ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,12,13, 2017

Question 1
1. ಎ.ಟಿ.ಎಂ.ಸೌಕರ್ಯ ಹೊಂದಿರುವ ಭಾರತದ ಪ್ರಪ್ರಥಮ ಸಮರನೌಕೆ ಯಾವುದು?
A
ಐ.ಎನ್.ಎಸ್. ವಿರಾಟ್
B
ಐ.ಎನ್.ಎಸ್. ಅರಿಹಂತ್
C
ಐ.ಎನ್.ಎಸ್. ವಿಕ್ರಮಾದಿತ್ಯ
D
ಐ.ಎನ್.ಎಸ್. ವೆದಾಂತ್
Question 1 Explanation: 
ಐ.ಎನ್.ಎಸ್. ವಿಕ್ರಮಾದಿತ್ಯ

ರಷ್ಯಾ ನಿರ್ಮಿತ ಭಾರತದ ಅತ್ಯಂತ ದೊಡ್ಡ ಮತ್ತು ಅತ್ಯಾಧುನಿಕ ಯುದ್ಧನೌಕೆಗಳನ್ನು ಹೊಂದಿರುವ ಐ.ಎನ್.ಎಸ್. ವಿಕ್ರಮಾದಿತ್ಯ, ಎ.ಟಿ.ಎಂ. ಸೌಕರ್ಯ ಹೊಂದಿರುವ ಭಾರತದ ಪ್ರಪ್ರಥಮ ಸಮರನೌಕೆ ಎಂಬ ಗೌರವಕ್ಕೂ ಪಾತ್ರವಾಗಿದೆ. ಸದ್ಯ ಕಾರವಾರದ ನೌಕಾ ನೆಲೆಯಲ್ಲಿರುವ ಯುದ್ಧ ನೌಕೆ ಭಾರತೀಯ ಸ್ಟೇಟ್ ಬ್ಯಾಂಕ್ ನ ಎ.ಟಿ.ಎಂ. ಶಾಖೆಯನ್ನು ಹೊಂದಿದೆ.

Question 2

2. ಇಂಧನ ಉಳಿತಾಯ ಮಾಡಲು “ಮಿಷನ್ 41ಕೆ” ಎಂಬ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಯಾವ ಸಚಿವಾಲಯ ಪ್ರಾರಂಭಿಸಿದೆ?

A
ನಗರಾಭಿವೃದ್ಧಿ ಸಚಿವಾಲಯ
B
ಗ್ರಾಮೀಣಾಭಿವೃದ್ಧಿ ಸಚಿವಾಲಯ
C
ರೈಲ್ವೆ ಸಚಿವಾಲಯ
D
ಇಂಧನ ಸಚಿವಾಲಯ
Question 2 Explanation: 
ರೈಲ್ವೆ ಸಚಿವಾಲಯ

ಮುಂದಿನ 10 ವರ್ಷಗಳಲ್ಲಿ ಇಂಧನ ಬಳಕೆಯಲ್ಲಿ ರೂ. 41000-00 ಕೋಟಿಗಳಷ್ಟು ಉಳಿತಾಯ ಮಾಡುವ ಗುರಿ ಹೊಂದಿರುವ ಕೇಂದ್ರ ರೈಲ್ವೆ ಸಚಿವಾಲಯ “ಮಿಷನ್ 41ಕೆ” ಎಂಬ ನೂತನ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಗುರಿಯನ್ನು ಸಾಧಿಸುವ ಸಲುವಾಗಿ ರೈಲ್ವೆ ಸಚಿವಾಲಯ ಈಗಿರುವ ಶೇ.50 ರಷ್ಟು ಡೀಸಲ್ ಇಂಧನ ಬಳಕೆಯನ್ನು ಕಡಿಮೆಗೊಳಿಸಿ ಶೇ. 90 ರಷ್ಟು ವಿದ್ಯುತ್ ಚಾಲಿತ ರೈಲ್ವೆಗೆ ಬದಲಾಯಿಸಲು ಯೋಜನೆ ಹೊಂದಿದೆ. ಅಲ್ಲದೆ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಖರೀದಿಸಲು ಆಸಕ್ತಿ ಹೊಂದಿದೆ.

Question 3

3. ಸರ್ವ ಶಿಕ್ಷಣ ಅಭಿಯಾನದಡಿ ಇತ್ತೀಚೆಗೆ ಕೇಂದ್ರ ಸರ್ಕಾರ ಈ ಕೆಳಕಂಡ ಯಾವ ಅಂತರ್ಜಾಲ ತಾಣವನ್ನು ಪ್ರಾರಂಭಿಸಿದೆ?

