ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,24,25, 2017

Question 1

1. ಜುನ್ಬೀಲ್ ಮೇಳಕ್ಕೆ ಸಂಬಂಧಿಸಿದಂತೆ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:

I) ಜುನ್ಬೀಲ್ ಮೇಳವನ್ನು ಪ್ರತಿ ವರ್ಷ ಜನವರಿಯಲ್ಲಿ ಅಸ್ಸಾಂನ ತಿವಾ ಬುಡಕಟ್ಟು ಸಮುದಾಯ ನಡೆಸುತ್ತಾರೆ

II) ಸುಮಾರು 15ನೇ ಶತಮಾನದಿಂದ ಈ ಮೇಳವನ್ನು ಆಯೋಜಿಸಲಾಗುತ್ತಿದೆ

III) ಪ್ರಸ್ತುತ ಇದು ವಿನಿಮಯ ಪದ್ದತಿಯಲ್ಲಿ ನಡೆಯುವ ದೇಶದ ಏಕೈಕ ಮೇಳವಾಗಿದೆ

ಮೇಲಿನ ಯಾವ ಹೇಳಿಕೆ/ಹೇಳಿಕೆ ಸರಿಯಾಗಿವೆ?

A
I & II
B
II & III
C
I & III
D
I, II & III
Question 1 Explanation: 
I, II & III

ಬಿನ್ಬೀಲ್ ಮೇಳ ವನ್ನು ಪ್ರತಿ ವರ್ಷ ಜನವರಿಯಲ್ಲಿ ಅಸ್ಸಾಂನ ತಿವಾ ಬುಡಕಟ್ಟು ಸಮುದಾಯ ನಡೆಸುತ್ತದೆ. ಜುನ್ ಎಂದರೆ ಚಂದ್ರ ಮತ್ತು ಬೀಲ್ ಎಂದರೆ ಜೌಗು ನೆಲ ಎಂದು ಅರ್ಥ. ಅರ್ಧ ಚಂದ್ರಾಕೃತಿಯ ಸರೋವರವೊಂದರ ದಡದಲ್ಲಿ ಈ ಮೇಳ ನಡೆಯುವುದರಿಂದ ಈ ಹೆಸರು. ಈ ಮೇಳದಲ್ಲಿನ ವಹಿವಾಟಿಗೆ ನಗದು ಬಳಕೆ ಇಲ್ಲವೇ ಇಲ್ಲ. ಇದು ಸಂಪೂರ್ಣ ನಗದುರಹಿತ. ಇಲ್ಲಿ ಜನರು ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ವಹಿವಾಟಯ ನಡೆಸುತ್ತಾರೆ. ಈ ರೀತಿಯ ವಿನಿಮಯ ಮಾದರಿಯಲ್ಲಿ ನಡೆಯುವ ದೇಶದ ಏಕೈಕ ಮೇಳ ಇದಾಗಿದೆ.

Question 2

2. ಯಾವ ದೇಶ ಇತ್ತೀಚೆಗೆ ತನ್ನ ಮೊದಲ ಮಿಲಿಟರಿ ಸಂವಹನ ಉಪಗ್ರಹ “ಕಿರಮೆಕಿ-2 (Kirameki-2)” ಅನ್ನು ಕಕ್ಷೆಗೆ ಸೇರಿಸಿತು?

A
ಜಪಾನ್
B
ರಷ್ಯಾ
C
ಚೀನಾ
D
ಪಾಕಿಸ್ತಾನ
Question 2 Explanation: 
ಜಪಾನ್

ಜಪಾನ್ ತನ್ನ ಮೊದಲ ಮಿಲಿಟರಿ ಸಂವಹನ ಉಪಗ್ರಹ ಕಿರಮೆಕಿ-2 ಅನ್ನು ಯಶಸ್ವಿಯಾಗಿ ಉಡಾಯಿಸಿದೆ. ತನೆಗಶಿಮ ಬಾಹ್ಯಕಾಶ ಕೇಂದ್ರದಿಂದ H-2A ರಾಕೆಟ್ ಮೂಲಕ ಈ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ. ಜಪಾನಿನ ಭೂ, ವಾಯು ಮತ್ತು ನೌಕಸೇನೆ ನಡುವೆ ನೇರವಾದ ಅತಿವೇಗದ ಸಂವಹನ ಸಾಧಿಸುವ ಸಲುವಾಗಿ ಈ ಉಪಗ್ರಹವನ್ನು ಹಾರಿಸಲಾಗಿದೆ.

