ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -23

Question 1

1. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

I) 17ನೇ ರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿ ಕಾರ್ಯಕ್ರಮ ನಂಜನಗೂಡಿನ ಅಡಕನಹಳ್ಳಿಯಲ್ಲಿ ನಡೆಯಿತು

II) ಕರ್ನಾಟಕದಲ್ಲಿ ಇದುವರೆಗೆ ಮೂರು ಬಾರಿ ಜಾಂಬೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ

III) ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿ 1909 ರಲ್ಲಿ ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಆರಂಭಗೊಂಡಿತು.

ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
I & II
B
II & III
C
I & III
D
I, II & III
Question 1 Explanation: 
I, II & III
Question 2

2. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು 2017 ಅನ್ನು ಯಾವ ವರ್ಷವನ್ನಾಗಿ ಆಚರಿಸಲು ನಿರ್ಧರಿಸಿದೆ?

A
ವನ್ಯಜೀವಿ ವರ್ಷ
B
ಸ್ವಚ್ಚ ನದಿ ವರ್ಷ
C
ಪಶ್ಚಿಮಘಟ್ಟ ವರ್ಷ
D
ಅರಣ್ಯ ವರ್ಷ
Question 2 Explanation: 
ವನ್ಯಜೀವಿ ವರ್ಷ:

ಕರ್ನಾಟದಲ್ಲಿ ವನ್ಯ ಜೀವಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರವಾಸೋದ್ಯಮ ಇಲಾಖೆ 2017 ಅನ್ನು 'ವನ್ಯ ವರ್ಷ' ವನ್ನಾಗಿ ಆಚರಿಸಲು ನಿರ್ಧರಿಸಿದೆ. ವನ್ಯವರ್ಷ ಅಭಿಯಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಇತ್ತೀಚೆಗೆ ಪ್ರಾರಂಭಿಸಿದರು. ಪಶ್ಚಿಮಘಟ್ಟದ 9 ಟ್ರಕ್ಕಿಂಗ್ ಮಾರ್ಗಗಳನ್ನು ಶೀಘ್ರದಲ್ಲಿಯೆ ಸೂಚಿಸಲಾಗುವುದು. ಈ ಮಾರ್ಗಗಳಲ್ಲಿ ಟ್ರಕ್ಕಿಂಗ್ ಪರಿಣಿತರಿಂದ ಪ್ರವಾಸದ ತರಬೇತಿ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಅಭಿಯಾನದ ಉದ್ದೇಶ ಎಂದು ತಿಳಿಸಿದರು.

Question 3

3. ಪ್ರಸ್ತಕ ಸಾಲಿನ ಆಳ್ವಾಸ್ ವಿರಾಸತ್ ಪ್ರಶಸ್ತಿಗೆ ಆಯ್ಕೆಯಾಗಿರುವ ಶಾಸ್ತ್ರೀಯ ನೃತ್ಯ ಕಲಾವಿದ ವನ್ನಾಡಿಲ್ ಪುದಿಯವೀಟಿಲ್ ಧನಂಜಯನ್ ಯಾವ ರಾಜ್ಯದವರು?

A
ಮಹಾರಾಷ್ಟ್ರ
B
ತಮಿಳುನಾಡು
C
ಕೇರಳ
D
ಗೋವಾ
Question 3 Explanation: 
ಕೇರಳ:

ಕೇರಳದ ಪ್ರಸಿದ್ಧ ಶಾಸ್ತ್ರೀಯ ನೃತ್ಯ ಕಲಾವಿದ ವನ್ನಾಡಿಲ್ ಪುದಿಯವೀಟಿಲ್ ಧನಂಜಯನ್ ರವರನ್ನು ಪ್ರಸ್ತಕ ಸಾಲಿನ ಆಳ್ವಾಸ್ ವಿರಾಸತ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ₹ 1 ಲಕ್ಷ ನಗದು ಒಳಗೊಂಡದೆ. ಜನವರಿ 13ರಂದು ನಡೆಯುವ ವಿರಾಸತ್ನ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

Question 4

4. 2016 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಕನ್ನಡದ ಹಿರಿಯ ಸಾಹಿತಿ ಯಾರು?

