ಭಾರತ-ಕಿರ್ಗಿಸ್ತಾನ್ ನಡುವಿನ ಕೃಷಿ ಸಹಕಾರ ಒಡಂಬಡಿಕೆ ಒಪ್ಪಂದಕ್ಕೆ ಕೇಂದ್ರ ಸಂಪುಟ ಒಪ್ಪಿಗೆ
ಭಾರತ ಮತ್ತು ಕಿರ್ಗಿಸ್ತಾನ್ ನಡುವಿನ ಕೃಷಿ ಮತ್ತು ಆಹಾರ ಸಂಬಂಧಿತ ಕೈಗಾರಿಕೆ ಕ್ಷೇತ್ರದಲ್ಲಿ ಸಹಕಾರ ಮೇಲಿನ ಒಡಂಬಡಿಕೆ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಉದ್ದೇಶಿತ ಒಪ್ಪಂದವು ಉಭಯ ದೇಶಗಳ ನಡುವೆ ಕೃಷಿ ಮತ್ತು ಆಹಾರ ಸಂಬಂಧಿತ ಕೈಗಾರಿಕೆ ಕ್ಷೇತ್ರದಲ್ಲಿ ವಿವಿಧ ಚಟುವಟಿಕೆಗಳನ್ನು ಒಳಗೊಂಡಿರಲಿದೆ.
ಒಡಂಬಡಿಕೆಯ ಪ್ರಮುಖಾಂಶಗಳು:
- ಪ್ರಾಣಿ ತಳಿ ಅಭಿವೃದ್ದಿ, ಹಕ್ಕಿ ಜ್ವರ, ಕಾಲು ಮತ್ತು ಬಾಯಿ ರೋಗ ಮತ್ತು ಪಶು ಔಷಧಿ ಕೇತ್ರಗಳಲ್ಲಿ ಪರಸ್ಪರ ಮಾಹಿತಿ ಹಾಗೂ ಅನುಭವವನ್ನು ವಿನಿಮಯ ಮಾಡಿಕೊಳ್ಳುವುದು.
- ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬೀಜ ಉತ್ಪಾದನೆ, ಬೀಜ ಪ್ರಮಾಣೀಕರಣ ಹಾಗೂ ವಿವಿಧ ನೀರಾವರಿ ವಿಧಾನಗಳ ಮೇಲೆ ಮಾಹಿತಿ ವಿನಿಮಯನ್ನು ಒಡಂಬಡಿಕೆ ಒಳಗೊಂಡಿದೆ.
- ಉಭಯ ದೇಶಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಕಾರ್ಯ ಪಡೆಯನ್ನು ರಚಿಸಲು ಒಡಂಬಡಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಉಭಯ ದೇಶಗಳ ನಡುವೆ ಪರಸ್ಪರ ಸಹಕಾರ, ಒಡಂಬಡಿಕೆ ಅನುಷ್ಟಾನ ಮತ್ತು ಅನುಷ್ಟಾನಗೊಳಿಸಲು ಎದುರಾಗುವ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯವನ್ನು ಈ ಜಂಟಿ ಕಾರ್ಯ ಪಡೆ ಮಾಡಲಿದೆ.
ಇದಲ್ಲದೇ ಭಾರತ ಮತ್ತು ಕಿರ್ಗಿಸ್ತಾನ ನಡುವೆ ಪ್ರವಾಸೋಧ್ಯಮ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಫೋರ್ಬ್ಸ್ ನಿಯತಕಾಲಿಕೆ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿಗೆ 9ನೇ ಸ್ಥಾನ
ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಈ ವರ್ಷದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ 74 ಜನ ಪ್ರಭಾವಿ ನಾಯಕರ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಆರ್ಥಿಕ ಸಂಪನ್ಮೂಲ, ಅಧಿಕಾರ ಬಳಕೆ ಹಾಗೂ ಪ್ರಭಾವ ಬೀರುವ ಜನಸಂಖ್ಯೆ ಆಧರದ ಮೇಲೆ ಈ ಸೂಚ್ಯಂಕವನ್ನು ಬಿಡುಗಡೆಗೊಳಿಸಲಾಗುತ್ತದೆ.
