ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಡಿಸೆಂಬರ್,29,30,31,2016
Question 1 |
1. ಭಾರತದ ಮೊದಲ ಡಿಜಿಟಲ್ ತನಿಖೆ ಮತ್ತು ತರಭೇತಿ (Digital Investigation and Training) ಕೇಂದ್ರವನ್ನು ಯಾವ ರಾಜ್ಯದ ಪೊಲೀಸ ಇಲಾಖೆ ಇತ್ತೀಚೆಗೆ ಪ್ರಾರಂಭಿಸಿದೆ?
ಹರಿಯಾಣ | |
ಆಂಧ್ರ ಪ್ರದೇಶ | |
ಪಂಜಾಬ್ | |
ಗುಜರಾತ್ |
ಹರಿಯಾಣ ಪೊಲೀಸ್ ಇಲಾಖೆ ಇತ್ತೀಚೆಗೆ ದೇಶದ ಮೊದಲ ಡಿಜಿಟಲ್ ತನಿಖೆ ಮತ್ತು ತರಬೇತಿ ಕೇಂದ್ರವನ್ನು “ರಾಷ್ಟ್ರೀಯ ತಾಂತ್ರಿಕ ಸಂಶೋಧನೆ ಸಂಸ್ಥೆ (NTRO)” ಸಹಯೋಗದೊಂದಿಗೆ ಗುರುಗ್ರಾಮದಲ್ಲಿ ಪ್ರಾರಂಭಿಸಿದೆ. ಸೈಬರ್ ಹಾಗೂ ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾವಹಿಸುವ ಉದ್ದೇಶದೊಂದಿಗೆ ಈ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
Question 2 |
2. 2016 ವಿಶ್ವ ಭೋಜಪುರಿ ಸಮ್ಮೇಳನ ಯಾವ ನಗರದಲ್ಲಿ ಆರಂಭಗೊಂಡಿದೆ?
ಭೂಪಾಲ್ | |
ವಾರಣಾಸಿ | |
ಕೊಲ್ಕತ್ತಾ | |
ಪುಣೆ |
2016 ವಿಶ್ವ ಭೋಜಪುರಿ ಸಮ್ಮೇಳನ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಡಿಸೆಂಬರ್ 29 ರಿಂದ ಆರಂಭಗೊಂಡಿತು. ವಿಶ್ವದ ವಿವಿದೆಡೆ ವಲಸೆ ಹೋಗಿರುವ ಭೋಜಪುರಿ ಮಾತನಾಡುವವರು ಜನಗಳ ನಡುವೆ ಸಂಪರ್ಕ ಕೊಂಡಿಯನ್ನು ಬಲಗೊಳಿಸುವುದು ಸಮ್ಮೇಳನದ ಆಶಯ. 4 ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ ಸಾಂಸ್ಕೃತಿ, ಧಾರ್ಮಿಕ ಮತ್ತು ಭಾಷೆ ಮತ್ತು ವ್ಯವಹಾರ ಸಂಬಂಧಿತ ಇತರ ವಿಷಯಗಳನ್ನು ಪ್ರದರ್ಶಿಸಲಾಗುವುದು. ಸಮ್ಮೇಳನದಲ್ಲಿ ಭೋಜಪುರಿ ರತ್ನ ಹಾಗೂ ಭೋಜಪುರಿ ಕರ್ಮಯೋಗಿ ಪ್ರಶಸ್ತಿಗಳನ್ನು ವಿತರಿಸಲಾಗುವುದು.
Question 3 |
3. ವಿಶ್ವದ ಅತಿ ಎತ್ತರದ ಸೇತುವ “ಬೈಪಾಂಜಿಯಾಂಗ್” ಯಾವ ದೇಶದಲ್ಲಿ ಲೋಕಾರ್ಪಣೆಗೊಂಡಿದೆ?
