ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,6, 2017

Question 1

1. “ಬೋಸ್:ದಿ ಇಂಡಿಯನ್ ಸಮುರಾಯ್-ನೇತಾಜಿ ಅಂಡ್ ದಿ ಐ.ಎನ್.ಎ. ಮಿಲಿಟರಿ ಅಸೆಸ್ಮೆಂಟ್” ಎಂಬ ಕೃತಿಯ ಲೇಖಕರು ಯಾರು?

A
ಅಶೋಕ್ ಟಂಡನ್
B
ಜಿ.ಡಿ.ಬಕ್ಷಿ
C
ಎಸ್.ಎನ್.ಬರುವಾ
D
ಸಂಜೀವ್ ಸನ್ಯಾಲ್
Question 1 Explanation: 
ಜಿ.ಡಿ.ಬಕ್ಷಿ

ನಿವೃತ್ತ ಮೇಜರ್ ಜನರಲ್ ಜಿ.ಡಿ. ಬಕ್ಷಿರವರು “ಬೋಸ್:ದಿ ಇಂಡಿಯನ್ ಸಮುರಾಯ್-ನೇತಾಜಿ ಅಂಡ್ ದಿ ಐ.ಎನ್.ಎ. ಮಿಲಿಟರಿ ಅಸೆಸ್ಮೆಂಟ್” ಎಂಬ ಕೃತಿಯ ಲೇಖಕರು. ಲೇಖಕರು ಈ ಪುಸ್ತಕದಲ್ಲಿ ಸುಭಾಷ್ ಚಂದ್ರ ಬೋಸ್ ರವರು ವಿಮಾನ ದುರಂತದಲ್ಲಿ ಸಾವನ್ನಪ್ಪಿಲ್ಲ, ಆದರೆ ಬ್ರಿಟಿಷರು ಸೆರೆಮನೆಯಲ್ಲಿ ಬೋಸ್ ರವರಿಗೆ ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.)

Question 2

2. ಇತ್ತೀಚೆಗೆ ಜಗತ್ತಿನ ಪ್ರಪ್ರಥಮ ಬೀದಿ ದೀಪ (Street Light) ಬದಲಾವಣೆ ಕಾರ್ಯಕ್ರಮವನ್ನು ಭಾರತದಲ್ಲಿ ಕೈಗೊಳ್ಳಲಾಯಿತು, ಈ ಕಾರ್ಯಕ್ರಮದ ಹೆಸರೇನು?

A
Street Lighting National Programme (SLNP)
B
Energy Efficiency Street Programme (EESP)
C
Single Phase National Programme (SPNP)
D
Energy Efficiency National Programme (EENP)
Question 2 Explanation: 
Street Lighting National Programme (SLNP)

Street Lighting National Programme (SLNP) ನ್ನು ಇತ್ತೀಚೆಗೆ ದೆಹಲಿ ಮುನಿಸಿಪಲ್ ಕಾರ್ಪೊರೇಷನ್ ನಲ್ಲಿ ಚಾಲನೆ ನೀಡಲಾಯಿತು. Street Lighting National Programme (SLNP) ಯು ಜಗತ್ತಿನ ಪ್ರಪ್ರಥಮ ಬೀದಿ ದೀಪ (Street Light) ಬದಲಾವಣೆಯ ಬೃಹತ್ ಕಾರ್ಯಕ್ರಮವಾಗಿದ್ದು, ಕೇಂದ್ರ ಸರ್ಕಾರ, ಇಂಧನ ಇಲಾಖೆ ಮತ್ತು Energy Efficiency Services Limited (EESL) ಇದನ್ನು ಜಂಟಿಯಾಗಿ ಅನುಷ್ಠಾನಗೊಳಿಸುತ್ತಿವೆ. ಈ ಕಾರ್ಯಕ್ರಮ ಸದ್ಯ 14 ರಾಜ್ಯಗಳಲ್ಲಿ ಚಾಲ್ತಿಯಲ್ಲಿದ್ದು, ಸುಮಾರು 15.36 ಲಕ್ಷ ಬೀದಿ ದೀಪಗಳ ಬದಲಾಗಿ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ.

