ಗ್ರೇಟರ್ ಮೆಕಾಂಗ್ ವಲಯದಲ್ಲಿ 163 ಹೊಸ ಪ್ರಭೇದಗಳು ಪತ್ತೆ
ಆಗ್ನೇಯ ಏಷ್ಯಾದ ಪರಿಸರ ವೈವಿಧ್ಯತೆ ಪ್ರದೇಶವಾದ ಗ್ರೇಟರ್ ಮೆಕಾಂಗ್ ಪ್ರದೇಶದಲ್ಲಿ 163 ಹೊಸ ಪ್ರಬೇಧಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ಹೊಸ ಪ್ರಭೇದಗಳಲ್ಲಿ 3 ಸಸ್ತನಿಗಳು, 9 ಉಭಯಚರಗಳು, 11 ಮೀನುಗಳು, 14 ಸರೀಸೃಪಗಳು ಹಾಗೂ 143 ಸಸ್ಯಗಳನ್ನು ಪತ್ತೆಹಚ್ಚಲಾಗಿದೆ. ಕಾಂಬೋಡಿಯಾ, ಮಲೇಷಿಯಾ, ಲಾವೊಸ್, ವಿಯೆಟ್ನಾಂ ಮತ್ತು ಥಾಯ್ಲೆಂಡ್ ನಲ್ಲಿ ಈ ಪ್ರಭೇದಗಳು ಪತ್ತೆಯಾಗಿವೆ. ವಿಶ್ವ ವನ್ಯಜೀನಿ ಫಂಡ್ ವರದಿಯಲ್ಲಿ ಹೊಸ ಪ್ರಭೇದಗಳ ಅನ್ವೇಷಣೆ ಬಗ್ಗೆ ಪ್ರಕಟಿಸಲಾಗಿದೆ.
ಪ್ರಮುಖಾಂಶಗಳು:
- ಡ್ರಾಗನ್ ತರ ಕೊಂಬುಗಳನ್ನು ಹೊಂದಿರುವ ಹೊಸ ಹಲ್ಲಿ ಪ್ರಭೇದ “Acanthosaura phuketensis” ಅನ್ನು ಥಾಯ್ಲೆಂಡ್ ನ ಪ್ರಸಿದ್ದ ಪ್ರವಾಸಿ ತಾಣ “ಐಲ್ಯಾಂಡ್ ಆಫ್ ಪುಕೆಟ್”ನಲ್ಲಿ ಪತ್ತೆಹಚ್ಚಲಾಗಿದೆ.
- ಬೆರಳ ತುದಿ ಮೇಲೆ ಹೊಂದುಕೊಳ್ಳುವ ಹೊಸ ಕಪ್ಪೆ ಪ್ರಭೇದಗಳ “Leptolalax isos ಅನ್ನು ಕಾಂಬೋಡಿಯಾ ಮತ್ತು ವಿಯೆಟ್ನಾಂನಲ್ಲಿ ಕಂಡುಹಿಡಿಯಲಾಗಿದೆ.
- ಕಣ್ಣು ಸೆಳೆಯುವ Parafimbros lao” ಹೊಸ ಹಾವಿನ ಪ್ರಬೇಧ ಬೆಳಕಿಗೆ ಬಂದಿದ್ದು, ಈ ಹಾವು ತಲೆಯ ಮೇಲೆ ಕಾಮನಬಿಲ್ಲು ಬಣ್ಣಗಳನ್ನು ಹೊಂದಿರುವ ಚರ್ಮವನ್ನು ಹೊಂದಿದೆ. ಇದನ್ನು ಉತ್ತರ ಲಾವೊಸ್ ನಲ್ಲಿ ಪತ್ತೆಹಚ್ಚಲಾಗಿದೆ.
ಗ್ರೇಟರ್ ಮೆಕಾಂಗ್ ಪ್ರದೇಶ:
- ಗ್ರೇಟರ್ ಮೆಕಾಂಗ್ ಪ್ರದೇಶ ವಿಶ್ವ ಜೀವವೈದ್ತತೆಯನ್ನು ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ. ಅಪಾರ ಜೀವ ಸಂಕುಲವನ್ನು ಹೊಂದಿರುವ ಈ ಪ್ರದೇಶ ವಿಶ್ವದ ಪ್ರಮುಖ ಜೀವ ಸಂರಕ್ಷಣೆ ತಾಣವಾಗಿದೆ.