ಜರ್ಮನಿ | |
ಅಮೆರಿಕ | |
ಚೀನಾ | |
ಜಪಾನ್ |
ವಿಶ್ವದಲ್ಲೇ ಅತಿ ಎತ್ತರದ ಸೇತುವೆ ಚೀನಾದಲ್ಲಿ ಲೋಕಾರ್ಪಣೆಗೊಂಡಿದೆ. ನೈರುತ್ಯ ಭಾಗದಲ್ಲಿರುವ ಪರ್ವತಗಳ ನಡುವೆ ನಿರ್ಮಿಸಲಾಗಿರುವ ಈ ಸೇತುವೆ ನದಿಯಿಂದ 565 ಮೀಟರ್ ಎತ್ತರದಲ್ಲಿದೆ. ಜೈಪಾಂಜಿಯಾಂಗ್ ಸೇತುವೆ ಎರಡು ಬೆಟ್ಟಗಳಾದ ಯೂನಾನ್-ಗ್ಯುಝೋವುವಿನ ಮೇಲೆ ನಿರ್ಮಿಸಲಾಗಿದ್ದು, ಬೆಟ್ಟಗಳ ನಡುವೆ ನದಿಯೊಂದು ಹರಿಯುತ್ತಿದೆ. ಸುಮಾರು 1,854 ಅಡಿ ಮೇಲೆ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಸೇತುವೆ ಮೇಲೆ ಪ್ರಯಾಣಿಸುವುದರಿಂದ ನಾಲ್ಕು ಗಂಟೆಗಳ ಪ್ರಯಾಣ ಕಡಿಮೆಯಾಗಲಿದ್ದು, ಯೂನಾನ್ ಹಾಗೂ ಗ್ಯುಝೋವು ನಗರಗಳಿಗೆ ಪ್ರಯಾಣಿಸುವ ಜನರಿಗೆ ಸುಲಭವಾಗಲಿದೆ. ಬರೋಬ್ಬರಿ 1341 ಮೀಟರ್ ಉದ್ದವಿರುವ ಈ ಸೇತುವೆ ನಿರ್ಮಾಣಕ್ಕೆ 144 ಮಿಲಿಯನ್ ಡಾಲರ್ ಹಣ ಖರ್ಚಾಗಿದೆ.
Question 4 |
4. ರಾಷ್ಟ್ರೀಯ ಟ್ರಸ್ಟ್ ಸಂಸ್ಥಾಪನ ದಿನ (National Trust Foundation Day) ವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಡಿಸೆಂಬರ್ 29 | |
ಡಿಸೆಂಬರ್ 30 | |
ಡಿಸೆಂಬರ್ 31 | |
ಜನವರಿ 1 |
ರಾಷ್ಟ್ರೀಯ ಟ್ರಸ್ಟ್ ಸಂಸ್ಥಾಪನ ದಿನವನ್ನು ಪ್ರತಿವರ್ಷ ಡಿಸೆಂಬರ್ 30 ರಂದು ಆಚರಿಸಲಾಗುತ್ತದೆ. ರಾಷ್ಟ್ರೀಯ ಟ್ರಸ್ಟ್ ಸಂಸ್ಥಾಪನ ದಿನವನ್ನು ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ಟ್ರಸ್ಟ್ ಒಂದು ಶಾಸನಬದ್ದ ಸಂಸ್ಥೆಯಾಗಿದ್ದು, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತದೆ. ಆಟಿಸಂ, ಸೆರೆಬ್ರಲ್ ಪಾಲ್ಸಿ, ಬುದ್ದಿ ಮಾಂದ್ಯರು ಮತ್ತು ವಿಕಲಾಂಗರ ಕಲ್ಯಾಣ ರಾಷ್ಟ್ರೀಯ ಟ್ರಸ್ಟ್ ಕಾಯಿದೆ-1999 ಅನ್ನು ಡಿಸೆಂಬರ್ 30 ರಂದು ಭಾರತ ಸಂಸತ್ತಿನಲ್ಲಿ ಅಂಗೀಕರಿಸಿದರ ಅಂಗವಾಗಿ ಡಿಸೆಂಬರ್ 30 ರಂದು ರಾಷ್ಟ್ರೀಯ ಟ್ರಸ್ಟ್ ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುತ್ತಿದೆ.
Question 5 |
5. ಈ ಕೆಳಗಿನ ಯಾವ ಸಮಿತಿ ಇತ್ತೀಚೆಗೆ ಡಿಜಿಟಲ್ ಪಾವತಿ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತು?