Question 3

3. ಗೋಲ್ಡನ್ ಗ್ಲೋಬ್ ಪ್ರಶಸ್ತಿ 2017 ಸಮಾರಂಭದಲ್ಲಿ, ಈ ಕೆಳಕಂಡ ಯಾವ ಚಲನಚಿತ್ರಕ್ಕೆ ಅತ್ಯುತ್ತಮ ಮೋಷನ್ ಪಿಕ್ಚರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು?

A
ಲಾ ಲಾ ಲ್ಯಾಂಡ್
B
ಹೆಲ್ ಆರ್ ಹೈ ವಾಟರ್
C
ಮೂನ್ ಲೈಟ್
D
ಲಯನ್
Question 3 Explanation: 
ಮೂನ್ ಲೈಟ್

ಬ್ಯಾರಿ ಜಂಕಿನ್ ರಚಿಸಿ ನಿರ್ದೇಶಿಸಿರುವ ಮೂನ್ ಲೈಟ್ ಚಲನಚಿತ್ರಕ್ಕೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ 2017 ಸಮಾರಂಭದಲ್ಲಿ ಅತ್ಯುತ್ತಮ ಮೋಷನ್ ಪಿಕ್ಚರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Question 4

4. ಕ್ಷಯರೋಗದ ಬಗ್ಗೆ ಅರಿವು ಮೂಡಿಸಲು ಶ್ರಮಿಸಿದ ಈ ಕೆಳಕಂಡ ಯಾವ ಭಾರತೀಯ ವ್ಯಕ್ತಿಗೆ ಅಮೆರಿಕಾದ ರಾಜಭಾರ ಕಚೇರಿ ವತಿಯಿಂದ ಸನ್ಮಾನಿಸಲಾಯಿತು?

A
ಅಮಿರ್ ಖಾನ್
B
ಸಚಿನ್ ತಂಡೂಲ್ಕರ್
C
ವಿದ್ಯಾ ಬಾಲನ್
D
ಅಮಿತಾಬ್ ಬಚ್ಚನ್
Question 4 Explanation: 
ಅಮಿತಾಬ್ ಬಚ್ಚನ್
Question 5

5. ಭಾರತದ ಪ್ರಥಮ ಅಂತರರಾಷ್ಟ್ರೀಯ ಷೇರು ವಿನಿಮಯ ಕೇಂದ್ರ “ಭಾರತೀಯ ಅಂತರರಾಷ್ಟ್ರೀಯ ವಿನಿಮಯ ಕೇಂದ್ರ”ವನ್ನು ಯಾವ ನಗರದಲ್ಲಿ ಪ್ರಾರಂಭಿಸಲಾಯಿತು?

A
ಮುಂಬೈ
B
ಪುಣೆ
C
ಗಾಂಧೀನಗರ
D
ಗುರ್ ಗಾವ್
Question 5 Explanation: 
ಗಾಂಧೀನಗರ:

ಭಾರತದ ಪ್ರಥಮ ಅಂತಾರಾಷ್ಟ್ರೀಯ ಷೇರು ವಿನಿಮಯ ಕೇಂದ್ರ “ಭಾರತೀಯ ಅಂತಾರಾಷ್ಟ್ರೀಯ ವಿನಿಮಯ ಕೇಂದ್ರ (ಇಂಡಿಯಾ ಐಎನ್ಎಕ್ಸ್)”ವನ್ನು ಬಾಂಬೆ ಷೇರು ವಿನಿಮಯ (BSE) ಕೇಂದ್ರವು ಗುಜರಾತ್ ನ ಗಾಂಧೀನಗರದಲ್ಲಿ ಪ್ರಾರಂಭಿಸಲಾಯಿತು. ಈ ಕೇಂದ್ರವು ಬಹುರಾಷ್ಟ್ರೀಯ ಕಂಪನಿಗಳಿಗೆ ಇ-ಟ್ರೇಡಿಂಗ್ ವ್ಯವಸ್ಥೆಯ ಸೌಲಭ್ಯ ಕಲ್ಪಿಸಲಿದೆ. ಇದರಿಂದ ದೇಶೀಯ ಕಂಪನಿಗಳು ವಿದೇಶಿ ಕರೆನ್ಸಿಯ ಮೌಲ್ಯದಲ್ಲಿ ಷೇರುಗಳನ್ನು ಮಾರಾಟ ಮಾಡಿ ವಿದೇಶಿ ಕರೆನ್ಸಿಯಲ್ಲಿ ತಮ್ಮ ಆಸ್ತಿಯನ್ನು ಸೃಜಿಸಬಹುದಾಗಿದೆ.