A
ಬೋಳುವಾರು ಮಹಮ್ಮದ್ ಕುಂಞ
B
ತಿರುಮಲೇಶ್
C
ಸಿದ್ದಲಿಂಗಯ್ಯ ಪುರಾಣಿಕ
D
ದೇವನೂರು ಮಹಾದೇವ
Question 4 Explanation: 
ಬೋಳುವಾರು ಮಹಮ್ಮದ್ ಕುಂಞ:

ಕನ್ನಡದ ಹಿರಿಯ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಅವರನ್ನು 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಕುಂಞಿ ರವರ ‘ಸ್ವಾತಂತ್ರ್ಯದ ಓಟ’ ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದೆ. ಡಾ.ಎಚ್.ಸಿ. ಬೋರಲಿಂಗಯ್ಯ, ಎಲ್.ಹನುಮಂತಯ್ಯ ಹಾಗೂ ಎಸ್.ಜಿ. ಸಿದ್ಧರಾಮಯ್ಯ ಅವರಿದ್ದ ಆಯ್ಕೆ ಸಮಿತಿಯು ಕನ್ನಡ ವಿಭಾಗದಿಂದ ಬೊಳುವಾರು ಅವರ ಈ ಕಾದಂಬರಿಯನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿತ್ತು. ಕನ್ನಡದ ಹಿರಿಯ ಕವಿ ಕೆ.ವಿ. ತಿರುಮಲೇಶ್ ಅವರು 2015ರ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಅವರ ‘ಅಕ್ಷಯ ಕಾವ್ಯ’ ಕೃತಿಗೆ ಪ್ರಶಸ್ತಿಯನ್ನು ನೀಡಲಾಗಿತ್ತು.

Question 5

5. ತುಂಬೆ ಅಣೆಕಟ್ಟನ್ನು ಈ ಕೆಳಗಿನ ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ?

A
ಕುಮಾರಧಾರ
B
ನೇತ್ರಾವತಿ
C
ಕುಮುದ್ವತಿ
D
ತುಂಗಭದ್ರಾ
Question 5 Explanation: 
ನೇತ್ರಾವತಿ:

ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ನದಿಗೆ ತುಂಬೆಯಲ್ಲಿ ನಿರ್ಮಾಣ ಗೊಂಡ 11ಮೀಟರ್ ಎತ್ತರದ ಹೊಸ ಅಣೆಕಟ್ಟೆಯಲ್ಲಿ ಗುರುವಾರ ಮಧ್ಯಾಹ್ನ 4.5 ಮೀಟರ್ನಿಂದ 5 ಮೀಟರ್ ಎತ್ತ ರಕ್ಕೆ ನೀರು ಏರಿಕೆಯಾಗಿದ್ದು ಇದರಿಂದಾಗಿ 18 ಮಂದಿ ರೈತರ ಒಟ್ಟು 30.59 ಎಕರೆ ಜಮೀನು ಮುಳುಗಡೆಯಾಗಿದೆ.

Question 6

6. 2016-17ನೇ ಸಾಲಿನ ಬಸವ ಕೃಷಿ ಪ್ರಶಸ್ತಿಗೆ ಆಯ್ಕೆಯಾಗಿರುವ “ಮಾಣಿಕ್ ಸರ್ಕಾರ್” ರವರು ಯಾವ ರಾಜ್ಯದ ಮುಖ್ಯಮಂತ್ರಿ?

A
ಸಿಕ್ಕಿಂ
B
ತ್ರಿಪುರ
C
ಮಣಿಪುರ
D
ಜಾರ್ಖಂಡ್
Question 6 Explanation: 
ತ್ರಿಪುರ:

ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ವತಿಯಿಂದ ನೀಡಲಾಗುವ ರಾಷ್ಟ್ರಮಟ್ಟದ ಪ್ರಸ್ತಕ ಸಾಲಿನ ಬಸವ ಕೃಷಿ ಪ್ರಶಸ್ತಿಗೆ ತ್ರಿಪುರ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರನ್ನು ಆಯ್ಕೆಮಾಡಲಾಗಿದೆ. ಪ್ರಶಸ್ತಿಯನ್ನು ಜನವರಿ 15ರ ಸಂಕ್ರಾಂತಿಯಂದು ಕೂಡಲ ಸಂಗಮದ ಸಭಾಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ 1 ಲಕ್ಷ ರೂ. ನಗದು, ತಾಮ್ರಪತ್ರ ಸ್ಮರಣಿಕೆ ಒಳಗೊಂಡಿರುತ್ತದೆ.

