ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,22,23, 2017

Question 1

1. ಈ ಕೆಳಗಿನ ಯಾವ ರಾಜ್ಯದಲ್ಲಿ “ಪ್ಲಾಸ್ಟ್ ಇಂಡಿಯಾ ಇಂಟರ್ನ್ಯಾಷನಲ್ ಯೂನಿರ್ವಸಿಟಿ” ಪ್ಲಾಸ್ಟಿಕ್ ಸಂಶೋಧನಾ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿದೆ?

A
ಗುಜರಾತ್
B
ರಾಜಸ್ತಾನ
C
ಮಹಾರಾಷ್ಟ್ರ
D
ಮಧ್ಯ ಪ್ರದೇಶ
Question 1 Explanation: 
ಗುಜರಾತ್

ಗುಜರಾತ್ ಸರ್ಕಾರದ ಸಹಕಾರದಲ್ಲಿ ಸಂಪೂರ್ಣ ಕಾಗದರಹಿತ ಮತ್ತು ಪರಿಸರ ಸ್ನೇಹಿ ಪ್ಲಾಸ್ಟಿಕ್ ಸಂಶೋಧನಾ ವಿಶ್ವವಿದ್ಯಾಲಯ ವಾಪಿಯಲ್ಲಿ ಆರಂಭಗೊಳ್ಳಲಿದೆ. 'ವಾಪಿಯ 30 ಎಕರೆ ಪ್ರದೇಶದಲ್ಲಿ ಪ್ಲಾಸ್ಟ್ಇಂಡಿಯಾ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯ, ಪ್ಲಾಸ್ಟಿಕ್ ಇಂಡಿಯಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಈ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತಿದೆ.

Question 2

2. ಶಾಲಾ ಮಕ್ಕಳಿಗೆ ಆರ್ಥಿಕ ಸಾಕ್ಷರತೆಯನ್ನು ಸಾರುವ ಸಲುವಾಗಿ “FI@School” ವಿನೂತನ ಕಾರ್ಯಕ್ರಮವನ್ನು ಯಾವ ಬ್ಯಾಂಕ್ ಜಾರಿಗೆ ತಂದಿದೆ?

A
ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್
B
ಕೇರಳ ಗ್ರಾಮೀಣ ಬ್ಯಾಂಕ್
C
ಕಲ್ಪತರು ಗ್ರಾಮೀಣ ಬ್ಯಾಂಕ್
D
ರಾಜಸ್ತಾನ ಗ್ರಾಮೀಣ ಬ್ಯಾಂಕ್
Question 2 Explanation: 
ಕೇರಳ ಗ್ರಾಮೀಣ ಬ್ಯಾಂಕ್

ಕೇರಳ ಗ್ರಾಮೀಣ ಬ್ಯಾಂಕ್ ಶಾಲಾ ಮಕ್ಕಳಿಗೆ ಆರ್ಥಿಕ ಸಾಕ್ಷರತೆಯನ್ನು ಸಾರುವ ಸಲುವಾಗಿ “FI@School” ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮದಡಿ ಬ್ಯಾಂಕಿನ ಪ್ರತಿ ಶಾಖೆಗಳು ಸಮೀಪ ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಶಾಲಾ ಮಕ್ಕಳಿಗೆ ಆರ್ಥಿಕ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿವೆ.

Question 3

3. 68ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವ “ಶೇಖ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್” ಯಾವ ದೇಶದ ಯುವರಾಜ?

A
ಇಸ್ರೇಲ್
B
ಯುಎಇ
C
ಇರಾನ್
D
ಕುವೈತ್
Question 3 Explanation: 
ಯುಎಇ

ಯುನೈಟೆಡ್ ಅರಬ್ ಎಮಿರೆಟ್ಸ್ ನ ಯುವರಾಜ ಶೇಖ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್” ರವರು 68ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿ.

Question 4

4. “ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ (Advertising Standard Council of India)” ಕೇಂದ್ರ ಕಚೇರಿ ಎಲ್ಲಿದೆ?