Question 3

3. ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ಯಾವ ರಾಷ್ಟ್ರದಲ್ಲಿ ಸ್ಥಾಪಿಸಲಾಗಿದೆ?

A
ಭಾರತ
B
ಚೀನಾ
C
ಮೆಕ್ಸಿಕೊ
D
ಇಟಲಿ
Question 3 Explanation: 
ಚೀನಾ

ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ಅನ್ನು ಚೀನಾದ ಪಶ್ಚಿಮ ಪ್ರಾಂತ್ಯದ ಲಾಂಗ್ಯಂಕ್ಸಿಯ ಅಣೆಕಟ್ಟಿನ ಬಳಿ ನಿರ್ಮಿಸಲಾಗಿದೆ. ಈ ಸೋಲಾರ್ ಪಾರ್ಕ್ 27 ಚದರ ಕಿ.ಮೀ ವಿಸ್ತೀರ್ಣವಿದ್ದು, 6 ಬಿಲಿಯನ್ ಯಾನ್ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಪಾರ್ಕ್ ಸುಮಾರು 850 ಮೆಗಾ ವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಲಿದೆ.

Question 4

4. “ದಿ ಪ್ಯೂಚರ್ ಆಫ್ ಇಂಡಿಯಾ (The Future of India)” ಪುಸ್ತಕದ ಲೇಖಕರು ________?

A
ಸಿ ರಂಗರಾಜನ್
B
ರಘುರಾಮ್ ರಾಜನ್
C
ಭಿಮಲ್ ಜಲನ್
D
ಸುಬ್ಬುರಾವ್
Question 4 Explanation: 
ಭಿಮಲ್ ಜಲನ್

ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಭಿಮಲ್ ಜಲನ್ ರವರು “ದಿ ಪ್ಯೂಚರ್ ಆಫ್ ಇಂಡಿಯಾ” ಪುಸ್ತಕದ ಲೇಖಕರು.

Question 5

5. ವೆನೆಜುವೆಲಾದ ಮೊದಲ ಹ್ಯೂಗೋ ಚಾವೆಜ್ ಶಾಂತಿ ಮತ್ತು ಸಾರ್ವಭೌಮತ್ವ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?

A
ವ್ಲಾದಿಮಿರ್ ಪುಟಿನ್
B
ಬರಾಕ್ ಒಬಾಮ
C
ನರೇಂದ್ರ ಮೋದಿ
D
ಕ್ಸಿನ್ ಪಿಂಗ್
Question 5 Explanation: 
ವ್ಲಾದಿಮಿರ್ ಪುಟಿನ್

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ವೆನೆಜುವೆಲಾದ ಮೊದಲ ಹ್ಯೂಗೋ ಚಾವೆಜ್ ಶಾಂತಿ ಮತ್ತು ಸಾರ್ವಭೌಮತ್ವ ಪ್ರಶಸ್ತಿಯನ್ನು ನೀಡಲಾಗಿದೆ. ವೆನಿಜುವೆಲಾದ ಮಾಜಿ ಅಧ್ಯಕ್ಷ ಹ್ಯೂಗೋ ಚಾವೆಜ್ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.

Question 6

6. ಏಳು ಬಾರಿ “ದಫಬೆಟ್ ಮಾಸ್ಟರ್ ಟೈಟಲ್ (Dafabet Master Title)” ಗೆದ್ದು ದಾಖಲೆ ನಿರ್ಮಿಸಿದ “ರೋನಿ ಓ ಸುಲ್ಲಿವಾನ್ (Roni O Sullivan)” ಯಾವ ದೇಶದವರು?

