ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,16, 2017

Question 1

1. ದೇಶದ ಮೊದಲ ನಗದು ರಹಿತ ದ್ವೀಪವೆನಿಸಿರುವ “ಕರಂಗ್” ದ್ವೀಪ ಪ್ರದೇಶ ಯಾವ ರಾಜ್ಯದಲ್ಲಿದೆ?

A
ಮೇಘಾಲಯ
B
ಜಾರ್ಖಂಡ್
C
ಮಣಿಪುರ
D
ಅಸ್ಸಾಂ
Question 1 Explanation: 
ಮಣಿಪುರ

ಮಣಿಪುರದ ಕರಂಗ್ ದ್ವೀಪ ಪ್ರದೇಶ ದೇಶದ ಮೊದಲ ನಗದು ರಹಿತ ದ್ವೀಪ ಪ್ರದೇಶವೆಂಬ ಖ್ಯಾತಿಗೆ ಪಾತ್ರವಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತನ್ನ ಡಿಜಿಟಲ್ ಇಂಡಿಯಾ ಅಭಿಯಾನದಡಿ ಈ ಘೋಷಣೆಯನ್ನು ಮಾಡಿದೆ. ಕರಂಗ್ ದ್ವೀಪ ಪ್ರದೇಶ ಮಣಿಪುರದ ಪ್ರಸಿದ್ದ ಸರೋವರವಾದ ಲೋಥಕ್ ಸರೋವರದ ಮಧ್ಯದಲ್ಲಿದೆ.

Question 2

2. ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆ (International Vaccine Institute) ಎಲ್ಲಿದೆ?

A
ದಕ್ಷಿಣ ಕೊರಿಯಾ
B
ಬ್ರೆಜಿಲ್
C
ಸಿಂಗಪುರ
D
ಇಸ್ರೇಲ್
Question 2 Explanation: 
ದಕ್ಷಿಣ ಕೊರಿಯಾ

ಅಂತಾರಾಷ್ಟ್ರೀಯ ಲಸಿಕೆ ಸಂಸ್ಥೆ ಒಂದು ಲಾಭದಾಯಕವಲ್ಲದ ಸಂಸ್ಥೆಯಾಗಿದ್ದು, ಹೊಸ ಹಾಗೂ ಸುಧಾರಿತ ಲಸಿಕೆಗಳನ್ನು ಅಭಿವೃದ್ದಿಪಡಿಸುವ ಮೂಲಕ ಜನರು ಅದರಲ್ಲೂ ಮಕ್ಕಳನ್ನು ಮಾರಕ ರೋಗಗಳಿಂದ ರಕ್ಷಿಸುವ ಕಾರ್ಯವನ್ನು ಮಾಡುತ್ತಿದೆ. ಇದರ ಕೇಂದ್ರ ಕಚೇರಿ ಸಿಯೋಲ್, ದಕ್ಷಿಣ ಕೊರಿಯಾದಲ್ಲಿ. ಇತ್ತೀಚೆಗೆ ಭಾರತ ಇದರ ಪೂರ್ಣವಾಧಿ ಸದಸ್ಯತ್ವವನ್ನು ಪಡೆದುಕೊಂಡಿದೆ.

Question 3

3. 2017 ದೆಹಲಿ ಅಂತಾರಾಷ್ಟ್ರೀಯ ಓಪನ್ ಚೆಸ್ ಟೂರ್ನಮೆಂಟ್ ಗೆದ್ದುಕೊಂಡ “ಫರುಖ್ ಅಮೊನಟೊವ್” ಯಾವ ದೇಶದವರು?

A
ರಷ್ಯಾ
B
ಅಮೆರಿಕ
C
ತಜಕಿಸ್ತಾನ
D
ಚೀನಾ
Question 3 Explanation: 
ತಜಕಿಸ್ತಾನ

ತಜಕಿಸ್ತಾನದ ಫರುಖ್ ಅಮೊನಟೊವ್ ರವರು 2017 ದೆಹಲಿ ಅಂತಾರಾಷ್ಟ್ರೀಯ ಓಪನ್ ಚೆಸ್ ಟೂರ್ನಮೆಂಟ್ ಗೆದ್ದುಕೊಂಡರು. ಅಮೊನಟೊವ್ ರವರು ತಜಕಿಸ್ತಾನದ ಏಕೈಕ ಚೆಸ್ ಗ್ರಾಂಡ್ ಮಾಸ್ಟರ್ ಆಗಿದ್ದಾರೆ.

Question 4

4. ಈ ಕೆಳಗಿನ ಯಾರು ಪ್ರತಿಷ್ಠಿತ “2016 ಹಿಂದೂ ಸಾಹಿತ್ಯ ಪ್ರಶಸ್ತಿ”ಯನ್ನು ಗೆದ್ದುಕೊಂಡರು?

