷ್ಟ್ರ. ಫಿಲಿಫೈನ್ಸ್ ನ ಒಟ್ಟು ಜನಸಂಖ್ಯೆಯಲ್ಲಿ ಶೇ 92.5% ರಷ್ಟು ಜನರು ಕ್ಯಾಥೊಲಿಕ್ ಧರ್ಮಕ್ಕೆ ಸೇರಿದವರಾಗಿದ್ದಾರೆ.

Question 3

3. ಈ ಕೆಳಗಿನ ಯಾವ ಬ್ಯಾಂಕ್ ವ್ಯಾಪರಸ್ಥರಿಗಾಗಿ “Easy Pay” ಮೊಬೈಲ್ ಆಧರಿತ ಅಪ್ಲಿಕೇಶನ್ ಹೊರತಂದಿದೆ?

A
ಐಸಿಐಸಿಐ ಬ್ಯಾಂಕ್
B
ಕೆನರಾ ಬ್ಯಾಂಕ್
C
ಭಾರತೀಯ ಸ್ವೇಟ್ ಬ್ಯಾಂಕ್
D
ಆಕ್ಸಿಸ್ ಬ್ಯಾಂಕ್
Question 3 Explanation: 
ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್ ವ್ಯಾಪರಸ್ಥರಿಗಾಗಿ “ಈಸಿ ಪೇ” ಮೊಬೈಲ್ ಆಧರಿತ ಆ್ಯಪ್ ಅನ್ನು ಬಿಡುಗಡೆಗೊಳಿಸಿದೆ. ಇದೊಂದು ಸರಳೀಕೃತ ಅಪ್ಲಿಕೇಶನ್ ಆಗಿದ್ದು, ಯುಪಿಐ, ಕ್ಯೂಆರ್ ಕೋಡ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಪಾವತಿ ಮಾಡಬಹುದಾಗಿದೆ.

Question 4

4. “2018 ಮಹಿಳೆಯರ ವಿಶ್ವ ಹಾಕಿ ಕಪ್” ಆತಿಥ್ಯ ವಹಿಸಲಿರುವ ದೇಶ ಯಾವುದು?

A
ಭಾರತ
B
ಇಂಗ್ಲೆಂಡ್
C
ಆಸ್ಟ್ರೇಲಿಯಾ
D
ಜಪಾನ್
Question 4 Explanation: 
ಇಂಗ್ಲೆಂಡ್

“2018 ಮಹಿಳೆಯರ ವಿಶ್ವ ಹಾಕಿ ಕಪ್” ಜುಲೈ 7-21, 2018 ರಲ್ಲಿ ಲಂಡನ್, ಇಂಗ್ಲೆಂಡ್ ನಲ್ಲಿ ನಡೆಯಲಿದೆ. 2018 ಪುರುಷರ ವಿಶ್ವ ಹಾಕಿ ಕಪ್ ನವೆಂಬರ್ 28 ರಿಂದ ಡಿಸೆಂಬರ್ 16 ರವರೆಗೆ ಭಾರತದ ಒಡಿಶಾ ರಾಜ್ಯದಲ್ಲಿ ನಡೆಯಲಿದೆ.

Question 5

5. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಗ್ರಾಹಕರ ಕುಂದುಕೊರತೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು “OCMC”ಯನ್ನು ಪ್ರಾರಂಭಿಸಿದೆ. OCMC ಎಂದರೆ ________?

A
Online Consumer Media Centre
B
Online Consumer Mediation Centre
C
Online Consumer Mitigation Centre
D
Online Consumer Motivation Centre
Question 5 Explanation: 
Online Consumer Mediation Centre

ಗ್ರಾಹಕರ ಕುಂದುಕೊರತೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವನ್ ರವರು Online Consumer Mediation Centre ಅನ್ನು ಇತ್ತೀಚೆಗೆ ಉದ್ಘಾಟಿಸಿದರು. OCMC ಯನ್ನು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU) ಸಹಯೋಗದೊಂದಿಗೆ ನವದೆಹಲಿಯಲ್ಲಿ ಆರಂಭಿಸಲಾಗಿದೆ. ಇದಲ್ಲದೇ “ಸ್ಮಾರ್ಟ್ ಗ್ರಾಹಕ” ಆ್ಯಪ್ ಮತ್ತು “14404” ಸಹಾಯವಾಣಿಯನ್ನು ಆರಂಭಿಸಲಾಯಿತು.

