ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,19,20, 2017

Question 1

1. ತ್ಯಾಜ್ಯ ನಿರ್ವಹಣೆಗೆ ನೂತನ ತಂತ್ರಜ್ಞಾನ ಕಂಡುಹಿಡಿಯಲು ಕೇಂದ್ರ ಸರ್ಕಾರ ಯಾವ ಸಮಿತಿ ರಚಿಸಿದೆ?

A
ಆರ್.ಎ.ಮಶೇಲ್ಕರ್ ಸಮಿತಿ
B
ರಾಧಕೃಷ್ಣನ್ ಸಮಿತಿ
C
ಸುದರ್ಶನ್ ಜಾಧವ್ ಸಮಿತಿ
D
ಕಿರಣ್ ಸಿಂಗ್ ಸಮಿತಿ
Question 1 Explanation: 
ಆರ್.ಎ.ಮಶೇಲ್ಕರ್ ಸಮಿತಿ

ಚರಂಡಿ ವ್ಯವಸ್ಥೆ ಮತ್ತು ನೀರು ಪೂರೈಕೆ ವ್ಯವಸ್ಥೆಯ ನಿರ್ವಹಣೆಗೆ ಸೂಕ್ತ ತಂತ್ರಜ್ಞಾನವನ್ನು ಕಂಡುಹಿಡಿಯುವ ಉದ್ದೇಶದ ತಜ್ಞ ಸಮಿತಿಯ ಮುಖ್ಯಸ್ಥರನ್ನಾಗಿ ಸಿಎಸ್ಐಆರ್ನ ಮಾಜಿ ಮಹಾನಿರ್ದೇಶಕ ಆರ್.ಎ.ಮಶೇಲ್ಕರ್ ಅವರನ್ನು ಹೆಸರಿಸಲಾಗಿದೆ. ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈ ಸಮಿತಿಯನ್ನು ರಚಿಸಲಾಗಿದೆ.

Question 2

2. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಜಿಲ್ಲೆಗಳನ್ನು ಸನ್ಮಾನಿಸಲು “ಮುಖ್ಯಮಂತ್ರಿಗಳ ಪ್ರಶಸ್ತಿ” ಯನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?

A
ರಾಜಸ್ತಾನ
B
ಕೇರಳ
C
ಅಸ್ಸಾಂ
D
ಮಹಾರಾಷ್ಟ್ರ
Question 2 Explanation: 
ಅಸ್ಸಾಂ
Question 3

3. ಚೀನಾ ದೇಶ ವಿಶ್ವದ ಅತಿ ಎತ್ತರದ ದೂರದರ್ಶಕ (ಟೆಲಿಸ್ಕೋಪ್) ವನ್ನು ನಿರ್ಮಾಣ ಮಾಡುತ್ತಿದೆ. ಅಂದಹಾಗೇ ಈ ಯೋಜನೆಯ ಹೆಸರೇನು?

A
ಎನ್ಗರಿ ನಂ.1
B
ಟೆಲಿವಿಡ್
C
ಕ್ಸಿಯಾಂಗ್ ನಂ.1
D
ಟೆಡ್ ಸ್ಟುಡ್
Question 3 Explanation: 
ಎನ್ಗರಿ ನಂ.1

ಚೀನಾ ದೇಶವು ಸೃಷ್ಟಿ ಕಾಲದಲ್ಲಿ ಹೊರಹೊಮ್ಮಿದ ಗುರುತ್ವ ಅಲೆಗಳನ್ನು ಪತ್ತೆ ಹಚ್ಚಲು ಟಿಬೆಟ್ನ ಅತಿಎತ್ತರದ ಪ್ರದೇಶದಲ್ಲಿ ದೂರದರ್ಶಕ (ಟೆಲಿಸ್ಕೋಪ್) ನಿರ್ಮಾಣ ಕಾರ್ಯ ಆರಂಭಿಸಿದೆ. ಈ ಯೋಜನೆಗೆ 'ಎನ್ಗರಿ ನಂ.1' ಎಂದು ಹೆಸರಿಡಲಾಗಿದೆ. ಬ್ರಹ್ಮಾಂಡದ ಕ್ಷೀಣ ತರಂಗಾಂತರಗಳನ್ನು (ಅಲೆಗಳನ್ನು) ಪತ್ತೆ ಹಚ್ಚುವುದು. ಈ ಮೂಲಕ ಸೃಷ್ಟಿ ಉಗಮದ ರಹಸ್ಯ ತಿಳಿಯುವುದು ಈ ಯೋಜನೆಯ ಮುಖ್ಯ ಉದ್ದೇಶ.