A
ಪುಣೆ
B
ಮುಂಬೈ
C
ನವ ದೆಹಲಿ
D
ಚೆನ್ನೈ
Question 4 Explanation: 
ಮುಂಬೈ

ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾದ ಕೇಂದ್ರ ಕಚೇರಿ ಮುಂಬೈ, ಮಹಾರಾಷ್ಟ್ರದಲ್ಲಿದೆ. ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ ಒಂದು ಸ್ವ ನಿಯಂತ್ರಿತ ಸ್ವಯಂ ಸಂಸ್ಥೆಯಾಗಿದ್ದು, ಜಾಹೀರಾತು ಉದ್ಯಮವನ್ನು ನಿಯಂತ್ರಿಸುವ ಕಾರ್ಯವನ್ನು ಮಾಡುತ್ತಿದೆ.

Question 5

5. ಪ್ರಸಿದ್ದ ಬೊಮ್ಕಯಿ (Bomkai) ಸೀರೆಗಳು ಯಾವ ರಾಜ್ಯದಲ್ಲಿ ತಯಾರಿಸಲಾಗುತ್ತದೆ?

A
ಬಿಹಾರ
B
ಓಡಿಶಾ
C
ತೆಲಂಗಣ
D
ಮಹಾರಾಷ್ಟ್ರ
Question 5 Explanation: 
ಓಡಿಶಾ

ಬೊಮ್ಕಯಿ ಅಥವಾ ಸೊನೆಪುರಿ ಸೀರೆಗಳು ಓಡಿಶಾದ ಪ್ರಸಿದ್ದ ಸೀರೆಗಳು. ಓಡಿಶಾದ ಗಂಜಮ್ ಜಿಲ್ಲೆಯ ಬೊಮ್ಕಯಿ ಯಲ್ಲಿ ಈ ಸೀರೆಗಳನ್ನು ನೇಯುವುದರಿಂದ ಇವುಗಳಿಗೆ ಬೊಮ್ಕಯಿ ಸೀರೆ ಎಂಬ ಹೆಸರು ಬಂದಿದೆ. ಈ ಸೀರೆಗಳಿಗೆ ಭೌಗೋಳಿಕ ಗುರುತು (Geographical Identification) ಲಭಿಸಿದೆ.

Question 6

6. ಈ ಕೆಳಗಿನ ಯಾರು 2017 ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯ ತೀರ್ಪುಗಾರರ ಸಮಿತಿಯಲ್ಲಿ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ?

A
ಸುಶ್ಮಿತಾ ಸೇನ್
B
ಪ್ರೀಯಾಂಕ ಚೋಪ್ರ
C
ಐಶ್ವರ್ಯಾ ರೈ
D
ನಂದಿತಾ ದಾಸ್
Question 6 Explanation: 
ಸುಶ್ಮಿತಾ ಸೇನ್

ಮಾಜಿ ವಿಶ್ವ ಸುಂದರೆ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ರವರು 65ನೇ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯ ತೀರ್ಪುಗಾರರ ವೇದಿಕೆಯಲ್ಲಿ ಸಮಿತಿಯ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಈ ವರ್ಷದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ರೋಶ್ಮತಿ ಹರಿಮೂರ್ತಿ ರವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

Question 7

7. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (Khadi & Village Industries Commission)ದ ನೂತನ ಸಿಇಓ ಆಗಿ ಯಾರು ನೇಮಕಗೊಂಡಿದ್ದಾರೆ?

A
ಸುನೀಲ್ ಜೋಶಿ
B
ರಾಘವೇಂದ್ರ ಭಟ್
C
ಅಂಶು ಸಿನ್ಹಾ
D
ಅನಿಲ್ ಸುಬ್ರಮಣ್ಯಂ
Question 7 Explanation: 
ಅಂಶು ಸಿನ್ಹಾ

ಅಂಶು ಸಿನ್ಹಾ, 1999ನೇ ಐಎಎಸ್ ಬ್ಯಾಚ್ ಅಧಿಕಾರಿ ರವರು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ನೂತನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (ಸಿಇಓ) ಆಗಿ ನೇಮಕಗೊಂಡಿದ್ದಾರೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಒಂದು ಸಂವಿಧಾನಿಕ ಸಂಸ್ಥೆಯಾಗಿದ್ದು, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಕಾಯಿದೆ, 1995ರಡಿ ಸ್ಥಾಪಿಸಲಾಗಿದೆ.

