ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,27,2016
Question 1 |
1. ವಿಶ್ವದ ಮೊದಲ ಸೋಲಾರ್ ರಸ್ತೆ (Solar Road)ಯನ್ನು ಯಾವ ದೇಶದಲ್ಲಿ ನಿರ್ಮಿಸಲಾಗಿದೆ?
ಫ್ರಾನ್ಸ್ | |
ಮೆಕ್ಸಿಕೊ | |
ಇಟಲಿ | |
ಕ್ಯೂಬಾ |
ವಿಶ್ವದ ಮೊದಲ ಸೋಲಾರ್ ರಸ್ತೆಯನ್ನು ಫ್ರಾನ್ಸ್ ನ ನಾರ್ಮಂಡಿಯಲ್ಲಿ ನಿರ್ಮಿಸಲಾಗಿದೆ. ಒಂದು ಕಿ.ಮೀ ಉದ್ದದ ರಸ್ತೆಯಲ್ಲಿ 2,880 ಸೌರಫಲಕಗಳನ್ನು ಅಳವಡಿಸಲಾಗಿದೆ. ಪ್ರಾಯೋಗಿಕವಾಗಿ ಆರಂಭಿಸಲಾಗಿರುವ ರಸ್ತೆಗೆ “ವ್ಯಾಟ್ ವೇ” ಎಂದು ಹೆಸರಿಡಲಾಗಿದೆ. ವಾರ್ಷಿಕ “280 ಮೆಗಾ ವ್ಯಾಟ್ ಹವರ್ಸ್ (Mega Watt hours)” ಸೌರಶಕ್ತಿಯನ್ನು ಇದು ಉತ್ಪಾದಿಸಲಿದೆ ಎಂದು ಅಂದಾಜಿಸಲಾಗಿದೆ.
Question 2 |
2. ಈ ಕೆಳಗಿನ ಯಾವ ಗ್ರಾಮೀಣ ಬ್ಯಾಂಕ್ ಇತ್ತೀಚೆಗೆ “ಬ್ಯಾಂಕ್ ಸಖಿ (Bank Sakhi)” ಯೋಜನೆಯನ್ನು ಆರಂಭಿಸಿದೆ?
ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ | |
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ | |
ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ | |
ಮಧ್ಯಂಚಲ ಗ್ರಾಮೀಣ ಬ್ಯಾಂಕ್ |
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿ) ಗದಗ ಜಿಲ್ಲೆಯ ಅಡವಿಸೋಮಾಪುರದಲ್ಲಿ ಬ್ಯಾಂಕ್ ಸಖಿ ಯೋಜನೆಯನ್ನು ಆರಂಭಿಸಿತು. ಈ ಯೋಜನೆಯಡಿ ಮಹಿಳೆಯರನ್ನು ನೇಮಕ ಮಾಡಿಕೊಂಡು, ಆ ಮೂಲಕ ಗ್ರಾಮೀಣ ಭಾಗದಲ್ಲಿ ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವುದಾಗಿದೆ. ಬ್ಯಾಂಕ್ ಸಖಿಯು ಸ್ವ-ಸಹಾಯ ಸಂಘದ ಮಹಿಳಾ ಸದಸ್ಯೆಯಾಗಿರಲಿದ್ದು, ಅವರಿಂದ ಬ್ಯಾಂಕ್ ಗ್ರಾಹಕರ ವ್ಯವಹಾರಕ್ಕೆ ಸರಳವಾಗಿ ಬ್ಯಾಂಕ್ ಸೇವೆಗಳು ದೊರೆಯಲಿವೆ.
Question 3 |
3. “ನ್ಯಾಷನಲ್ ಕಾಡೆಟ್ ಕಾರ್ಪ್ಸ್ (National Cadet Corps)”ನ ನೂತನ ಡೈರೆಕ್ಟರ್ ಜನರಲ್ ಆಗಿ ಯಾರು ನೇಮಕಗೊಂಡಿದ್ದಾರೆ?
ಹರಿಹರ್ ಸಿಂಗ್ | |
ವಿನೋದ್ ವಷಿಷ್ಠ್ | |
ಕೇದರ್ ನಾಥ್ | |
ವಿಕ್ರಮ್ ಅಗರವಾಲ್ |
ಲೆಫ್ಟಿನೆಂಟ್ ಜನರಲ್ ವಿನೋದ್ ವಷಿಷ್ಠ್ ರವರು ನ್ಯಾಷನಲ್ ಕಾಡೆಟ್ ಕಾರ್ಪ್ಸ್ ನ ನೂತನ ಡೈರೆಕ್ಟರ್ ಜನರಲ್ ಆಗಿ ನೇಮಕಗೊಂಡಿದ್ದಾರೆ. ನೇಮಕಾತಿಗೆ ಮುಂಚೆ ಬಿಹಾರದ ಗಯಾದಲ್ಲಿರುವ ಆಫೀಸರ್ ಟ್ರೈನಿಂಗ್ ಅಕಾಡೆಮಿಯ ಕಮಾನ್ಡಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
Question 4 |
4. ಇತ್ತೀಚೆಗೆ ನಿಧನರಾದ “ಸುಂದರ್ ಲಾಲ್ ಪಟ್ವಾ” ಯಾವ ರಾಜ್ಯದ ಮಾಜಿ ಮುಖ್ಯಮಂತ್ರಿ?