- 2016ನೇ ಸಾಲಿನ ಫೋರ್ಬ್ಸ್ ನಿಯತಕಾಲಿಕೆ ಪ್ರಭಾವಿ ಪಟ್ಟಿಯಲ್ಲಿ ರಷ್ಯಾದ ವ್ಲಾದಿಮಿರ್ ಪುಟಿನ್ ಪ್ರಥಮ ಸ್ಥಾನದಲ್ಲಿದ್ದಾರೆ. ಪುಟಿನ್ ಅವರು ಸತತವಾಗಿ ನಾಲ್ಕನೇ ಬಾರಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
- ಅಮೆರಿಕದ ಮೊದಲ ಬಿಲಿನಿಯೇರ್ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ರವರು ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 2015ನೇ ಸಾಲಿನ ಪಟ್ಟಿಯಲ್ಲಿ ಟ್ರಂಪ್ 72ನೇ ಸ್ಥಾನದಲ್ಲಿದ್ದಾರೆ. ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುತ್ತಿರುವ ಬರಾಕ್ ಒಬಾಮಾ ರವರು 2ನೇ ಸ್ಥಾನದಿಂದ 48ನೇ ಸ್ಥಾನಕ್ಕೆ ಕುಸಿದ್ದಿದ್ದಾರೆ.
- ಜರ್ಮನ್ ಚಾನ್ಸೆಲರ್ ಏಂಜೆಲ್ ಮಾರ್ಕೆಲ್ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಪಟ್ಟಿಯಲ್ಲಿರುವ ಹೊಸ ಹೆಸರು:
- ಥೆರೆಸಾ ಮೇ (13), ಟ್ರವಿಸ್ ಕಲನಿಕ್ (64), ಬಾಬ್ ಐಗೆರ್ (67), ಮೈಕಿ ಪೆನ್ಸ್ (69), ರೊಡ್ರಿಗೊ ಡ್ಯುಟರ್ಟೆ (70), ಶೆಲ್ಡನ್ ಅಡೆಲ್ಸನ್ (72), ಅಂಟೊನಿಯೊ ಗುಟೆರಸ್ಸ್ (36) ಮತ್ತು ರಿಸೆಪ್ ಎರ್ಡೊಗನ್ (56).
- ಪ್ರಧಾನಿ ಮೋದಿಯವರು ವಿಶ್ವದ ಅತ್ಯಂತ ಪ್ರಭಾವಿ 10 ಜನರ ಪೈಕಿ ಮೋದಿ ಕೂಡ ಒಬ್ಬರಾಗಿದ್ದು, ಭಾರತದಲ್ಲಿ3 ಬಿಲಿಯನ್ ಗೂ ಹೆಚ್ಚು ಜನರು ಮೋದಿಯವರನ್ನು ಇಷ್ಟಪಡುತ್ತಾರೆಂದು ಫೋರ್ಬ್ಸ್ ವರದಿ ಮಾಡಿದೆ.
ಫೋರ್ಬ್ಸ್ ನಿಯತಕಾಲಿಕೆ ಪ್ರಭಾವ ಶಾಲಿಗಳ ಪಟ್ಟಿ:
ಫೋರ್ಬ್ಸ್ ಪ್ರಭಾವ ಶಾಲಿಗಳ ಪಟ್ಟಿಯನ್ನು 2009 ರಿಂದ ಹೊರತರಲಾಗುತ್ತಿದೆ. ಅಂದಿನಿಂದ ವಾರ್ಷಿಕವಾಗಿ ಬಿಡುಗಡೆಗೊಳಿಸಲಾಗುತ್ತಿದೆ. ಪ್ರತಿ 100 ಮಿಲಿಯನ್ ಜನರಿಗೆ ಒಬ್ಬರು ಅಥವಾ ಒಬ್ಬ ನಾಯಕನನ್ನು ಆಯ್ಕೆಮಾಡಲಾಗುತ್ತಿದೆ.