A
ಮೈತ್ರಿ ಪೋರ್ಟಲ್
B
ಶಿಕ್ಷಾ ಪೋರ್ಟಲ್
C
ಸರ್ವ ವಿಕಾಸ ಪೋರ್ಟಲ್
D
ಶಗುಣ್ ಪೋರ್ಟಲ್
Question 3 Explanation: 
ಶಗುಣ್ ಪೋರ್ಟಲ್

ಸರ್ವ ಶಿಕ್ಷಣ ಅಭಿಯಾನಕ್ಕೆಂದೇ ಮೀಸಲಾದ ‘ಶಗುಣ್’ ಎಂಬ ಅಂತರ್ಜಾಲ ತಾಣವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಾರಂಭಿಸಿದೆ. ಸರ್ವ ಶಿಕ್ಷಣ ಅಭಿಯಾನದಡಿ ಪ್ರಾಥಮಿಕ ಶಿಕ್ಷಣದಲ್ಲಿ ನಿರಂತರ ಕಲಿಕಾ ಬೆಳವಣಿಗೆ ಮತ್ತು ಕ್ರಿಯಾತ್ಮಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು ಈ ತಾಣ ಸಹಾಯ ನೀಡಲಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಕೈಗೊಂಡಿರುವ ರಚನಾತ್ಮಕ ಅಂಶಗಳನ್ನು ಮತ್ತು ಶಿಕ್ಷಣದಲ್ಲಿ ಎದುರಾಗಬಹುದಾದ ನ್ಯೂನತೆಗಳನ್ನು ಕೇಂದ್ರ ಸರ್ಕಾರಕ್ಕೆ ವರದಿ ಮಾಡುವ ಹಾಗೂ ಇದರ ಬಗ್ಗೆ ಕೈಗೊಳ್ಳಬಹುದಾದ ಪರಿಹಾರೋಪಾಯಗಳನ್ನು ಈ ಪೋರ್ಟಲ್ ನೀಡಲಿದೆ.

Question 4

4. ಕೇಂದ್ರ ತನಿಖಾ ಸಂಸ್ಥೆಯ (Central Bureau of Investigation) ಮುಖ್ಯಸ್ಥರಾಗಿ ಇತ್ತೀಚೆಗೆ ಯಾರನ್ನು ನೇಮಕ ಮಾಡಲಾಗಿದೆ?

A
ಸತೀಶ್ ಕುಮಾರ್
B
ಅಲೋಕ್ ಕುಮಾರ್ ವರ್ಮಾ
C
ಆರ್.ಕೆ.ದತ್ತಾ
D
ನಿರಂಜನ್ ರಾಥೋಡ್
Question 4 Explanation: 
ಅಲೋಕ್ ಕುಮಾರ್ ವರ್ಮಾ

ದೆಹಲಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ಸಿಬಿಐ ಗೆ ನೂತನ ನಿರ್ದೇಶಕರನ್ನಾಗಿ ನೇಮಿಸಿದೆ. ಸಿಜೆಐ ಜಗದೀಶ್ ಸಿಂಗ್ ಖೇಹರ್, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತ್ರಿಸದಸ್ಯ ಸಮಿತಿ ಸಿಬಿಐ ನ ಮುಖ್ಯಸ್ಥರ ಹುದ್ದೆಗೆ ಅಲೋಕ್ ಕುಮಾರ್ ವರ್ಮಾ ಅವರ ಹೆಸರನ್ನು ಅಂತಿಮಗೊಳಿಸಿದೆ. 1979ರ ಬ್ಯಾಚ್ ನ ಐಪಿಎಸ್ (ಅರುಣಾಚಲ ಪ್ರದೇಶ-ಗೋವಾ-ಮಿಜೋರಾಂ ಕೇಂದ್ರಾಡಳಿತ ಪ್ರದೇಶದ ಕೇಡರ್) ಅಧಿಕಾರಿಯಾಗಿರುವ ಅಲೋಕ್ ವರ್ಮಾ 2016 ರ ಫೆ.29 ರಂದು ದೆಹಲಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು.

Question 5

5. ಇತ್ತೀಚೆಗೆ ದೆಹಲಿಯಲ್ಲಿ ಜರುಗಿದ ಗಣರಾಜ್ಯೋತ್ಸವದ ಪೆರೇಡ್-2017 ರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದವರು ಯಾರು?

