ಉಪಗ್ರಹ ಉಡಾವಣೆ ತಂತ್ರಜ್ಞಾನಕ್ಕೆ ಇಸ್ರೋ ಮತ್ತು ಫ್ರೆಂಚ್ ಬಾಹ್ಯಕಾಶ ಏಜೆನ್ಸಿ ಒಪ್ಪಂದ

ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಫ್ರೆಂಚ್ ಸ್ಪೇಸ್ ಏಜೆನ್ಸಿ (CNES) ಸಂಸ್ಥೆಯು ಉಪಗ್ರಹ ಉಡಾವಣೆ ತಂತ್ರಜ್ಞಾನ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಇಸ್ರೋದ ಅಧ್ಯಕ್ಷ ಕಿರಣ್ ಕುಮಾರ್ ಮತ್ತು CNESನ ಅಧ್ಯಕ್ಷ ಜೀನ್ ಯ್ವೆಸ್ ಲೆ ಗಾಲ್ ನಡುವೆ ಬೆಂಗಳೂರಿಗೆ ಭೇಟಿ ನೀಡಿದ್ದ ಫ್ರೆಂಚ್ ವಿದೇಶಾಂಗ ವ್ಯವಹಾರ ಸಚಿವ ಜೀನ್ ಮಾರ್ಕ್ ಐರಾಲ್ಟ್ ರವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಪ್ರಮುಖಾಂಶಗಳು:

  • ಭಾರತ ಮತ್ತು ಫ್ರೆಂಚ್ ನಡುವಿನ ಪಾಲುದಾರಿಕೆ ಕ್ಷೇತ್ರದಲ್ಲಿ ಬಾಹ್ಯಕಾಶ ಸಹಕಾರ ಅತ್ಯಂತ ಮಹತ್ವದಾಗಿದೆ. ಬಾಹ್ಯಕಾಶ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವೆ ಸುಮಾರು 50 ವರ್ಷಗಳ ಸುದೀರ್ಘ ಅವಧಿಯ ಸಂಬಂಧವನ್ನು ಹೊಂದಲಾಗಿದೆ. ನಾಸಾ ನಂತರ CNES ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಎರಡನೇಯ ಸಂಸ್ಥೆ ಇಸ್ರೋ.
  • ಈ ಒಪ್ಪಂದ ಫ್ರಾನ್ಸ್ CNES ಮತ್ತು ಇಸ್ರೋ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಅಲ್ಲದೇ ಬಾಹ್ಯಕಾಶ ವೆಚ್ಚವನ್ನು ಸರಳೀಕರಿಸುವ ಭಾರತೀಯ ಮಾದರಿಯ ಪ್ರಯೋಜನವನ್ನು ಪಡೆದುಕೊಳ್ಳಲು ಫ್ರಾನ್ಸ್ ಗೆ ಸಹಕಾರಿಯಾಗಲಿದೆ.

ದಡಾರ-ರುಬೆಲ್ಲಾ ಲಸಿಕೆಯನ್ನು ಪರಿಚಯಿಸಲಿರುವ ಕೇಂದ್ರ ಸರ್ಕಾರ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದಡಾರ-ರುಬೆಲ್ಲಾ ಲಸಿಕೆಯನ್ನು ಸಾರ್ವತ್ರಿಕ ಪ್ರತಿರಕ್ಷಣೆ ಕಾರ್ಯಕ್ರಮ (Universal Immunisation Programme)ದಡಿ ಫ್ರೆಬ್ರವರಿ 2017ರಿಂದ ಪರಿಚಯಿಸಲಿದೆ. ಅಲ್ಲದೇ ಸಾರ್ವತ್ರಿಕ ಪ್ರತಿರಕ್ಷಣೆ ಕಾರ್ಯಕ್ರಮದಡಿ ಮೂರು ರಾಜ್ಯಗಳಲ್ಲಿ “ನ್ಯೂಮೊಕಾಕಲ್ ಕಂಜುಗೇಟ್” ಲಸಿಕೆಯನ್ನು ಮಾರ್ಚ್ 2017ರಿಂದ ನೀಡಲಾಗುವುದು.

ಪ್ರಮುಖಾಂಶಗಳು:

