ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,14,15, 2017

Question 1

1. ಐರೋಪ್ಯ ಸಂಸತ್ತಿನ ಅಧ್ಯಕ್ಷರಾಗಿ ಆಯ್ಕೆಯಾದ “ಆಂಟೋನಿಯೊ ತಜನಿ (Antonio Tajani)” ಯಾವ ದೇಶದವರು?

A
ಜರ್ಮನಿ
B
ಇಟಲಿ
C
ಬ್ರೆಜಿಲ್
D
ಸ್ಪೇನ್
Question 1 Explanation: 
ಇಟಲಿ

ಇಟಲಿಯ ಪ್ರಬುದ್ದ ರಾಜಕಾರಣಿ ಆಂಟೋನಿಯೊ ತಜನಿ ರವರು ಐರೋಪ್ಯ ಸಂಸತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜರ್ಮನಿಯ ಮಾರ್ಟಿನ್ ಚುಲ್ಜ್ ರವರ ಉತ್ತರಾಧಿಕಾರಿಯಾಗಿರುವ ತಜನಿ ಅವರು ಐರೋಪ್ಯ ಸಂಸತ್ತಿನ ಅಧ್ಯಕ್ಷರಾಗಿ ಮುಂದಿನ ಎರಡು ವರ್ಷ ಆರು ತಿಂಗಳು ಅಧಿಕಾರ ನಡೆಸಲಿದ್ದಾರೆ.

Question 2

2. ಇತ್ತೀಚೆಗೆ ನಿಧನರಾದ “ವಿಲಿಯಂ ಪೀಟರ್ ಬ್ಲಾಟಿ” ಯಾವ ದೇಶದ ಪ್ರಸಿದ್ದ ಲೇಖಕರು?

A
ಅಮೆರಿಕ
B
ಜಪಾನ್
C
ಫ್ರಾನ್ಸ್
D
ಜರ್ಮನಿ
Question 2 Explanation: 
ಅಮೆರಿಕ

ಅಮೆರಿಕದ ಪ್ರಸಿದ್ದ ಲೇಖಕ ಹಾಗೂ ಚಿತ್ರ ನಿರ್ಮಾಪಕ ವಿಲಿಯಂ ಪೀಟರ್ ಬ್ಲಾಟಿ ರವರು ನಿಧನರಾದರು. ಬ್ಲಾಟಿ ರವರ “ದಿ ಎಕ್ಸರ್ಸಿಟ್ (The Exorcist)” ಕಾದಂಬರಿ ಅಪಾರ ಜನಮನ್ನಣೆ ಗಳಿಸಿತ್ತು. ಈ ಕಾದಂಬರಿಯನ್ನು ಸಿನಿಮಾವಾಗಿ ಅಳವಡಿಸಿಕೊಳ್ಳಲಾಗಿದ್ದು, ಅಕಾಡೆಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

Question 3

3. ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಗಳಲ್ಲಿ ಉಳಿತಾಯ ಖಾತೆಯಲ್ಲಿನ ಠೇವಣಿಗಳ ಮೇಲೆ ನೀಡಲಾಗುವ ಬಡ್ಡಿದರ ಎಷ್ಟು?

A
7.25%
B
7.5%
C
7.80%
D
8.0%
Question 3 Explanation: 
7.25%

ಇತ್ತೀಚೆಗೆ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ದೇಶದ 29 ರಾಜ್ಯಗಳಲ್ಲಿ ಕಾರ್ಯಾರಂಭ ಮಾಡಿತು. ಇದು ದೇಶದ ಮೊದಲ ಪೇಮೆಂಟ್ ಬ್ಯಾಂಕ್ ಹಾಗೂ ದೇಶದ ಮೊದಲ ಡಿಜಿಟಲ್ ಮತ್ತು ಕಾಗದ ರಹಿತ ಬ್ಯಾಂಕ್ ಆಗಿದೆ. ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯಲ್ಲಿನ ಠೇವಣಿ ಮೇಲೆ ಶೇ 7.25% ಬಡ್ಡಿಯನ್ನು ನೀಡಲಾಗುವುದು, ಅಲ್ಲದೇ ಪ್ರತಿ ಉಳಿತಾಯ ಖಾತೆಯ ಮೇಲೆ ರೂ 1 ಲಕ್ಷ ಅಪಘಾತ ವಿಮೆಯನ್ನು ಸಹ ನೀಡಲಾಗುತ್ತದೆ.