A
ಕಿರಣ್ ದೋಶಿ
B
ಮಂಜುಳಾ ಭಾಗವತರ್
C
ಚೇತನ್ ಭಗತ್
D
ಸುಮನ್ ಬಂಡೋಪಾಧ್ಯಯ
Question 4 Explanation: 
ಕಿರಣ್ ದೋಶಿ:

ಗುಜರಾತ್ ಮೂಲದ ನಿವೃತ್ತ ರಾಯಭಾರಿ ಹಾಗೂ ಶಿಕ್ಷಣ ತಜ್ಞ ಕಿರಣ್ ದೋಶಿ ರವರು ಪ್ರತಿಷ್ಠಿತ “2016 ಹಿಂದೂ ಸಾಹಿತ್ಯ ಪ್ರಶಸ್ತಿ”ಯನ್ನು ಗೆದ್ದುಕೊಂಡಿದ್ದಾರೆ. ದೋಶಿ ರವರ ಪುಸ್ತಕ “ಜಿನ್ನಾ ಆಫ್ಟನ್ ಕೇಮ್ ಟು ಅವರ್ ಹೌಸ್ (Jinna Often Came to Our House)” ಕಾದಂಬರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಯು ರೂ 5 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ.

Question 5

5. ಈ ಮುಂದಿನ ಯಾರು “ಕಲ್ಕತ್ತ” ಪುಸ್ತಕದ ಲೇಖಕರು?

A
ದೀಪಕ್ ರಾಯ್
B
ಕುನಾಲ್ ಬಸು
C
ಗೋಪಾಲ್ ದಾಸ್
D
ಹರಿಕಾಂತ್ ಸಿಂಗ್
Question 5 Explanation: 
ಕುನಾಲ್ ಬಸು
Question 6

6. ವಿಶ್ವ ಆರ್ಥಿಕ ವೇದಿಕೆಯ 2017ನೇ ಸಾಲಿಗೆ “ಒಟ್ಟಾರೆ ಅಭಿವೃದ್ದಿ ಸೂಚ್ಯಂಕ (Inclusive Development Report)ದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
35
B
60
C
45
D
75
Question 6 Explanation: 
60

ವಿಶ್ವ ಆರ್ಥಿಕ ವೇದಿಕೆ ಬಿಡುಗಡೆಗೊಳಿಸಿರುವ ಒಟ್ಟಾರೆ ಬೆಳವಣಿಗೆ ಮತ್ತು ಅಭಿವೃದ್ದಿ ವರದಿಯಲ್ಲಿ 2017ನೇ ಸಾಲಿಗೆ ಒಟ್ಟಾರೆ ಅಭಿವೃದ್ದಿ ಸೂಚ್ಯಂಕದಲ್ಲಿ 79 ರಾಷ್ಟ್ರಗಳ ಪೈಕಿ ಭಾರತ 60ನೇ ಸ್ಥಾನವನ್ನು ಪಡೆದುಕೊಂಡಿದೆ. ಸೂಚ್ಯಂಕವನ್ನು ಒಟ್ಟು 12 ಸಾಧಕ ಮಾನದಂಡಗಳನ್ನು ಆಧರಿಸಿ ಬಿಡುಗಡೆಗೊಳಿಸಲಾಗಿದ್ದು, 1 ರಿಂದ 7 ಅಂಕಗಳ ಮಾಪವನ್ನು ಆಧರಸಿ ಸೂಚ್ಯಂಕದಲ್ಲಿ ದೇಶಗಳಿಗೆ ಶ್ರೇಯಾಂಕವನ್ನು ನೀಡಲಾಗಿದೆ.

Question 7

7. ವಿಶ್ವದ ಅತ್ಯಂತ ಪ್ರಭಾವೀ ಪಾಸ್ಪೋರ್ಟ್ಗಳ ಪಟ್ಟಿಯಲ್ಲಿ ಭಾರತೀಯ ಪಾಸ್ಪೋರ್ಟ್ಗೆ ಜಾಗತಿಕ ಮಟ್ಟದಲ್ಲಿ ಎಷ್ಟನೇ ಸ್ಥಾನ ಲಭಿಸಿದೆ?

