ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,17,18, 2017
Question 1 |
1. ಸರ್ಕಾರೇತರ ಸಂಸ್ಥೆಗಳಲ್ಲಿ (NGO) ಹೊಸ ಚಿಂತನೆಗಳ ಅಳವಡಿಕೆಗೆ ನೀಡಲಾಗುವ, ‘ವಿಶ್ವ ಪ್ರವಾಸೋದ್ಯಮ ಸಂಸ್ಥೆ’ (UNWTO) ಪ್ರಶಸ್ತಿಯನ್ನು ಭಾರತದ ಯಾವ ಹಳ್ಳಿಗೆ ಪ್ರದಾನ ಮಾಡಲಾಯಿತು?
ಬುಂದೇಲ್ ಖಂಡ್ ಇಕೋ ವಿಲೇಜ್ | |
ಆಂಕೋರ್ ಹಳ್ಳಿ | |
ಗೋವರ್ಧನ್ ಇಕೋ ವಿಲೇಜ್ | |
ಮಧುವನ ಹಳ್ಳಿ |
ಪ್ರವಾಸೋದ್ಯಮದಲ್ಲಿ ಹೊಸ ಚಿಂತನೆಗಳನ್ನು ಮತ್ತು ಉತ್ಕೃಷ್ಟತೆಯನ್ನು ಸಾಧಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದ ಮಾಯಾಪುರದ ಇಸ್ಕಾನ್ ಸಂಸ್ಥೆಯ ಗೋವರ್ಧನ್ ಇಕೋ ವಿಲೇಜ್ ಗೆ ‘ವಿಶ್ವ ಪ್ರವಾಸೋದ್ಯಮ ಸಂಸ್ಥೆ’ (UNWTO) ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸರ್ಕಾರೇತರ ಸಂಸ್ಥೆಗಳಿಗೆ ವಿಶ್ವ ಸಂಸ್ಥೆ ವತಿಯಿಂದ ನೀಡಲಾಗುವ ಅತ್ಯುನ್ನತ ಗೌರವ ಇದಾಗಿದೆ. ಇದೇ ಮೊದಲ ಬಾರಿಗೆ ಭಾರತಕ್ಕೆ ಈ ವರ್ಗದಡಿ ಪ್ರಶಸ್ತಿ ಲಭಿಸಿದೆ.
Question 2 |
2. ಬೋಸ್ಟನ್ ಕನ್ಸಲ್ಟನ್ಸಿ ಗ್ರೂಪ್ (BCG) 2016 ಸಮೀಕ್ಷೆ ಪ್ರಕಾರ, 2016 ರ ಅತ್ಯುನ್ನತ ಆವಿಷ್ಕಾರ ಕೈಗೊಂಡ ಸಂಸ್ಥೆ ಯಾವುದು?
ಆಪಲ್ | |
ಗೂಗಲ್ | |
ಮೈಕ್ರೋಸಾಫ್ಟ್ | |
ಫೇಸ್ ಬುಕ್ |
Question 3 |
3. “ವೇವ್ ಅಂಡ್ ಪೇ” (Wave and Pay) ಎಂಬ ಸಂಪರ್ಕ ರಹಿತ ಕ್ರೆಡಿಟ್ ಕಾರ್ಡ್ ವ್ಯವಸ್ಥೆಯನ್ನು ಯಾವ ಬ್ಯಾಂಕ್ ಪರಿಚಯಿಸಿದೆ?
ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ | |
ಹೆಚ್.ಡಿ.ಎಫ್.ಸಿ. ಬ್ಯಾಂಕ್ | |
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | |
ಪಂಜಾಬ್ ನ್ಯಾಷನಲ್ ಬ್ಯಾಂಕ್ |
ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಯಾವುದೇ ಪಿನ್ ಕೋಡ್ ಸಂಖ್ಯೆಗಳನ್ನು ನಮೂದಿಸದೆ ತಮ್ಮ ಕೈಯನ್ನು ಬೀಸುವ ಮೂಲಕ ರೂ. 2000.00 ವರೆಗಿನ ವ್ಯವಹಾರವನ್ನು ನಡೆಸಲು ಪಂಜಾಬ್ ನ್ಯಾಷನಲ್ ಬ್ಯಾಂಕ್ “ವೇವ್ ಅಂಡ್ ಪೇ” (Wave and Pay) ಎಂಬ ಸಂಪರ್ಕ ರಹಿತ ಕ್ರೆಡಿಟ್ ಕಾರ್ಡ್ ವ್ಯವಸ್ಥೆಯನ್ನು ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ.
Question 4 |
4. ಭಾರತದ ಯಾವ ರಾಜ್ಯ ಚುನಾವಣಾ ಸಮಯದಲ್ಲಿ ಸೇನೆಯಲ್ಲಿ ಸೇವಾ ನಿರತ ತನ್ನ ರಾಜ್ಯದ ಉದ್ಯೋಗಿಗಳಿಗೆ ಈ-ಮೇಲ್ ಮುಖಾಂತರ ಪೋಸ್ಟಲ್ ಬ್ಯಾಲಟ್ ಕಳುಹಿಸುವ ನೂತನ ವ್ಯವಸ್ಥೆಯನ್ನು ಪ್ರಾರಂಭಿಸಿದೆ?