ಮಧ್ಯ ಪ್ರದೇಶ | |
ಹರಿಯಾಣ | |
ಜಾರ್ಖಂಡ್ | |
ಪಶ್ಚಿಮ ಬಂಗಾಳ |
ಮಧ್ಯಪ್ರದೇಶದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಬಿಜೆಪಿ ಹಿರಿಯ ನಾಯಕ ಸುಂದರ್ ಲಾಲ್ ಪಟ್ವಾ (92) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುಂದರ್ ಲಾಲ್ ಪಟ್ವಾ ಅವರು ಜನಸಂಘದ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. 1924ರ ನವೆಂಬರ್ 11ರಂದು ಕುಕಡೇಶ್ವರದಲ್ಲಿ ಜನಿಸಿದ್ದ ಪಟ್ವಾ ಅವರು, ಬಿಜೆಪಿಯಿಂದ 2 ಬಾರಿ ಮಧ್ಯಪ್ರದೇಶ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
Question 5 |
5. “ಚಾರ್ ದಾಮ್” ಹೆದ್ದಾರಿ ಯೋಜನೆ ಯಾವ ರಾಜ್ಯಕ್ಕೆ ಸಂಬಂಧಿಸಿದೆ?
ಉತ್ತರಖಂಡ | |
ಉತ್ತರ ಪ್ರದೇಶ | |
ಹಿಮಾಚಲ ಪ್ರದೇಶ | |
ಪಶ್ಚಿಮ ಬಂಗಾಳ |
ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಮಹತ್ವಾಕಾಂಕ್ಷಿ ಚಾರ್ ದಾಮ್ ಯೋಜನೆ ಅಥವಾ ಚಾರ್ ದಾಮ್ ಮಹಾಮಾರ್ಗ ವಿಕಾಸ್ ಪರಿಯೋಜನೆಗೆ ಉತ್ತರಖಂಡದ ಡೆಹ್ರಾಡೂನ್ ನಲ್ಲಿ ಶಿಲಾನ್ಯಾಸವನ್ನು ನೆರವೇರಿಸಿದರು. ಹಿಮಾಲಯದ ಚಾರ್ ದಾಮ್ ಯಾತ್ರ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
Question 6 |
6. ಯಾವ ದೇಶ ಇತ್ತೀಚೆಗೆ ಐದನೇ ಪೀಳಿಗೆಯ ರಹಸ್ಯವಾಗಿ ಕಾರ್ಯಾಚರಣೆ ನಡೆಸುವ FC-31 ಜರ್ಫಾಲ್ಕನ್ (Gyrfalcon) ಯುದ್ದವಿಮಾನವನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿತು?
ಜಪಾನ್ | |
ಉತ್ತರ ಕೊರಿಯಾ | |
ಚೀನಾ | |
ದಕ್ಷಿಣ ಕೊರಿಯಾ |
ಚೀನಾದ ಐದನೇ ಪೀಳಿಗೆಯ ರಹಸ್ಯವಾಗಿ ಯುದ್ದ ಕಾರ್ಯಾಚರಣೆ ನಡೆಸುವ FC-31 ಜರ್ಫಾಲ್ಕನ್ (Gyrfalcon) ಯುದ್ದವಿಮಾನವನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಇದೇ ಮೊದಲ ಬಾರಿಗೆ ಈ ಯುದ್ದವಿಮಾನವದ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು. ಐದನೇ ಪೀಳಿಗೆಯ ಈ ವಿಮಾನವನ್ನು ಅಮೆರಿಕದ ಎಫ್–35 ವಿಮಾನಕ್ಕೆ ಸೆಡ್ಡುಹೊಡೆಯಲು ಚೀನಾ ನಿರ್ಮಿಸಿದೆ ಎಂದು ಹೇಳಲಾಗುತ್ತಿದೆ.
Question 7 |
7. ಅಂತಾರಾಷ್ಟ್ರೀಯ ಟೆನ್ನಿಸ್ ಗೆ ವಿದಾಯ ಹೇಳಿದ “ಅನಾ ಇವಾನೊವಿಚ್” ಯಾವ ದೇಶದವರು?
