ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,9,10, 2017

Question 1
1. “ಡೆನಿಯಲ್ ಒರ್ಟೆಗ (Daniel Ortega)” ರವರು ಯಾವ ದೇಶದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ?
A
ಕೀನ್ಯಾ
B
ನಿಕರಾಗ್ವ
C
ನೈಜೀರಿಯಾ
D
ಇಥೋಪಿಯಾ
Question 1 Explanation: 
ನಿಕರಾಗ್ವ

ಮಾಜಿ ಕ್ರಾಂತಿಕಾರಿ ಹೋರಾಟಗಾರ ಡೆನಿಯಲ್ ಒರ್ಟೆಗ ರವರು ನಿಕರಾಗ್ವದ ಅಧ್ಯಕ್ಷರಾಗಿ ಮೂರನೇ ಅವಧಿಗೆ ಆಯ್ಕೆಯಾದರು. ಒರ್ಟೆಗ ರವರ ಪತ್ನಿ ರೊಸಾರೊಯೋ ಮುರಿಲ್ಲೊ ರವರು ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ.

Question 2

2. “ದಿ ನೊಬೆಲ್ ಪ್ರೈಸ್ ಸೀರೀಸ್ ಇಂಡಿಯಾ 2017 (The Nobel Prize Series India)” ಕಾರ್ಯಕ್ರಮವನ್ನು ಯಾವ ರಾಜ್ಯದಲ್ಲಿ ಆಯೋಜಿಸಲಾಗಿತ್ತು?

A
ಪಂಜಾಬ್
B
ಮಹಾರಾಷ್ಟ್ರ
C
ಗುಜರಾತ್
D
ಅಸ್ಸಾಂ
Question 2 Explanation: 
ಗುಜರಾತ್

ಇತ್ತೀಚೆಗೆ ಗುಜರಾತ್ ನ ಗಾಂಧೀನಗರದಲ್ಲಿ ಜರುಗಿದ ವೈಬ್ರೆಂಟ್ ಗುಜರಾತ್ ಜಾಗತಿಕ ಸಮ್ಮೇಳನದಲ್ಲಿ “ದಿ ನೊಬೆಲ್ ಪ್ರೈಸ್ ಸೀರೀಸ್ ಇಂಡಿಯಾ 2017 (The Nobel Prize Series India)” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗುಜರಾತ್ ನಲ್ಲಿ ಸಂಶೋಧನೆ ಮತ್ತು ಕ್ರಿಯಾತ್ಮಕ ಆಲೋಚನೆಯನ್ನು ಉತ್ತೇಜಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಲಾಗಿತ್ತು. ನೊಬೆಲ್ ಪ್ರೈಸ್ ಸೀರೀಸ್ 5 ದಿನಗಳ ನಡೆಯುವ ವಿಜ್ಞಾನ ಪ್ರದರ್ಶನವಾಗಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು 9 ನೊಬೆಲ್ ಪ್ರಶಸ್ತಿ ವಿಜೇತರು ಪಾಲ್ಗೊಂಡಿದ್ದರು.

Question 3

3. ಪ್ರತಿ ವರ್ಷ “ವಿಶ್ವ ಹಿಂದಿ ದಿನಾಚರಣೆ”ಯನ್ನು ಯಾವಾಗ ಆಚರಿಸಲಾಗುತ್ತದೆ?

A
ಜನವರಿ 9
B
ಜನವರಿ 10
C
ಜನವರಿ 18
D
ಜನವರಿ 21
Question 3 Explanation: 
ಜನವರಿ 10

ಪ್ರಥಮ ವಿಶ್ವ ಹಿಂದಿ ಸಮ್ಮೇಳನ 1975 ರಲ್ಲಿ ಆಯೋಜನೆಗೊಂಡಿತ್ತು, ಇದರ ವಾರ್ಷಿಕೋತ್ಸವದ ಅಂಗವಾಗಿ ಪ್ರತಿ ವರ್ಷ ಜನವರಿ 10 ರಂದು ವಿಶ್ವ ಹಿಂದಿ ದಿನಾಚರಣೆ ಆಚರಿಸಲಾಗುತ್ತಿದೆ, ಹಿಂದಿ ಭಾಷೆಯನ್ನು ವಿಶ್ವದೆಲ್ಲಡೆ ಪಸರಿಸುವ ಸಲುವಾಗಿ ಈ ದಿನ ಆಚರಿಸಲಾಗುತ್ತಿದೆ.

Question 4

4. ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ ಅಥ್ಲೀಟ್ ಸಮಿತಿಗೆ ಸದಸ್ಯರಾಗಿ ಆಯ್ಕೆಯಾದ ಭಾರತೀಯ ಹಾಕಿ ಆಟಗಾರ ಯಾರು?