Question 6

6. “ಜಲ ಮಂಥನ-III” 2017 ರ ರಾಷ್ಟ್ರೀಯ ಸಮಾವೇಶ ಭಾರತದ ಯಾವ ನಗರದಲ್ಲಿ ಆಯೋಜಿಸಲಾಗಿತ್ತು?

A
ವಾರಣಾಸಿ
B
ದೆಹಲಿ
C
ಮುಂಬೈ
D
ಕೊಚ್ಚಿ
Question 6 Explanation: 
ದೆಹಲಿ
Question 7

7. ಫೀಫಾ 2016 ರ ಅತ್ಯುತ್ತಮ ಪುರುಷ ಆಟಗಾರನಾಗಿ ಆಯ್ಕೆಯಾದ ವ್ಯಕ್ತಿ ಯಾರು?

A
ಜೆನಡಿನ್ ಜಿಡಾನ್
B
ಲಿಯೋನೆಲ್ ಮೆಸ್ಸಿ
C
ಕ್ರಿಸ್ಟಿಯಾನೊ ರೊನಾಲ್ಡೊ
D
ಕಾರ್ಲಿ ಲಾಯ್ಡ್
Question 7 Explanation: 
ಕ್ರಿಸ್ಟಿಯಾನೊ ರೊನಾಲ್ಡೊ

ಪೋರ್ಚುಗಲ್ ನ ಖ್ಯಾತ ಫುಟ್ ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಫೀಫಾ 2016 ರ ಅತ್ಯುತ್ತಮ ಪುರುಷ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ರೊನಾಲ್ಡೊ ಸ್ಪೈನ್ ನ ರಿಯಲ್ ಮ್ಯಾಡ್ರಿಡ್ ಕ್ಲಬ್ ಮತ್ತು ಪೋರ್ಚುಗಲ್ ನ ರಾಷ್ಟ್ರೀಯ ತಂಡದ ಫುಟ್ ಬಾಲ್ ಆಟಗಾರರಾಗಿದ್ದಾರೆ.

Question 8

8. ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO) ಉಪಗ್ರಹ ಉಡಾವಣಾ ತಂತ್ರಜ್ಞಾನದ ಬಗ್ಗೆ ಈ ಕೆಳಕಂಡ ಯಾವ ರಾಷ್ಟ್ರದ ಅಂತರಿಕ್ಷ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?

A
ಅಮೆರಿಕ
B
ಬ್ರಿಟನ್
C
ಚೀನಾ
D
ಫ್ರಾನ್ಸ್
Question 8 Explanation: 
ಫ್ರಾನ್ಸ್

ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO), ಫ್ರೆಂಚ್ ಅಂತರಿಕ್ಷ ಸಂಸ್ಥೆಯೊಂದಿಗೆ ಉಪಗ್ರಹ ಉಡಾವಣಾ ತಂತ್ರಜ್ಞಾನದ ಮಾಹಿತಿ ವಿನಿಮಯ ಮಾಡಿಕೊಳ್ಳುವ ಸಲುವಾಗಿ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಂತೆ ಫ್ರಾನ್ಸ್ ಅಂತರಿಕ್ಷ ಸಂಸ್ಥೆ ಚಂದ್ರನ ಸಂಶೋಧನೆಯಲ್ಲಿ ಭಾರತಕ್ಕೆ ಸಹಾಯ ನೀಡಲಿದೆ.