ರಷ್ಯಾ | |
ಮಲೇಷಿಯಾ | |
ಸರ್ಬಿಯಾ | |
ಇಂಗ್ಲೆಂಡ್ |
ಸರ್ಬಿಯಾದ ಟೆನಿಸ್ ಆಟಗಾರ್ತಿ ಅನಾ ಇವಾನೊವಿಚ್ ಅವರು ಅಂತರರಾಷ್ಟ್ರೀಯ ಟೆನಿಸ್ ಬದುಕಿಗೆ ವಿದಾಯ ಹೇಳಿದ್ದಾರೆ. 2008ರಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದ ಇವಾನೊವಿಚ್ ಅದೇ ವರ್ಷ ಫ್ರೆಂಚ್ ಓಪನ್ನಲ್ಲಿ ಪ್ರಶಸ್ತಿಯ ಸಾಧನೆ ಮಾಡಿದ್ದರು.
Question 8 |
8. ಗಣಿತಶಾಸ್ತ್ರಕ್ಕಾಗಿ ನೀಡಲಾಗುವ “2016 SASTRA ರಾಮಾನುಜಂ” ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ಕೈಸಾ ಮಟೊಮಕಿ | |
ಮಕ್ಸಿಮ್ ರಡ್ಝಿವಿಲ್ | |
ನಸೀರ್ ಶರ್ಮಾ | |
ಅ & ಆ |
2016 SASTRA ರಾಮಾನುಜಂ ಪ್ರಶಸ್ತಿಯನ್ನು ಈ ಬಾರಿ ಫಿನ್ಲ್ಯಾಂಡ್ ನ ಟುರ್ಕು ವಿಶ್ವವಿದ್ಯಾಲಯದ ಡಾ. ಕೈಸಾ ಮಟೊಮಕಿ ಮತ್ತು ಕೆನಡಾದ ಮ್ಯಾಕ್ ಗಿಲ್ ವಿಶ್ವವಿದ್ಯಾಲಯದ ಡಾ. ಮಕ್ಸಿಮ್ ರಡ್ಝಿವಿಲ್ ರವರಿಗೆ ಜಂಟಿಯಾಗಿ ನೀಡಲಾಗಿದೆ. ತಮಿಳುನಾಡಿನ ಕುಂಭಕೋಣಂನ SASTRA ವಿಶ್ವವಿದ್ಯಾಲಯದಲ್ಲಿ ನಡೆದ ನಂಬರ್ ಥಿಯರಿ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ನೀಡಲಾಯಿತು.
Question 9 |
9. ರಣಜಿ ಕ್ರಿಕೆಟ್ ಪಂದ್ಯದಲ್ಲಿ ಅಜೇಯ 359 ರನ್ ಗಳಿಸಿ ದಾಖಲೆ ನಿರ್ಮಿಸಿದ “ಸಮಿತ್ ಗೋಹೆಲ್” ಯಾವ ರಾಜ್ಯದವರು?
ರಾಜಸ್ತಾನ | |
ಹರಿಯಾಣ | |
ಗುಜರಾತ್ | |
ಪಂಜಾಬ್ |
ಗುಜರಾತ್ ಆಟಗಾರ ಸಮಿತ್ ಗೋಹೆಲ್ ಬರೋಬ್ಬರಿ 359 ರನ್ ಗಳಿಸಿ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಹೊಸ ದಾಖಲೆಯೊಂದು ನಿರ್ಮಿಸಿದರು. ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ, ಒಡಿಶಾ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ 26 ವರ್ಷದ ಸಮಿತ್ ಗೋಹೆಲ್ 723 ಎಸೆತಗಳಲ್ಲಿ 1 ಸಿಕ್ಸರ್, 45 ಬೌಂಡರಿ ಒಳಗೊಂಡ ಅಜೇಯ 359 ರನ್ ಗಳಿಸಿದ ಸಮಿತ್, ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 117 ವರ್ಷದ ದಾಖಲೆ ಹಿಂದಿಕ್ಕಿದ್ದಾರೆ.1899 ರಲ್ಲಿ ಸಾಮರ್ ಸೆಟ್ ವಿರುದ್ಧ ಸರ್ರೆ ತಂಡದ ಬಾಬ್ಬಿ ಅಬೆಲ್ 357 ರನ್ ಗಳಿಸಿದ್ದು, ಅದನ್ನು ಗೋಹೆಲ್ ಹಿಂದಿಕ್ಕಿದ್ದಾರೆ.
Question 10 |
10. ವಿಶ್ವದ ಒಟ್ಟಾರೆ ಭೌಗೋಳಿಕ ಪ್ರದೇಶದಲ್ಲಿ ಭಾರತದ ವಿಸ್ತೀರ್ಣ ಶೇ ______ರಷ್ಟಿದೆ?
3.0% | |
2.4% | |
2.8% | |
3.5% |
[button link=”http://www.karunaduexams.com/wp-content/uploads/2016/12/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್272016.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
dsghhjjjjjjjjjjjjjjjjjjjjjjjjjjjjjjjjjjjjfhgjvfk