ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,1,2, 2017

Question 1

1. ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ನೀಡುವ ಪ್ರತಿಷ್ಠಿತ ನೈಟ್ಹುಡ್ ಪುರಸ್ಕಾರವನ್ನು ಪಡೆದುಕೊಂಡಿದ ಭಾರತೀಯ ಮೂಲದ ಬ್ರಿಟಿಷ್ ಪ್ರೊಫೆಸರ್ ಯಾರು?

A
ಮಧುಸೂಧನ್ ರಾವ್
B
ರಾಮಕೃಷ್ಣ ತಂಬಿದೊರೈ
C
ಶಂಕರ್ ಬಾಲಸುಬ್ರಮಣಿಯನ್
D
ಪಲ್ಲವಿ ರಾಜೇಂದ್ರ
Question 1 Explanation: 
ಶಂಕರ್ ಬಾಲಸುಬ್ರಮಣಿಯನ್

ಭಾರತೀಯ ಮೂಲದ ರಸಾಯನವಿಜ್ಞಾನ ಪ್ರಾಧ್ಯಪಕ ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಜೀವಕೋಶ ತಜ್ಞ ಶಂಕರ್ ಬಾಲಸುಬ್ರಮಣಿಯನ್ ಅವರಿಗೆ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ನೀಡುವ ಪ್ರತಿಷ್ಠಿತ ನೈಟ್ಹುಡ್ ಪುರಸ್ಕಾರ ಲಭಿಸಿದೆ. ಶಂಕರ್ ಅವರು ಹೊಸ ಪೀಳಿಗೆಯ ಡಿಎನ್ಎ ಕುರಿತು ಮಾಡಿರುವ ಸಂಶೋಧನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಈ ಸಂಶೋಧನೆ ದಶಕದಲ್ಲಿ ಜೀವಶಾಸ್ತ್ರ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಲಿದೆ ಎನ್ನಲಾಗಿದೆ.

Question 2

2. ನಗದು ರಹಿತ ವ್ಯವಹಾರ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರದ “ಸ್ಕ್ರಾಲ್ ಆಫ್ ಹಾನರ್ (Scroll of Honour)” ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?

A
ಮನೀಷ್ ಮೌದ್ಗಿಲ್
B
ಗೌರವ್ ಗೋಯೆಲ್
C
ಶಂಕರ್ ಪ್ರಸಾದ್
D
ಅಮೀತಾ ಸಿಂಗ್
Question 2 Explanation: 
ಗೌರವ್ ಗೋಯೆಲ್

ಅಜ್ಮೇರಾದ ಜಿಲ್ಲಾಧಿಕಾರಿ ಗೌರವ್ ಗೋಯೆಲ್ ರವರಿಗೆ “ಸ್ಕ್ರಾಲ್ ಆಫ್ ಹಾನರ್” ಪ್ರಶಸ್ತಿ ಲಭಿಸಿದೆ. ಅಜ್ಮೇರಾ ಜಿಲ್ಲೆಯಲ್ಲಿ ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವುದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ರವರು ನವದೆಹಲಿಯಲ್ಲಿ ಪ್ರಶಸ್ತಿಯನ್ನು ವಿತರಿಸಿದರು. ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ನೀತಿ ಆಯೋಗ ಜಂಟಿಯಾಗಿ ಪ್ರಶಸ್ತಿಯನ್ನು ಸ್ಥಾಪಿಸಿದೆ.

Question 3

3. ಬಾರ್ಗರ್ ಧನೋವಾ ಜಾತ್ರಾ ಉತ್ಸವ ಯಾವ ರಾಜ್ಯದ ಪ್ರಸಿದ್ದ ಜಾತ್ರ ಮಹೋತ್ಸವವಾಗಿದೆ?