ಉತ್ತರ ಪ್ರದೇಶ | |
ಪಂಜಾಬ್ | |
ಗೋವಾ | |
ಉತ್ತರಾಖಂಡ |
ಭಾರತದ ಸೇನೆಯಲ್ಲಿ ಮತ್ತು ಅರೆಸೇನಾ ತುಕಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗೋವಾ ರಾಜ್ಯದ ಪ್ರಜೆಗಳು ಚುನಾವಣಾ ಮತದಾನ ಪ್ರಕ್ರಿಯೆಯಿಂದ ವಂಚಿತರಾಗುವುದನ್ನು ತಡೆಯುವ ಉದ್ದೇಶದಿಂದ, ಗೋವಾ ರಾಜ್ಯ ಉದ್ಯೋಗಿಗಳಿಗೆ ಈ-ಮೇಲ್ ಮುಖಾಂತರ ಪೋಸ್ಟಲ್ ಬ್ಯಾಲಟ್ ಕಳುಹಿಸುವ ನೂತನ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಪೋಸ್ಟಲ್ ಬ್ಯಾಲಟ್ ಅನ್ನು ಈ-ಮೇಲ್ ಮುಖಾಂತರ ಡೌನ್ ಲೋಡ್ ಮಾಡಿಕೊಂಡು ತಮ್ಮ ಆಯ್ಕೆಯನ್ನು ಬರೆದು ಚುನಾವನಾಧಿಕಾರಿಗಳಿಗೆ ಈ-ಮೇಲ್ ಮೂಲಕ ರವಾನಿಸಲಾಗುತ್ತದೆ.
Question 5 |
5. ಭಾರತದಲ್ಲಿ ‘ರಾಷ್ಟ್ರೀಯ ಪ್ರವಾಸೋದ್ಯಮ ದಿನ’ ವನ್ನು ಎಂದು ಆಚರಿಸಲಾಗುತ್ತಿದೆ?
ಜನವರಿ 14 | |
ಜನವರಿ 21 | |
ಜನವರಿ 25 | |
ಜನವರಿ 30 |
ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಪ್ರತಿ ವರ್ಷ ಜನವರಿ 25 ರಂದು ಆಚರಿಸಲಾಗುತ್ತದೆ. ದೇಶದ ಆರ್ಥಿಕತೆಗೆ ಪ್ರವಾಸೋದ್ಯಮದ ಮಹತ್ವವನ್ನು ಅರಿವು ಮೂಡಿಸುವುದು ಇದರ ಉದ್ದೇಶ.
Question 6 |
6. ವಿಶ್ವ ಬ್ಯಾಂಕ್ ಸಹಕಾರದೊಂದಿಗೆ “ಇ-ಆರೋಗ್ಯ ಯೋಜನೆ” (e-health Project) ಯನ್ನು ಭಾರತದ ಯಾವ ರಾಜ್ಯ ಪ್ರಾರಂಭಿಸಿದೆ?
ಕರ್ನಾಟಕ | |
ಕೇರಳ | |
ಆಂಧ್ರಪ್ರದೇಶ | |
ಪಂಜಾಬ್ |
ಕೇರಳ ಸರ್ಕಾರ ವಿಶ್ವಬ್ಯಾಂಕ್ ಪ್ರಾಯೋಜಕತ್ವದ “ಇ-ಆರೋಗ್ಯ” ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯ ಜನಸಂಖ್ಯೆಯ ಎಲೆಕ್ಟ್ರಾನಿಕ್ ಆರೋಗ್ಯ ದಾಖಲಾತಿ ಹಾಗೂ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಆಟೋಮೇಶನ್ ಮಾಡುವುದು ಯೋಜನೆಯ ಉದ್ದೇಶ.
Question 7 |
7. ಈ ಕೆಳಗಿನ ಯಾವ ಸಮಿತಿ ಇತ್ತೀಚೆಗೆ “ಹಣಕಾಸು ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ (FRBM)”ಕಾಯಿದೆ ಕುರಿತಾಗಿ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು?
ಮಂಜೇಶ್ಕರ್ ಸಮಿತಿ | |
ಎನ್.ಕೆ.ಸಿಂಗ್ ಸಮಿತಿ | |
ಸುಂದರೇಶ್ ನಾಯಕ್ ಸಮಿತಿ | |
ಗುರುದರ್ಶನ್ ಸಿಂಗ್ ಸಮಿತಿ |
ಹಣಕಾಸು ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯಿದೆ ಪರಿಷ್ಕರಣೆ ಸಂಬಂಧಿಸಿದ ವರದಿಯನ್ನು ಎನ್.ಕೆ.ಸಿಂಗ್ ಸಮಿತಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ರವರಿಗೆ ಸಲ್ಲಿಸಿತು. ಸಮಿತಿಯ ಶಿಫಾರಸ್ಸನ್ನು ಅಧ್ಯಯ ನಡೆಸಿ ಕೇಂದ್ರ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ.