  • ದಡಾರ-ರುಬೆಲ್ಲಾ ಲಸಿಕೆಯನ್ನು ಐದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಂದರೆ ಗೋವಾ, ಕರ್ನಾಟಕ, ಲಕ್ಷದ್ವೀಪ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಪರಿಚಯಿಸಲಾಗುವುದು.
  • ಸಾರ್ವತ್ರಿಕ ಪ್ರತಿರಕ್ಷಣೆ ಕಾರ್ಯಕ್ರಮದಡಿ ಈಗಾಗಲೇ ಹತ್ತು ಲಸಿಕೆಗಳನ್ನು ನೀಡಲಾಗುತ್ತಿದ್ದು, ದಡಾರ ಲಸಿಕೆ ಸಹ ಒಂದಾಗಿದೆ. ದಡಾರ-ರುಬೆಲ್ಲಾ ಲಸಿಕೆಯನ್ನು ಪರಿಚಯಿಸಿದ ಮೇಲೆ ಈಗಾಗಲೇ ನೀಡಲಾಗುತ್ತಿರುವ ಮೊನೊವೇಲೆಂಟ್ ದಡಾರ ಲಸಿಕೆಯನ್ನು ಸ್ಥಗಿತಗೊಳಿಸಲಾಗುವುದು.
  • ರಾಷ್ಟ್ರೀಯ ಲಸಿಕೆ ಸಲಹಾ ಸಮಿತಿಯ ಶಿಫಾರಸ್ಸಿನಂತೆ ಈ ಲಸಿಕೆಯನ್ನು ಸಾರ್ವತ್ರಿಕ ಪ್ರತಿರಕ್ಷಣೆ ಕಾರ್ಯಕ್ರಮದಡಿ ಮೂರು ವರ್ಷಗಳ ವರೆಗೆ ನೀಡಲಾಗುವುದು.
  • ನ್ಯೂಮೊಕಾಕಲ್ ಕಂಜುಗೇಟ್” ಲಸಿಕೆಯನ್ನು ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಹಾಗೂ ಬಿಹಾರದಲ್ಲಿ ಪರಿಚಯಿಸಲಾಗುವುದು.

ದಡಾರ-ರುಬೆಲ್ಲಾ ಕಾಯಿಲೆ:

  • ದಡಾರ-ರುಬೆಲ್ಲಾ ಕಾಯಿಲೆಯನ್ನು ಜರ್ಮನ್ ದಡಾರ ಎಂತಲೂ ಕರೆಯಲಾಗುತ್ತದೆ. ಈ ಕಾಯಿಲೆಯ ಗುಣಲಕ್ಷಣಗಳು ದಡಾರವನ್ನೇ ಹೋಲುತ್ತವೆ. ಗರ್ಭೀಣಿ ಸ್ತ್ರೀಯರಿಗೆ ಸೋಂಕು ತಗುಲಿದರೆ ಹುಟ್ಟುವ ಮಕ್ಕಳು ಅಸಹಜವಾಗಿ ಇರುತ್ತವೆ. ಸೋಂಕಿನಿಂದ ಮಕ್ಕಳಲ್ಲಿ ಅಂಧತ್ವ ಹಾಗೂ ಕಿವುಡುತನ ಉಂಟಾಗುತ್ತದೆ. ಅಲ್ಲದೇ ಮೆದುಳು ಹಾಗೂ ಹೃದಯದ ಮೇಲೂ ಪರಿಣಾಮ ಬೀರಲಿದೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 25,000ಕ್ಕೂ ಹೆಚ್ಚು ಮಕ್ಕಳು ಈ ಸೋಂಕಿಗೆ ತುತ್ತಾಗುತ್ತಿದ್ದಾರೆ.

ಸಾರ್ವತ್ರಿಕ ಪ್ರತಿರಕ್ಷಣೆ ಕಾರ್ಯಕ್ರಮ:

  • ಸಾರ್ವತ್ರಿಕ ಪ್ರತಿರಕ್ಷಣೆ ಕಾರ್ಯಕ್ರಮ ಲಸಿಕೆಯಿಂದ ತಡೆಯಬಹುದಾದ ರೋಗಗಳ ವಿರುದ್ದ ಉಚಿತ ಲಸಿಕೆ ನೀಡುವ ಕಾರ್ಯಕ್ರಮವಾಗಿದ್ದು, ಕೇಂದ್ರ ಸರ್ಕಾರ 1985 ರಲ್ಲಿ ಆರಂಭಿಸಿದೆ.
  • ಪ್ರಸ್ತುತ ಇದು ರಾಷ್ಟ್ರೀಯ ಆರೋಗ್ಯ ಮಿಷನ್ ನ ಒಂದು ಭಾಗವಾಗಿದೆ.
  • ಇದರಡಿ ಕ್ಷಯರೋಗ, ಡಿಫ್ತೀರಿಯಾ, ಧರ್ನುವಾಯು, ನಾಯಿಕೆಮ್ಮು, ಪೊಲಿಯೋ, ದಡಾರ, ಹೆಪಟಿಟಿಸ್ ಬಿ, ಡಯೋರಿಯಾ, ಜಪಾನೀಸ್ ಎನ್ಸೆಪಾಲಿಟಿಸ್ ಮತ್ತು ನ್ಯೂಮೋನಿಯಾ ಸೇರಿದಂತೆ ಹತ್ತು ರೋಗಗಳ ವಿರುದ್ದ ಲಸಿಕೆಯನ್ನು ನೀಡಲಾಗುತ್ತಿದೆ.

2 Thoughts to “ಪ್ರಚಲಿತ ವಿದ್ಯಮಾನಗಳು-ಜನವರಿ-11,2017”

  1. SACHCHIDANAND UPPAR

    Good

  2. Sir i Requir KAS Exam releted mains and prelims test

Leave a Comment

This site uses Akismet to reduce spam. Learn how your comment data is processed.