ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,5, 2017
Question 1 |
1. ಇ-ಸಿಗರೇಟ್ ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
I) ಇ-ಸಿಗರೇಟ್ ಗಳನ್ನು ನಿಕೊಟಿನ್ ಮತ್ತು ತಂಬಾಕನ್ನು ಒಳಗೊಂಡಿರುತ್ತದೆ
II) ಇ-ಸಿಗರೇಟ್ ಗಳು ಕೊಪ್ಟ (COPTA) ಕಾಯಿದೆ, 2003 ವ್ಯಾಪ್ತಿಗೆ ಒಳಪಡವುದಿಲ್ಲ
III) ಕೇವಲ ಮಹಾರಾಷ್ಟ್ರ, ಕೇರಳ, ಪಂಜಾಬ್ ಮತ್ತು ಕರ್ನಾಟಕ ರಾಜ್ಯಗಳ ಇ-ಸಿಗರೇಟ್ ಮೇಲೆ ನಿಷೇದ ಹೇರಿವೆ
ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?
I & II | |
I & III | |
II & III | |
I, II & III |
ಇ-ಸಿಗರೇಟ್ ಅಥವಾ ಎಲೆಕ್ಟ್ರಾನಿಕ್ ಸಿಗರೇಟ್ ಗಳು ನಿಕೊಟಿನ್ ಮಾತ್ರ ಒಳಗೊಂಡಿರುತ್ತದೆ. ಇವುಗಳಲ್ಲಿ ತಂಬಾಕು ಇಲ್ಲದ ಕಾರಣ ಇ-ಸಿಗರೇಟ್ ಗಳು ಸಿಗರೇಟ್ ಮತ್ತು ಮತ್ತು ಇತರೆ ತಂಬಾಕು ಪದಾರ್ಥ ಕಾಯಿದೆ-2003 (COPTA) ವ್ಯಾಪ್ತಿಗೆ ಬರುವುದಿಲ್ಲ. ಪ್ರಸ್ತುತ ಮಹಾರಾಷ್ಟ್ರ, ಕೇರಳ, ಪಂಜಾಬ್ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಇ-ಸಿಗರೇಟ್ ಬಳಕೆ ಮೇಲೆ ನಿಷೇಧ ಹೇರಲಾಗಿದೆ.
Question 2 |
2. ಆಹಾರಗಳ ರುಚಿಯನ್ನ ಹೆಚ್ಚಿಸಲು ಬಳಸುವ “ಅಜಿನಾಮೊಟೊ”ದ ರಾಸಾಯಸನಿಕ ಹೆಸರು ________?
ಮೋನೋ ಸೋಡಿಯಂ ಗ್ಲುಟಾಮೇಟ್ | |
ಸೋಡಿಯಂ ಕಾರ್ಬೋನೆಟ್ | |
ಮೋನೋ ಪೋಟಾಷಿಯಂ ಗ್ಲುಟಾಮೇಟ್ | |
ಸಿಲ್ವರ್ ಬ್ರೋಮೈಡ್ |
ಅಜಿನಾಮೊಟೊವನ್ನುಇತ್ತೀಚೆಗೆ ಆಹಾರಗಳನ್ನು ರುಚಿಕರವಾಗಿರಿಸಲು ಹೆಚ್ಚಾಗಿ ಬಳಸಲಾಗುತ್ತಿದೆ. ಮೋನೋ ಸೋಡಿಯಂ ಗ್ಲುಟಾಮೇಟ್ ಇದರ ರಾಸಾಯನಿಕ ಹೆಸರು. ಅಜಿನಾಮೊಟೊ ವನ್ನು ಸೈಲೆಂಟ್ ಕಿಲ್ಲರ್ ಎಂದು ಬಣ್ಣಿಸಲಾಗುತ್ತಿದ್ದು, ಇದರ ಬಳಕೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
Question 3 |
3. 2016 ಸ್ಯಾಪ್ (SAFF) ಮಹಿಳಾ ಪುಟ್ಬಾಲ್ ಚಾಂಪಿಯನ್ ಷಿಪ್ ಗೆದ್ದುಕೊಂಡ ದೇಶ ಯಾವುದು?