- ಗ್ರೇಟರ್ ಮೆಕಾಂಗ್ ಪ್ರದೇಶ ನೈರುತ್ಯ ಚೀನಾ, ವಿಯೆಟ್ನಾಂ, ಕಾಂಬೋಡಿಯಾ, ಲಾವೊಸ್, ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ನಲ್ಲಿ ಕಂಡುಬರುತ್ತದೆ. ಮೆಕಾಂಗ್ ನದಿಯ ಹರಿಯುವಿಕೆ ಈ ಪ್ರದೇಶದಲ್ಲಿ ಜೀವವೈವಿಧ್ಯತೆ ಉಳಿವಿಗೆ ಕಾರಣವಾಗಿದೆ.
- ಈ ಪ್ರದೇಶದಲ್ಲಿ ಸರಿ ಸುಮಾರು 20,000 ಹೊಸ ಸಸ್ಯ ಪ್ರಭೇದ, 1,300 ಮೀನು ಪ್ರಭೇದ, 1,200 ಪಕ್ಷಿಗಳು, 800 ಬಗೆಯ ಸರಿಸೃಪಗಳು ಹಾಗೂ 430 ಸಸ್ತನಿ ಪ್ರಭೇದಗಳನ್ನು ಕಾಣಬಹುದು.
ಭಾರತದ ಮೊದಲ ಭಾರತೀಯ ಕೌಶಲ್ಯ ಸಂಸ್ಥೆಗೆ ಶಂಕು ಸ್ಥಾಪನೆ
ಪ್ರಧಾನಿ ನರೇಂದ್ರ ಮೋದಿರವರು ಭಾರತದ ಮೊದಲ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ ಗೆ (ಐಐಎಸ್) ಉತ್ತರಪ್ರದೇಶದ ಖಾನ್ಪುರದಲ್ಲಿ ಶಂಕು ಸ್ಥಾಪನೆ ನೆರವೇರಿಸಿದರು. ಭಾರತವನ್ನು ವಿಶ್ವದ ಕೌಶಲ್ಯ ರಾಜಧಾನಿಯನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ. ಇದೇ ವೇಳೆ ಕೇಂದ್ರ ಕೌಶಲ್ಯ ಅಭಿವೃದ್ದಿ ಮತ್ತು ಉದ್ಯಮ ಸಚಿವಾಲಯದ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡುವ “ಕೌಶಲ್ಯ ಪ್ರದರ್ಶಿನಿ”ಯನ್ನು ಮೋದಿ ಉದ್ಘಾಟಿಸಿದರು.
ಭಾರತೀಯ ಕೌಶಲ್ಯ ಸಂಸ್ಥೆ (ಐಐಎಸ್):
- ಐಐಎಸ್ ಅನ್ನು ಕೇಂದ್ರ ಕೌಶಲ್ಯ ಅಭಿವೃದ್ದಿ ಸಚಿವಾಲಯವು ಸಿಂಗಾಪುರದ ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಎಜುಕೇಷನ್ ಸಹಯೋಗದೊಂದಿಗೆ ಆರಂಭಿಸಲಿದೆ.
- ಪ್ರಧಾನಿ ನರೇಂದ್ರ ಮೋದಿ ರವರು ಸಿಂಗಾಪುರದ ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಎಜುಕೇಷನ್ ಗೆ ಭೇಟಿ ನೀಡಿದ್ದ ವೇಳೆ ಐಐಎಸ್ ಸ್ಥಾಪಿಸುವ ಬಗ್ಗೆ ಚಿಂತನೆ ಮಾಡಿದ್ದರು.
- ದೇಶದ ಯುವಜನತೆಯನ್ನು ಸ್ವಾವಲಂಭಿಗಳನ್ನಾಗಿಸುವುದು ಮತ್ತು ಸ್ವ-ಉದ್ಯೋಗಿಗಳನ್ನಾಗಿಸುವುದು ಸಂಸ್ಥೆಯ ಸ್ಥಾಪನೆಯ ಉದ್ದೇಶವಾಗಿದೆ.
- ಕೇಂದ್ರ ಕೌಶಲ್ಯ ಅಭಿವೃದ್ದಿ ಸಚಿವಾಲಯವು ದೇಶದ ವಿವಿದೆಡೆ ಇಂತಹದೇ ಆರು ಸಂಸ್ಥೆಗಳನ್ನು ಮುಂದಿನ ದಿನಗಳಲ್ಲಿ ಸ್ಥಾಪಿಸಲಿದೆ.
