ಗುಜರಾತ್ ನಲ್ಲಿ ಭಾರತದ ಮೊದಲ ಅಂತಾರಾಷ್ಟ್ರೀಯ ಷೇರು ವಿನಿಮಯ ಕೇಂದ್ರ
ದೇಶದ ಮೊದಲ ಅಂತಾರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ‘ಇಂಡಿಯಾ ಇಂಟರ್ ನ್ಯಾಷನಲ್ ಎಕ್ಸ್ ಚೇಂಜ್ ಇಂಡಿಯಾ ಐಎನ್ಎಕ್ಸ್ (India INX)’ಗೆ ಪ್ರಧಾನಿ ನರೇಂದ್ರ ಮೋದಿರವರು ಚಾಲನೆ ನೀಡಿದರು. ಗುಜರಾತ್ನ ಅಂತಾರಾಷ್ಟ್ರೀಯ ಹಣಕಾಸು ಟೆಕ್ಸಿಟಿ (ಗಿಪ್ಟ್ ಸಿಟಿ)ಯಲ್ಲಿ ಈ ಕೇಂದ್ರ ಸ್ಥಾಪನೆಯಾಗಿದೆ. ಇಂಡಿಯಾ ಐಎನ್ಎಕ್ಸ್ ಬಾಂಬೆ ಸ್ಟಾಕ್ ಎಕ್ಸ್ಚೆಂಜ್ ನ ಸಂಪೂರ್ಣ ಸ್ವಾಮ್ಯದ ಸಂಸ್ಥೆಯಾಗಿದೆ. ಜ. 16ರಿಂದ ಇಲ್ಲಿ ವಹಿವಾಟು ಆರಂಭವಾಗಲಿದೆ.
ಪ್ರಮುಖಾಂಶಗಳು:
- ಆರಂಭದಲ್ಲಿ ಇಲ್ಲಿ ನಿವ್ವಳ ಬೆಲೆಯ ಉತ್ಪನ್ನಗಳು, ಕರೆನ್ಸಿ ಉತ್ಪನ್ನಗಳು, ಸರಕು ಉತ್ಪನ್ನ ಸೂಚ್ಯಂಗಳ ವ್ಯಾಪಾರವನ್ನು ನಡೆಸಲಾಗುವುದು. ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ದಿಗೊಂಡ ನಂತರ ಡಿಪಾಸಿಟರಿ ರಸೀದಿಗಳು ಮತ್ತು ಬಾಂಡ್ ಗಳನ್ನು ನೀಡಲಾಗುವುದು.
- ದಿನದ 22 ಗಂಟೆ ಕಾರ್ಯ: ಅಂತಾರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ದಿನದ 22 ಗಂಟೆ ಕಾರ್ಯ ನಿರ್ವಹಿಸಲಿದೆ. ಜಪಾನ್ ಮಾರುಕಟ್ಟೆ ಆರಂಭದಿಂದ ಅಮೆರಿಕದ ಮಾರುಕಟ್ಟೆ ಮುಕ್ತಾಯ ಆಗುವವರೆಗೂ ಕೇಂದ್ರ ತೆರೆದಿರಲಿದೆ.
- ಇಂಡಿಯಾ ಐಎನ್ಎಕ್ಸ್ ಜಗತ್ತಿನಲ್ಲೇ ಅತಿ ವೇಗವಾಗಿ ಕಾರ್ಯನಿರ್ವಹಿಸುವ ಸ್ಟಾಕ್ ಎಕ್ಸ್ಚೇಂಜ್ ಆಗಿದೆ. ಇಲ್ಲಿ ಒಂದು ವಹಿವಾಟು ನಡೆಸಲು ನಾಲ್ಕು ಮೈಕ್ರೊ ಸೆಕೆಂಡ್ ಸಾಕು! ಒಂದು ಮೈಕ್ರೊ ಸೆಕೆಂಡ್ ಎಂದರೆ ಒಂದು ಸೆಕೆಂಡ್ನ 10 ಲಕ್ಷದ ಒಂದು ಭಾಗ. ಸಿಂಗಾಪುರದ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆ 60 ಮೈಕ್ರೊ ಸೆಕೆಂಡ್ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತದ ಮುಂಬೈ ಸ್ಟಾಕ್ ಎಕ್ಸ್ಚೇಂಜ್ 6 ಮೈಕ್ರೊ ಸೆಕೆಂಡ್ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇಂಡಿಯಾ ಐಎನ್ಎಕ್ಸ್ ಅನುಕೂಲ:
- ವಿದೇಶಿ ವಿನಿಮಯ ಕ್ಷೇತ್ರದಲ್ಲಿ ಭಾರತ ವಾರ್ಷಿಕ2 ಲಕ್ಷ ಕೋಟಿ ರೂ. ವಹಿವಾಟು ನಡೆಸುತ್ತದೆ. ಆದರೆ ಹೆಚ್ಚಿನ ವಹಿವಾಟು ದುಬೈ, ಸಿಂಗಾಪುರದಲ್ಲಿರುವ ಅಂತಾರಾಷ್ಟ್ರೀಯ ವಿನಿಮಯ ಕೇಂದ್ರದ ಮೂಲಕ ನಡೆಯುತ್ತಿದೆ. ಈಗ ಗುಜರಾತ್ನಲ್ಲಿ ನೂತನ ಕೇಂದ್ರ ಆರಂಭವಾಗಿದ್ದು, ವಿದೇಶಗಳ ಕೇಂದ್ರದ ಮೇಲೆ ಭಾರತದ ಅವಲಂಬನೆ ತಪ್ಪಲಿದೆ. ವಿದೇಶದಿಂದ ಭಾರತಕ್ಕೆ ಬಂಡವಾಳ ಹರಿವಿಗೆ ಇದು ಸಹಾಯಕವಾಗಲಿದೆ.
