ಐದು ಸಾಮಾನ್ಯ ಸಾಂಕ್ರಾಮಿಕವಲ್ಲದ ರೋಗಗಳ ನಿವಾರಣೆ, ತಪಾಸಣೆ ಮತ್ತು ನಿಯಂತ್ರಣ ಕಾರ್ಯಕ್ರಮ ಆರಂಭಿಸಲಿರುವ ಕೇಂದ್ರ ಸರ್ಕಾರ
ಕೇಂದ್ರ ಆರೋಗ್ಯ ಸಚಿವಾಲಯ ಐದು ಸಾಮಾನ್ಯ ಸಾಂಕ್ರಾಮಿಕವಲ್ಲದ ರೋಗಗಳ ನಿವಾರಣೆ, ತಪಾಸಣೆ ಮತ್ತು ನಿಯಂತ್ರಣ ಕಾರ್ಯಕ್ರಮವನ್ನು ಜಾರಿಗೆ ತರಲಿದೆ. ವಿಶ್ವ ಕ್ಯಾನ್ಸರ್ ದಿನವಾದ ಫೆಬ್ರವರಿ 4 ರಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ಬಾಯಿ ಕುಳಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಈ ಐದು ರೋಗಗಳಾಗಿವೆ. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಅಂಗವಾಗಿ ಜಾರಿಗೊಳಿಸಲಾಗುವುದು.
ಪ್ರಮುಖಾಂಶಗಳು:
- ಈ ಕಾರ್ಯಕ್ರಮದಡಿ ಮೊದಲ ಹಂತದಲ್ಲಿ ರೋಗಗಳ ತಪಾಸಣೆಯನ್ನು 32 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 100 ಜಿಲ್ಲೆಗಳಲ್ಲಿ ಮಾರ್ಚ್ 31, 2017 ಆರಂಭಿಸಲಾಗುವುದು.
- ಆಶಾ ಹಾಗೂ ಎಎನ್ಎಮ್ ಕಾರ್ಯಕರ್ತೆಯರಿಗೆ ಇದಕ್ಕಾಗಿ ತರಭೇತಿಯನ್ನು ನೀಡಲಾಗುವುದು.
- ಮುಂದಿನ ಹಂತಗಳಲ್ಲಿ ದೀರ್ಘಕಾಲದ ಪ್ರತಿರೋಧಕ ಉಸಿರಾಟ ಕಾಯಿಲೆಗಳನ್ನು ಸಹ ಸೇರ್ಪಡೆಗೊಳಿಸಲಾಗುವುದು ಹಾಗೂ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು.
ಸಾಂಕ್ರಾಮಿಕವಲ್ಲದ ರೋಗಗಳು:
ಸಾಂಕ್ರಾಮಿಕವಲ್ಲದ ರೋಗಗಳು ಅಂದರೆ ಹೃದಯ ಸಂಬಂಧಿ ರೋಗಗಳಾದ ಹೃದಯಘಾತ ಮತ್ತು ಪಾರ್ಶ್ವವಾಯು, ಮಧುಮೇಹ, ದೀರ್ಘಕಾಲದ ಉಸಿರಾಟ ಸಂಬಂಧಿ ಕಾಯಿಲೆಗಳಾದ ಅಸ್ತಮಾ ಮತ್ತು ಕ್ಯಾನ್ಸರ್ ರೋಗಗಳು ದೇಶದ ಶೇ 60% ಸಾವಿಗೆ ಕಾರಣವಾಗಿವೆ. ಈ ರೋಗಗಳ ಲಕ್ಷಣಗಳು ಕಾಯಿಲೆ ಉಲ್ಭಣಗೊಂಡ ನಂತರ ಗೋಚರವಾಗುವುದರಿಂದ ರೋಗದ ಆರಂಭ ದಿನಗಳಲ್ಲಿ ತಪಾಸಣೆಯನ್ನು ನಡೆಸುವುದು ಅತ್ಯಂತ ಅಗತ್ಯ. ಸಾಂಕ್ರಾಮಿಕವಲ್ಲದ ರೋಗಗಳು ಕುಟುಂಬದ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ.