A
ಒಡಿಶಾ
B
ಕೇರಳ
C
ಜಾರ್ಖಂಡ್
D
ಹಿಮಾಚಲ ಪ್ರದೇಶ
Question 3 Explanation: 
ಒಡಿಶಾ

ವಿಶ್ವ ಪ್ರಸಿದ್ದ ಬಾರ್ಗರ್ ಧನೋವಾ ಜಾತ್ರಾ ಉತ್ಸವ ಪಶ್ಚಿಮ ಒಡಿಶಾದ ಬಾರ್ಗರ್ ನಲ್ಲಿ ಆರಂಭಗೊಂಡಿತು. 11 ದಿನಗಳ ಕಾಲ ನಡೆಯುವ ಈ ಜಾತ್ರ ಮಹೋತ್ಸವದಲ್ಲಿ ದೇಶ ವಿದೇಶದಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವುದು ವಿಶಿಷ್ಟವಾಗಿದೆ.

Question 4

4. ಭಾರತ ಹಜ್ ಸಮಿತಿ (Haj Committee of India) ಯಾವ ಕೇಂದ್ರ ಸಚಿವಾಲಯದ ಶಾಸನ ಬದ್ದ ಸಂಸ್ಥೆಯಾಗಿದೆ?

A
ವಿದೇಶಾಂಗ ಸಚಿವಾಲಯ
B
ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯ
C
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
D
ಗೃಹ ಸಚಿವಾಲಯ
Question 4 Explanation: 
ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯ

ಭಾರತ ಹಜ್ ಸಮಿತಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯದ ಶಾಸನ ಬದ್ದ ಸಂಸ್ಥೆಯಾಗಿದ್ದು, ಹಜ್ ಸಮಿತಿ ಕಾಯಿದೆ, 2002ರಡಿಯಲ್ಲಿ ರಚಿಸಲಾಗಿದೆ. ಭಾರತದ ಹಜ್ ಯಾತ್ರಿಗಳಿಗೆ ಸಕಲ ಸಿದ್ದತೆಯನ್ನು ಮಾಡುವುದು ಸಮಿತಿಯ ಕರ್ತವ್ಯ.

Question 5

5. ಭಾರತೀಯ ಜ್ಞಾನಪೀಠ ನೀಡುವ 2016 ನವಲೇಖನ ಪ್ರಶಸ್ತಿಗೆ ಈ ಕೆಳಗಿನ ಯಾರನ್ನು ಆಯ್ಕೆಮಾಡಲಾಗಿದೆ?

A
ಶ್ರದ್ದಾ ಮತ್ತು ಘ್ಯಾನ್ ಶಾಮ್ ಕುಮಾರ್ ದೇವನಾಶ್
B
ಅಮಲೆಂದು ತಿವಾರಿ ಮತ್ತು ಘ್ಯಾನ್ ಶಾಮ್ ಕುಮಾರ್
C
ಯೋಗಿತ ಯಾಧವ್ ಮತ್ತು ಸರಸ್ವತ್ ಕುಮಾರ್
D
ಒಂ ಶಂಕರ್ ಮತ್ತು ಸುರಭಿ ಚಂದ್ರಶೇಖರ್
Question 5 Explanation: 
ಶ್ರದ್ದಾ ಮತ್ತು ಘ್ಯಾನ್ ಶಾಮ್ ಕುಮಾರ್ ದೇವನಾಶ್

ಭಾರತೀಯ ಜ್ಞಾನಪೀಠ ನವಲೇಖನ 2016ನೇ ಸಾಲಿನ ಪ್ರಶಸ್ತಿಗೆ ಹೆಸರಾಂತ ಇಬ್ಬರು ಹಿಂದಿ ಲೇಖಕರಾದ ಶ್ರದ್ದಾ ಮತ್ತು ಘ್ಯಾನ್ ಶಾಮ್ ಕುಮಾರ್ ದೇವನಾಶ್ ರವರನ್ನು ಆಯ್ಕೆಮಾಡಲಾಗಿದೆ. ಶ್ರದ್ದಾ ರವರ ಸಣ್ಣಕಥೆ “ಹವಾ ಮೇನ್ ಫಾದ್ಪಾದತಿ ಛಿತ್ತಿ” ಮತ್ತು ದೇವನಾಶ್ ರವರ “ಆಕಾಶ್ ಮೇನ್ ದೆಹ್” ಕವಿತೆಗೆ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಖ್ಯಾತ ಕವಿ ವಿಷ್ಣು ನಗರ್ ನೇತೃತ್ವದ ಆಯ್ಕೆಮಂಡಳಿ ಈ ಇಬ್ಬರನ್ನು ಪ್ರಶಸ್ತಿಗೆ ಆಯ್ಕೆಮಾಡಿದೆ.