ರತನ್ ವಟಲ್ ಸಮಿತಿ | |
ಹೆಚ್. ಆರ್. ಖಾನ್ ಸಮಿತಿ | |
ಅಜೀತ್ ಸೇಠ್ ಸಮಿತಿ | |
ನಂದನ್ ನೀಲಖೇಣಿ ಸಮಿತಿ |
ನಗದು ಪಾವತಿ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ ರಚಿಸಿದ್ದ ರತನ್ ಪಿ ವಟಲ್ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಪಾವತಿಗೆ ಸಂಬಂಧಿಸಿದಂತೆ ವಿಷಯಗಳಿಗೊಸ್ಕರ ಪ್ರತ್ಯೇಕ ನಿಯಂತ್ರಕ ಸ್ಥಾಪಿಸಲು ಸಮಿತಿ ಶಿಫಾರಸ್ಸು ಮಾಡಿದೆ. ಅಲ್ಲದೇ ಡಿಜಿಟಲ್ ಪಾವತಿ ಉತ್ತೇಜನಕ್ಕೆ ಹಲವು ಬಗೆಯ ಹಣಕಾಸು ಪ್ರೋತ್ಸಾಹವನ್ನು ಶಿಫಾರಸ್ಸು ಮಾಡಿದೆ. ಡಿಜಿಟಲ್ ಪಾವತಿ ಮೇಲೆ ಸರ್ಕಾರ ವಿಧಿಸುತ್ತಿರುವ ಎಲ್ಲಾ ಬಗೆಯ ಚಾರ್ಚ್ ಗಳನ್ನು ಹಿಂತೆಗೆದುಕೊಳ್ಳಲು ಶಿಫಾರಸ್ಸು ಮಾಡಿದೆ.
Question 6 |
6. ದೇಶದ ಮೊದಲ “ಕ್ಯಾಟರ್ಪಿಲ್ಲರ್ ರೈಲು (Caterpillar Train)” ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
ಕರ್ನಾಟಕ | |
ಹರಿಯಾಣ | |
ಮಧ್ಯ ಪ್ರದೇಶ | |
ರಾಜಸ್ತಾನ |
ಹರಿಯಾಣ ಸರ್ಕಾರ ನವೀನ ಪರಿಕಲ್ಪನೆಯ “ಕ್ಯಾಟರ್ಪಿಲ್ಲರ್ ರೈಲು” ಪ್ರಾಯೋಗಿಕ ಸಂಚಾರವನ್ನು ಗುರುಗ್ರಾಮ ನಗದರಲ್ಲಿ ಪ್ರಾರಂಭಿಸಲಿದೆ. ಕ್ಯಾಟರ್ಪಿಲ್ಲರ್ ರೈಲು ಮಾರ್ಗ ನಗರದಾದ್ಯಂತ ಇರಲಿದ್ದು, ಹಗುರವಾದ ರೈಲು ಭೋಗಿಗಳು ಈ ಮಾರ್ಗದಲ್ಲಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸಲಿವೆ. 7 ವರ್ಷದ ರೈಲ್ವೆ ಇಂಜಿನಿಯರ್ ಅಶ್ವಾನಿ ಕುಮಾರ್ ಉಪಾಧ್ಯಾಯರವರು ಎಮಿಲ್ ಜಾಕೋಭ್ ಜೊತೆಗೂಡಿ ಇತ್ತೀಚೆಗೆ ಕ್ಯಾಟರ್ಪಿಲ್ಲರ್ ರೈಲನ್ನು ಅಭಿವೃದ್ಧಿಪಡಿಸಿದ್ದರು. ಇವರ ಈ ಅನ್ವೇಷಣೆಗಾಗಿ ಮಸ್ಸಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಿಂದ ಚಿನ್ನದ ಪದಕ ಪ್ರಶಸ್ತಿ ಲಭಿಸಿದೆ.
Question 7 |
7. ಡಿಜಿಟಲ್ ಪಾವತಿಯನ್ನು ಸುಗಮಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಭೀಮ್ (Bhim) ಆ್ಯಪ್ ಬಿಡುಗಡೆಗೊಳಿಸಿದೆ. ಭೀಮ್ ಆ್ಯಪ್ ನ ವಿಸ್ತೃತ ರೂಪ __________?
Bharat Interface for Money | |
Bharat Internet for Money | |
Build Interface for Money | |
Built in Interface for Money |
Question 8 |
8. ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಫುಟ್ಬಾಲ್ ಹಿಸ್ಟರಿ ಅಂಡ್ ಸ್ಟಾಟಿಸ್ಟಿಕ್ಸ್ (IFFHS) ಕೇಂದ್ರ ಕಚೇರಿ ಎಲ್ಲಿದೆ?
