ಕರ್ನಾಟಕ ಲೋಕ ಸೇವಾ ಆಯೋಗದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) ಹಾಗೂ ಅಧೀಕ್ಷಕರು ಗ್ರೇಡ್-1
ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ (CDPO) 2
Question 1 |
1. ಅಮೆರಿಕ ಮೂಲದ ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆ (NGO) “ಹ್ಯೂಮನ್ ರೈಟ್ಸ್ ವಾಚ್ (Human Rights Watch)” ಸ್ಥಾಪಿಸಿದವರು _______?
ಡೇವಿಡ್ ಬರ್ನಾಡ್ | |
ರಾಬರ್ಟ್ ಎಲ್ ಬರ್ನಸ್ಟೈನ್ | |
ಕೆನ್ನೆತ್ ರಾಥ್ | |
ಜೇಮ್ಸ್ ಎಫ್ ಹೊಜ್ |
ಹ್ಯೂಮನ್ ರೈಟ್ಸ್ ವಾಚ್ (Human Rights Watch)” ಅನ್ನು ಸ್ಥಾಪಿಸಿದವರು ರಾಬರ್ಟ್ ಎಲ್ ಬರ್ನಸ್ಟೈನ್. ಇದರ ಕೇಂದ್ರ ಕಚೇರಿ ಅಮೆರಿಕದ ನ್ಯೂಯಾರ್ಕ್ ನಲ್ಲಿದೆ. ಇದನ್ನು ಮುಂಚೆ ಹೆಲ್ಸಿಂಕಿ ವಾಚ್ (Helsinki watch) ಎಂದು ಕರೆಯಲಾಗುತ್ತಿತ್ತು.
Question 2 |
2. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ:
A) ಚಿಪ್ಕೊ ಚಳುವಳಿ | 1. ಮೇಧಾ ಪಾಟ್ಕರ್ |
B) ನರ್ಮದಾ ಬಚಾವೋ ಆಂದೋಲನ | 2. ಅಲ್ ಗೋರೆ |
C) ಹವಾಮಾನ ಬದಲಾವಣೆ | 3. ರಾಚೆಲ್ ಕಾರ್ಲಸನ್ |
D) ಸೈಲೆಂಟ್ ಸ್ಪ್ರಿಂಗ್ | 4. ಸುಂದರಲಾಲ್ ಬಹುಗುಣ |
A-1, B-2, C-3, D-4 | |
A-2, B-3, C-4, D-1 | |
A-4, B-1, C-2, D-3 | |
A-3, B-2, C-1, D-4 |
Question 3 |
3. “ಶಿಕ್ಷಣ ಬದಲಾವಣೆ ಸಾಮಾಜಿಕ ಬದಲಾವಣೆಯನ್ನು ತರುವುದಿಲ್ಲ, ಬದಲಿಗೆ ಸಾಮಾಜಿಕ ಬದಲಾವಣೆ ಶೈಕ್ಷಣಿಕ ಬದಲಾವಣೆಯನ್ನು ತರುತ್ತದೆ” ಎಂದು ಹೇಳಿದವರು _______?
ಅರಿಸ್ಟಾಟಲ್ | |
ಡೆವಿ | |
ಮ್ಯಾಕ್ ಡೌಗಲ್ | |
ಡರ್ಖಿಮ್ |
Question 4 |
4. ಭಾರತೀಯ ಶಿಕ್ಷಣ ಆಯೋಗ ಅಥವಾ ಕೊಠಾರಿ ಆಯೋಗ ರಚನೆಯಾದ ದಿನಾಂಕ _______?
