ಕ್ರಿಸ್ಟಿಯಾನೋ ರೊನಾಲ್ಡೊ ಗೆ ಫಿಫಾ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ

ಪೋರ್ಚುಗಲ್ ತಂಡದ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರಿಗೆ 2016ನೇ ಸಾಲಿನ ಫಿಫಾ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಜೂರಿಚ್, ಸ್ಟಿಟ್ಜರ್ಲ್ಯಾಂಡ್ನಲ್ಲಿ ಪ್ರಧಾನ ಮಾಡಲಾಯಿತು. ರೊನಾಲ್ಡೊ ರವರು ಶೇ 34.45% ಮತವನ್ನು ಪಡೆಯುವ ಮೂಲಕ ಪ್ರಶಸ್ತಿಗೆ ಭಾಜನರಾದರು. ಬಾರ್ಸಿಲೋನದ ಲಿಯೊನೆಲ್ ಮೆಸ್ಸಿ (26.42%) ಮತ್ತು ಅಲ್ಟಿಕೊ ಮ್ಯಾಡ್ರಿಡ್ನ ಅಂಟೊನೆ ಗ್ರೈಝ್ ಮನ್ (7.53%) ರವರನ್ನು ಹಿಂದಿಕ್ಕಿ ರೊನಾಲ್ಡೊ ರವರು ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇತರೆ ಪ್ರಶಸ್ತಿಗಳು:

  • ವರ್ಷದ ಮಹಿಳಾ ಪುಟ್ಬಾಲ್ ಆಟಗಾರ್ತಿ: ಕಾರ್ಲಿ ಲ್ಲಾಯ್ಡ್ (ಅಮೆರಿಕ)
  • ಫಿಫಾ ಅತ್ಯುತ್ತಮ ಪುರುಷರ ತಂಡದ ಕೋಚ್: ಕ್ಲಾಡಿಯೋ ರನೈರಿ (ಇಟಲಿ)
  • ಫಿಫಾ ಅತ್ಯುತ್ತಮ ಮಹಿಳೆಯ ತಂಡದ ಕೋಚ್: ಸಿಲ್ವಿಯಾನೀಡ್ (ಜರ್ಮನಿ)
  • ಫಿಫಾ ಫೇರ್ ಪ್ಲೇ ಪ್ರಶಸ್ತಿ: ಅಟ್ಲಾಂಟಿಕೋ ನ್ಯಾಕನಲ್
  • ಫಿಫಾ ಔಟ್ ಸ್ಟಾಂಡಿಂಗ್ ಕರಿಯರ್ (ಜೀವಮಾನ ಶ್ರೇಷ್ಟ ಪ್ರಶಸ್ತಿ)ಪ್ರಶಸ್ತಿ: ಫಾಲ್ಕೋ (ಬ್ರೆಜಿಲ್).

ಏಳು ವಿಜ್ಞಾನಿಗಳಿಗೆ ಇನ್ಪೋಸಿಸ್ ಪ್ರಶಸ್ತಿ ಪ್ರಧಾನ

2016ನೇ ಸಾಲಿನ ‘ಇನ್ಫೊಸಿಸ್‌ ವಿಜ್ಞಾನ ಪ್ರಶಸ್ತಿ’ಗೆ ಆಯ್ಕೆಯಾಗಿದ್ದ ಏಳು ವಿಜ್ಞಾನಿಗಳಿಗೆ ನೊಬೆಲ್‌ ಪುರಸ್ಕೃತ ಪ್ರೊ. ವೆಂಕಟರಮಣ ರಾಮಕೃಷ್ಣನ್‌ ಅವರು ಬೆಂಗಳೂರಿನಲ್ಲಿ ಪ್ರದಾನ ಮಾಡಿದರು. ಪ್ರಶಸ್ತಿ ₹65 ಲಕ್ಷ  ನಗದು, ಚಿನ್ನದ ಪದಕ ಮತ್ತು ಪ್ರಮಾಣಫಲಕವನ್ನು ಒಳಗೊಂಡಿದೆ.