A
ಡೊನಾಲ್ಡ್ ಟ್ರಂಪ್
B
ಮೊಹಮ್ಮದ್ ಬಿನ್ ಝಾಯದ್ ಅಲ್ ನಹ್ಯಾನ್
C
ಮೊಹಮ್ಮದ್ ಖರ್ಜಾಯ್
D
ಮೇಡಂ ಟುಸ್ಸಾಡ್
Question 5 Explanation: 
ಮೊಹಮ್ಮದ್ ಬಿನ್ ಝಾಯದ್ ಅಲ್ ನಹ್ಯಾನ್

ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಸಶಸ್ತ್ರ ದಳದ ಉಪ ಸರ್ವೋಚ್ಛ ಕಮಾಂಡರ್ ಹಾಗೂ ಅಬುದಾಬಿ ರಾಜ ಮನೆತನದ ಯುವರಾಜ ಶೇಕ್ ಮೊಹಮ್ಮದ್ ಬಿನ್ ಝಾಯದ್ ಅಲ್ ನಹ್ಯಾನ್ ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

Question 6

6. ಮಾದಕ ವ್ಯಸನ ಮುಕ್ತ ರಾಜ್ಯವನ್ನಾಗಿಸಲು ‘ನಶೆ ಮುಕ್ತ ಆಂದೋಲನ’ (ನಶಾ ಮುಕ್ತ್ ಆಂದೋಲನ್) ವನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಯಿತು?

A
ಬಿಹಾರ
B
ಪಂಜಾಬ್
C
ಗೋವಾ
D
ಒಡಿಸ್ಸಾ
Question 6 Explanation: 
ಬಿಹಾರ

ಮಾದಕ ವ್ಯಸನ ಮುಕ್ತ ರಾಜ್ಯವನ್ನಾಗಿಸುವ ಸಲುವಾಗಿ ಬಿಹಾರದಲ್ಲಿ “ನಶೆ ಮುಕ್ತ ಆಂದೋಲನ”ವನ್ನು ಆರಂಭಿಸಲಾಗಿದೆ. ಇದಕ್ಕಾಗಿ ಸುಮಾರು 11 ಸಾವಿರ ಕಿ.ಮೀ. ಉದ್ದದ ಸಾಲಿನ ಮಾನವ ಸರಪಳಿಯನ್ನು ಆಯೋಜಿಸಲಾಗಿತ್ತು. 2004 ರಲ್ಲಿ ಬಾಂಗ್ಲಾದೇಶದಲ್ಲಿ ರಚನೆಗೊಂಡ 2.30 ಕೋಟಿ ಮಂದಿಯ ಮಾನವ ಸರಪಳಿ 10 ಸಾವಿರ ಕಿ.ಮೀ. ಉದ್ದ ಚಾಚಿಕೊಂಡಿತ್ತು.ಬಿಹಾರದಲ್ಲಿ ಪಾನ ನಿಷೇಧಕ್ಕೆ ಬೆಂಬಲ ಸೂಚಿಸಿ ರಸ್ತೆಯ ಎರಡೂ ಬದಿಯಲ್ಲಿ ಹಮ್ಮಿ ಕೊಂಡಿದ್ದ ಬೃಹತ್ ಮಾನವ ಸರಪಳಿ! ಸರಿ ಸುಮಾರು 3 ಕೋಟಿಗೂ ಅಧಿಕ ಮಂದಿ ರಚಿಸಿದ್ದ ಮಾನವ ಸರಪಳಿ ಈಗ ಗಿನ್ನೆಸ್ ಪುಟಕ್ಕೆ ದಾಖಲಾಗಿದೆ.

Question 7

7. ಫೀಫಾ (FIFA) ಆರ್ಥಿಕ ಸಮಿತಿಯಲ್ಲಿ 2017 ರಿಂದ 2021 ರವರೆಗೂ ಸದಸ್ಯರಾಗಿ ಸ್ಥಾನ ಹೊಂದಿದ ಭಾರತೀಯ ಯಾರು?

A
ಭರತ್ ಚೆಟ್ರಿ
B
ಪ್ರಫುಲ್ ಪಟೇಲ್
C
ಸುಬ್ರತೋ ರಾಯ್
D
ಸುರೇಶ್ ಕಲ್ಮಾಡಿ
Question 7 Explanation: 
ಪ್ರಫುಲ್ ಪಟೇಲ್

ಭಾರತೀಯ ಫುಟ್ಬಾಲ್ ಸಂಸ್ಥೆಯ (ಎಐಎಫ್ಎಫ್) ಅಧ್ಯಕ್ಷ ಪ್ರಫುಲ್ ಪಟೇಲ್ ಅವರು, ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಯ (ಫಿಫಾ) ಹಣಕಾಸು ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಅವರ ಸದಸ್ಯತ್ವವು 2017ರಿಂದ 2021ರವರೆಗೆ ಇರಲಿದೆ. ಇತ್ತೀಚೆಗಷ್ಟೇ, ಪ್ರಫುಲ್ಲ ಪಟೇಲ್ ಅವರು, ಏಷ್ಯಾ ಫುಟ್ಬಾಲ್ ಸಂಸ್ಥೆಯ (ಎಎಫ್ ಸಿ) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

Question 8

8. “Faith, Unity, Discipline: the ISI of Pakistan” ಪುಸ್ತಕದ ಲೇಖಕರು ಯಾರು?