Question 4

4. 2017 ವೊಡಫೊನ್ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (PBL)ನಲ್ಲಿ ಪ್ರಶಸ್ತಿ ಗೆದ್ದ ತಂಡ ಯಾವುದು?

A
ಹೈದ್ರಾಬಾದ್ ವಾರಿಯರ್ಸ್
B
ಮುಂಬೈ ರಾಕೆಟ್ಸ್
C
ಚೆನ್ನೈ ಸ್ಮಾಶರ್ಸ್
D
ಅವಾದೆ ವಾರಿಯರ್ಸ್
Question 4 Explanation: 
ಚೆನ್ನೈ ಸ್ಮಾಶರ್ಸ್

ಚೆನ್ನೈ ಸ್ಮಾಶರ್ಸ್ ತಂಡ 2017 ವೊಡಫೊನ್ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಫೈನಲ್ ಪಂದ್ಯದಲ್ಲಿ ಮುಂಬೈ ರಾಕೆಟ್ಸ್ ತಂಡವನ್ನು ಮಣಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

Question 5

5. ಸ್ವಾತಂತ್ರ ಹೋರಾಟಗಾರ “ಮೋಹನ್ ಸಿಂಗ್ ಜೋಸನ್” ರವರು ಇತ್ತೀಚೆಗೆ ನಿಧನರಾದರು. ಜೋಸನ್ ರವರು ಯಾವ ರಾಜ್ಯದವರು?

A
ಓಡಿಶಾ
B
ಮಹಾರಾಷ್ಟ್ರ
C
ರಾಜಸ್ತಾನ
D
ಮಧ್ಯ ಪ್ರದೇಶ
Question 5 Explanation: 
ರಾಜಸ್ತಾನ

ಸ್ವಾತಂತ್ರ ಹೋರಾಟಗಾರ ಮೋಹನ್ ಸಿಂಗ್ ಜೋಸನ್ ರವರು ರಾಜಸ್ತಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ನಿಧನರಾದರು. ಜೋಸನ್ ರವರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯಾವಾಗಿ ಭಾಗವಹಿಸಿದ್ದರು. ಬ್ರಿಟಿಷರ ಆಳ್ವಿಕೆಯನ್ನು ಅಂತ್ಯಗೊಳಿಸುವ ಸಲುವಾಗಿ ಮಹಾತ್ವ ಗಾಂಧಿ ರವರು ಆಗಸ್ಟ್ 8, 1942ರಲ್ಲಿ ಬಾಂಬೆ ಅಧಿವೇಶನದಲ್ಲಿ ಕ್ವಿಟ್ ಇಂಡಿಯಾ ಚಳುವಳಿಗೆ ಚಾಲನೆ ನೀಡಿದ್ದರು.

Question 6

6. ಇತ್ತೀಚೆಗೆ ಭಾರತದ ಯಾವ ಕ್ರಿಕೆಟ್ ಆಟಗಾರ ಲೆಜೆಂಡ್ ಕ್ಲಬ್ “ಹಾಲ್ ಆಫ್ ಫೇಮ್”ಗೆ ಸೇರ್ಪಡೆಗೊಂಡರು?

A
ಅಜಿತ್ ಅಗರ್ಕರ್
B
ಕಪಿಲ್ ದೇವ್
C
ಅಜಿತ್ ವಾಡೇಕರ್
D
ಮಹಮ್ಮದ್ ಅಜರುದ್ದೀನ್
Question 6 Explanation: 
ಕಪಿಲ್ ದೇವ್

