ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,11, 2017
Question 1 |
1. ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಎಂಬ ಖ್ಯಾತಿ ಗಳಿಸಿರುವ ‘ಮವ್ಲಿನ್ನಾಂಗ್” (Mawlynnong) ಭಾರತದ ಯಾವ ರಾಜ್ಯದಲ್ಲಿದೆ?
ನಾಗಾಲ್ಯಾಂಡ್ | |
ಮೇಘಾಲಯ | |
ಮಣಿಪುರ | |
ಹಿಮಾಚಲ ಪ್ರದೇಶ |
ಏಷ್ಯಾದ ಅತ್ಯಂತ ಸ್ವಚ್ಚ ಗ್ರಾಮ ಎಂಬ ಖ್ಯಾತಿ ಪಡೆದಿರುವ ಮವ್ಲಿನ್ನಾಂಗ್” ಗ್ರಾಮ ಮೇಘಾಲಯ ಪೂರ್ವ ಖಾಸಿ ಜಿಲ್ಲೆಯಲ್ಲಿದೆ. ಸ್ವಚ್ಚತೆ ಮತ್ತು ನೈಸರ್ಗಿಕ ತಾಣದಿಂದ ಜನಪ್ರಿಯಗೊಂಡಿದೆ. ಡಿಸ್ಕವರಿ ಇಂಡಿಯಾ 2003 ರಲ್ಲಿ ಈ ಗ್ರಾಮವನ್ನು ಏಷ್ಯಾದ ಸ್ಚಚ್ಚ ಗ್ರಾಮವೆಂದು ಬಣ್ಣಿಸಿತ್ತು. ಗ್ರಾಮದ ಈ ಖ್ಯಾತಿಯನ್ನು ಕಾಪಾಡಲು ಪ್ರತಿ ಶನಿವಾರ 550 ಸ್ವಯಂ ಸೇವಕರು ಗ್ರಾಮವನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಮುಂದುವರೆಸಿದ್ದಾರೆ.
Question 2 |
2. ಭಾರತದಲ್ಲಿ ಆಚರಿಸಲಾಗುತ್ತಿರುವ ‘ರಾಷ್ಟ್ರೀಯ ಯುವ ಜನೋತ್ಸವ-2017’ ಕಾರ್ಯಕ್ರಮದ ಧ್ಯೇಯವಾಕ್ಯ ಏನು?
ಪವರ್ ಆಫ್ ಡಿಜಿಟಲ್ ಇಂಡಿಯ | |
ಯೂತ್ ಫಾರ್ ಡಿಜಿಟಲ್ ಇಂಡಿಯ | |
ಸೆಲೆಬ್ರೇಟಿಂಗ್ ಡೈವರ್ಸಿಟಿ ಇನ್ ಯೂನಿಟಿ | |
ಯಂಗ್ ಇಂಡಿಯಾ |
ಸ್ವಾಮಿ ವಿವೇಕನಂದರ ಹುಟ್ಟುಹಬ್ಬದ ಸ್ಮರಣಾರ್ಥ ಪ್ರತಿ ವರ್ಷ ಭಾರತದಲ್ಲಿ ರಾಷ್ಟ್ರೀಯ ಯುವಜನೋತ್ಸವವನ್ನು ಆಯೋಜಿಸಲಾಗುತ್ತಿದೆ. ರಾಷ್ಟ್ರೀಯ ಯುವ ಜನೋತ್ಸವ-2017’ 21 ನೇ ಆವೃತ್ತಿಯನ್ನು ಹರಿಯಾಣದಲ್ಲಿ ಆಚರಿಸಲಾಗುತ್ತಿದೆ ಮತ್ತು ಈ ಉತ್ಸವದ ಧ್ಯೇಯವಾಕ್ಯ ‘ಯೂತ್ ಫಾರ್ ಡಿಜಿಟಲ್ ಇಂಡಿಯಾ” ಎಂಬುದಾಗಿದೆ.