ಭಾರತ | |
ಬಾಂಗ್ಲದೇಶ | |
ನೇಪಾಳ | |
ಶ್ರೀಲಂಕಾ |
ದಕ್ಷಿಣ ಏಷ್ಯಾ ಪುಟ್ಬಾಲ್ ಫೆಡರೇಶನ್ (SAFF)ನ 2016 ಮಹಿಳಾ ಪುಟ್ಬಾಲ್ ಚಾಂಪಿಯನ್ ಷಿಪ್ ಪ್ರಶಸ್ತಿಯನ್ನು ಭಾರತ ಗೆದ್ದುಕೊಂಡಿತು. ಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲದೇಶವನ್ನು 3-1 ಅಂತರದಲ್ಲಿ ಮಣಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತಕ್ಕೆ ಇದು ಮೂರನೇ ಸ್ಯಾಪ್ ಪ್ರಶಸ್ತಿ. ಸ್ಯಾಫ್ ಕಪ್ ಮಹಿಳಾ ಟೂರ್ನಿ 2010ರಲ್ಲಿ ಮೊದಲ ಬಾರಿಗೆ ನಡೆದಿತ್ತು. ಬಾಂಗ್ಲಾದೇಶ ಆತಿಥ್ಯದಲ್ಲಿ ಜರುಗಿದ ಟೂರ್ನಿಯಲ್ಲಿ ನೇಪಾಳವನ್ನು ಮಣಿಸಿ ಭಾರತ ಚಾಂಪಿಯನ್ ಆಗಿತ್ತು. ನಂತರ 2012 ಮತ್ತು 2014ರ ಟೂರ್ನಿಗಳಲ್ಲಿ ನೇಪಾಳವನ್ನೇ ಸೋಲಿಸಿ ಆತಿಥೇಯರು ಪ್ರಶಸ್ತಿ ಗೆದ್ದು ಪ್ರಾಬಲ್ಯ ಮೆರೆದಿದ್ದಾರೆ.
Question 4 |
4. “ಜೊವೆನೆಲ್ ಮೊಹಿಸೆ (Jovenel Moise)” ರವರು ಯಾವ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ?
ಹೈಟಿ | |
ಜೋರ್ಡನ್ | |
ಮೆಕ್ಸಿಕೊ | |
ಇಟಲಿ |
ಜೊವೆನೆಲ್ ಮೊಹಿಸೆ ರವರು ಹೈಟಿಯಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜೇತರಾಗುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮೊಹಿಸೆ ರವರು ಹೈಟಿಯ ಉದ್ಯಮಿ ಹಾಗೂ ಹೈಟಿಯನ್ ಟೆಟ್ ಕಾಲೆ ಪಕ್ಷ (HTKP)ದ ಸದಸ್ಯರಾಗಿದ್ದಾರೆ. ಫೆಬ್ರವರಿ 7, 2017ರಲ್ಲಿ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಲಿದ್ದಾರೆ.
Question 5 |
5. ಐಸಿಸಿ ಹಾಲ್ ಆಫ್ ಫೇಮ್ ಗೆ ಸೇರ್ಪಡೆಗೊಂಡ “ಆರ್ಥರ್ ಮೊರಿಸ್” ಯಾವ ದೇಶದವರು?