Question 6

6. “ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾ (Administrative Staff College of India)” ಕೇಂದ್ರ ಕಚೇರಿ ಎಲ್ಲಿದೆ?

A
ನವದೆಹಲಿ
B
ಬೆಂಗಳೂರು
C
ಹೈದ್ರಾಬಾದ್
D
ಪುಣೆ
Question 6 Explanation: 
ಹೈದ್ರಾಬಾದ್

“ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾ” ಕೇಂದ್ರ ಕಚೇರಿ ಹೈದ್ರಾಬಾದ್ ನಲ್ಲಿದೆ. ಇತ್ತೀಚೆಗೆ 1976 ಬ್ಯಾಚ್ನ ಹಿರಿಯ ಐಎಎಸ್ ಅಧಿಕಾರಿ ರಾಜೆನ್ ಹಬೀನ್ ಕ್ವಾಜ ರವರು ಈ ಕಾಲೇಜಿನ ನೂತನ ಡೈರೆಕ್ಟರ್ ಜನರಲ್ ಆಗಿ ನೇಮಕಗೊಂಡರು.

Question 7

7. ಈ ಕೆಳಗಿನ ಯಾವ ರಾಜ್ಯದಲ್ಲಿ 104ನೇ ಭಾರತೀಯ ಸೈನ್ಸ್ ಕಾಂಗ್ರೆಸ್ (ISC) ಆರಂಭಗೊಂಡಿತು?

A
ತಮಿಳುನಾಡು
B
ಆಂಧ್ರ ಪ್ರದೇಶ
C
ತೆಲಂಗಣ
D
ಮಹಾರಾಷ್ಟ್ರ
Question 7 Explanation: 
ಆಂಧ್ರ ಪ್ರದೇಶದ

ತಿರುಪತಿಯ ಶ್ರೀವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ 104ನೇ ಭಾರತೀಯ ಸೈನ್ಸ್ ಕಾಂಗ್ರೆಸ್ ಗೆ ಪ್ರಧಾನಿ ನರೇಂದ್ರ ಮೋದಿ ರವರು ಜನವರಿ 3, 2017 ರಂದು ಚಾಲನೆ ನೀಡಿದರು. “ರಾಷ್ಟ್ರೀಯ ಅಭಿವೃದ್ದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ” ಇದು 104ನೇ ಭಾರತೀಯ ಸೈನ್ಸ್ ಕಾಂಗ್ರೆಸ್ ನ ಧ್ಯೇಯವಾಗಿದೆ.

Question 8

8. ಇತ್ತೀಚೆಗೆ ನಿಧನರಾದ ಇಮ್ತಿಯಾಜ್ ಅಹ್ಮದ್ ರವರು ಯಾವ ದೇಶದ ಮಾಜಿ ಕ್ರಿಕೆಟ್ ಆಟಗಾರ?