Question 6

6. ಪೊಲವರಂ ಬಹು ಉದ್ದೇಶಿತ ನೀರಾವರಿ ಯೋಜನೆ (Polavarm Multipurpose Irrigation Project)ಯನ್ನು ಯಾವ ನದಿಗೆ ಸಂಬಂಧಿಸಿದೆ?

A
ನರ್ಮದಾ ನದಿ
B
ಗೋದಾವರಿ ನದಿ
C
ಕೃಷ್ಣಾ ನದಿ
D
ಮಹಾನದಿ
Question 6 Explanation: 
ಗೋದಾವರಿ ನದಿ:

ಪೊಲವರಂ ಅಥವಾ ಇಂದಿರಸಾಗರ್ ಯೋಜನೆಯನ್ನು ಗೋದಾವರಿ ನದಿಯ ಮೇಲೆ ಆಂಧ್ರ ಪ್ರದೇಶದ ಪೊಲವರಂ ಮಂಡಲ್ ನ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಿರ್ಮಿಸಲಾಗುತ್ತಿದೆ. ಇದೊಂದು ಬಹು ಉದ್ದೇಶಿತ ಯೋಜನೆಯಾಗಿದ್ದು, ಇದರಿಂದ ಆಂಧ್ರ ಪ್ರದೇಶದ ಕೃಷ್ಣಾ, ವಿಶಾಖಪಟ್ಟಣ, ಪೂರ್ವ ಗೋದಾವರಿ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಅಲ್ಲದೇ ಜಲ ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ಉದ್ದೇಶಕ್ಕೂ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ರೂ 1,982 ಕೋಟಿಯನ್ನು ಈ ಯೋಜನೆಗಾಗಿ ಬಿಡುಗಡೆಗೊಳಿಸಿದೆ.

Question 7

7. ಇತ್ತೀಚೆಗೆ “ನಾಕ್ ಟೆನ್ (Nock Ten)” ಚಂಡಮಾರುತ ಯಾವ ದೇಶಕ್ಕೆ ಅಪ್ಪಳಿಸಿತು?

A
ಚೀನಾ
B
ಫಿಲಿಫೈನ್ಸ್
C
ಜಪಾನ್
D
ದಕ್ಷಿಣ ಕೊರಿಯಾ
Question 7 Explanation: 
ಫಿಲಿಫೈನ್ಸ್:

ಉತ್ತರ ಫಿಲಿಪ್ಪೀನ್ಸ್ನಲ್ಲಿ 'ನಾಕ್ ಟೆನ್' ಚಂಡಮಾರುತ ಅಪ್ಪಳಿಸಿದ್ದು, ಆರು ಮಂದಿಯನ್ನು ಬಲಿ ಪಡೆದುಕೊಂಡಿದೆ. ಚಂಡಮಾರುತದ ಅಬ್ಬರದಿಂದ ನೂರಾರು ಮನೆಗಳಿಗೆ ಹಾನಿಯಾಗಿದ್ದು, ಸಾವಿರಾರು ಮಂದಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.

Question 8

8. ಮೌಲಾನ ಅಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಬಾಲಿವುಡ್ ನಟ ಯಾರು?

A
ಶಾರೂಕ್ ಖಾನ್
B
ಅಕ್ಷಯ್ ಕುಮಾರ್
C
ಅಮಿತಾಬ್ ಬಚ್ಚನ್
D
ಅಮಿರ್ ಖಾನ್
Question 8 Explanation: 
ಶಾರೂಕ್ ಖಾನ್:

ಮೌಲಾನ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಬಾಲಿವುಡ್ ನಟ ಶಾರೂಕ್ ಖಾನ್ ಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಅವರು ತಮ್ಮ ಚಿತ್ರಗಳಲ್ಲಿ ಉರ್ದು ಭಾಷೆಯನ್ನು ಬಳಸಿ ಪ್ರಚಾರ ಮಾಡಲು ನೆರವಾಗುವುದಕ್ಕೆ ಈ ಗೌರವ ನೀಡಲಾಗಿದೆ. ವಿಶ್ವವಿದ್ಯಾಲಯದ ಕುಲಪತಿ ಝಫರ್ ಸರೇಶ್ ವಾಲಾ ಶಾರೂಕ್ ಖಾನ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

Question 9

9. ಇತ್ತೀಚೆಗೆ ನಿಧನರಾದ ರಾಷ್ಟ್ರೀಯ ಲಾಂಛನವನ್ನು ವಿನ್ಯಾಸಗೊಳಿಸಿದ್ದ “ದೀನನಾಥ ಭಾರ್ಗವ” ಯಾವ ರಾಜ್ಯದವರು?