15 ಆಗಸ್ಟ್ 1960 | |
14 ಜುಲೈ 1964 | |
20 ನವೆಂಬರ್ 1970 | |
13 ಡಿಸೆಂಬರ್ 1987 |
ಭಾರತೀಯ ಶಿಕ್ಷಣ ಆಯೋಗ ಅಥವಾ ಕೊಠಾರಿ ಆಯೋಗವೆಂದೆ ಜನಪ್ರಿಯವಾಗಿರುವ ಆಯೋಗವನ್ನು ಕೇಂದ್ರ ಸರ್ಕಾರ 14 ಜುಲೈ 1964 ರಂದು ರಚಿಸಿತು. ದೇಶದ ಶೈಕ್ಷಣಿಕ ವಲಯದ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸಾಮಾನ್ಯ ಮಾದರಿಯ ಶಿಕ್ಷಣ ಹಾಗೂ ಶಿಕ್ಷಣ ಅಭಿವೃದ್ದಿಗೆ ಮಾರ್ಗದರ್ಶನ ಹಾಗೂ ನೀತಿಯನ್ನು ರೂಪಿಸಲು ಸಮಿತಿಯನ್ನು ರಚಿಸಲಾಗಿತ್ತು. ಇದೊಂದು ತಾತ್ಕಲಿಕ ಆಯೋಗವಾಗಿದ್ದು, ಇದರ ಅವಧಿ 1964-66 ರವರೆಗೆ. ವಿಶ್ವವಿದ್ಯಾಲಯ ಹಣಕಾಸು ಆಯೋಗದ ಅಧ್ಯಕ್ಷರಾದ ದೌವಲತ್ ಸಿಂಗ್ ಕೊಠಾರಿಯ ಸಮಿತಿಯ ಅಧ್ಯಕ್ಷರಾಗಿದ್ದರು. ಸಮಿತಿಯು ಜೂನ್ 29, 1966 ರಂದು ತನ್ನ ವರದಿಯನ್ನು ಸಲ್ಲಿಸಿದೆ.
Question 5 |
5. ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಸ್ಕೂಲ್ಸ್ ಆಫ್ ಸೋಶಿಯಲ್ ವರ್ಕ್ಸ್ (International Association of Schools of Social Works (IASSW))ನ ಈಗಿನ ಅಧ್ಯಕ್ಷರು ಯಾರು?
ಅಲೈಸ್ ಸಲೊಮೊನ್ | |
ರೆನೆ ಸ್ಯಾಂಡ್ | |
ವಿಮಲ ನಂದಕರ್ಣಿ | |
ಅನ್ನಾಮಾರಿಯ ಕಂಪನಿನಿ |
ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಸ್ಕೂಲ್ಸ್ ಆಫ್ ಸೋಶಿಯಲ್ ವರ್ಕ್ಸ್ ವಿಶ್ವವ್ಯಾಪ್ತಿ ಇರುವ ಸ್ಕೂಲ್ಸ್ ಆಫ್ ಸೋಶಿಯಲ್ ವರ್ಕ್ಸ್ ನ ಒಕ್ಕೂಟವಾಗಿದೆ. ಸಮಾಜ ಕಾರ್ಯ ಶಿಕ್ಷಣವನ್ನು ಅಭಿವೃದ್ದಿಯನ್ನು ಪ್ರೋತ್ಸಾಹಿಸುವುದು ಹಾಗೂ ಸಮಾಜ ಕಾರ್ಯ ಶಿಕ್ಷಣದ ಗುಣಮಟ್ಟವನ್ನು ಉತ್ತೇಜಿಸುವುದು ಇದರ ಧ್ಯೇಯ. IASSW ಯನ್ನು 1928ರಲ್ಲಿ ಪ್ಯಾರಿಸ್ ನಲ್ಲಿ ನಡೆದ ಮೊದಲ ಸಮಾಜ ಕಾರ್ಯ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸ್ಥಾಪಿಸಲಾಗಿದೆ. 1928 ರಿಂದ ಇದುವರೆಗೂ 12 ಅಧ್ಯಕ್ಷರು ಆಯ್ಕೆಯಾಗಿದ್ದಾರೆ. ಇದರ ಮೊದಲ ಅಧ್ಯಕ್ಷರು ಅಲೈಸ್ ಸಲೊಮೊನ್. ಈಗಿನ ಅಧ್ಯಕ್ಷರು ಇಟಲಿಯ ಅನ್ನಾಮಾರಿಯ ಕಂಪನಿನಿ. ವಿಮಲ ನಂದಕರ್ಣಿ ಅವರು ಈ ಒಕ್ಕೂಟ ಅಧ್ಯಕ್ಷರಾಗಿರುವ ಏಕೈಕ ಮಹಿಳೆ. ಇವರು 2012 ರಿಂದ 2016ರ ವರೆಗೆ ಅಧ್ಯಕ್ಷರಾಗಿದ್ದರು.