Question 3 |
3. “ಅನ್ ಸೂಟಬಲ್ ಬಾಯ್ (An Unsuitable Boy) “ ಇದು ಭಾರತೀಯ ಚಿತ್ರರಂಗದ ಪ್ರಖ್ಯಾತ ವ್ಯಕ್ತಿಯ ಆತ್ಮಚರಿತ್ರೆಯಾಗಿದೆ. ಆ ವ್ಯಕ್ತಿ ಯಾರು?
ಅಮಿತಾಬ್ ಬಚ್ಚನ್ | |
ಆಮಿರ್ ಖಾನ್ | |
ರಿಷಿ ಕಪೂರ್ | |
ಕರಣ್ ಜೋಹರ್ |
“ಅನ್ ಸೂಟಬಲ್ ಬಾಯ್” ಇದು ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರ ಆತ್ಮಕಥೆ ಆಗಿದೆ.
Question 4 |
4. ಇತ್ತೀಚೆಗೆ ಭಾರತೀಯ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಸಮೀಕ್ಷೆ ಬಗ್ಗೆ ಒಂದು ಸಮಿತಿ ಕೇಂದ್ರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿತು, ಈ ಸಮಿತಿ ಯಾವುದು?
ಮನೋಹರ್ ಜೋಷಿ ಸಮಿತಿ | |
ನಿತಿನ್ ಕುಮಾರ್ ಸಮಿತಿ | |
ಸುಮಿತ್ ಬೋಸ್ ಸಮಿತಿ | |
ಆನಂದ ಶುಕ್ಲ ಸಮಿತಿ |
ಕೇಂದ್ರ ಸರ್ಕಾರ ಮಾಜಿ ಆರ್ಥಿಕ ಕಾರ್ಯದರ್ಶಿ ಸುಮಿತ್ ಬೋಸ್ ರವರ ಅಧ್ಯಕ್ಷತೆಯಲ್ಲಿ ಭಾರತೀಯ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಸಮೀಕ್ಷೆ ಬಗ್ಗೆ ಅಧ್ಯಯನ ನಡೆಸಲು ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ತನ್ನ ವರದಿಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಲ್ಲಿಸಿತು. ತನ್ನ ವರದಿಯಲ್ಲಿ ರಾಜ್ಯಗಳಿಗೆ ಹಂಚಲಾಗುವ ಅನುದಾನದ ಬಗ್ಗೆ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳ ಆಯ್ಕೆಯಲ್ಲಿ ನೀಡಬಹುದಾದ ಆದ್ಯತೆಯ ಬಗ್ಗೆ ಶಿಫಾರಸ್ಸು ಮಾಡಿದೆ.
Question 5 |
5. 2016-17 ನೇ ಸಾಲಿನ ರಣಜಿ ಪ್ರಶಸ್ತಿಯನ್ನು ಈ ಕೆಳಕಂಡ ಯಾವ ತಂಡ ತನ್ನದಾಗಿಸಿಕೊಂಡಿತು?
ಗುಜರಾತ್ | |
ಮುಂಬೈ | |
ತಮಿಳುನಾಡು | |
ಕರ್ನಾಟಕ |
ಗುಜರಾತ್ ತಂಡ ಪ್ರಬಲ ಮುಂಬೈ ತಂಡವನ್ನು ಮಣಿಸಿ ಮೊದಲ ಬಾರಿಗೆ ರಣಜಿ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಗುಜರಾತ್ ತಂಡ ಈ ಗೆಲುವಿನೊಂದಿಗೆ ದೇಶೀಯ ಕ್ರಿಕೆಟ್ನ ಮೂರು ಪ್ರಮುಖ ಟ್ರೋಫಿಗಳನ್ನು ಗೆದ್ದ ಮೊದಲ ತಂಡ ಎಂಬ ಗೌರವಕ್ಕೂ ಸಹ ಪಾತ್ರವಾಯಿತು. ಗುಜರಾತ್ ವಿಜಯ್ ಹಜಾರೆ ಟ್ರೋಫಿ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದುಕೊಂಡಿದೆ.
Question 6 |
6. ಭಾರತೀಯ ತಾಂತ್ರಿಕ ಸಂಸ್ಥೆ (IIT) ಗಳಲ್ಲಿ ಮಹಿಳಾ ಮೀಸಲಾತಿ ನೀಡುವಂತೆ ಈ ಕೆಳಕಂಡ ಯಾವ ಸಮಿತಿ ಶಿಫಾರಸ್ಸು ಮಾಡಿದೆ?
ಧರ್ಮಾಧಿಕಾರಿ ಸಮಿತಿ | |
ಸುಮಿತ್ ಬೋಸ್ ಸಮಿತಿ | |
ಅಭಿಜೀತ್ ಸೇನ್ ಸಮಿತಿ | |
ಟಿಮೋತಿ ಗೋನ್ಸಲ್ವ್ ಸಮಿತಿ |
ಭಾರತೀಯ ತಾಂತ್ರಿಕ ಸಂಸ್ಥೆ ಯಲ್ಲಿ ಇತ್ತೀಚೆಗೆ ಮಹಿಳಾ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ, ಪ್ರೊ. ಟಿಮೋತಿ ಗೋನ್ಸಲ್ವ್ ರವರ ಆಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಈ ಸಮಿತಿಯು ಭಾರತೀಯ ತಾಂತ್ರಿಕ ಸಂಸ್ಥೆ (IIT) ಗಳಲ್ಲಿ ಮಹಿಳಾ ಮೀಸಲಾತಿ ನೀಡುವಂತೆ ಶಿಫಾರಸ್ಸು ಮಾಡಿದೆ.
Question 7 |
7. ಇತ್ತೀಚೆಗೆ ಬಿಡುಗಡೆಗೊಂಡ ‘ ಜಾಗತಿಕ ಪ್ರತಿಭಾ ಸ್ಪರ್ಧಾತ್ಮಕತೆ ದಿಕ್ಸೂಚಿ-2017’ ರಲ್ಲಿ ಭಾರತ ಯಾವ ಶ್ರೇಣಿ ಹೊಂದಿದೆ?
77 | |
68 | |
92 | |
102 |
ಜಾಗತಿಕ ಪ್ರತಿಭಾ ಸ್ಪರ್ಧಾತ್ಮಕತೆ ದಿಕ್ಸೂಚಿ-2017’(Global Talent Competitiveness Index) ಯಲ್ಲಿ ಒಟ್ಟು 118 ದೇಶಗಳ ಪೈಕಿ ಭಾರತ 92 ನೇ ಸ್ಥಾನವನ್ನು ಪಡೆದಿದೆ. ಈ ದಿಕ್ಸೂಚಿಯಲ್ಲಿ ದೇಶದಲ್ಲಿನ ಪ್ರತಿಭೆಗಳನ್ನು ಹೇಗೆ ಅಭಿವೃದ್ಧಿ ಪಡಿಸುತ್ತವೆ, ಆಕರ್ಷಿಸುತ್ತವೆ ಮತ್ತು ತಮ್ಮಲ್ಲೇ ಉಳಿಸಿಕೊಳ್ಳುತ್ತವೆ ಎಂಬುದರ ಮೇಲೆ ಸಿದ್ಧಪಡಿಸಲಾಗಿದೆ. ಪಟ್ಟಿಯಲ್ಲಿ ಸ್ವಿಟ್ಜರ್ಲ್ಯಾಂಡ್ ಪ್ರಥಮ ಸ್ಥಾನವನ್ನು, ಸಿಂಗಾಪುರ, ಯುನೈಟೆಡ್ ಕಿಂಗ್ ಡಮ್, ಅಮೆರಿಕಾ, ಸ್ವೀಡನ್ ಮತ್ತು ಆಸ್ಟ್ರೇಲಿಯಾ ನಂತರದ ಸ್ಥಾನಗಳನ್ನು ಅಲಂಕರಿಸಿವೆ.