ಫ್ರಾನ್ಸ್ | |
ಜರ್ಮನಿ | |
ಸ್ವಿಟ್ಜರ್ಲ್ಯಾಂಡ್ | |
ಜಪಾನ್ |
ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಫುಟ್ಬಾಲ್ ಹಿಸ್ಟರಿ ಅಂಡ್ ಸ್ಟಾಟಿಸ್ಟಿಕ್ಸ್ ಕೇಂದ್ರ ಕಚೇರಿ ಲೌಸನ್ನೆ, ಸ್ವಿಟ್ಜರ್ಲ್ಯಾಂಡ್ ನಲ್ಲಿದೆ. ಇತ್ತೀಚೆಗೆ IFFHS ಲಿಯೊನೆಲ್ ಮೆಸ್ಸಿ ರವರಿಗೆ ಸತತ ಎರಡನೇ ಬಾರಿಗೆ 2016 ವಿಶ್ವದ ಅತ್ಯುತ್ತಮ ಪ್ಲೇಮೇಕರ್ ಪ್ರಶಸ್ತಿಯನ್ನು ನೀಡಿದೆ.
Question 9 |
9. ಭಾರತದ ಮೊದಲ ತೃತೀಯ ಲಿಂಗಿ ಶಾಲೆ “ಸಹಜ್ ಇಂಟರ್ನ್ಯಾಷನಲ್” ಯಾವ ರಾಜ್ಯದಲ್ಲಿ ಕಾರ್ಯಾರಂಭ ಮಾಡಿದೆ?
ಕೇರಳ | |
ತೆಲಂಗಣ | |
ಜಾರ್ಖಂಡ್ | |
ಪಶ್ಚಿಮ ಬಂಗಾಳ |
ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ದೇಶದ ಮೊದಲ ತೃತೀಯ ಲಿಂಗಿ ಶಾಲೆ “ಸಹಜ್ ಇಂಟರ್ನ್ಯಾಷನಲ್” ಕಾರ್ಯಾರಂಭ ಮಾಡಿದೆ. ತೃತೀಯ ಲಿಂಗ ಹೋರಾಟಗಾರ, ಲೇಖಕ ಮತ್ತು ನಟ ಕಲ್ಕಿ ಸುಬ್ರಮಣಿಯನ್ ರವರು ಈ ಶಾಲೆಯನ್ನು ಉದ್ಘಾಟಿಸಿದರು. ತೃತೀಯ ಲಿಂಗಿಗಳಿಗೆ ಭದ್ರತೆ, ಮೋಕ್ಷ ಒದಗಿಸುವುದು ಹಾಗೂ ಶಿಕ್ಷಣವನ್ನು ಒದಗಿಸುವ ಸಲುವಾಗಿ ಶಾಲೆಯನ್ನು ತೆರೆಯಲಾಗಿದೆ.
Question 10 |
10. “ದಿ ಸಿಕ್ರೇಟ್ ಕಾರ್ಡ್ (The Secret Chord)” ಪುಸ್ತಕದ ಲೇಖಕರು __________?
ಗೆರಾಲ್ಡಿನ್ ಬ್ರೂಕ್ಸ್ | |
ಅಲೈಸ್ ಹಾಫ್ ಮನ್ | |
ಶಶಿಕಾಂತ್ ಜೋಷಿ | |
ಮಣಿಪ್ರಿತ್ ಸಿಂಗ್ |
ಪುಲಿಟ್ಜಿರ್ ಪ್ರಶಸ್ತಿ ವಿಜೇತ ಗೆರಾಲ್ಡಿನ್ ಬ್ರೂಕ್ಸ್ ರವರು “ದಿ ಸಿಕ್ರೇಟ್ ಕಾರ್ಡ್” ಪುಸ್ತಕದ ಲೇಖಕರು. ಇದು ರಾಜ ಡೇವಿಡ್ ರವರ ಜೀವನ ಚರಿತ್ರೆಯನ್ನು ಕುರಿತಾದ ಐತಿಹಾಸಿಕ ಕಾದಂಬರಿ.
[button link=”http://www.karunaduexams.com/wp-content/uploads/2017/01/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಡಿಸೆಂಬರ್2930312016.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