Question 7

7. ಈ ಕೆಳಗಿನ ಯಾವುದು ಉತ್ತರ ಕರ್ನಾಟಕದ ಮೊದಲ ಡಿಜಿಟಲ್ ಗ್ರಾಮವೆಂಬ ಗೌರವಕ್ಕೆ ಪಾತ್ರವಾಗಿದೆ?

A
ಶೆರವಾಡ
B
ಅಣಕನೂರು
C
ಹಶಿಗನಾಳ
D
ರಾಮಪುರ
Question 7 Explanation: 
ಶೆರವಾಡ:

ಹುಬ್ಬಳ್ಳಿಯ ಶೆರೆವಾಡ ಗ್ರಾಮ ಉತ್ತರ ಕರ್ನಾಟಕದ ಮೊದಲ ಡಿಜಿಟಲ್ ಗ್ರಾಮ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಧಾರವಾಡ ಜಿಲ್ಲೆಯಲ್ಲಿ ಒಂಬತ್ತು ಹಳ್ಳಿಗಳನ್ನು ಡಿಜಿಟಲ್ ಆಗಿ ಮಾರ್ಪಡಿಸುವ ಉದ್ದೇಶ ಹೊಂದಿದೆ. ಅದರ ಭಾಗವಾಗಿ ಹಳ್ಳಿಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಶೆರೆವಾಡ ಗ್ರಾಮದಲ್ಲಿ 4415 ಜನಸಂಖ್ಯೆ ಇದ್ದರೆ, 4003 ಮಂದಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಖಾತೆ ಹೊಂದಿದ್ದಾರೆ. ಈ ಪೈಕಿ 3964 ಖಾತೆಗಳನ್ನು ಆಧಾರ್ ಜೊತೆಗೆ ಜೋಡಣೆ ಸಹ ಮಾಡಲಾಗಿದೆ. ಇನ್ನು 3803 ರುಪೇ ಕಾರ್ಡ್ ಹಾಗೂ 25 ಕಿಸಾನ್ ಕಾರ್ಡ್ ಸಹ ವಿತರಿಸಲಾಗಿದೆ.

Question 8

8. ನಾಲ್ಕನೇ ಅಂತಾರಾಷ್ಟ್ರೀಯ ಕಿವುಡ ಸಿನಿಮೊತ್ಸವ ಯಾವ ನಗರದಲ್ಲಿ ಆರಂಭಗೊಂಡಿತು?

A
ಮೈಸೂರು
B
ಬೆಂಗಳೂರು
C
ಬೆಳಗಾವಿ
D
ಧಾರಾವಾಡ
Question 8 Explanation: 
ಬೆಂಗಳೂರು:

ನಾಲ್ಕನೇ ಅಂತಾರಾಷ್ಟ್ರೀಯ ಕಿವುಡ ಸಿನಿಮೋತ್ಸವ ಬೆಂಗಳೂರಿನಲ್ಲಿ ಆಂಭಗೊಂಡಿತು. ಮೂರು ದಿನಗಳ ಈ ಉತ್ಸವದಲ್ಲಿ ಕಿವುಡರೇ ರೂಪಿಸಿದ 35 ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿವಿಧ ಪ್ರಕಾರದ ಸಿನಿಮಾ ಪ್ರದರ್ಶನವಾಗಲಿದೆ. ಈ ಬಾರಿ ಕಿವಿ ಕೇಳುವವರು ನಿರ್ಮಿಸಿದ ಮೂಕಿ ಚಿತ್ರವನ್ನೂ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ.