ಖ್ಯಾತ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಹರಿದ್ವಾರದಲ್ಲಿ ಆನಾವರಣ
ಹೆಸರಾಂತ ತಮಿಳು ಕವಿ ಹಾಗೂ ತತ್ವಜ್ಞಾನಿ ಸಂತ ತಿರುವಳ್ಳುವರ್ ರವರ 12 ಅಡಿ ಎತ್ತರದ ಕಲ್ಲಿನ ಪ್ರತಿಮೆಯನ್ನು ಹರಿದ್ವಾರದ ಮೇಳ ಭವನದಲ್ಲಿ ಉತ್ತರಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ರವರು ಉದ್ಘಾಟಿಸಿದರು. ಭಾರತೀಯ ಜನತಾ ಪಕ್ಷದ ಮಾಜಿ ಸಂಸದ ತರುಣ್ ವಿಜಯ್ ರವರು ತಿರುವಳ್ಳುವರ್ ರವರ ಪ್ರತಿಮೆಯ ಪ್ರತಿಷ್ಠಾಪನ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದ್ದ ಮೊದಲಿಗರು. ಈ ಮುಂಚೆ ಪ್ರತಿಮೆಯನ್ನು “ಹರಿ ಕಾ ಪೌರಿ” ಹತ್ತಿರ ಗಂಗಾ ನದಿಯ ದಡದ ಮೇಲೆ ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಲಾಗಿತ್ತು ಆದರೆ ಸಾಧು ಸಂತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಸ್ಥಳವನ್ನು ಬದಲಾಯಿಸಲಾಯಿತು.
ತಿರುವಳ್ಳುವರ್ ಬಗ್ಗೆ:
- ಕವಿ ಹಾಗೂ ತತ್ವಜ್ಞಾನಿ ಸಂತ ತಿರುವಳ್ಳುವರ್ ರವರು 3ನೇ ಶತಮಾನ ಹಾಗೂ 1ನೇ ಶತಮಾನದ ನಡುವೆ ಬದುಕಿದ್ದರು ಎಂದು ನಂಬಲಾಗಿದೆ. ಈ ನಂಬಿಕೆ ಅವರ ಬರಹಗಳ ಭಾಷೆಯ ಮೇಲೆ ವಿಶ್ಲೇಷಣೆ ಆಧರಿಸಿದೆ. ಆದರೆ ಅವರು ವಾಸಿಸುತ್ತಿದ್ದ ಜಾಗ ಹಾಗೂ ಯಾವಾಗ ವಾಸಿಸುತ್ತಿದ್ದರು ಎನ್ನುವ ಬಗ್ಗೆ ಯಾವುದೇ ಐತಿಹಾಸಿಕ ಪುರಾವೆಗಳು ಲಭ್ಯವಿಲ್ಲ.
- ತಿರುವಳ್ಳುವರ್ ರವರು ಕನ್ಯಾಕುಮಾರಿ ಜಿಲ್ಲೆಯ ತಿರುಣೈನರ್ ಕುರುಚಿ ಅಥವಾ ಚೆನ್ನೈ ತಿರು ಮೈಲಾಯಿ ಯಲ್ಲಿ ಜನಿಸಿದ್ದರು ಎಂಬುದು ನಂಬಿಕೆ.
- ತಮಿಳು ಭಾಷೆಯ ಪ್ರಾಚೀನ ಸಾಹಿತ್ಯದ ಶ್ರೇಷ್ಠ ಪುಸ್ತಕವಾದ “ತಿರುಕ್ಕುರಳಾ” ಪುಸ್ತಕವನ್ನು ರಚಿಸಿದವರು ತಿರುವಳ್ಳುವರ್.
- ತಿರುಕ್ಕುರಳ್ 1330 ದ್ವಿಪದಿಗಳು ಅಥವಾ ಕುರಲ್ ಒಳಗೊಂಡ ಶಾಸ್ತ್ರೀಯ ತಮಿಳು ಸಂಗಮ ಸಾಹಿತ್ಯ. ಈ ಪುಸ್ತಕವನ್ನು ಐದನೇ ವೇದ ಅಥವಾ ತಮಿಳು ಭೂಮಿಯ ಬೈಬಲ್ ಎಂದೇ ಕರೆಯಲಾಗುತ್ತಿದೆ.
- ತಿರುವಳ್ಳುವರ್ ರವರ 133 ಅಡಿ ಎತ್ತರದ ಪ್ರತಿಮೆಯನ್ನು ಕನ್ಯಾಕುಮಾರಿಯಲ್ಲಿ ಸ್ಥಾಪಿಸಲಾಗಿದೆ. ಅಲ್ಲದೇ ಲಂಡನ್ ನಲ್ಲಿಯು ಇವರ ಪ್ರತಿಮೆಯನ್ನು ಈಗಾಗಲೇ ಸ್ಥಾಪಿಸಲಾಗಿದೆ.