ಕಲಿಕಾ ಫಲಿತಾಂಶಗಳ ವಿಷಯದಲ್ಲಿ ಕೇರಳವನ್ನು ಹಿಂದಿಕ್ಕಿದ ಹಿಮಾಚಲ ಪ್ರದೇಶ
ಇತ್ತೀಚೆಗೆ ಬಿಡುಗಡೆಗೊಂಡ ಶಿಕ್ಷಣ ಸ್ಥಿತಿ ವರದಿ-2016 ಪ್ರಕಾರ ಕಲಿಕಾ ಫಲಿತಾಂಶ ವಿಷಯದಲ್ಲಿ ಕೇರಳ ಹಾಗೂ ಇತರೆ ರಾಜ್ಯಗಳನ್ನು ಹಿಂದಿಕ್ಕಿ ಹಿಮಾಚಲ ಪ್ರದೇಶ ಮುಂಚೂಣಿ ಸ್ಥಾನದಲ್ಲಿ ಹೊರಹೊಮ್ಮಿದೆ. ಶಿಕ್ಷಣ ಸ್ಥಿತಿ ವರದಿ-2016 ಅತಿದೊಡ್ಡ ವಾರ್ಷಿಕ ಸಮೀಕ್ಷೆಯಾಗಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಮಕ್ಕಳ ಕುರಿತ ಸಮೀಕ್ಷೆ ಇದಾಗಿದೆ.
ವರದಿಯ ಪ್ರಮುಖಾಂಶಗಳು:
- ವರದಿಯ ಪ್ರಕಾರ ಶಾಲೆಗೆ ದಾಖಲಾಗುವ 6 ರಿಂದ 14 ವಯಸ್ಸಿನ ಮಕ್ಕಳ ಪ್ರಮಾಣ ಹಿಮಾಚಲ ಪ್ರದೇಶದಲ್ಲಿ ಶೇ 99.8% ರಷ್ಟಿದೆ. ದೇಶದಾದ್ಯಂತ ಓದುವ ಮತ್ತು ಗಣಿತ ಕಲಿಕಾ ಫಲಿತಾಂಶ ವಿಷಯದಲ್ಲಿ ಹಿಮಾಚಲ ಪ್ರದೇಶ ಅಗ್ರಸ್ಥಾನದಲ್ಲಿದೆ.
- ಭಾಷೆ ವಿಭಾಗದಲ್ಲಿ ರಾಷ್ಟ್ರ ಮಟ್ಟದ ಪ್ರಮಾಣ ಶೇ 41.6% ರಷ್ಟಿದ್ದರೆ ಹಿಮಾಚಲ ಪ್ರದೇಶದ ಕಲಿಕಾ ಫಲಿತಾಂಶ ಶೇ 65.3% ರಷ್ಟಿದೆ.
- ಗಣಿತ ವಿಷಯದಲ್ಲಿ ಕಲಿಕಾ ಫಲಿತಾಂಶ ಹಿಮಾಚಲ ಪ್ರದೇಶ ಶೇ 47.4% ರಷ್ಟಿದೆ. ರಾಷ್ಟ್ರ ಮಟ್ಟದಲ್ಲಿ ಈ ಪ್ರಮಾಣ ಶೇ 21.1% ರಷ್ಟಿದೆ. ಗಣಿತ ವಿಷಯದಲ್ಲಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿವೆ.
- ಇಂಗ್ಲೀಷ್ ಭಾಷೆ ಕಲಿಕೆಯಲ್ಲಿ ಹಿಮಾಚಲ ಪ್ರದೇಶ ದೇಶದಲ್ಲಿ ಐದನೇ ಸ್ಥಾನದಲ್ಲಿದೆ.
ಇಸ್ರೋದಿಂದ ಏಕಕಾಲಕ್ಕೆ ಒಂದೇ ರಾಕೆಟ್ ನಲ್ಲಿ 103 ಉಪಗ್ರಹಗಳ ಉಡಾವಣೆ
ಏಕಕಾಲಕ್ಕೆ ಒಂದೇ ರಾಕೆಟ್ ಮೂಲಕ 103 ಉಪಗ್ರಹಗಳನ್ನು ಉಡಾಯಿಸಲು ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಇಸ್ರೋ ಈ ಐತಿಹಾಸಿಕ ಸಾಧನೆಯನ್ನು ಕೈಗೊಳ್ಳಲಿದೆ. ಪಿಎಸ್ಎಲ್ವಿ-37 ರಾಕೆಟ್ ಬಳಸಿ ಸತೀಶ್ ದವನ್ ಬಾಹ್ಯಕಾಶ ಕೇಂದ್ರದಿಂದ ಈ ಉಪಗ್ರಹಗಳನ್ನು ಉಡಾಯಿಸಲಾಗುವುದು. ಭಾರತದ ಉಪಗ್ರಹ ಸೇರಿದಂತೆ ವಿವಿಧ ರಾಷ್ಟ್ರಗಳ ಉಪಗ್ರಹಗಳನ್ನು ಈ ಮಿಷನ್ ಅಡಿ ಉಡಾಯಿಸಲಾಗುವುದು.