Question 9

9. ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕೊಡ ಮಾಡುವ ಪ್ರಸಕ್ತ ಸಾಲಿನ ಡಾ. ಮನಸೂರ ರಾಷ್ಟ್ರೀಯ ಸಮ್ಮಾನವನ್ನು ಯಾರಿಗೆ ನೀಡಲಾಗಿದೆ?

A
ಪಂ. ಮಂಜುನಾಥ ಪ್ರಸಾದ್
B
ಪಂ. ಆಚಾರ್ಯ ಜೋಷಿ
C
ಪಂ. ಶಿವಶಂಕರ್
D
ಪಂ.ಮಣಿಪ್ರಸಾದ್
Question 9 Explanation: 
ಪಂ.ಮಣಿಪ್ರಸಾದ್

ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕೊಡ ಮಾಡುವ ಪ್ರಸಕ್ತ ಸಾಲಿನ ಡಾ. ಮನಸೂರ ರಾಷ್ಟ್ರೀಯ ಸಮ್ಮಾನವನ್ನು ಕಿರಾಣಾ ಘರಾಣೆಯ ಹಿರಿಯ ಗಾಯಕ ಪಂ.ಮಣಿಪ್ರಸಾದ್ ರವರಿಗೆ ನೀಡಲಾಗಿದೆ. ಪ್ರಶಸ್ತಿ ₹1 ಲಕ್ಷ ನಗದು, ಸ್ಮರಣಿಕೆ ಒಳಗೊಂಡಿದೆ. ಅಲ್ಲದೇ, ಯುವ ಗಾಯಕರಾದ ಓಂಕಾರನಾಥ ಹವಾಲ್ದಾರ ಮತ್ತು ರಾಜೇಶ್ವರಿ ಪಾಟೀಲ ಅವರಿಗೆ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು. ಯುವ ಪುರಸ್ಕಾರ ₹ 25 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ.

Question 10

10. ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ?

A
ರಾಯಚೂರು
B
ವಿಜಯಪುರ
C
ಬಾಗಲಕೋಟೆ
D
ಬೀದರ್
Question 10 Explanation: 
ರಾಯಚೂರು:

ರಾಯಚೂರು ಜಿಲ್ಲೆಯಲ್ಲಿ ಐಐಐಟಿ ಸ್ಥಾಪನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದೆ. ಕಳೆದ ವರ್ಷ ರಾಯಚೂರಿಗೆ ಐಐಟಿ ಕೈ ತಪ್ಪಿತ್ತು. ಹೀಗಾಗಿ ರಾಯಚೂರಿನಲ್ಲಿ ಐಐಟಿ ಬದಲು ಐಐಐಟಿ (ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಇನ್ ಫಾರ್ಮೇಶನ್ ಟೆಕ್ನಾಲಜಿ ) ಸ್ಥಾಪನೆಗೆ ಅವಕಾಶ ನೀಡಿದೆ. ರಾಯಚೂರಿನಲ್ಲಿ ಐಐಟಿ ಸ್ಥಾಪಿಸುವಂತೆ ನಂಜುಂಡಪ್ಪ ವರದಿ ಶಿಫಾರಸು ಮಾಡಿತ್ತು. ಆದರೆ ಕಳೆದ ವರ್ಷ ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ಕೇಂದ್ರ ಅನುಮತಿ ನೀಡಿತು. ಐಐಟಿ ಸ್ಥಾಪನೆ ಅವಕಾಶ ಕೈತಪ್ಪಿದ್ದಕ್ಕಾಗಿ ರಾಯಚೂರಿನಲ್ಲಿ ತೀವ್ರ ಅಸಮಾಧಾನ, ಪ್ರತಿಭಟನೆ, ಬಂದ್ ನಡೆಸಲಾಗಿತ್ತು.

There are 10 questions to complete.

[button link=”http://www.karunaduexams.com/wp-content/uploads/2017/01/ರಾಜ್ಯ-ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-23.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

2 Thoughts to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -23”

  1. SANTOSH

    Thanks Karunadu

Leave a Comment

This site uses Akismet to reduce spam. Learn how your comment data is processed.