A
ಮಧ್ಯ ಪ್ರದೇಶ
B
ಗುಜರಾತ್
C
ಕರ್ನಾಟಕ
D
ತಮಿಳು ನಾಡು
Question 9 Explanation: 
ಮಧ್ಯ ಪ್ರದೇಶ:

ರಾಷ್ಟ್ರೀಯ ಲಾಂಛನವಾಗಿ ಸಾರನಾಥದ ಸಿಂಹ ಬೋದಿಗೆ ಮತ್ತು ಅಶೋಕ ಚಕ್ರವನ್ನು ವಿನ್ಯಾಸಗೊಳಿಸಿದ್ದ ಮತ್ತು ಕರಡು ಸಂವಿಧಾನದ ಪುಟಗಳನ್ನು ಸುಂದರಗೊಳಿಸಿದ್ದ ತಂಡದಲ್ಲಿ ಸಹ ಕಲಾವಿದರಾಗಿದ್ದ ಮಧ್ಯ ಪ್ರದೇಶದ ದೀನನಾಥ ಭಾರ್ಗವ(89) ಅವರು ನಿಧನರಾದರು. 1927, ನ.1ರಂದು ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಮುಲ್ತಾಯಿಯಲ್ಲಿ ಜನಿಸಿದ್ದ ಭಾರ್ಗವ ಅವರನ್ನು ಆಗ ಶಾಂತಿನಿಕೇತನದ ಕಲಾಭವನದ ಪ್ರಾಂಶುಪಾಲರಾಗಿದ್ದ ಖ್ಯಾತ ಕಲಾವಿದ ನಂದಲಾಲ್ ಬೋಸ್ ಅವರು ಭಾರತಿಯ ಸಂವಿಧಾನದ ಕರಡು ಪ್ರತಿಯ ಪುಟಗಳನ್ನು ವಿನ್ಯಾಸಗೊಳಿಸಿದ ತಂಡಕ್ಕೆ ಅಯ್ಕೆ ಮಾಡಿದ್ದರು. ಆಗ ಭಾರ್ಗವ ಶಾಂತಿ ನಿಕೇತನದಲ್ಲಿ ಫೈನ್ ಆರ್ಟ್ಸ್ ವಿದ್ಯಾರ್ಥಿಯಾಗಿದ್ದರು. ಸರಕಾರವು 1950,ಜ.2ರಂದು ರಾಷ್ಟ್ರೀಯ ಲಾಂಛನವನ್ನು ಅಳವಡಿಸಿಕೊಂಡಿತ್ತು.

Question 10

10. ಭಾರತೀಯ ಷೇರು ವಿನಿಮಯ ಕೇಂದ್ರದ (Security Exchange Board of India-SEBI) ಮಾರ್ಗಸೂಚಿಯನ್ವಯ ಮ್ಯೂಚುಯಲ್ ಫಂಡ್ ಗಳನ್ನು ಅವುಗಳು ಹೊಂದಿರುವ ‘ರಿಸ್ಕ್’ಗಳಿಗೆ ಅನುಗುಣವಾಗಿ ಬಾಂಡ್ ಗಳಿಗೆ ಈ ಕೆಳಗಿನ ಬಣ್ಣಗಳನ್ನು ನೀಡಿದೆ, ಇವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗದಿರುವುದು ಯಾವುದು

A
ನೀಲಿ ಬಣ್ಣ- ಕಡಿಮೆ ರಿಸ್ಕ್ ಸಂಕೇತ
B
ಹಳದಿ ಬಣ್ಣ- ಮಧ್ಯಮ ರಿಸ್ಕ್ ಸಂಕೇತ
C
ಕೆಂಪು ಬಣ್ಣ- ರಿಸ್ಕ್ ರಹಿತ ಸಂಕೇತ
D
ಕಂದು ಬಣ್ಣ- ಅತಿ ಹೆಚ್ಚು ರಿಸ್ಕ್ ಸಂಕೇತ
Question 10 Explanation: 
ಕೆಂಪು ಬಣ್ಣ- ರಿಸ್ಕ್ ರಹಿತ ಸಂಕೇತ
There are 10 questions to complete.

[button link=”http://www.karunaduexams.com/wp-content/uploads/2016/12/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಡಿಸೆಂಬರ್-24.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,24,2016”

Leave a Comment

This site uses Akismet to reduce spam. Learn how your comment data is processed.