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಟಗಾರ ಕಪಿಲ್ ದೇವ್ ರವರು ಲೆಜೆಂಡ್ಸ್ ಕ್ಲಬ್ “ಹಾಲ್ ಆಫ್ ಫೇಮ್”ಗೆ ಮುಂಬೈ ಮಹಾರಾಷ್ಟ್ರದಲ್ಲಿ ಸೇರ್ಪಡೆಗೊಂಡರು. ಮಾಜಿ ಕ್ರಿಕೆಟ್ ಆಟಗಾರ ಹಾಗೂ ಲೆಜೆಂಡ್ಸ್ ಕ್ಲಬ್ ಅಧ್ಯಕ್ಷ ಮಾಧವ್ ಅಪ್ಟೆ ರವರು ಕಪಿಲ್ ದೇವ್ ರವರಿಗೆ ಫಲಕವನ್ನು ನೀಡಿದರು. 1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವ ಕಪ್ ಗೆದ್ದಾಗ ಕಪಿಲ್ ದೇವ್ ತಂಡದ ನಾಯಕರಾಗಿದ್ದರು. ಕಪಿಲ್ ದೇವ್ ಭಾರತ ಕ್ರಿಕೆಟ್ ನ ಶ್ರೇಷ್ಠ ಆಲ್ ರೌಂಡರ್ ಆಟಗಾರರಲ್ಲಿ ಒಬ್ಬರು.

Question 7

7. ಈ ಕೆಳಗಿನ ರಾಷ್ಟ್ರಗಳನ್ನು ಗಮನಿಸಿ:

I) ಭಾರತ

II) ಪಾಕಿಸ್ತಾನ

III) ಟರ್ಕಿ

IV) ಉಕ್ರೇನ್

ಈ ಮೇಲಿನ ಯಾವ ರಾಷ್ಟ್ರಗಳು “CERN”ನ ಸಹ ಸದಸ್ಯ ರಾಷ್ಟ್ರಗಳಾಗಿವೆ?

A
I & II
B
I & III
C
II & III
D
I, II, III & IV
Question 7 Explanation: 
I, II, III & IV

ಯುರೋಪಿಯನ್ ಆರ್ಗನೈಸೇಶನ್ ಫಾರ್ ನ್ಯೂಕ್ಲಿಯರ್ ರಿಸರ್ಚ್ ವಿಶ್ವದ ಅತಿದೊಡ್ಡ ಪರಮಾಣು ಹಾಗೂ ಭೌತಕಣ ಪ್ರಯೋಗಾಲಯವಾಗಿದೆ. ಫ್ರಾನ್ಸ್ ಮತ್ತು ಸ್ವಿಸ್ ಗಡಿ ಭಾಗದ ವಾಯುವ್ಯ ಜಿನೀವಾ ನಗರದಲ್ಲಿ ನೆಲೆಗೊಂಡಿದೆ. ಸರ್ನ್ ಅನ್ನು 1954ರಲ್ಲಿ ಸ್ಥಾಪಿಸಲಾಯಿತು. ಸರ್ನ್ ಒಟ್ಟು 22 ಸದಸ್ಯ ರಾಷ್ಟ್ರಗಳು, ನಾಲ್ಕು ಸಹ ಸದಸ್ಯ ರಾಷ್ಟ್ರಗಳು ಹಾಗೂ ಮೂರು ಅಂತಾರಾಷ್ಟ್ರೀಯ ಸಂಸ್ಥೆಗಳು ವೀಕ್ಷಣಾ ಸ್ಥಾನಗಳನ್ನು ಹೊಂದಿವೆ. ಭಾರತ, ಪಾಕಿಸ್ತಾನ, ಟರ್ಕಿ ಮತ್ತು ಉಕ್ರೇನ್ ಸರ್ನ್ ನ ಸಹ ಸದಸ್ಯ ರಾಷ್ಟ್ರಗಳು.

Question 8

8. ಇತ್ತೀಚೆಗೆ ಲೋಕಾರ್ಪಣೆಗೊಂಡ ಸ್ಕಾರ್ಪೀನ್ ಸರಣಿಯ “ಖಾಂಡೇರಿ”ಯನ್ನು ಯಾವ ದೇಶದ ಸಹಯೋಗದಲ್ಲಿ ನಿರ್ಮಿಸಲಾಗಿದೆ?