ಪ್ರಮುಖಾಂಶಗಳು:
- ಭಾರತದ ಅತ್ಯಂತ ಯಶಸ್ವೀ ಉಡಾವಣಾ ನೌಕೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್(ಪಿಎಸ್ಎಲ್ವಿ)-ಸಿ37 ಉಡಾವಣಾ ವಾಹಕದಿಂದ 103 ಉಪಗ್ರಹಗಳ ಉಡಾವಣೆ ಮಾಡಲಾಗುವುದು.
- ಉಪಗ್ರಹಗಳು ಒಮ್ಮೆ ಉಡಾವಣಾ ಕಕ್ಷೀಯ ಸ್ಥಿತಿ ತಲುಪುತ್ತಿದ್ದಂತೆ, ವಿವಿಧ ದಿಕ್ಕುಗಳಲ್ಲಿ ಉಡಾವಣಾ ವಾಹನದಿಂದ ಬೇರ್ಪಡೆಗೊಳ್ಳಲಿವೆ. ಪ್ರತ್ಯೇಕತೆಯ ಕೋನ ಮತ್ತು ಸಮಯ ಪ್ರತಿ ಉಪಗ್ರಹಗಳಿಗೂ ಬೇರೆ ಬೇರೆ ಆಗಿರಲಿದೆ.
- ಇಸ್ರೇಲ್, ಕಜಕಿಸ್ತಾನ್, ನೆದರ್ಲ್ಯಾಂಡ್, ಸ್ವೀಜರ್ಲ್ಯಾಂಡ್ ಮತ್ತು ಅಮೆರಿಕ ಜರ್ಮನಿ ಸೇರಿದಂತೆ ಮೂರು ಸ್ವದೇಶಿ ಉಪಗ್ರಹಗಳಾದ ಕಾರ್ಟೋಸ್ಯಾಟ್-2 ಸಿರೀಸ್, 730 ಕೆಜಿ, ಐಎನ್ಎಸ್-1ಎ ಮತ್ತು ಐಎನ್ಎಸ್-1ಬಿ 30 ಕೆಜಿಯ ಉಪಗ್ರಹಗಳನ್ನು ಏಕಕಾಲಕ್ಕೆ ಇಸ್ರೋ ಉಡಾವಣೆ ಮಾಡಲಿದೆ.
- ಈ ಹಿಂದೆ ಒಂದೇ ರಾಕೆಟ್ನಲ್ಲಿ ಅತಿ ಹೆಚ್ಚು ಸಂಖ್ಯೆಯ ಉಪಗ್ರಹಗಳ ಉಡಾವಣೆ ಮಾಡಿದ ದಾಖಲೆ ರಷ್ಯಾ ಹೆಸರಲ್ಲಿದ್ದು, ರಷ್ಯಾದ ಡ್ನೆಪರ್ ಸಿಲೋ ರಾಕೆಟ್ ಮೂಲಕ 2014ರ ಜೂನ್ 19 ರಂದು 33 ಉಪಗ್ರಹಗಳನ್ನು ಒಂದೇ ಬಾರಿ ಉಡಾವಣೆ ಮಾಡಲಾಗಿತ್ತು
- ಇದೀಗ ಏಕಕಾಲದಲ್ಲಿ 103 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದ್ದೆ ಆದರೆ ಏಕಕಾಲಕ್ಕೆ ಅತೀ ಹೆಚ್ಚು ಉಪಗ್ರಹಗಳನ್ನು ಉಡಾಯಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಲಿದೆ.
ಅಬಾಬೀಲ್ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಪಾಕಿಸ್ತಾನ
ಮೇಲ್ಮೈಯಿಂದ ಮೇಲ್ಮೈಗೆ ಸಾಗುವ ಮಧ್ಯಮ ಶ್ರೇಣಿಯ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿರುವುದಾಗಿ ಪಾಕಿಸ್ತಾನ ಹೇಳಿದೆ. ಪರಮಾಣು ಸಿಡಿತಲೆ ಹಾಗೂ ಸಾಂಪ್ರದಾಯಿಕ ಸಿಡಿಲತಲೆಗಳನ್ನು ಹೊತ್ತೊಯ್ಯುವ ಹಾಗೂ ಹಲವು ಗುರಿಗಳನ್ನು ಕರಾರುವಕ್ಕಾಗಿ ತಲುಪಬಲ್ಲ ಕ್ಷಿಪಣಿ, ಶತ್ರುಗಳ ರಾಡಾರ್ಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯವನ್ನು ಇದು ಹೊಂದಿರುವುದಾಗಿ ಹೇಳಲಾಗಿದೆ.