Question 8 |
8. ಯಾವ ರಾಜ್ಯದ ಪ್ರವಾಸೋದ್ಯಮ ಇಲಾಖೆ ತನ್ನ ಪ್ರವಾಸೋದ್ಯಮವನ್ನು ವರ್ಧಿಸುವ ಸಲುವಾಗಿ ‘ಪಿನಾಕಿನ್’ ಎಂಬ ಮೊಬೈಲ್ ಆಪ್ ಬಿಡುಗಡೆಗೊಳಿಸಿದೆ?
ಆಂಧ್ರಪ್ರದೇಶ | |
ತಮಿಳುನಾಡು | |
ಗುಜರಾತ್ | |
ರಾಜಸ್ತಾನ |
ತನ್ನ ರಾಜ್ಯದ ಪ್ರವಾಸೋದ್ಯಮ ತಾಣಗಳ ಸಮಗ್ರ ಮಾಹಿತಿ ಒದಗಿಸುವ ಸಲುವಾಗಿ ತಮಿಳುನಾಡು ಪ್ರವಾಸೋದ್ಯಮ ಇಲಾಖೆ ‘ಪಿನಾಕಿನ್’ ಎಂಬ ಮೊಬೈಲ್ ಆಪ್ ಬಿಡುಗಡೆಗೊಳಿಸಿದೆ. ಆಪ್ ತಮಿಳು ಮತ್ತು ಆಂಗ್ಲ ಭಾಷೆಯಲ್ಲಿದ್ದು ಶ್ರವ್ಯದ ಮೂಲಕ ಮಾಹಿತಿ ನೀಡಲಿದೆ.
Question 9 |
9. ಭಾರತದಲ್ಲಿ ಪ್ರಥಮವಾಗಿ “ಆನಂದಂ ಕಾರ್ಯಕ್ರಮವನ್ನು” ಪ್ರಾರಂಭಿಸಿದ ರಾಜ್ಯ ಯಾವುದು?
ಉತ್ತರಾಚoಲ | |
ಅಸ್ಸಾಂ | |
ದೆಹಲಿ | |
ಮಧ್ಯಪ್ರದೇಶ |
ಭಾರತದಲ್ಲಿ ಪ್ರಥಮವಾಗಿ ಆನಂದ ಇಲಾಖೆಯನ್ನು ಆರಂಭಿಸಿದ ಮಧ್ಯಪ್ರದೇಶ ರಾಜ್ಯ ಸರ್ಕಾರ ಅಗತ್ಯವಿರುವ ಜನರಿಗಾಗಿ ‘ಆನಂದಂ ಕಾರ್ಯಕ್ರಮವನ್ನು’ ಪ್ರಾರಂಭಿಸಿದೆ. ರಾಜ್ಯದಲ್ಲಿರುವ ಶ್ರೀಮಂತ ವ್ಯಕ್ತಿಗಳು ಬಡತನದಲ್ಲಿರುವ ಜನರಿಗಾಗಿ ಸ್ವಯಂ ಪ್ರೇರಿತವಾಗಿ ಕೊಡುಗೆ ನೀಡುವುದು ಈ ಕಾರ್ಯಕ್ರಮದ ಮೂಲ ಉದ್ದೇಶ.
Question 10 |
10. 2011ರ ಜನಗಣತಿ ಪ್ರಕಾರ ಭಾರತದ ಜನಸಾಂದ್ರತೆ ಎಷ್ಟಿದೆ?
375 | |
382 | |
390 | |
393 |
2011ರ ಜನಗಣತಿ ಪ್ರಕಾರ ಭಾರತದ ಜನಸಾಂದ್ರತೆ ಪ್ರತಿ ಚದರ ಕಿ.ಮೀಗೆ 382 ರಷ್ಟಿದೆ. 2001 ರಲ್ಲಿ 325 ರಷ್ಟಿತ್ತು.
[button link=”http://www.karunaduexams.com/wp-content/uploads/2017/01/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ11-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Bestquotetions