ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,28,29, 2017

Question 1

1. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ 2017 ರ ಮಹಿಳಾ ಸಿಂಗಲ್ಸ್ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು ಯಾರು?

A
ವೀನಸ್ ವಿಲಿಯಮ್ಸ್
B
ಸೆರೇನಾ ವಿಲಿಯಮ್ಸ್
C
ಎಲಿನಾ ಸ್ವಿಟೋಲಿನಾ
D
ಆ್ಯನಾ ಇವನೋವಿಕ್
Question 1 Explanation: 
ಸೆರೇನಾ ವಿಲಿಯಮ್ಸ್

ಅಮೆರಿಕಾದ ಸೆರೇನಾ ವಿಲಿಯಮ್ಸ್ ತನ್ನ ಸಹೋದರಿ ವೀನಸ್ ವಿಲಿಯಮ್ಸ್ ರನ್ನು ಫೈನಲ್ ಪಂದ್ಯದಲ್ಲಿ ಮಣಿಸಿ ವರ್ಷದ ಪ್ರಥಮ ಟೆನಿಸ್ ಟೂರ್ನಿಯಾದ ‘ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ 2017 ನ್ನು ತಮ್ಮ ಮುಡಿಗೇರಿಸಿಕೊಂಡರು. ಇದು ಅವರ 23 ನೇ ಗ್ರಾಂಡ್ ಸ್ಲಾಂ ಪ್ರಶಸ್ತಿಯಾಗಿದ್ದು, ಟೆನಿಸ್ ದಂತಕತೆ ಸ್ಟೆಫಗ್ರಾಫ್ ರ 22 ಗ್ರಾಂಡ್ ಸ್ಲಾಂ ಪ್ರಶಸ್ತಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಲ್ಲದೆ ಅತೀ ಹೆಚ್ಚು ಅಂದರೆ 24 ಗ್ರಾಂಡ್ ಸ್ಲಾಂ ಪ್ರಶಸ್ತಿಗಳನ್ನು ಜಯಿಸಿದ ಮಹಿಳಾ ಆಟಗಾರ್ತಿ ಮಾರ್ಗರೆಟ್ ಕೋರ್ಟ್ ರವರ ದಾಖಲೆಯನ್ನು ಸರಿಗಟ್ಟಲು ಕೇವಲ ಒಂದು ಪ್ರಶಸ್ತಿ ಅಂತರದಲ್ಲಿದ್ದಾರೆ.

Question 2

2. ಮೊಟ್ಟಮೊದಲ ‘ಬ್ರಹ್ಮಪುತ್ರ ಸಾಹಿತ್ಯೋತ್ಸವ’ ವನ್ನು ಭಾರತದ ಯಾವ ನಗರದಲ್ಲಿ ಆಯೋಜಿಸಲಾಗಿತ್ತು?

A
ವಾರಣಾಸಿ
B
ಶಿಲಾಂಗ್
C
ಗೌಹಾಟಿ
D
ಕೋನಾರ್ಕ್
Question 2 Explanation: 
ಗೌಹಟಿ

ಭಾರತದಲ್ಲಿನ ಸಾಹಿತ್ಯಾಸಕ್ತರ ಮತ್ತು ಸಾಹಿತಿಗಳ ಸಂವಹನ ಮತ್ತು ವಿಚಾರಗಳ ವಿನಿಮಯ ಮಾಡುವ ಉದ್ದೇಶದಿಂದ ಅಸ್ಸಾಂನ ಗೌಹಾಟಿಯಲ್ಲಿ, ಅಸ್ಸಾಂ ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಪುಸ್ತಕ ಪ್ರಾಧಿಕಾರ ಜಂಟಿಯಾಗಿ ಪ್ರಪ್ರಥಮ ‘ಬ್ರಹ್ಮಪುತ್ರ ಸಾಹಿತ್ಯೋತ್ಸವ’ ವನ್ನು ಆಯೋಜಿಸಲಾಗಿತ್ತು.

Question 3

3. ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ದೇಶೀಯವಾಗಿ ಅಭಿವೃದ್ಧಿಪಡಿಸಿದ “C25” ಎಂಬ ಹೆಚ್ಚು ಕಾರ್ಯಕ್ಷಮತೆಯ ಕ್ರಯೋಜನಿಕ್ ರಾಕೆಟ್ ಇಂಜನ್ ಅನ್ನು ಯಾವ ಅಂತರಿಕ್ಷ ವಾಹನದಲ್ಲಿ ಪ್ರಯೋಗಿಸಲಾಯಿತು?

