ಸಾಹಿತಿ ಬೊಳುವಾರು ರವರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕನ್ನಡದ ಹಿರಿಯ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಅವರನ್ನು 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಕುಂಞಿ ರವರ ‘ಸ್ವಾತಂತ್ರ್ಯದ ಓಟ’ ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದೆ.  ಡಾ.ಎಚ್.ಸಿ. ಬೋರಲಿಂಗಯ್ಯ, ಎಲ್.ಹನುಮಂತಯ್ಯ ಹಾಗೂ ಎಸ್.ಜಿ.  ಸಿದ್ಧರಾಮಯ್ಯ ಅವರಿದ್ದ ಆಯ್ಕೆ ಸಮಿತಿಯು ಕನ್ನಡ ವಿಭಾಗದಿಂದ ಬೊಳುವಾರು ಅವರ ಈ ಕಾದಂಬರಿಯನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿತ್ತು.

ಬೊಳುವಾರು ಬಗ್ಗೆ:

  • ಬೊಳುವಾರು ಮಹಮ್ಮದ್ ಕುಂಞಿ ರವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಪ್ರಸ್ತುತ ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕನ್ನಡ ಸಾಹಿತ್ಯದ ಮೂಲಕ ಮುಸ್ಲಿಂ ಜೀವನ ಶೈಲಿಯನ್ನು ಪರಿಚಯಿಸಿರುವ ಇವರ ನೂರಾರು ಕತೆಗಳು ಕನ್ನಡದ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಭಾರತದ ಇತರ ಭಾಷೆಗಳಿಗೂ ಇವರ ಕತೆಗಳು ಅನುವಾದಗೊಂಡಿವೆ.
  • 1997ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪಡೆದಿರುವ ಇವರ ಕೃತಿಗಳು 1983 ಮತ್ತು 1992ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕ ವಿಭಾಗದ ಬಹುಮಾನ ಪಡೆದಿವೆ.

ಪ್ರಶಸ್ತಿಗಳು:

ಕೋಲ್ಕತದ ಭಾಷಾ ಸಂಸ್ಥಾನವು 1983ರಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದು, 1991ರಲ್ಲಿ ‘ಆರ್ಯಭಟ’, 1992ರಲ್ಲಿ ‘ಪರಶುರಾಮ’, 1994ರಲ್ಲಿ ದೆಹಲಿಯ ಕಥಾ ಪ್ರಶಸ್ತಿ, 2010ರಲ್ಲಿ ‘ತೌಳವ’ ಪ್ರಶಸ್ತಿಗಳನ್ನೂ ಬೊಳುವಾರು ಗಳಿಸಿದ್ದಾರೆ.ಚಲನಚಿತ್ರ ಕ್ಷೇತ್ರದಲ್ಲೂ ಕಾರ್ಯ ನಿರ್ವಹಿಸಿರುವ ಬೊಳುವಾರು ಅವರ ‘ಮುನ್ನುಡಿ’ ಮತ್ತು ‘ಅತಿಥಿ’ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿವೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ:

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಭಾರತದ ಒಟ್ಟು 24 ಭಾಷೆಗಳಲ್ಲಿ ಪ್ರಕಟವಾಗಿರುವ ಕೃತಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಈ ಕಾವ್ಯ ವಿಭಾಗದ ಎಂಟು, ಸಣ್ಣ ಕಥಾ ಪ್ರಕಾರದ ಏಳು, ಕಾದಂಬರಿ ಪ್ರಕಾರದ ಐದು, ವಿಮರ್ಶಾ ವಿಭಾಗದ ಎರಡು ಹಾಗೂ ಪ್ರಬಂಧ ಮತ್ತು ನಾಟಕ ವಿಭಾಗದ ತಲಾ ಒಂದು ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯೂ ಒಂದು ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಕನ್ನಡದ ಹಿರಿಯ ಕವಿ ಕೆ.ವಿ. ತಿರುಮಲೇಶ್‌ ಅವರು 2015ರ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಅವರ ‘ಅಕ್ಷಯ ಕಾವ್ಯ’ ಕೃತಿಗೆ ಪ್ರಶಸ್ತಿಯನ್ನು ನೀಡಲಾಗಿತ್ತು.

ಘನ ಇಂಧನ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾಯಿಸಿದ ಜಪಾನ್

ಜಪಾನ್ ಏರೋಸ್ಪೇಸ್ ಎಕ್ಸಪ್ಲೋರೇಶನ್ ಏಜೆನ್ಸಿ (JAXA) ಘನ ಇಂಧನ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾಯಿಸಿದೆ. ಎಪ್ಸಿಲಾನ್-2 (Epsilon-2) ಹೆಸರಿನ ಈ ರಾಕೆಟ್ ಅನ್ನು ದಕ್ಷಿಣ ಜಪಾನಿನ ಉಚಿನೌರ ಸ್ಪೇಸ್ ಸೆಂಟರ್ ನಿಂದ ಉಡಾವಣೆ ಮಾಡಲಾಗಿದೆ. ಈ ರಾಕೆಟ್ 26 ಮೀಟರ್ ಉದ್ದವಿದೆ. ಎಪ್ಸಿಲಾನ್ ರಾಕೆಟ್ ಬಳಸಿ ಭೂಮಿಯ ಸುತ್ತ ವಿಕಿರಣ ಪಟ್ಟಿಯನ್ನು ಅಧ್ಯಯನ ನಡೆಸುವ ERG (Energization and Radiation in Geospace) ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು.