ಪ್ರಮುಖಾಂಶಗಳು:
- ಮಲ್ಟಿಪಲ್ ಇಂಡಿಪೆಂಡೆಂಟ್ ರೀ ಎಂಟ್ರಿ ವೆಹಿಕಲ್ (MIRV) ತಂತ್ರಜ್ಞಾನವನ್ನು ಹೊಂದಿರುವ ಈ ಕ್ಷಿಪಣಿ ಸುಮಾರು 2,200 ಕಿ.ಮೀ ದೂರದವರೆಗೆ ಸಾಗಬಲ್ಲದು. ಎಐಆರ್ ವಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಪಾಕಿಸ್ತಾನದ ಮೊದಲ ಕ್ಷಿಪಣಿ ಇದಾಗಿದೆ.
- ಭಾರತದ ಪೃಥ್ವಿ ಹಾಗೂ ಅಶ್ವಿನ್ ಕ್ಷಿಪಣಿ ವ್ಯವಸ್ಥೆಗೆ ಪ್ರತಿರೋಧವಾಗಿ ಪಾಕಿಸ್ತಾನ ಈ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಲಾಗಿದೆ.
- ಪ್ರೋ ಕುಸ್ತಿ ಲೀಗ್ 2ನೇ ಆವೃತ್ತಿಯಲ್ಲಿ ರಿಯೋ ಒಲಿಂಪಿಕ್ಸ್ ಸ್ವರ್ಣ ಪದಕ ವಿಜೇತ ಪೈಲ್ವಾನ್ ವ್ಯ್ವಾಡಿಮಿರ್ ಕಿಂಚೆಗಶ್ವಿಲಿ ಸಾರಥ್ಯದ ಪಂಜಾಬ್ ರಾಯಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಹಾಲಿ ರನ್ನರ್ ಅಪ್ ಹರಿಯಾಣ ಹಮ್ಮರ್ಸ್ ತಂಡ ಪಂಜಾಬ್ ತಂಡ 5-4 ಅಂತರದಿಂದ ಸೋಲಿಸಿ ಚೊಚ್ಚಲ ಪ್ರಶಸ್ತಿ ತಮ್ಮದಾಗಿಸಿಕೊಂಡಿತು.
- ಚೀನಾದಲ್ಲಿ ಜಗತ್ತಿನ ಮೊದಲ ಪತ್ರಿಕಾ ರೊಬೋಟ್ ಕಾರ್ಯಾರಂಭ ಮಾಡಿದೆ. ಇಲ್ಲಿನ “ಮೆಟ್ರೋಪೊಲೀಸ್ ಡೈಲಿ’ ಪತ್ರಿಕೆ ರೊಬೋಟ್ ಬರೆದ ಮೊದಲ ಲೇಖನ ಪ್ರಕಟಿಸಿದೆ. ವಸಂತೋತ್ಸವದಲ್ಲಿನ ಪ್ರವಾಸ ದಟ್ಟ ಣೆಯ ಕುರಿತ ಲೇಖನ ಇದಾಗಿದ್ದು, 300 ಪದಗಳನ್ನೊಳಗೊಂಡಿದೆ. ಈ ರೊಬೋಟ್ ಅನ್ನು ಅಧ್ಯಯಿನಿ ಸಿರುವ ಪೀಕಿಂಗ್ ವಿವಿಯ ಪ್ರೊ| ವ್ಯಾನ್ ಕ್ಸಿಯೋಜುನ್, “ಕ್ಸಿಯೊ ನ್ಯಾನ್ ಹೆಸರಿನ ಈ ರೊಬೊಟ್ಗೆ ಯಾವುದೇ ಬರಹ ರಚಿಸಲು ಕೇವಲ ಸೆಕೆಂಡುಗಳು ಸಾಕು. ಸಣ್ಣಕತೆ, ದೀರ್ಘವರದಿಗಳನ್ನೂ ರಚಿಸಬಲ್ಲುದು. ಪತ್ರಿಕಾಲಯದ ಸಿಬಂದಿಗೆ ಹೋಲಿಸಿದರೆ ಇದರ ಪದಕೋಶ ಸಾಮರ್ಥಯ ಚೆನ್ನಾಗಿದೆ. ಮುಂದಿನ ದಿನಗಳಲ್ಲಿ ವರದಿಗಾರರ ಕೆಲಸವನ್ನು ಇಂಥ ರೊಬೊಟ್ಗಳು ಮಾಡಬಲ್ಲವು’ ಎಂದಿದ್ದಾರೆ.
Comment
good information in kannada
This is excelent work
Very usefull to all compitative
Improve more and more,provide require information
ಭಾರತ ಉಡಾವಣೆ ಮಾಡಿರುವ ಉಪಗ್ರಹಗಳ ಸಂಖ್ಯೆ 104
ರಷ್ಯ ಉಡಾವಣೆ ಮಾಡಿರುವ ಉಪಗ್ರಹಗಳ ಸಂಖ್ಯೆ 37