A
ಜಿ.ಎಸ್.ಎಲ್.ವಿ-ಮಾರ್ಕ್-II
B
ಜಿ.ಎಸ್.ಎಲ್.ವಿ-ಮಾರ್ಕ್-III
C
ಜಿ.ಎಸ್.ಎಲ್.ವಿ-ಮಾರ್ಕ್-IV
D
ಜಿ.ಎಸ್.ಎಲ್.ವಿ-ಮಾರ್ಕ್-V
Question 3 Explanation: 
ಜಿ.ಎಸ್.ಎಲ್.ವಿ-ಮಾರ್ಕ್-III

ತಮಿಳುನಾಡಿನ ಮಹೇಂದ್ರಗಿರಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ದೇಶೀಯವಾಗಿ ಅಭಿವೃದ್ಧಿಪಡಿಸಿದ “C25” ಎಂಬ ಹೆಚ್ಚು ಕಾರ್ಯಕ್ಷಮತೆಯ ಕ್ರಯೋಜನಿಕ್ ರಾಕೆಟ್ ಇಂಜನ್ ಅನ್ನು ಜಿ.ಎಸ್.ಎಲ್.ವಿ.-ಮಾರ್ಕ್-II ಅಂತರಿಕ್ಷ ವಾಹನದಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಲಾಯಿತು. ಈ ಇಂಜನ್ ಅತ್ಯಂತ ಕಡಿಮೆ ಉಷ್ಣತೆಯಲ್ಲಿ ಕಾರ್ಯನಿರ್ವಹಿಸಲಿದ್ದು, ಅತೀ ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿದೆ.

Question 4

4. ಬಿಹಾರದ ನಳಂದಾ ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿ, ಭಾರತದ ‘ಸೂಪರ್ ಕಂಪ್ಯೂಟರ್ನ’ ಜನಕ ಎಂದು ಕರೆಸಿಕೊಳ್ಳುವ ________________ರವರನ್ನು ನೇಮಿಸಲಾಗಿದೆ?

A
ಡಾ.ಚಂದ್ರಶೇಖರ್
B
ಸುಗಥಾ ಬೋಸ್
C
ಸುಂದರ್ ಪಿಚಾಯ್
D
ವಿಜಯ್ ಬಾಟ್ಕರ್
Question 4 Explanation: 
ವಿಜಯ್ ಬಾಟ್ಕರ್
Question 5

5. ಕೇಂದ್ರ ಸರ್ಕಾರ 2020 ಮತ್ತು 2024 ರಲ್ಲಿ ನಡೆಯಲಿರುವ ಒಲಂಪಿಕ್ ಕ್ರೀಡಾಕೂಟಕ್ಕೆ ತಯಾರಿಗಾಗಿ ‘ಟಾರ್ಗೆಟ್ ಒಲಂಪಿಕ್ ಪೋಡಿಯಂ ಸಮಿತಿ’ ಯನ್ನು ರಚಿಸಿದೆ, ಈ ಸಮಿತಿ ಯಾವುದು?

A
ಯೋಗೇಶ್ವರ್ ದತ್ತ ಸಮಿತಿ
B
ಅಭಿನವ್ ಬಿಂದ್ರಾ ಸಮಿತಿ
C
ಕರಣಂ ಮಲ್ಲೇಶ್ವರಿ ಸಮಿತಿ
D
ಅಂಜಲಿ ಕುಮಾರಿ ಸಮಿತಿ
Question 5 Explanation: 
ಅಭಿನವ್ ಬಿಂದ್ರಾ ಸಮಿತಿ

ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ ಒಲಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾರವರ ಅಧ್ಯಕ್ಷತೆಯಲ್ಲಿ ‘ಟಾರ್ಗೆಟ್ ಒಲಂಪಿಕ್ ಪೋಡಿಯಂ ಸಮಿತಿ’ ಯನ್ನು ರಚಿಸಿದೆ. ಈ ಸಮಿತಿ 2020 ಮತ್ತು 2024 ರಲ್ಲಿ ನಡೆಯಲಿರುವ ಒಲಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲಬಹುದಾದ ಯೋಗ್ಯ ಕ್ರೀಡಾಪಟುಗಳನ್ನು ಗುರುತಿಸುವ, ಆರ್ಥಿಕ ಸಹಾಯ ಮತ್ತು ಪರಿಣಿತ ತರಬೇತಿ ನೀಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ.