A
ಯುಕೆ
B
ರಷ್ಯಾ
C
ಸ್ಪೇನ್
D
ಫ್ರಾನ್ಸ್
Question 6 Explanation: 
ಯುಕೆ

ಯುನಿಟೈಡ್ ಕಿಂಗ್ಡಮ್ ನ ವೃತ್ತಿಪರ ಸ್ನೂಕರ್ ಆಟಗಾರ “ರೋನಿ ಓ ಸುಲ್ಲಿವಾನ್” ರವರು ಜೊ ಪೆರ್ರಿ ಅವರನ್ನು ಸೋಲಿಸುವ ಮೂಲಕ ಏಳು ಬಾರಿ ದಫಬೆಟ್ ಮಾಸ್ಟರ್ ಟೈಟಲ್ ಗೆದ್ದು ದಾಖಲೆ ಬರೆದರು. ಆ ಮೂಲಕ ಸ್ಟೀಫನ್ ಹೆಂಡ್ರಿ ಅವರು ಆರು ಬಾರಿ ಟೈಟಲ್ ಗೆದ್ದು ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದರು.

Question 7

7. ಯಾವ ದೇಶ ಇತ್ತೀಚೆಗೆ “ಅಬಾಬೀಲ್ (Ababeel)” ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ?

A
ಪಾಕಿಸ್ತಾನ
B
ಚೀನಾ
C
ದಕ್ಷಿಣ ಕೊರಿಯಾ
D
ಉತ್ತರ ಕೊರಿಯಾ
Question 7 Explanation: 
ಪಾಕಿಸ್ತಾನ

ಪರಮಾಣು ಸಿಡಿತಲೆಗಳನ್ನು ಸುಮಾರು 2,200 ಕಿ.ಮೀ ದೂರದವರೆಗೆ ಹೊತ್ತೊಯ್ಯಬಲ್ಲ ಸಾಮರ್ಥ್ಯವುಳ್ಳ, ‘ಅಬಾಬೀಲ್’ ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಪ್ರಯೋಗವನ್ನು ಪಾಕಿಸ್ತಾನ ಯಶಸ್ವಿಯಾಗಿ ಪೂರೈಸಿದೆ. ಮೇಲ್ಮೈಯಿಂದ ಮೇಲ್ಮೈಗೆ ಗುರುತ್ವ ಬಲದಿಂದ ಸಾಗುವ ಈ ಕ್ಷಿಪಣಿಯು ಬಹು ಸಿಡಿತಲೆ ಉಡಾಯಿಸುವ ಸಾಮರ್ಥ್ಯ ಹೊಂದಿದೆ.

Question 8

8. ಇತ್ತೀಚೆಗೆ ನಿಧನರಾದ “ಅಲೆಕ್ಸಾಂಡರ್ ಕಡಕಿನ್” ರವರು ಯಾವ ದೇಶದ ಭಾರತದ ರಾಯಭಾರಿ?

A
ರಷ್ಯಾ
B
ಅಮೆರಿಕ
C
ಆಸ್ಟ್ರೇಲಿಯಾ
D
ನ್ಯೂಜಿಲ್ಯಾಂಡ್
Question 8 Explanation: 
ರಷ್ಯಾ

ಭಾರತದ ರಷ್ಯಾ ರಾಯಭಾರಿ ಅಲೆಕ್ಸಾಂಡರ್ ಕಡಕಿನ್ ನಿಧನರಾದರು. ಈ ಹಿಂದೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಪಡೆಗಳು ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಅದನ್ನು ರಷ್ಯಾ ಪರವಾಗಿ ಸಮರ್ಥಿಸಿಕೊಂಡಿದ್ದ ಕಡಕಿನ್ ಅವರು, ಯಾವುದೇ ದೇಶಕ್ಕೆ ತನ್ನ ಬಾಹ್ಯ ಬೆದರಿಕೆಗಳನ್ನು ನಿರ್ವಹಿಸುವ ಅಥವಾ ನಿಗ್ರಹಿಸುವ ಹಕ್ಕಿದೆ ಎಂದು ಹೇಳಿದ್ದರು. ಅಂತೆಯೇ ಭಾರತದಲ್ಲಿ ನಡೆಯುತ್ತಿರುವ ಬಹುತೇಕ ಉಗ್ರ ದಾಳಿಗಳಿಗೆ ಪಾಕಿಸ್ತಾನ ಮೂಲದ ಉಗ್ರರೇ ಕಾರಣ ಎಂದು ಹೇಳಿದ್ದರು.