ಆಸ್ಟ್ರೇಲಿಯಾ | |
ಇಂಗ್ಲೆಂಡ್ | |
ನ್ಯೂಜಿಲ್ಯಾಂಡ್ | |
ದಕ್ಷಿಣ ಆಫ್ರಿಕಾ |
ಆಸ್ಟ್ರೇಲಿಯಾದ ಕ್ರಿಕೆಟ್ ದಂತಕತೆ ಆರ್ಥರ್ ಮೊರಿಸ್ ರವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಹಾಲ್ ಆಫ್ ಫೇಮ್ ಗೆ ಮರೋಣತ್ತರವಾಗಿ ಸೇರ್ಪಡೆಗೊಲಿಸಲಾಗಿದೆ. ಮೊರಿಸ್ ಅವರು ಈ ಗೌರವಕ್ಕೆ ಪಾತ್ರವಾದ 82ನೇ ಕ್ರಿಕೆಟ್ ಆಟಗಾರ.
Question 6 |
6. ಡಿಜಿಟಲ್ ಮತ್ತು ನಗದು ರಹಿತ ವಹಿವಾಟನ್ನು ಪ್ರೋತ್ಶಹಿಸುವ ಸಲುವಾಗಿ ‘ಡಿಜಿ ಧನ್ ಮೇಳ’ ವನ್ನು ಇತ್ತೀಚೆಗೆ ಯಾವ ರಾಜ್ಯದಲ್ಲಿ ನಡೆಸಲಾಯಿತು?
ಹರಿಯಾಣ | |
ಜಾರ್ಖಂಡ್ | |
ಆಂಧ್ರ ಪ್ರದೇಶ | |
ತಮಿಳುನಾಡು |
Question 7 |
7. ರಾಕ್ ಫೆಲ್ಲರ್ ಫೌಂಡೇಶನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ವ್ಯಕ್ತಿ ಯಾರು?
ಸುದರ್ಶನ್ ನಾಯಕ್ | |
ರಾಜೀವ್ ಶಾ | |
ಅಮಿತಾಬ್ ಕಾಂತ್ | |
ಅಭಿರಾಮ್ ಚಿಂತನ್ |
ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯ (ಯುಎಸ್ಎಐಡಿ) ಮಾಜಿ ಮುಖ್ಯಸ್ಥ ರಾಜೀವ್ ಜೆ ಶಾ ಅವರನ್ನು ಅಮೆರಿಕದ ಅತ್ಯಂತ ದೊಡ್ಡ ಹಾಗೂ ಪ್ರಭಾವಶಾಲಿ ದಾನ ಸಂಸ್ಥೆಯಾಗಿರುವ ರಾಕ್ಫೆಲ್ಲರ್ ಫೌಂಡೇಶನ್ನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಕ್ಫೆಲ್ಲರ್ ಫೌಂಡೇಶನ್ನ ಅಧ್ಯಕ್ಷರಾಗುವ ಅತ್ಯಂತ ಕಿರಿಯ ವಯಸ್ಸಿನ ಹಾಗೂ ಮೊತ್ತ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ರಾಜೀವ್ ಜೆ ಶಾ ಪಾತ್ರರಾಗಿದ್ದಾರೆ. ರಾಜೀವ್ ಶಾ ಅವರು ರಾಕ್ ಫೆಲ್ಲರ್ ಫೌಂಡೇಶನ್ನ ಅಧ್ಯಕ್ಷರಾಗಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಜುಡಿತ್ ರಾಡಿನ್ ಅವರ ಉತ್ತರಾಧಿಕಾರಿಯಾಗಿದ್ದಾರೆ.
Question 8 |
8. 'ದಿ ಮಾಡರ್ನ್ ಮಾಂಕ್: ವಾಟ್ ವಿವೇಕಾನಂದ ಮೀನ್ಸ್ ಟು ಅಸ್ ಟುಡೇ' ಪುಸ್ತಕದ ಲೇಖಕರು ಯಾರು?