A
68
B
55
C
78
D
91
Question 7 Explanation: 
78

ಭಾರತೀಯ ಪಾಸ್ಪೋರ್ಟ್ಗೆ ಜಾಗತಿಕ ಮಟ್ಟದಲ್ಲಿ 78ನೇ ಸ್ಥಾನ ದೊರೆತಿದೆ. ವಿಶ್ವದ ಅತ್ಯಂತ ಪ್ರಭಾವೀ ಪಾಸ್ಪೋರ್ಟ್ಗಳ ಪಟ್ಟಿಯಲ್ಲಿ ಜರ್ಮನಿ 157 ಮುಕ್ತ ವಿಸಾ ಅಂಕದೊಂದಿಗೆ ಅಗ್ರಸ್ಥಾನ ಪಡೆದರೆ, ಏಶಿಯನ್ ರಾಷ್ಟ್ರಗಳ ಪಟ್ಟಿಯಲ್ಲಿ ದಕ್ಷಿಣ ಕೊರಿಯಾವನ್ನು ಹಿಂದಿಕ್ಕಿದ ಸಿಂಗಾಪುರ ಅಗ್ರಸ್ಥಾನ ಪಡೆದಿದೆ. ಭಾರತವು 46 ಮುಕ್ತ ವಿಸಾ ಅಂಕದೊಂದಿಗೆ 78ನೇ ಸ್ಥಾನದಲ್ಲಿದ್ದು ಚೀನಾ ಮತ್ತು ಪಾಕಿಸ್ತಾನವನ್ನು ಈ ಪಟ್ಟಿಯಲ್ಲಿ ಹಿಂದಿಕ್ಕಿದೆ. ಅಪಘಾನಿಸ್ತಾನವು ಕೇವಲ 23 ಅಂಕದೊಂದಿಗೆ ಈ ಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದೆ.

Question 8

8. 2016 ಟಿ.ಎಸ್ ಎಲಿಯಟ್ ಕವನ ಪ್ರಶಸ್ತಿ (TS Eliot Prize for Peotry)ಯನ್ನು ಪಡೆದುಕೊಂಡ ಜಾಕೋಬ್ ಪೊಲ್ಲಿ ಯಾವ ದೇಶದವರು?

A
ಯು.ಕೆ
B
ಫ್ರಾನ್ಸ್
C
ಜರ್ಮನಿ
D
ಈಜಿಪ್ಟ್
Question 8 Explanation: 
ಯು.ಕೆ

ಜಾಕೋಬ್ ಪೊಲ್ಲಿ ಯುನೈಟೆಡ್ ಕಿಂಗ್ಡಮ್ ನ ಸಾಹಿತಿ. ಇವರ ಕವನ ಸಂಕಲನ “ಜಾಕ್ ಸೆಲ್ಫ್”ಗಾಗಿ 2016 ಟಿ.ಎಸ್ ಎಲಿಯಟ್ ಕವನ ಪ್ರಶಸ್ತಿ ಲಭಿಸಿದೆ.

Question 9

9. ಭಾರತೀಯ ಕ್ರೀಡಾ ಪ್ರಾಧಿಕಾರದ ಅಡಿಯಲ್ಲಿ, ರಾಷ್ಟ್ರಿಯ ಬಾಕ್ಸಿಂಗ್ ಪ್ರಾಧಿಕಾರವನ್ನು ಯಾವ ನಗರದಲ್ಲಿ ಉದ್ಘಾಟಿಸಲಾಯಿತು?

A
ರೋಥಕ್
B
ಫರಿದಾಬಾದ್
C
ಲಕ್ನೋ
D
ಚೆನ್ನೈ
Question 9 Explanation: 
ರೋಥಕ್

ಭಾರತೀಯ ಕ್ರೀಡಾ ಪ್ರಾಧಿಕಾರದ ಅಡಿಯಲ್ಲಿ, ಹರ್ಯಾಣದ ರೋಥಕ್ ಪಟ್ಟಣದಲ್ಲಿ ರಾಷ್ಟ್ರಿಯ ಬಾಕ್ಸಿಂಗ್ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವ ವಿಜಯ್ ಗೋಯಲ್ ಈ ಪ್ರಾಧಿಕಾರವನ್ನು ಉದ್ಘಾಟಿಸಿದ್ದಾರೆ.

Question 10

10. ಈ ಕೆಳಗಿನ ಯಾರು ಭಾರತದ ಈಗಿನ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಗಿದ್ದಾರೆ?

A
ಶಶಿಕಾಂತ್ ಶರ್ಮಾ
B
ವಿಜಯ್ ಭಾರಧ್ವಜ್
C
ವಿಜಯ್ ರಾವತ್
D
ಮದನ್ ಸಿಂಗ್
Question 10 Explanation: 
ಶಶಿಕಾಂತ್ ಶರ್ಮಾ
There are 10 questions to complete.

[button link=”http://www.karunaduexams.com/wp-content/uploads/2017/02/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ16-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,16, 2017”

  1. Dear sir,please sir daily update for KAS releted General q and A

Leave a Comment

This site uses Akismet to reduce spam. Learn how your comment data is processed.