Question 9

9. ಜಗತ್ತಿನ ಮೊದಲ ರೊಬೋಟ್ ಪತ್ರಕರ್ತ (ರಿಪೋರ್ಟರ್) ಯಾವ ದೇಶದಲ್ಲಿ ಕಾರ್ಯಾರಂಭ ಮಾಡಿದೆ?

A
ಚೀನಾ
B
ಜಪಾನ್
C
ಯುಎಇ
D
ಇರಾನ್
Question 9 Explanation: 
ಚೀನಾ

ಚೀನಾದಲ್ಲಿ ಜಗತ್ತಿನ ಮೊದಲ ಪತ್ರಿಕಾ ರೊಬೋಟ್ ಕಾರ್ಯಾರಂಭ ಮಾಡಿದೆ. ಚೀನಾದ "ಮೆಟ್ರೋಪೊಲೀಸ್ ಡೈಲಿ' ಪತ್ರಿಕೆ ರೊಬೋಟ್ ಬರೆದ ಮೊದಲ ಲೇಖನ ಪ್ರಕಟಿಸಿದೆ. ವಸಂತೋತ್ಸವದಲ್ಲಿನ ಪ್ರವಾಸ ದಟ್ಟಣೆಯ ಕುರಿತ ಲೇಖನ ಇದಾಗಿದ್ದು, 300 ಪದಗಳನ್ನೊಳಗೊಂಡಿದೆ. ಈ ರೊಬೋಟ್ ಅನ್ನು ಅಧ್ಯಯಿನಿ ಸಿರುವ ಪೀಕಿಂಗ್ ವಿವಿಯ ಪ್ರೊ| ವ್ಯಾನ್ ಕ್ಸಿಯೋಜುನ್, "ಕ್ಸಿಯೊ ನ್ಯಾನ್ ಹೆಸರಿನ ಈ ರೊಬೊಟ್ಗೆ ಯಾವುದೇ ಬರಹ ರಚಿಸಲು ಕೇವಲ ಸೆಕೆಂಡುಗಳು ಸಾಕು. ಸಣ್ಣಕತೆ, ದೀರ್ಘವರದಿಗಳನ್ನೂ ರಚಿಸಬಲ್ಲುದು. ಪತ್ರಿಕಾಲಯದ ಸಿಬಂದಿಗೆ ಹೋಲಿಸಿದರೆ ಇದರ ಪದಕೋಶ ಸಾಮರ್ಥಯ ಚೆನ್ನಾಗಿದೆ. ಮುಂದಿನ ದಿನಗಳಲ್ಲಿ ವರದಿಗಾರರ ಕೆಲಸವನ್ನು ಇಂಥ ರೊಬೊಟ್ಗಳು ಮಾಡಬಲ್ಲವು' ಎಂದಿದ್ದಾರೆ.

Question 10

10. “ದಿ ಐಲ್ಯಾಂಡ್ ಆಫ್ ಲಾಸ್ಟ್ ಗರ್ಲ್ಸ್(The Island of Last Girls)” ಪುಸ್ತಕದ ಲೇಖಕರು __________?

A
ಕಿರಣ್ ದೋಶಿ
B
ಮಂಜುಳಾ ಪದ್ಮನಾಭನ್
C
ಶೃತಿ ನಾಯರ್
D
ಸೊಮೇಂದ್ರ ಶೇಖರ್
Question 10 Explanation: 
ಮಂಜುಳಾ ಪದ್ಮನಾಭನ್
There are 10 questions to complete.

[button link=”http://www.karunaduexams.com/wp-content/uploads/2017/02/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ2425-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,24,25, 2017”

Leave a Comment

This site uses Akismet to reduce spam. Learn how your comment data is processed.