ರಾಮಚಂದ್ರ ಗುಹಾ | |
ಹಿಂಡೋಲ್ ಸೇನ್ ಗುಪ್ತಾ | |
ರವೀಂದ್ರ ಕುಲಕರ್ಣಿ | |
ಶ್ರೀಶೈಲ್ ಚಟರ್ಜಿ |
'ದಿ ಮಾಡರ್ನ್ ಮಾಂಕ್: ವಾಟ್ ವಿವೇಕಾನಂದ ಮೀನ್ಸ್ ಟು ಅಸ್ ಟುಡೇ' ಎಂಬ ಕೃತಿಯ ಲೇಖಕರು ಹಿಂಡೋಲ್ ಸೇನ್ಗುಪ್ತಾ. ಈ ಪುಸ್ತಕದಲ್ಲಿ ಅವರು ವಿವೇಕಾನಂದ ಅವರ ಬದುಕಿನ ಕುರಿತು ಹೊಸ ವಿಷಯಗಳನ್ನು ಮಂಡಿಸಿದ್ದಾರೆ. ಇಂಗ್ಲಿಷ್ ಭಾಷೆಯ ತಮ್ಮ ಸುಲಲಿತ ಮಾತುಗಳ ಮೂಲಕ ಜನರನ್ನು ಆಕರ್ಷಿಸುತ್ತಿದ್ದ ಸ್ವಾಮಿ ವಿವೇಕಾನಂದ ಅವರು ತಮ್ಮ ಕಾಲೇಜು ದಿನಗಳಲ್ಲಿ ಇಂಗ್ಲಿಷ್ ವಿಷಯದಲ್ಲಿ ಅಷ್ಟು ಗಮನಾರ್ಹ ಸಾಧನೆ ಮಾಡಿರಲಿಲ್ಲ ಎಂದು ಈ ಪುಸ್ತಕದಲ್ಲಿ ಪ್ರತಿಪಾದಿಸಲಾಗಿದೆ.
Question 9 |
9. ಕೇಂದ್ರಿಯ ಜೇನು ಸಂಶೋಧನೆ ಮತ್ತು ತರಭೇತಿ ಸಂಸ್ಥೆ (CBRTI) ಎಲ್ಲಿದೆ?
ನವ ದೆಹಲಿ | |
ಪುಣೆ | |
ಮೈಸೂರು | |
ಚೆನ್ನೈ |
ಕೇಂದ್ರಿಯ ಜೇನು ಸಂಶೋಧನೆ ಮತ್ತು ತರಭೇತಿ ಸಂಸ್ಥೆ (Central Bee Research and Training Centre) ಪುಣೆಯಲ್ಲಿದೆ. ಇತ್ತೀಚೆಗೆ ಈ ಸಂಸ್ಥೆಯ ವರದಿ ಪ್ರಕಾರ ಭಾರತೀಯರ ತಲಾ ಜೇನು ಸೇವನೆ ಪ್ರಮಾಣ 8.4 ಗ್ರಾಂ ಎಂದು ತಿಳಿದು ಬಂದಿದೆ.
Question 10 |
10. ಆನ್ ಲೈನ್ ಪೋರ್ಟಲ್ ಸಂಸ್ಥೆ ‘ಮ್ಯಾಜಿಕ್ ಬ್ರಿಕ್ಸ್.ಕಾಂ’ ಜಂಟಿ ಮಾರುಕಟ್ಟೆ ಚಟುವಟಿಕೆಗಳನ್ನು ಕೈಗೊಳ್ಳಲು ಈ ಕೆಳಕಂಡ ಯಾವ ಬ್ಯಾಂಕ್ ನೊಂದಿಗೆ ಕರಾರು ಮಾಡಿಕೊಂಡಿದೆ?
ಭಾರತೀಯ ಸ್ಟೇಟ್ ಬ್ಯಾಂಕ್ | |
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು | |
ಹೆಚ್.ಡಿ.ಎಫ್.ಸಿ ಬ್ಯಾಂಕ್ | |
ಆಕ್ಸಿಸ್ ಬ್ಯಾಂಕ್ |
[button link=”http://www.karunaduexams.com/wp-content/uploads/2017/01/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ5-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Comment
Super