Question 4

4. ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವ ಸಲುವಾಗಿ “ಡಿಜಿಟಲ್ ದಕಿಯಾ (Digital Dakiya)” ಯೋಜನೆಯನ್ನು ಯಾವ ರಾಜ್ಯ ಜಾರಿಗೊಳಿಸಿದೆ?

A
ಜಾರ್ಖಂಡ್
B
ಮಧ್ಯ ಪ್ರದೇಶ
C
ಗುಜರಾತ್
D
ರಾಜಸ್ತಾನ
Question 4 Explanation: 
ಮಧ್ಯ ಪ್ರದೇಶ

ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವ ಸಲುವಾಗಿ ಮಧ್ಯಪ್ರದೇಶ ಸರ್ಕಾರ “ಡಿಜಿಟಲ್ ದಕಿಯಾ” ಯೋಜನೆಯನ್ನು ಇಂದೋರ್ ನಲ್ಲಿ ಜಾರಿಗೊಳಿಸಿದೆ. ಈ ಯೋಜನೆಯಡಿ ಡಿಜಿಟಲ್ ಪೋಸ್ಟ್ ಮನ್ ರಾಜ್ಯದ ವಿವಿಧೆಡೆ ಭೇಟಿ ನೀಡಿ ನಗದು ರಹಿತ ವ್ಯವಹಾರ ಹಾಗೂ ಅದರ ಉಪಯೋಗಗಳ ಬಗ್ಗೆ ಜನರಿಗೆ ತರಭೇತಿ ನೀಡಿ ಪ್ರೋತ್ಸಾಹಿಸಲಿದ್ದಾರೆ.

Question 5

5. ಈ ಕೆಳಗಿನ ಯಾವ ನಗರದಲ್ಲಿ “ಖೇಲೋ ಇಂಡಿಯಾ ರಾಷ್ಟ್ರ ಮಟ್ಟದ ಸ್ಪರ್ಧೆ”ಯನ್ನು ಉದ್ಘಾಟಿಸಲಾಯಿತು?

A
ಮೈಸೂರು
B
ಜೈಪುರ
C
ನವ ದೆಹಲಿ
D
ಚೆನ್ನೈ
Question 5 Explanation: 
ನವ ದೆಹಲಿ

ಖೇಲೋ ಇಂಡಿಯಾ ರಾಷ್ಟ್ರ ಮಟ್ಟದ ಸ್ಪರ್ಧೆಯನ್ನು ನವದೆಹಲಿಯ ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಮಿಮ್ಮಿಂಗ್ ಪೂಲ್ ಕಾಂಪ್ಲೆಕ್ಸ್ ನಲ್ಲಿ ಆಯೋಜಿಸಲಾಗಿತ್ತು. ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ವಿಜಯ್ ಗೊಯೆಲ್ ರವರು ಈ ಸ್ಪರ್ಧೆಯನ್ನು ಉದ್ಘಾಟಿಸಿದರು. 14 ಮತ್ತು 17 ವರ್ಷ ವಯಸ್ಸಿನೊಳಗಿನವರು ವಿವಿಧಿ ಕ್ರೀಡೆಯಲ್ಲಿ ಭಾಗವಹಿಸಿದ್ದರು. ರಾಷ್ಟ್ರಮಟ್ಟದಲ್ಲಿ ಯುವ ಕ್ರೀಡಾ ಪ್ರತಿಭೆಗಳಲ್ಲಿ ಸ್ಪರ್ಧಾಥ್ಮಕ ಮನೋಭಾವವನ್ನು ಹುಟ್ಟುಹಾಕುವುದು ಇದರ ಉದ್ದೇಶ.