ಗ್ರಾಮೀಣಾಭಿವೃದ್ದಿ ಸಚಿವಾಲಯ ಮತ್ತು ಆಹಾರ ಮತ್ತು ಕೃಷಿ ಸಂಸ್ಥೆ (FAO) ಒಡಂಬಡಿಕೆಗೆ ಒಪ್ಪಿಗೆ
ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವಾಲಯ ಮತ್ತು ಆಹಾರ ಮತ್ತು ಕೃಷಿ ಸಂಸ್ಥೆ(FAO) ಒಡಂಬಡಿಕೆ ಒಪ್ಪಂದವನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ದೇಶದಲ್ಲಿ ಗ್ರಾಮೀಣಾಭಿವೃದ್ದಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯನ್ನಾಗಿಸುವುದು ಒಡಂಬಡಿಕೆಯ ಪ್ರಮುಖ ಉದ್ದೇಶವಾಗಿದೆ.
ಜಂಟಿ ತಾಂತ್ರಿಕ ಮತ್ತು ದಕ್ಷಿಣ-ದಕ್ಷಿಣ ಸಹಕಾರ ಮೇಲಿನ ಈ ಆಂತರಿಕ ಸರ್ಕಾರ ಒಪ್ಪಂದವು ಹಲವು ಚಟುವಟಿಕೆಗಳ ಮೂಲಕ ಗ್ರಾಮೀಣ ಬಡತನ ನಿರ್ಮೂಲನೆಗೆ ಬೆಂಬಲಿಸಲಿದೆ. ಈ ಮೂಲಕ ಗ್ರಾಮೀಣ ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲು ಹಾಗೂ ಗ್ರಾಮೀಣ ಬಡವರು ನೈಸರ್ಗಿಕ ಸಂಪನ್ಮೂಲವನ್ನು ಸುಗಮವಾಗಿ ಬಳಕೆ ಮಾಡುವಂತೆ ಮಾಡಲು ಗುರಿ ಹೊಂದಲಾಗಿದೆ.
ಒಡಂಬಡಿಕೆಯ ಪ್ರಮುಖಾಂಶಗಳು:
- ಗ್ರಾಮೀಣಾಭಿವೃದ್ದಿ ಯೋಜನೆ/ಕಾರ್ಯಕ್ರಮಗಳ ಪರಿಣಾಮವನ್ನು ಉತ್ತಮ ಪಡಿಸುವ ಗುರಿಯನ್ನು ಒಪ್ಪಂದದಡಿ ಹೊಂದಲಾಗಿದೆ.
- ದೀನ ದಯಾಳ್ ಅಂತ್ಯೋದಯ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (DAY-NRLM)ದ ಅನುಭವ ಮೂಲಕ ಸೌಥ್-ಸೌಥ್ ಕೊ-ಆಪರೇಶನ್ ಗೆ ಅನುವು ಮಾಡಲಿದೆ.
- ಇದಲ್ಲದೇ, ಉದ್ಯೋಗ ವಿಭಿನ್ನತೆ, ಗ್ರಾಮೀಣ ಯುವಕರ ಕೌಶಲ್ಯ ಅಭಿವೃದ್ದಿ, ಸಾಮಾಜಿಕ ರಕ್ಷಣೆ ಮತ್ತು ವಿಪತ್ತು ನಿರ್ವಹಣೆ ತಂತ್ರಗಾರಿಕೆಯನ್ನು ಬಲಿಷ್ಠಗೊಳಿಸುವ ಗುರಿಯನ್ನು ಒಪ್ಪಂದಡಿ ಹೊಂದಲಾಗಿದೆ.