A
ಅಭಿನವ್ ಸಾವರ್ಕರ್
B
ಡೇವಿಡ್ ಮಾರ್ಕೆಲ್
C
ರಾಮಚಂದ್ರ ಗುಹಾ
D
ಹೈನ್ ಕೈಸ್ಲಿಂಗ್
Question 8 Explanation: 
ಹೈನ್ ಕೈಸ್ಲಿಂಗ್

ಜರ್ಮನಿಯ ಪ್ರಸಿದ್ದ ರಾಜಕೀಯ ವಿಜ್ಞಾನಿ ಹೈನ್ ಕೈಸ್ಲಿಂಗ್ ರವರು “Faith, Unity, Discipline: the ISI of Pakistan” ಪುಸ್ತಕದ ಲೇಖಕರು. ನಾಯಕತ್ವದ ಬದಲಾವಣೆ ಆದರೂ ಸಹ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಭಾರತದ ವಿರುದ್ದ ಸಮರ ಸಾರಲು ಸದಾ ತುಡಿಯುತ್ತಿರುತ್ತದೆ ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

Question 9

9. 2017 ಕೋಲ್ಕತ್ತಾ ಓಪನ್ ನ್ಯಾಷನಲ್ ಇನ್ವಿಟೇಷನ್ ಸ್ನೂಕರ್ ಚಾಂಪಿಯನ್ ಷಿಪ್ ಪ್ರಶಸ್ತಿಯನ್ನು ಗೆದ್ದುಕೊಂಡವರು ಯಾರು?

A
ಪಂಕಜ್ ಅಡ್ವಾಣಿ
B
ಗೀತ್ ಸೇತಿ
C
ಆದಿತ್ಯಾ ಮೆಹ್ತಾ
D
ಯಾಸಿನ್ ಮರ್ಚೆಂಟ್
Question 9 Explanation: 
ಪಂಕಜ್ ಅಡ್ವಾಣಿ

ಪಂಕಜ್ ಅಡ್ವಾಣಿ ರವರು 3ನೇ ಕೊಲ್ಕತ್ತಾ ಓಪನ್ ನ್ಯಾಷನಲ್ ಇನ್ವಿಟೇಷನ್ ಸ್ನೂಕರ್ ಚಾಂಪಿಯನ್ ಗೆದ್ದುಕೊಂಡರು. ಫೈನಲ್ ಪಂದ್ಯದಲ್ಲಿ ಆದಿತ್ಯಾ ಮೆಹ್ತಾ ರವರನ್ನು 5-1 ರಲ್ಲಿ ಸೋಲಿಸುವ ಮೂಲಕ ಅಡ್ವಾಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Question 10

10. ವಿಶ್ವದ ಮೊದಲ “ಲಿಂಗ ಸಾಹಿತ್ಯ ಉತ್ಸವ (Gender Literature Festival)” ಯಾವ ದೇಶದಲ್ಲಿ ನಡೆಯಲಿದೆ?

A
ಅಮೆರಿಕ
B
ಭಾರತ
C
ಪಾಕಿಸ್ತಾನ
D
ಚೀನಾ
Question 10 Explanation: 
ಭಾರತ:

ವಿಶ್ವದ ಮೊದಲ “ಲಿಂಗ ಸಾಹಿತ್ಯ ಉತ್ಸವ” ಬಿಹಾರದ ಪಾಟ್ನದಲ್ಲಿ ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ನಡೆಯಲಿದೆ. ಬಿಹಾರದ ಮಹಿಳಾ ಅಭಿವೃದ್ದಿ ಕಾರ್ಪೋರೇಶನ ಲಿಂಗ ಸಂಪನ್ಮೂಲ ಕೇಂದ್ರ ಈ ಉತ್ಸವವನ್ನು ಆಯೋಜಿಸುತ್ತಿದೆ.

There are 10 questions to complete.

[button link=”http://www.karunaduexams.com/wp-content/uploads/2017/02/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ1213-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.