A
ಇಸ್ರೇಲ್
B
ಫ್ರಾನ್ಸ್
C
ಅಮೆರಿಕ
D
ರಷ್ಯಾ
Question 8 Explanation: 
ಫ್ರಾನ್ಸ್

ಸ್ಕಾರ್ಪೀನ್ ಸರಣಿಯ “ಖಾಂಡೇರಿ”ಯನ್ನು ಫ್ರಾನ್ಸ್ ಸಹಕಾರದಲ್ಲಿ ನಿರ್ಮಿಸಲಾಗಿದೆ. ಇತ್ತೀಚೆಗೆ ಜಲಾಂತರ್ಗಾಮಿ ನೌಕೆ ‘ಖಾಂಡೇರಿ’ಯನ್ನು ಮುಂಬಯಿ ಹತ್ತಿರದ ಮಜಗಾಂವ್ ಹಡಗುಕಟ್ಟೆಯಲ್ಲಿ ಲೋಕಾರ್ಪಣೆ ಮಾಡಲಾಯಿತು. ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಫ್ರಾನ್ಸ್ನ ಡಿಸಿಎನ್ಎಸ್ ಕಂಪೆನಿಯ ಸಹಭಾಗಿತ್ವದಲ್ಲಿ ಮಜಗಾಂವ್ ಹಡಗುಕಟ್ಟೆಯಲ್ಲಿ ಸ್ಕಾರ್ಪೀನ್ ಸರಣಿಯ ಒಟ್ಟು ಆರು ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತಿದೆ.ಇದು ಎರಡನೆಯದು.

Question 9

9. ತಮ್ಮ 29ನೇ ವಯಸ್ಸಿನಲ್ಲಿ ಇತ್ತೀಚೆಗೆ ವೃತ್ತಿಪರ ಟೆನ್ನಿಸ್ ಗೆ ವಿದಾಯ ಹೇಳಿದ ಅನಾ ಇವಾನೊವಿಕ್ ಯಾವ ದೇಶದವರು?

A
ಸರ್ಬಿಯಾ
B
ಫ್ರಾನ್ಸ್
C
ರಷ್ಯಾ
D
ಬ್ರೆಜಿಲ್
Question 9 Explanation: 
ಸರ್ಬಿಯಾ

2008ರ ಫ್ರೆಂಚ್ ಓಪನ್ ಚಾಂಪಿಯನ್ ಹಾಗೂ ಮಾಜಿ ವಿಶ್ವ ನಂ.1 ಆಟಗಾರ್ತಿ ಅನಾ ಇವಾನೊವಿಕ್ ತಮ್ಮ 29ನೇ ವಯಸ್ಸಿನಲ್ಲಿ ಟೆನಿಸ್ಗೆ ವಿದಾಯ ಘೊಷಿಸಿದ್ದಾರೆ. 2016ರಲ್ಲಿ ಕೇವಲ 15 ಪಂದ್ಯಗಳಲ್ಲಿ ಗೆದ್ದಿದ್ದ ಇವಾನೊವಿಕ್ ವಿಶ್ವ ರ್ಯಾಂಕಿಂಗ್ನಲ್ಲಿ 63ನೇ ಸ್ಥಾನಕ್ಕೆ ಕುಸಿದಿದ್ದರು. 2008ರಲ್ಲಿ 12 ವಾರಗಳ ಕಾಲ ನಂ.1 ಸ್ಥಾನದಲ್ಲಿದ್ದ ಇವಾನೊವಿಕ್ ಈವರೆಗೂ 15 ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದಾರೆ. 2008ರ ಫ್ರೆಂಚ್ ಓಪನ್ ಗೆದ್ದ ಬಳಿಕ, 2014ರ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ಫೈನಲ್ ಹಾಗೂ 2015ರ ಫ್ರೆಂಚ್ ಓಪನ್ ಸೆಮಿಫೈನಲ್ಗೇರಿದ್ದು ಅವರ ಶ್ರೇಷ್ಠ ಸಾಧನೆ ಎನಿಸಿತ್ತು.

Question 10

10. ವಿಶ್ವಸಂಸ್ಥೆಯ ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಹೊರನೋಟ(WESP)-2017ರ ಪ್ರಕಾರ 2017ನೇ ಆರ್ಥಿಕ ವರ್ಷದಲ್ಲಿ ಭಾರತ ಜಿಡಿಪಿ ಬೆಳವಣಿಗೆ ದರ ಎಷ್ಟಿರಲಿದೆ?

A
7.7%
B
7.5%
C
6.9%
D
7.0%
Question 10 Explanation: 
7.7%

ವಿಶ್ವಸಂಸ್ಥೆಯ ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಹೊರನೋಟ 2017ರ ಇತ್ತೀಚಿನ ವರದಿಯ ಪ್ರಕಾರ 2017ನೇ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ 7.7% ರಷ್ಟಿರಲಿದೆ ಹಾಗೂ 2018ನೇ ಸಾಲಿಗೆ 7.6% ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2017/02/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ1920-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.