ಗುಜರಾತ್ ಸರ್ಕಾರದಿಂದ ಭಾರತದ ಮೊದಲ ಸ್ಟುಡೆಂಟ್ ಸ್ಟಾರ್ಟ್ ಆಫ್ ಹಾಗೂ ನಾವೀನ್ಯ ನೀತಿ
ಗುಜರಾತ್ ಸರ್ಕಾರ ದೇಶದ ಮೊದಲ ವಿದ್ಯಾರ್ಥಿ ನವೋದ್ಯಮ (ಸ್ಟಾರ್ಟ್ ಆಫ್) ಹಾಗೂ ನಾವೀನ್ಯ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯಡಿ ವಿದ್ಯಾರ್ಥಿಗಳು ಅಭಿವೃದ್ದಿಪಡಿಸಿದ ಯೋಜನೆಗಳಿಗೆ ರೂ 200 ಕೋಟಿ ಅನುದಾನವನ್ನು ನೀಡಲಾಗುವುದು.
ನೀತಿಯ ಪ್ರಮುಖಾಂಶಗಳು:
- ಸಮಾಜ, ಕೈಗಾರಿಕೆ ಮತ್ತು ಸಮುದಾಯ ಆಧರಿತ ನಾವೀನ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ನೀತಿಯ ಮುಖ್ಯ ಉದ್ದೇಶ.
- ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನವೋದ್ಯಮ ಮತ್ತು ನಾವೀನ್ಯತೆ ಯೋಜನೆಗಳನ್ನು ಆರಂಭಿಸುವುದು.
- ಗುಜರಾತ್ ಶಿಕ್ಷಣ ಇಲಾಖೆಯಡಿ ಈ ನೀತಿಯನ್ನು ಅಭಿವೃದ್ದಿಪಡಿಸಲಾಗಿದೆ. ರಾಜ್ಯ ಸರ್ಕಾರ ಇದಕ್ಕಾಗಿ ರೂ 200 ಕೋಟಿಯ “ರಾಜ್ಯ ನಾವೀನ್ಯತೆ ನಿಧಿ”ಯನ್ನು ಸ್ಥಾಪಿಸಿದೆ.
ಇ-ಆಡಳಿತ ವ್ಯವಹಾರದಲ್ಲಿ ಕರ್ನಾಟಕಕ್ಕೆ 12ನೇ ಸ್ಥಾನ
ಕೇಂದ್ರ ಸರ್ಕಾರ ಹೊರತಂದಿರುವ ವರದಿ ಪ್ರಕಾರ ಕರ್ನಾಟಕವು ಇ-ಆಡಳಿತದ ವ್ಯವಹಾರದಲ್ಲಿ 12ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ 4 ಸ್ಥಾನ ಕುಸಿತ ಕಂಡಿರುವ ಕರ್ನಾಟಕ, ಈ ವರ್ಷದಲ್ಲಿ 5.67 ಕೋಟಿ ರೂ. ವ್ಯವಹಾರ ನಡೆಸಿದೆ.
- ಕೇಂದ್ರ ಸರ್ಕಾರದ ವರದಿ ಪ್ರಕಾರ 86 ಸೇವೆಗಳಲ್ಲಿ ಇ-ಆಡಳಿತ ವ್ಯವಹಾರ ನಡೆಯುತ್ತಿದೆ. 2015ನೇ ಸಾಲಿನಲ್ಲಿ74 ಕೋಟಿ ರೂ.ಗಳಿಷ್ಟಿತ್ತು.
- ಇ-ಆಡಳಿತ ವ್ಯವಹಾರದಲ್ಲಿ ಕರ್ನಾಟಕಕ್ಕಿಂತ ಆಂಧ್ರಪ್ರದೇಶವು ಸುಮಾರು 15 ಪಟ್ಟು ಮುಂದಿದೆ. ಆಂಧ್ರಪ್ರದೇಶವು ಈ ವರ್ಷದಲ್ಲಿ94 ಕೋಟಿ ರೂ ವ್ಯವಹಾರ ನಡೆಸಿದೆ. ಹಿಂದುಳಿದ ರಾಜ್ಯದ ಪಟ್ಟಿಯಲ್ಲಿರುವ ಛತ್ತೀಸ್ಘಡ ಕೂಡ 8 ಸ್ಥಾನದಲ್ಲಿದೆ.
Very much thanks