ಪ್ರಶಸ್ತಿ ಪಡೆದ ವಿಜ್ಞಾನಿಗಳು:

  • ವಿ.ಕುಮಾರ್‌: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕೆಮಿಕಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಪ್ರಾಧ್ಯಾಪಕರು.
  • ಸುನೀಲ್‌ ಅಮೃತ್‌ (ಮಾನವಿಕ): ಅಮೆರಿಕದ ಹಾರ್ವರ್ಡ್‌ ವಿಶ್ವವಿದ್ಯಾಲಯ
  • ಗಗನ್‌ದೀಪ್‌ ಕಂಗ್‌ (ಜೀವ ವಿಜ್ಞಾನ): ಫರಿದಾಬಾದ್‌ನ ಟಿಎಚ್‌ಎಸ್‌ಟಿಐನ
  • ಅಕ್ಷಯ ವೆಂಕಟೇಶ್‌ (ಗಣಿತ): ಅಮೆರಿಕ ಸ್ಟಾನ್‌ಫೋರ್ಡ್‌ ವಿಶ್ವವಿದ್ಯಾಲಯದ
  • ಅನಿಲ್‌ ಭಾರಧ್ವಾಜ್‌ (ಭೌತವಿಜ್ಞಾನ): ವಿಕ್ರಂಸಾರಾಭಾಯ್‌ ಬಾಹ್ಯಾಕಾಶ ಕೇಂದ್ರದ
  • ಕೈವನ್‌ ಮುನ್ಷಿ (ಸಮಾಜ ವಿಜ್ಞಾನ): ಬ್ರಿಟನ್‌ನ ಕೇಂಬ್ರಿಜ್ ವಿಶ್ವವಿದ್ಯಾಲಯದ

ದ್ವಿತೆರಿಗೆ ಒಪ್ಪಂದವನ್ನು ತಿದ್ದುಪಡಿ ಮಾಡಲು ಭಾರತ-ಕಜಖಸ್ತಾನ ನಿರ್ಧಾರ

ದ್ವಿತೆರಿಗೆ (ಎರಡೂ ಕಡೆ ತೆರಿಗೆ ಪಾವತಿ(DTAA))ಯನ್ನು ತಪ್ಪಿಸಲು ಭಾರತ-ಖಜಕಿಸ್ತಾನ ಒಡಂಬಡಿಕೆಯ ತಿದ್ದುಪಡಿ ಮಾಡಲು ನಿರ್ಧರಿಸಿವೆ.  ಭಾರತ-ಖಜಕಿಸ್ತಾನ, (ಡಬಲ್ ಟ್ಯಾಕ್ಸೇಶನ್ ಅವಾಯ್ಡೆನ್ಸ್ ಕನ್ವೆನ್ಷನ್-ಡಿಟಿಎಸಿ) ಗೆ ತಿದ್ದುಪಡಿ ತರುವುದಕ್ಕೆ ಒಪ್ಪಿಗೆ ಸೂಚಿಸಿದ್ದು, ಒಪ್ಪಂದದ ತಿದ್ದುಪಡಿಯಿಂದ ತೆರಿಗೆ ಮಾಹಿತಿಯನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳಬಹುದಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ. ಪರಸ್ಪರ ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳಲು ಭಾರತ-ಖಜಕಿಸ್ತಾನ 1996ರ ಡಿ.9 ರಂದು ಡಿಟಿಎಸಿಗೆ ಸಹಿ ಹಾಕಿದ್ದವು.

ಪ್ರಮುಖಾಂಶಗಳು:

  • ಅಂತಾರಾಷ್ಟ್ರೀಯ ಅಂಗೀಕೃತ ಮಾನದಂಡಗಳಲ್ಲಿ ತೆರಿಗೆ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪರಿಣಾಮಕಾರಿಯಾಗಿ ವಿನಿಮಯ ಮಾಡಿಕೊಳ್ಳಲು ಒಪ್ಪಂದದಡಿ ಅವಕಾಶವನ್ನು ದೊರೆಯಲಿದೆ.
  • ದ್ವಿತೆರಿಗೆ ಒಪ್ಪಂದವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸುವುದು ಹಾಗೂ ತೆರಿಗೆ ಪಾವತಿಯನ್ನು ತಪ್ಪಿಸಿಕೊಳ್ಳುವುದನ್ನು ತಡೆಯಲು ಒಪ್ಪಂದದಡಿ “ಲಿಮಿಟೇಶನ್ ಆಫ್ ಬೆನಿಫಿಟ್ ಆಫ್ ಆರ್ಟಿಕಲ್” ಅನ್ನು ಸೇರಿಸಲಾಗಿದೆ.
  • ಇದೊಂದು ತೆರಿಗೆದಾರ ಸ್ನೇಹಿ ಒಪ್ಪಂದವಾಗಿದ್ದು, ದೇಶದ ಬೇಸ್ ಎರೋಶನ್ ಅಂಡ್ ಪ್ರಾಪಿಟ್ ಶಿಪ್ಟಿಂಗ್ ಯೋಜನೆಯ ಮಾದರಿಯಲ್ಲಿ ರೂಪಿಸಲಾಗಿದೆ.

 

Leave a Comment

This site uses Akismet to reduce spam. Learn how your comment data is processed.