Question 9

9. ಭಾರತದ ಅತೀ ದೊಡ್ಡ ಸಾರ್ವಜನಿಕ ವೈಫೈ (WiFi) ಸೇವಾ ಜಾಲವನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಯಿತು?

A
ಕರ್ನಾಟಕ
B
ಮಹಾರಾಷ್ಟ್ರ
C
ಗುಜರಾತ್
D
ಆಂಧ್ರಪ್ರದೇಶ
Question 9 Explanation: 
ಮಹಾರಾಷ್ಟ್ರ:

ಭಾರತದ ಅತೀ ದೊಡ್ಡ ಸಾರ್ವಜನಿಕ ವೈಫೈ (WiFi) ಸೇವಾ ಜಾಲವನ್ನು ಮಹಾರಾಷ್ಟ್ರದಲ್ಲಿ ಪ್ರಾರಂಭಿಸಲಾಯಿತು. ಮಹಾರಾಷ್ಟ್ರ ರಾಜ್ಯ ಸರ್ಕಾರ “ಮುಂಬೈ ವೈಫೈ” ಸೇವೆಯನ್ನು ಮುಂಬೈ ನಗರವನ್ನು ಡಿಜಿಟಲ್ ನಗರವನ್ನಾಗಿ ಮಾಡುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ. ಇದರಡಿ ಸುಮಾರು 500 ವೈಫೈ ಹಾಟ್ ಸ್ಪಾಟ್ ಗಳನ್ನು ಮುಂಬೈ ನಗರದಲ್ಲಿ ಸ್ಥಾಪಿಸಲಾಗಿದೆ.

Question 10

10. “ಯಂಗ್ ಟ್ರಾವೆಲ್ ಪೋಟ್ರೊಗ್ರಾಫರ್ ಆಪ್ ದಿ ಇಯರ್ (Young Travel Photographer of the Year)” ಪ್ರಶಸ್ತಿಯನ್ನು ಪಡೆದ ಭಾರತೀಯ ಯಾರು?

A
ದರ್ಪನ್ ಬಸಕ್
B
ಕಿಶನ್ ಕುಮಾರ್
C
ರವೀಂದ್ರ ಸಿಂಗ್
D
ಭರತ್ ಭೂಷಣ್
Question 10 Explanation: 
ದರ್ಪನ್ ಬಸಕ್

ಭಾರತದ ದರ್ಪನ್ ಬಸಕ್ ರವರು ಪ್ರತಿಷ್ಠಿತ ಯಂಗ್ ಟ್ರಾವೆಲ್ ಪೋಟ್ರೊಗ್ರಾಫರ್ ಆಪ್ ದಿ ಇಯರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಯು ಹವ್ಯಾಸ ವೃತ್ತಿಪರ ಮತ್ತು ಯುವ ಛಾಯಾಗ್ರಾಹಕರಿಗೆ ನೀಡಲಾಗುತ್ತದೆ. ಪ್ರಶಸ್ತಿ ವಿಜೇತರನ್ನು ಜರ್ನಿ ಪೋರ್ಟ್ಪೊಲಿಯೊ ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಅಲ್ಲದೇ ರಾಯಲ್ ಜಿಯೋಗ್ರಾಫಿಕಲ್ ಸೊಸೈಟಿಯಲ್ಲಿ ನಡೆಯುವ ಪ್ರದರ್ಶನದಲ್ಲಿ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುವುದು.

There are 10 questions to complete.

[button link=”http://www.karunaduexams.com/wp-content/uploads/2017/01/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಜನವರಿ-6.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,6, 2017”

  1. Ashwath

    Very best information

Leave a Comment

This site uses Akismet to reduce spam. Learn how your comment data is processed.