Question 6

6. ಮೊಟ್ಟಮೊದಲ “ಏಷ್ಯಾ ಫೆಸಿಫಿಕ್ ಬ್ರಾಡ್ಕ್ಯಾಸ್ಟಿಂಗ್ (ABU) ಅಂತಾರಾಷ್ಟ್ರೀಯ ನೃತ್ಯ ಉತ್ಸವ ಯಾವ ನಗರದಲ್ಲಿ ನಡೆಯಿತು?

A
ಬೆಂಗಳೂರು
B
ಹೈದ್ರಾಬಾದ್
C
ಚೆನ್ನೈ
D
ಕೊಲ್ಕತ್ತ
Question 6 Explanation: 
ಹೈದ್ರಾಬಾದ್

ಮೊಟ್ಟ ಮೊದಲ ಏಷ್ಯಾ ಫೆಸಿಫಿಕ್ ಬ್ರಾಡ್ಕ್ಯಾಸ್ಟಿಂಗ್ (ABU) ಅಂತಾರಾಷ್ಟ್ರೀಯ ನೃತ್ಯ ಉತ್ಸವ ಹೈದ್ರಾಬಾದಿನ ಶಿಲ್ಪಾ ಕಲಾ ವೇದಿಕಾ ಟೆರ್ರಾಕೋಟ ಆಡಿಟೋರಿಯಂನಲ್ಲಿ ಜನವರಿ 15 ರಂದು ನಡೆಯಿತು. ತೆಲಂಗಣ ಸರ್ಕಾರದ ಸಹಾಯದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 9 ರಾಷ್ಟ್ರಗಳಿಂದ ಸುಮಾರು 100 ನೃತ್ಯಪಟುಗಳು ಭಾಗವಹಿಸಿದ್ದರು.

Question 7

7. ಇತ್ತೀಚೆಗೆ ನಿಧನರಾದ “ಸುರ್ಜಿತ್ ಸಿಂಗ್ ಬರ್ನಾಲಾ” ರವರು ಯಾವ ರಾಜ್ಯದ ಮಾಜಿ ಮುಖ್ಯಮಂತ್ರಿ?

A
ಪಂಜಾಬ್
B
ಜಮ್ಮು ಮತ್ತು ಕಾಶ್ಮೀರ
C
ಮಧ್ಯ ಪ್ರದೇಶ
D
ಹರಿಯಾಣ
Question 7 Explanation: 
ಪಂಜಾಬ್

ಪಂಜಾಬಿನ ಮಾಜಿ ಮುಖ್ಯಮಂತ್ರಿ ಸುರ್ಜಿತ್ ಸಿಂಗ್ ಬರ್ನಾಲಾ ಅವರು ನಿಧನ ಹೊಂದಿದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. 1985ರಿಂದ 1987ರ ವರೆಗಿನ ಅವಧಿಯಲ್ಲಿ ಪಂಜಾಬಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಬರ್ನಾಲಾ ಅವರು ತಮಿಳು ನಾಡು, ಉತ್ತರಾಖಂಡ, ಆಂಧ್ರ ಪ್ರದೇಶ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳ ರಾಜ್ಯಪಾಲರಾಗಿಯೂ, ಕೇಂದ್ರ ಸಚಿವರಾಗಿಯೂ, ಸೇವೆ ಸಲ್ಲಿಸಿದ್ದರು.

Question 8

8. “ದಿ ಕರಾಚಿ ಡಿಸೆಪ್ಶನ್ (The Karachi Deception)” ಪುಸ್ತಕದ ಲೇಖಕರು ____________?