Question 8 |
8. “ವರಿಷ್ಟ ಪೆನ್ಷನ್ ಬಿಮಾ ಯೋಜನಾ 2017” (Varishtha Pension Bima Yojana) ನ್ನು ಕೇಂದ್ರ ಸರ್ಕಾರ ಈ ಕೆಳಕಂಡ ಯಾವ ವಿಮಾ ಕಂಪನಿ ಸಹಯೋಗದೊಂದಿಗೆ ಅನುಷ್ಟಾನಗೊಳಿಸಲಾಗುತ್ತಿದೆ?
ಭಾರತೀಯ ಜೀವ ವಿಮಾ ನಿಗಮ | |
ಹೆಚ್.ಡಿ.ಎಫ್.ಸಿ. ಸ್ಟಾಂಡರ್ಡ್ ಜೀವ ವಿಮೆ | |
ಐ.ಸಿ.ಐ.ಸಿ.ಐ. ಪ್ರುಡೆನ್ಸಿಯಲ್ ಜೀವ ವಿಮೆ | |
ಓರಿಯಂಟಲ್ ಜೀವ ವಿಮೆ |
ಕೇಂದ್ರ ಸರ್ಕಾರ ತನ್ನ ಸಚಿವ ಸಂಪುಟ ಸಭೆಯಲ್ಲಿ 60 ವರ್ಷ ಮತ್ತು ಮೇಲ್ಪಟ್ಟ ನಾಗರಿಕರಿಗೆ ನಿಶ್ಚಿತ ಪಿಂಚಣಿ ನೀಡುವ ಮಹತ್ವಾಕಾಂಕ್ಷಿ ಯೋಜನೆಯಾದ “ವರಿಷ್ಟ ಪೆನ್ಷನ್ ಬಿಮಾ ಯೋಜನಾ 2017” (Varishtha Pension Bima Yojana) ಗೆ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರ ತನ್ನ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಕಾರ್ಯಕ್ರಮದಡಿ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ.
Question 9 |
9. ಭಾರತದಲ್ಲಿ ತ್ವರಿತಗತಿಯಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ರೂಪಿಸಲು, ಕೇಂದ್ರ ಸರ್ಕಾರ ಯಾರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದೆ?
ದೇವೇಂದ್ರ ಫಡ್ನವೀಸ್ ಸಮಿತಿ | |
ನಿತೀಶ್ ಕುಮಾರ್ ಸಮಿತಿ | |
ರಮಣ್ ಸಿಂಗ್ ಸಮಿತಿ | |
ಚಂದ್ರಬಾಬು ನಾಯ್ಡು ಸಮಿತಿ |
ಭಾರತದಲ್ಲಿ ತ್ವರಿತಗತಿಯಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ರೂಪಿಸಲು, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರವರ ಅಧ್ಯಕ್ಷತೆಯಲ್ಲಿ ಮುಖ್ಯಮಂತ್ರಿಗಳ ಸಮಿತಿಯೊಂದನ್ನು ಕೇಂದ್ರ ಸರ್ಕಾರ ರಚಿಸಿದೆ. ಸಮಿತಿ ತನ್ನ ಮಧ್ಯಂತರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ವರದಿಯಲ್ಲಿ ಹಲವಾರು ಅಂಶಗಳನ್ನು ಸರ್ಕಾರದ ಪರಿಶೀಲನೆಗೆ ಸಲ್ಲಿಸಿದೆ. ನಗದು ರಹಿತ ವಹಿವಾಟು ಮಾಡುವವರಿಗೆ ವಿಮಾ ಸೌಲಭ್ಯ ಒದಗಿಸುವುದು, ನಗದು ಸಬ್ಸಿಡಿ ನೀಡುವುದು ಹಾಗೂ ರೂ. 50000 ಕ್ಕೂ ಮೇಲ್ಪಟ್ಟ ನಗದು ವ್ಯವಹಾರಕ್ಕೆ ತೆರಿಗೆ ವಿಧಿಸುವುದೂ ಸೇರಿದಂತೆ ಹಲವಾರು ಸಲಹೆಗಳನ್ನು ನೀಡಿದೆ.
Question 10 |
10. ಸಾರಿಗೆ ವಲಯದ ವಿಮಾನಯಾನ ವರ್ಗದಡಿ ಕಾರ್ಪೊರೆಟ್ ಸಾಮಾಜಿಕ ಹೊಣೆಗಾರಿಕೆಯ ‘ಗೋಲ್ಡನ್ ಪಿಕಾಕ್ ಪ್ರಶಸ್ತಿ 2016’ ನ್ನು ಯಾವ ಭಾರತೀಯ ವಿಮಾನ ನಿಲ್ದಾಣಕ್ಕೆ ನೀಡಿದೆ?
ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ | |
ಸರ್ದಾರ್ ವಲ್ಲಭಾಯ್ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ | |
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ | |
ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ |
[button link=”http://www.karunaduexams.com/wp-content/uploads/2017/02/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ1718-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