Question 6 |
6. ಎಷ್ಟು ವರ್ಷಗಳ ವರೆಗೆ ಮಹಿಳಾ ಖೈದಿಯೊಬ್ಬಳು ತನ್ನ ಮಗುವನ್ನು ಜೈಲಿನೊಳಗೆ ತನ್ನೊಂದಿಗೆ ಇರಿಸಿಕೊಳ್ಳಬಹುದು?
ಆರು ವರ್ಷ | |
ಐದು ವರ್ಷ | |
ಏಳು ವರ್ಷ | |
ಹತ್ತು ವರ್ಷ |
Question 7 |
7. ನಗರ ಪ್ರದೇಶಗಳಲ್ಲಿ ಬಿಪಿಎಲ್ ಕುಟುಂಬಗಳನ್ನು ಗುರುತಿಸುವ ಸಲುವಾಗಿ ಈ ಕೆಳಗಿನ ಯಾವ ಸಮಿತಿಯನ್ನು ರಚಿಸಲಾಗಿತ್ತು?
ಡಾ. ಹಶೀಮ್ ಸಮಿತಿ | |
ಸುರೇಶ್ ತೆಂಡುಲ್ಕರ್ ಸಮಿತಿ | |
ಲಕ್ಡವಾಲ ಸಮಿತಿ | |
ಸಕ್ಸೇನಾ ಸಮಿತಿ |
ನಗರ ಪ್ರದೇಶಗಳಲ್ಲಿ ಬಿಪಿಎಲ್ ಕುಟುಂಬಗಳನ್ನು ಗುರುತಿಸಲು ಯೋಜನಾ ಆಯೋಗ ಫ್ರೊಫೆಸರ್ ಡಾ. ಹಶೀಮ್ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಿತ್ತು. ಸಮಿತಿಯು ತನ್ನ ವರದಿಯನ್ನು ಡಿಸೆಂಬರ್ 24, 2012ರಲ್ಲಿ ವರದಿಯನ್ನು ಸಲ್ಲಿಸಿತು. ವರದಿಯನ್ನು ಸಮಿತಿಯು ಮೂರು ಹಂತದಲ್ಲಿ ಬಿಪಿಎಲ್ ಕುಟುಂಬಗಳನ್ನು ಗುರುತಿಸುವ ವಿಧಾನವನ್ನು ಶಿಫಾರಸ್ಸು ಮಾಡಿತ್ತು.
Question 8 |
8. “ಇಂಡಿಯಾಸ್ ಎಕಾನಮಿಕ್ಸ್ ಪಾಲಿಸಿ: ಪ್ರೆಪೆರಿಂಗ್ ಫಾರ್ ದಿ ಟ್ವೆಂಟಿ ಫಸ್ಟ್ ಸೆಂಚುರಿ (India’s Economics Policy: Preparing for the Twenty First Century) ಪುಸ್ತಕದ ಲೇಖಕರು?
ಬಿಮಲ್ ಜಲನ್ | |
ರಂಗರಾಜ್ | |
ವೈ ವಿ ರೆಡ್ಡಿ | |
ಸುಬ್ಬು ರಾವ್ |
Question 9 |
9. ಭಾರತದಲ್ಲಿ ಹೊಸ ಕೃಷಿ ನೀತಿ (New Agriculture Policy) ಜಾರಿಗೆ ಬಂದ ವರ್ಷ ______?
2001 | |
2003 | |
2000 | |
1995 |
Question 10 |
10. ಈ ಕೆಳಗಿನ ಯಾವ ಕೈಗಾರಿಕ ನೀತಿ ನಿರ್ಣಯ (Industrial Policy Revolution) ವನ್ನು ಭಾರತದ ಆರ್ಥಿಕ ಸಂವಿಧಾನವೆಂದು ಕರೆಯಲಾಗುತ್ತದೆ?
ಐಪಿಆರ್ 1964 | |
ಐಪಿಆರ್ 1948 | |
ಐಪಿಆರ್ 1956 | |
ಐಪಿಆರ್ 1976 |
[button link=”http://www.karunaduexams.com/wp-content/uploads/2017/02/ಶಿಶು-ಅಭಿವೃದ್ದಿ-ಯೋಜನಾ-ಅಧಿಕಾರಿ-CDPO-2.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Thank you sir , We need more questions and answers.
Thank you sir…..
Thank u sir
Hi Sir GM I’m Sreenivas so many thinks use full for CDPO QUZSE. and also please breef the sellabus wise 200 marks question paper quzse madi sir all topicks.
Regards
Sreenivas