Question 8

8. 2017 ಚೆನ್ನೈ ಓಪನ್ ಟೆನ್ನಿಸ್ ಟೂರ್ನಮೆಂಟ್ ನ ಪುರುಷರ ಸಿಂಗಲ್ಸ್ ನಲ್ಲಿ ಈ ಕೆಳಗಿನ ಯಾರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು?

A
ಡನಿಲ್ ಮೆಡ್ವೆಡೆವ್
B
ಬಾಟಿಸ್ಟ ಅಗುಟ್
C
ರೋಜರ್ ಫೆಡರರ್
D
ಸ್ಟಾನ್ ವಾರ್ವಿಂಕ
Question 8 Explanation: 
ಬಾಟಿಸ್ಟ ಅಗುಟ್

ಸ್ಪೇನ್ ನ ಬಾಟಿಸ್ಟ್ ಅಗುಟ್ ರವರು ರಷ್ಯಾದ ಡನಿಲ್ ಮೆಡ್ವೆಡೆವ್ ರವರನ್ನು 6-3, 6-4 ರಿಂದ ಸೋಲಿಸುವ ಮೂಲಕ 2017 ಚೆನ್ನೈ ಓಪನ್ ಟೆನ್ನಿಸ್ ಟೂರ್ನಮೆಂಟ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

Question 9

9. ಇತ್ತೀಚೆಗೆ ನಿಧನರಾದ ಸಿ.ವಿ.ವಿಶ್ವೇಶ್ವರ ರವರು ಯಾವ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದರು?

A
ಸಿನಿಮಾ
B
ವಿಜ್ಞಾನ
C
ಪತ್ರಿಕೋದ್ಯಮ
D
ಕಲೆ
Question 9 Explanation: 
ವಿಜ್ಞಾನ

ಹಿರಿಯ ಖಭೌತ (ಆಸ್ಟ್ರೋಫಿಸಿಕ್ಸ್) ವಿಜ್ಞಾನಿ, ಕನ್ನಡದ ಸಿ.ವಿ. ವಿಶ್ವೇಶ್ವರ (78) ಮರಣ ಹೊಂದಿದರು. ವಿಶ್ವೇಶ್ವರ ರವರು ಕಪ್ಪು ರಂಧ್ರಗಳ ಕುರಿತ ಸಂಶೋಧನೆ ನಡೆಸುವ ಮೂಲಕ ಗುರುತ್ವದ ಅಲೆಗಳ ಪತ್ತೆಗೆ ಚಾಲನೆ ನೀಡಿದವರಲ್ಲಿ ಒಬ್ಬರಾಗಿದ್ದರು.

Question 10

10. “2017 ರಾಷ್ಟ್ರೀಯ ಹೆಣ್ಣು ಮಗು ದಿನ (National Girl Child Day)” ಧ್ಯೇಯವಾಕ್ಯ _____?

A
ಬಾಲ್ಯ ವಿವಾಹ ಮುಕ್ತಗೊಳಿಸಿ
B
ಬೇಟಿ ಬಚಾವೊ ಬೇಟಿ ಪಡವೊ
C
ಹೆಣ್ಣು ಮಗುವಿನ ಸುರಕ್ಷತೆ ಮತ್ತು ಅಭಿವೃದ್ದಿ
D
ಹೆಣ್ಣು ಮಗು ಕುಟುಂಬದ ನಗು
Question 10 Explanation: 
ಬೇಟಿ ಬಚಾವೊ ಬೇಟಿ ಪಡವೊ

ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಪ್ರತಿ ವರ್ಷ ಜನವರಿ 24ರಂದು ಆಚರಿಸಲಾಗುತ್ತದೆ. ಸಮಾಜದ ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಅಸಮಾನತೆ ಬಗ್ಗೆ ಅರಿವು ಮೂಡಿಸುವುದು ಈ ದಿನದ ಗುರಿ. ಬೇಟಿ ಬಚಾವೊ ಬೇಟಿ ಪಡವೊ ಇದು ಈ ವರ್ಷದ ಧ್ಯೇಯವಾಕ್ಯ.

There are 10 questions to complete.

[button link=”http://www.karunaduexams.com/wp-content/uploads/2017/02/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ2223-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.