ಪ್ರಮುಖಾಂಶಗಳು:

  • ERG ಉಪಗ್ರಹ ಭೂಮಿಯ ಸುತ್ತ ಅಂಡಕಾರದ ಕಕ್ಷೆಯಲ್ಲಿ ಭೂಮಿಗೆ ಅತ್ಯಂತ ಸಮೀಪವಾಗಿ ಅಂದರೆ 350 ಕಿ.ಮೀ ಅಂತರದಲ್ಲಿ ಹಾಗೂ ಭೂಮಿಯಿಂದ 30,000 ಕಿ.ಮೀ ದೂರದಲ್ಲಿ ಸುತ್ತಲಿದೆ.
  • ಈ ಕಕ್ಷೆಯಲ್ಲಿ ಉಪಗ್ರಹವು “ವ್ಯಾನ್ ಅಲ್ಲೆನ್ ರೇಡಿಯೇಷನ್ ಬೆಲ್ಟ್ (Van Allen Radiation Belts)” ಚಲಿಸುತ್ತದೆ. ಈ ಭಾಗದಲ್ಲಿ ಭೂಮಿಯ ಕಾಂತಕ್ಷೇತ್ರ ವೇಗವಾಗಿ ಚಲಿಸುವ ಎಲೆಕ್ಟ್ರಾನ್ ಹಾಗೂ ಸೂಕ್ಷ ಕಣಗಳನ್ನು ಸೆಳೆದಿರುತ್ತದೆ.
  • ಈ ಎಲೆಕ್ಟ್ರಾನ್ ಕಣಗಳು ಉಪಗ್ರಹದ ಕಂಪ್ಯೂಟರ್ ವ್ಯವಸ್ಥೆಯನ್ನು ಹಾನಿ ಮಾಡುವುದಲ್ಲದೇ, ಗಗನಯಾತ್ರಿಗಳಿಗೂ ವಿಕಿರಣ ಅಪಾಯವನ್ನು ತಂದೊಡ್ಡುತ್ತವೆ.
  • ERG ಉಪಗ್ರಹವು ವಿಕಿರಣ ಪಟ್ಟಿಯನ್ನು ಅಧ್ಯಯನ ನಡೆಸಲು ಒಂಬತ್ತು ಉಪಕರಣಗಳನ್ನು ಒಳಗೊಂಡಿದೆ.

ಎಪ್ಸಿಲಾನ್-2 ರಾಕೆಟ್ ಹೊಸ ತಲೆಮಾರಿನ ಘನ ಇಂಧನ ರಾಕೆಟ್ ಆಗಿದ್ದು, ಇದರಿಂದ ಉಡಾವಣ ವೆಚ್ಚದ 1/3 ರಷ್ಟು ಕಡಿಮೆಯಾಗಲಿದೆ. ಈ ಉಳಿತಾಯದಿಂದ ಹಲವು ಸಂಪರ್ಕ ಮತ್ತು ಹವಾಮಾನ ಉಪಗ್ರಹಗಳನ್ನು ಉಡಾಯಿಸಬಹುದಾಗಿದೆ.

ಕನ್ನಡ ಚಿತ್ರರಂಗದ ಹಿರಿಯ ನಟ ಚೇತನ್ ರಾಮ್ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಟ ಚೇತನ ರಾಮ್ ಮೈಸೂರಿನಲ್ಲಿ ನಿಧನರಾದರು.ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಯಿಸಿರುವ ಚೇತನ್ ರಾಮ್, ಖ್ಯಾತ ಚಿತ್ರ ನಟರಾದ ವಿಷ್ಣುವರ್ಧನ್, ರಾಜ್ ಕುಮಾರ್, ಅಂಬರೀಶ್ ಸೇರಿದಂತೆ ಹಲವು ನಟರ ಜೊತೆ ಅಭಿನಯಿಸಿದ್ದಾರೆ.

  • ಡಾ. ರಾಜ್​ಕುಮಾರ್ ಅಭಿನಯದ ‘ಮಾರ್ಗದರ್ಶಿ’ ಚಿತ್ರದ ಮೂಲಕ 1968ರಲ್ಲಿ ಚಿತ್ರರಂಗ ಪ್ರವೇಶಿಸಿದ ಅವರು ಸುಮಾರು 350 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
  • ಚೇತನ್ ರಾಮರಾವ್ ಅವರಿಗೆ ರಾಜ್ಯೋತ್ಸವ, ಕಲಾರತ್ನ, ಕಲಾಭೀಷ್ಮ, ಕಲಾದ್ರೋಣ, ನಟ ಚತುರ ಮುಂತಾದ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು.
  • ಆಪರೇಷನ್ ಡೈಮಂಡ್ ರಾಕೆಟ್, ಹುಲಿಯ ಹಾಲಿನ ಮೇವು, ಆಪ್ತರಕ್ಷಕ, ಒಲವೇ ಗೆಲುವು, ಬಾಳು ಬೆಳಗಿತು, ರಾಜ ನನ್ನ ರಾಜ, ಲಗ್ನ ಪತ್ರಿಕೆ ಮುಂತಾದ ಚಿತ್ರಗಳಲ್ಲಿ ಅವರು ನಟಿಸಿದ್ದರು.

Leave a Comment

This site uses Akismet to reduce spam. Learn how your comment data is processed.