A
ಬಾಂಗ್ಲದೇಶ
B
ಪಾಕಿಸ್ತಾನ
C
ವೆಸ್ಟ್ ಇಂಡೀಸ್
D
ಭಾರತ
Question 8 Explanation: 
ಪಾಕಿಸ್ತಾನ

ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪಾಕಿಸ್ತಾನ ಹಿರಿಯ ಕ್ರಿಕೆಟಿಗ ಇಮ್ತಿಯಾಜ್ ಅಹಮ್ಮದ್ ಕೊನೆಯುಸಿರೆಳೆದಿದ್ದಾರೆ. ಇಮ್ತಿಯಾಜ್ ಚೊಚ್ಚಲ ಭಾರತ ಪ್ರವಾಸ ಮಾಡಿದ ಪಾಕ್ ತಂಡದ ಸದಸ್ಯರಾಗಿದ್ದರು.1952 ರ ಅಕ್ಟೋಬರ್ ನಲ್ಲಿ ದೆಹಲಿಯಲ್ಲಿ ನಡೆದ ಪಾಕಿಸ್ತಾನ-ಭಾರತ ಮೊದಲ ಟೆಸ್ಟ್ ನಲ್ಲಿ ಆಡಿದ್ದರು ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿದ್ದ ಇಮ್ತಿಯಾಜ್ 2079 ರನ್ ಪೇರಿಸಿದ್ದರು. ನ್ಯೂಜಿಲೆಂಡ್ ವಿರುದ್ಧ ಲಾಹೋರ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ದ್ವಿಶತಕವನ್ನೂ ಸಿಡಿಸಿದ್ದರು.

Question 9

9. 2016 ಮುಬದಲ ವಿಶ್ವ ಟೆನ್ನಿಸ್ ಚಾಂಪಿಯನ್ ಷಿಪ್ (Mubadala World Tennis Championship) ಪ್ರಶಸ್ತಿಯನ್ನು ಗೆದ್ದುಕೊಂಡವರು ಯಾರು?

A
ರಫೆಲ್ ನಡಾಲ್
B
ಡೇವಿಡ್ ಗಾಫಿನ್
C
ಮಿಲೊಸ್ ರೊನಿಕ್
D
ರೋಜರ್ ಫೆಡರರ್
Question 9 Explanation: 
ರಫೆಲ್ ನಡಾಲ್

ಸ್ಪೇನ್ ನ ವೃತ್ತಿಪರ ಟೆನ್ನಿಸ್ ಆಟಗಾರ ರಫೆಲ್ ನಡಾಲ್ ರವರು 2016 ಮುಬದಲ ವಿಶ್ವ ಟೆನ್ನಿಸ್ ಚಾಂಪಿಯನ್ ಷಿಪ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಅಬುದಾಬಿ ಅಂತಾರಾಷ್ಟ್ರೀಯ ಟೆನ್ನಿಸ್ ಸಂಕೀರ್ಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೇವಿಡ್ ಗಾಫಿನ್ ರವರನ್ನು 6-4, 7-6ರ ಅಂತರದಲ್ಲಿ ಮಣಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡರು.

Question 10

10. ಈ ಕೆಳಗಿನ ಯಾರು ನೂತನ “ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (Controller General of Accounts)” ಆಗಿ ನೇಮಕಗೊಂಡಿದ್ದಾರೆ?

A
ಅರ್ಚನ ನಿಗಮ್
B
ಮಾಳವಿಕ ಸಿಂಗ್
C
ಅರುಣ್ ಜಿಂದಾಲೆ
D
ಕೇಶಬ್ ರಾಥೋಡ್
Question 10 Explanation: 
ಅರ್ಚನ ನಿಗಮ್

ಅರ್ಚನ ನಿಗಮ್, 1981ನೇ ಇಂಡಿಯನ್ ಸಿವಿಲ್ ಅಕೌಂಟ್ಸ್ ಸರ್ವೀಸ್ ನ ಅಧಿಕಾರಿ ರವರು ಹಣಕಾಸು ಸಚಿವಾಲಯದ ಖರ್ಚುವೆಚ್ಚ ಇಲಾಖೆಯ ನೂತನ ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ಆಗಿ ನೇಮಕಗೊಂಡಿದ್ದಾರೆ. ಎಂ.ಜೆ.ಜೋಸೆಫ್ ರವರಿಂದ ತೆರವಾಗಿದ್ದ ಸ್ಥಾನಕ್ಕೆ ಇವರನ್ನು ನೇಮಕಮಾಡಲಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2017/01/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ12-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.