A
ಧನರಾಜ್ ಪಿಳ್ಳೈ
B
ವಿ ಆರ್ ರಘುನಾಥ್
C
ಮನ್ ದೀಪ್ ಸಿಂಗ್
D
ಪಿ ಆರ್ ಶ್ರೀಜೇಶ್
Question 4 Explanation: 
ಪಿ ಆರ್ ಶ್ರೀಜೇಶ್

ಭಾರತ ಹಾಕಿ ತಂಡದ ನಾಯಕ ಪಿ ಆರ್ ಶ್ರೀಜೇಶ್ ರವರು ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ ಅಥ್ಲೀಟ್ ಸಮಿತಿಗೆ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಎಂಟು ಜನರ ಸಮಿತಿಯು ಹಾಲಿ ಹಾಗೂ ಮಾಜಿ ಹಾಕಿ ಆಟಗಾರರನ್ನು ಒಳಗೊಂಡಿದೆ. ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ ನಿರ್ಣಯಗಳಲ್ಲಿ ಆಟಗಾರರ ಪರವಾಗಿ ಧ್ವನಿ ಎತ್ತುವ ಅಧಿಕಾರವನ್ನು ಸಮಿತಿ ಹೊಂದಿದೆ.

Question 5

5. “ಭಾರತೀಯ ಹಬ್ಬ (Festival Of India) ವನ್ನು ಆಯೋಜಿಸಲಿರುವ ರಾಷ್ಟ್ರ ಯಾವುದು?

A
ಮಲೇಷಿಯ
B
ಕಾಂಬೋಡಿಯಾ
C
ಘಾನ
D
ಮರೀಷಿಯಸ್
Question 5 Explanation: 
ಘಾನ

ಭಾರತೀಯ ಹಬ್ಬ (Festival Of India) ವನ್ನು ಘಾನ ದೇಶ ಜನವರಿ 25 ರಿಂದ ಮಾರ್ಚ್ 16, 2017 ರವರೆಗೆ ಆಯೋಜಿಸಲಿದೆ. ಈ ಹಬ್ಬದಲ್ಲಿ ಭಾರತೀಯ ಸಾಂಸ್ಕೃತಿಕ ನೃತ್ಯ , ಸೂಫಿ ಮತ್ತು ಜನಪದ ಸಂಗೀತದ ಪ್ರಾಕಾರಗಳನ್ನು ಪ್ರದರ್ಶಿಸಲಾಗುವುದು. ಇದರೊಂದಿಗೆ ಭಾರತೀಯ ಆಹಾರ ಮೇಳ, ಯೋಗ, ಧ್ಯಾನ ಮತ್ತು ಸಿನಿಮಾ ಉತ್ಸವ ಒಳಗೊಂಡಿರಲಿದೆ.

Question 6

6. ಪಾರ್ಕರ್ ಆಟವನ್ನು ವಿಶ್ವದಲ್ಲಿ ಪ್ರಥಮವಾಗಿ ಅಧಿಕೃತ ಕ್ರೀಡೆ ಎಂದು ಗುರುತಿಸಿದ ದೇಶ ಯಾವುದು?

A
ಯುನೈಟೆಡ್ ಕಿಂಗ್ ಡಮ್
B
ಜರ್ಮನಿ
C
ಅಮೆರಿಕ
D
ಚೀನಾ
Question 6 Explanation: 
ಯುನೈಟೆಡ್ ಕಿಂಗ್ ಡಮ್

ಯುನೈಟೆಡ್ ಕಿಂಗ್ ಡಮ್ ‘ಪಾರ್ಕರ್’ ಆಟವನ್ನು ವಿಶ್ವದಲ್ಲಿ ಪ್ರಥಮವಾಗಿ ಅಧಿಕೃತ ಕ್ರೀಡೆ ಎಂದು ಗುರುತಿಸಿದ ದೇಶವಾಗಿದೆ. ಪಾರ್ಕರ್ ಆಟದಲ್ಲಿ ಯಾವುದೋ ಒಂದು ಗುರಿಯನ್ನು ಓಟದ ಮೂಲಕ, ಜಿಗಿತದ ಮೂಲಕ ಕಟ್ಟಡ ಹತ್ತುವ ಮೂಲಕ ಮುಟ್ಟುವುದಾಗಿದೆ.

Question 7

7. ‘ಟಾಟಾ ಸಮೂಹ” ಸಂಸ್ಥೆಯ ನೂತನ ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ?