Question 6
6. ಭಾರತ ಸರ್ಕಾರ ಇತ್ತೀಚೆಗೆ ಯಾವ ದೇಶದೊಂದಿಗೆ ‘ವೈಟ್ ಶಿಪಿಂಗ್ ಅಗ್ರಿಮೆಂಟ್’ ಒಪ್ಪಂದಕ್ಕೆ ಸಹಿ ಹಾಕಿದೆ?
A
ನಾರ್ವೆ
B
ಜರ್ಮನಿ
C
ಫ್ರಾನ್ಸ್
D
ಜಪಾನ್
Question 6 Explanation: 
ಫ್ರಾನ್ಸ್
Question 7

7. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ 2017 ರ ಪುರುಷರ ಸಿಂಗಲ್ಸ್ ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು ಯಾರು?

A
ನೊವಾಕ್ ಜಾಕೋವಿಕ್
B
ಆಂಡ್ರಿ ಮರ್ರೆ
C
ರಾಫಲ್ ನಡಾಲ್
D
ರೋಜರ್ ಫೆಡರರ್
Question 7 Explanation: 
ರೋಜರ್ ಫೆಡರರ್

ಸ್ವಿಟ್ಜರ್ಲ್ಯಾಂಡ್ ನ ವೃತ್ತಿಪರ ಟೆನಿಸ್ ಆಟಗಾರ ರೋಜರ್ ಫೆಡರರ್ 2017 ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಚಾಂಪಿಯನ್ ಪ್ರಶಸ್ತಿಯನ್ನು ಸ್ಪೇನ್ ನ ರಫಾಲ್ ನಡಾಲ್ ರವರನ್ನು ಮಣಿಸಿ ಮುಡಿಗೇರಿಸಿಕೊಂಡರು. ಇದು ಫೆಡರರ್ ರವರ ವೃತ್ತಿ ಜೀವನದ 18 ನೇ ಗ್ರಾಂಡ್ ಸ್ಲಾಂ ಪ್ರಶಸ್ತಿಯಾಗಿದೆ.

Question 8

8. ಭಾರತದಲ್ಲಿ 2017ರ “ರಾಷ್ಟ್ರೀಯ ರೋಗ ನಿರೋಧಕ ದಿನ” ವನ್ನು ಎಂದು ಆಚರಿಸಲಾಯಿತು?

A
ಜನವರಿ 27
B
ಜನವರಿ 28
C
ಜನವರಿ 29
D
ಜನವರಿ 30
Question 8 Explanation: 
ಜನವರಿ 29
Question 9

9. ಭಾರತೀಯ ಅಂಚೆ ಪಾವತಿ ಬ್ಯಾಂಕ್ ನ ಮಧ್ಯಂತರ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿವಾಹಕ ಅಧಿಕಾರಿಯಾಗಿ ಯಾರನ್ನು ನೇಮಿಸಲಾಗಿದೆ?

A
ಎ. ಪಿ. ಸಿಂಗ್
B
ನೀರಜ್ ಗುಪ್ತ
C
ಎಸ್.ಆರ್.ರೆಡ್ಡಿ
D
ಸೀಮಾ ಬಿಸ್ವಾಸ್
Question 9 Explanation: 
ಎ. ಪಿ. ಸಿಂಗ್
Question 10

10. ಈ ಕೆಳಗಿನ ಯಾವ ರಾಜ್ಯ ಮೇ 2017 ರಿಂದ ಪಾಲಿಥೀನ್ ಬ್ಯಾಗ್ ಗಳ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಲಿದೆ?

A
ಮಹಾರಾಷ್ಟ್ರ
B
ಮಧ್ಯ ಪ್ರದೇಶ
C
ಜಾರ್ಖಂಡ್
D
ಪಶ್ಚಿಮ ಬಂಗಾಳ
Question 10 Explanation: 
ಮಧ್ಯ ಪ್ರದೇಶ

ಮಧ್ಯ ಪ್ರದೇಶ ಸರ್ಕಾರ ಮೇ 1, 2017 ರಿಂದ ಪಾಲಿಥೀನ್ ಬ್ಯಾಗ್ ಗಳ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಲು ನಿರ್ಧರಿಸಿದೆ. ಪರಿಸರ ಸಂರಕ್ಷಣೆ, ನೈರ್ಮಲ್ಯತೆ ಹಾಗೂ ಜಾನುವಾರಗಳನ್ನು ರಕ್ಷಿಸಲು ಈ ನಿರ್ಧಾರವನ್ನು ಕೈಗೊಳ್ಳಲಿದೆ.

There are 10 questions to complete.

[button link=”http://www.karunaduexams.com/wp-content/uploads/2017/02/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ2829-2017-1.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,28,29, 2017”

  1. siddu sajjan

    Sir monthly magazine yavaga bidtira

  2. bheemroy sagar

    nyzzz information..,.,/,./,./,sir

Leave a Comment

This site uses Akismet to reduce spam. Learn how your comment data is processed.