A
ಶತ್ರುಜಿತ್ ನಾಥ್
B
ಅಭಿಮನ್ಯು ಸಿಂಗ್
C
ಕಿರಣ್ ಬೇಡಿ
D
ಚರಣ್ ಸಿಂಗ್
Question 8 Explanation: 
ಶತ್ರುಜಿತ್ ನಾಥ್

“ದಿ ಕರಾಚಿ ಡಿಸೆಪ್ಶನ್” ಪುಸ್ತಕದ ಲೇಖಕರು ಶತ್ರುಜಿತ್ ನಾಥ್. ಮುಂಬೈನ ಭೂಗತ ದೊರೆ ಇರ್ಶದ್ ದಿಲವರ್ ರವರನ್ನು ಕೊಲ್ಲಲ್ಲು ರಾ ಮತ್ತು ಭಾರತ ಸೇನಾಪಡೆಯ ಗುಪ್ತಚರ ವಿಭಾಗ ನಡೆಸಿದ “ಪ್ರಾಜೆಕ್ಟ್ ಅಭಿಮನ್ಯು” ಕುರಿತಾದ ಪುಸ್ತಕ ಇದಾಗಿದೆ.

Question 9

9. ಇತ್ತೀಚೆಗೆ ನಿಧನರಾದ ಗೀತಾ ಸೇನ್ ಯಾವ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದರು?

A
ಸಿನಿಮಾ
B
ಕ್ರೀಡೆ
C
ಪತ್ರಿಕೋದ್ಯಮ
D
ವಿಜ್ಞಾನ
Question 9 Explanation: 
ಸಿನಿಮಾ

ಪ್ರಸಿದ್ದ ನಟಿ ಹಾಗೂ ಸಿನಿಮಾ ನಿರ್ಮಾಪಕ ಮೃಣಲ್ ಸೇನ್ ರವರ ಪತ್ನಿ ಗೀತಾ ಸೇನ್ ನಿಧನರಾದರು. ಕೋರಸ್, ಕಲ್ಕತ್ತ 71, ಖಾರ್ಜಿ, ಅಕಲೇರ್ ಸಂಧಾನೆ, ಎಕ್ ದಿನ್ ಪ್ರತಿ ದಿನ್ ಮತ್ತು ಕಂದಹಾರ್ ಚಿತ್ರಗಳಲ್ಲಿನ ಅಭಿನಯದಿಂದ ಸೇನ್ ಜನಮನ್ನಣೆ ಗಳಿಸಿದ್ದರು.

Question 10

10. “2017 ಭಾರತ ಅಂತಾರಾಷ್ಟ್ರೀಯ ಸಿದ್ದ ಉಡುಪು ಮೇಳ (India International Garments Fair)” ಯಾವ ನಗರದಲ್ಲಿ ಆಯೋಜಿಸಲಾಗಿದೆ?

A
ಕಾನ್ಪುರ
B
ಲಕ್ನೋ
C
ನವ ದೆಹಲಿ
D
ಗ್ವಾಲಿಯರ್
Question 10 Explanation: 
ನವ ದೆಹಲಿ

58ನೇ ಭಾರತ ಅಂತಾರಾಷ್ಟ್ರೀಯ ಸಿದ್ದ ಉಡುಪು ಮೇಳ ಜನವರಿ 18 ರಿಂದ 20 ವರೆಗೆ ನವ ದೆಹಲಿಯಲ್ಲಿ ನಡೆಯಲಿದೆ. ಅಪೆರಲ್ ಪ್ರೊಮೊಶನ್ ಕೌನ್ಸಿಲ್ ಇಂಡಿಯಾ ಈ ಮೇಳವನ್ನು ಆಯೋಜಿಸುತ್ತಿದೆ. ಇದು ಏಷ್ಯಾದ ಅತಿದೊಡ್ಡ ಸಿದ್ದ ಉಡುಪು ಮೇಳಗಳಲ್ಲಿ ಒಂದಾಗಿದ್ದು, ದೇಶ ವಿದೇಶಗಳ ವ್ಯಾಪಾರಸ್ಥರು ಮೇಳದಲ್ಲಿ ಭಾಗವಹಿಸಲ್ಲಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2017/02/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ1415-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.