A
ನಟರಾಜನ್ ಚಂದ್ರಶೇಖರನ್
B
ಅರವಿಂದ್ ಗೋಸ್ವಾಮಿ
C
ಇಂದಿರಾ ನೂಯಿ
D
ನಿಯೋಲ್ ಟಾಟಾ
Question 7 Explanation: 
ನಟರಾಜನ್ ಚಂದ್ರಶೇಖರನ್

ಟಿಸಿಎಸ್ ಸಿಇಓ ನಟರಾಜನ್ ಚಂದ್ರಶೇಖರನ್ ಅವರನ್ನು ಟಾಟಾ ಸನ್ಸ್ ನ ಹೊಸ ಅಧ್ಯಕ್ಷರನ್ನಾಗಿ ಕಂಪೆನಿಯು ನೇಮಿಸಿದೆ. ಇವರು ಈಗಿನ ತಾತ್ಕಾಲಿಕ ಅಧ್ಯಕ್ಷ ರತನ್ ಟಾಟಾ ಹಾಗೂ ಪದಚ್ಯುತ ಸೈರಸ್ ಮಿಸ್ತ್ರಿ ಅವರ ಉತ್ತರಾಧಿಕಾರಿಯಾಗಿರುತ್ತಾರೆ. ರತನ್ ಟಾಟಾ ಅವರ ಅಧ್ಯಕ್ಷತೆಯಲ್ಲಿ ನಡೆದ ಟಾಟಾ ಸನ್ಸ್ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.

Question 8

8. ಭಾರತದ ಪ್ರಪ್ರಥಮ ಸೋಲಾರ್ ಶಕ್ತಿ ಆಧಾರಿತ ಹಡಗು “ಆದಿತ್ಯ”ವನ್ನು ಯಾವ ರಾಜ್ಯದಲ್ಲಿ ಲೋಕಾರ್ಪಣೆ ಮಾಡಲಾಯಿತು?

A
ತಮಿಳುನಾಡು
B
ಕೇರಳ
C
ಪಶ್ಚಿಮ ಬಂಗಾಳ
D
ಗೋವಾ
Question 8 Explanation: 
ಕೇರಳ:

ಭಾರತದ ಮೊದಲ ಸೋಲಾರ್ ಶಕ್ತಿ ಆಧಾರಿತ ಹಡಗು “ಆದಿತ್ಯ”ವನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರು ಕೊಚ್ಚಿಯಲ್ಲಿ ಉದ್ಘಾಟಿಸಿದರು. 75 ಆಸನಗಳನ್ನು ಒಳಗೊಂಡಿರುವ ಈ ಹಡಗಿನ ಮೇಲೆ 78 ಸೌರ ಫಲಕಗಳನ್ನು ಅಳವಡಿಸಲಾಗಿದೆ. ಗರಿಷ್ಠ 7.5 ನಾಟ್ ವೇಗದಲ್ಲಿ ಈ ಹಡಗು ಚಲಿಸಲಿದೆ.

Question 9

9. ಛಬ್ರಾ ಉಷ್ಣ ವಿದ್ಯುತ್ ಸ್ಥಾವರ ಯಾವ ರಾಜ್ಯದಲ್ಲಿ ನೆಲೆಗೊಂಡಿದೆ?

A
ರಾಜಸ್ತಾನ
B
ಮಧ್ಯಪ್ರದೇಶ
C
ಛತ್ತೀಸ್ ಗಢ
D
ಗುಜರಾತ್
Question 9 Explanation: 
ರಾಜಸ್ತಾನ
Question 10

10. ಅಟ್ಲಾಂಟಿಕ್ ಕೌನ್ಸಿಲ್ (AC) -ವಿಚಾರ ವೇದಿಕೆಯ ಪ್ರಧಾನ ಕಚೇರಿ ಎಲ್ಲಿದೆ?

A
ಜೆನೀವ
B
ಹೇಗ್
C
ಬರ್ಲಿನ್
D
ವಾಷಿಂಗ್ಟನ್
Question 10 Explanation: 
ವಾಷಿಂಗ್ಟನ್:

ಅಟ್ಲಾಂಟಿಕ್ ಕೌನ್ಸಿಲ್ (AC) -ವಿಚಾರ ವೇದಿಕೆಯು ಅಮೆರಿಕ ಮೂಲದ ಸಂಸ್ಥೆಯಾಗಿದ್ದು, ಅಂತರರಾಷ್ಟ್ರೀಯ ವಿನಿಮಯ ಮತ್ತು ನಾಯಕತ್ವವನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ಅಟ್ಲಾಂಟಿಕ್ ಕೌನ್ಸಿಲ್ (AC) -ವಿಚಾರ ವೇದಿಕೆಯ ಪ್ರಧಾನ ಕಚೇರಿ ವಾಷಿಂಗ್ಟನ್ ನಲ್ಲಿದೆ. ಭಾರತದ ಮಾಜಿ ಕೇಂದ್ರ ಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಾದ ಮನೀಷ್ ತಿವಾರಿಯವರು ಇತ್ತೀಚೆಗೆ ಈ ಸಂಸ್ಥೆಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2017/01/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ910-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,9,10, 2017”

  1. R THULASI

    its a wonderfull website for students and all sir

Leave a Comment

This site uses Akismet to reduce spam. Learn how your comment data is processed.