ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಜನವರಿ,30,31, 2017
Question 1 |
1. ಈ ಕೆಳಗಿನ ಯಾವ ದೇಶ ವಿಶ್ವದಲ್ಲೆ ಮೊದಲ ಬಾರಿಗೆ “ಡಿಜಿಟಲ್ ರಾಯಭಾರಿ (Digital Ambassador)” ಅನ್ನು ನೇಮಕ ಮಾಡಲಿದೆ?
ಡೆನ್ಮಾರ್ಕ್ | |
ಗ್ರೀಸ್ | |
ಆಸ್ಟ್ರೇಲಿಯಾ | |
ಮಾರಿಷಸ್ |
ಡೆನ್ಮಾರ್ಕ್ ದೇಶ ವಿಶ್ವದಲ್ಲೆ ಮೊದಲ ಬಾರಿಗೆ ಡಿಜಿಟಲ್ ರಾಯಭಾರಿಯನ್ನು ನೇಮಕ ಮಾಡುವುದಾಗಿ ಘೋಷಿಸಿದೆ. ಡಿಜಿಟಲ್ ರಾಯಭಾರಿಯನ್ನು ನೇಮಕ ಮಾಡುವುದರಿಂದ ತಂತ್ರಜ್ಞಾನ ದೈತ್ಯರಾದ ಗೂಗಲ್, ಆ್ಯಪಲ್, ಐಬಿಮ್ ಮತ್ತು ಮೈಕ್ರೋಸಾಪ್ಟ್ ನೊಂದಿಗಿನ ತನ್ನ ಸಂಬಂಧ ಮತ್ತಷ್ಟು ಹತ್ತಿರವಾಗಲಿದೆ ಎಂದು ಹೇಳಿದೆ. ಡಿಜಿಟಲ್ ರಾಯಭಾರಿ ಇತರೆ ರಾಯಭಾರಿಗಳಂತೆ ಕಾರ್ಯನಿರ್ವಹಿಸಲಿದೆ.
Question 2 |
2. 2017 ಆಸ್ಟ್ರೇಲಿಯಾ ಒಪನ್ ಟೆನ್ನಿಸ್ ಟೂರ್ನಮೆಂಟ್ ನ ಪುರುಷರ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದವರು ಯಾರು?
ರೋಜರ್ ಫೆಡರರ್ | |
ರಫೆಲ್ ನಡಾಲ್ | |
ಆ್ಯಂಡಿ ಮುರ್ರೆ | |
ನೊವಾಕ್ ಜೊಕೊವಿಕ್ |
ಸ್ವಿಟ್ಜರ್ಲ್ಯಾಂಡ್ ನ ವೃತ್ತಿಪರ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ರವರು 2017 ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಫೈನಲ್ ಪಂದ್ಯದಲ್ಲಿ ಫೆಡರರ್ ಅವರು ರಫೆಲ್ ನಡಾಲ್ ಅವರನ್ನು 6-4, 3-6, 6-1, 3-6, 6-3 ಸೆಟ್ ಗಳಿಂದ ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು. ಫೆಡರರ್ ಗೆ ಇದು ಐದನೇ ಆಸ್ಟ್ರೇಲಿಯಾ ಓಪನ್ ಪ್ರಶಸ್ತಿ ಹಾಗೂ ಒಟ್ಟಾರೆಯಾಗಿ 18ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ.
Question 3 |
3. “2017 ರಾಷ್ಟ್ರೀಯ ಲಸಿಕಾ ದಿನ (National Immunization Day)”ವನ್ನು ಯಾವ ದಿನದಂದು ಆಚರಿಸಲಾಯಿತು?
ಜನವರಿ 28 | |
ಜನವರಿ 29 | |
ಜನವರಿ 30 | |
ಜನವರಿ 31 |
2017 ರಾಷ್ಟ್ರೀಯ ಲಸಿಕಾ ದಿನವನ್ನು ಜನವರಿ 29 ರಂದು ಆಚರಿಸಲಾಯಿತು. ಈ ದಿನದಂದು ರಾಷ್ಟ್ರಪತಿ ಪ್ರಣಭ್ ಮುಖರ್ಜಿ ಅವರು ರಾಷ್ಟ್ರವ್ಯಾಪ್ತಿ ಪಲ್ಸ್ ಪೊಲಿಯೊ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Question 4 |
4. “ದಿ ಮ್ಯಾನ್ ವೂ ಕುಡ್ ನೆವರ್ ಸೇ ನೊ (The Man Who Could Never Say No)” ಪುಸ್ತಕದ ಲೇಖಕರು ____________?
ಎಸ್ ಮುಥಿಯಾ | |
ಕಿರಣ್ ಬೇಡಿ | |
ಅಶೋಕ್ ಚವ್ಹಾಣ್ | |
ರಾಮಚಂದ್ರ ಗುಹ |
“ದಿ ಮ್ಯಾನ್ ವೂ ಕುಡ್ ನೆವರ್ ಸೇ ನೊ” ಪುಸ್ತಕದ ಲೇಖಕರು ಎಸ್ ಮುಥಿಯಾ. ಪ್ರಖ್ಯಾತ ಉದ್ಯಮಿ ಟಿ ಟಿ ಕೃಷ್ಣಮಾಚಾರಿ ಅವರ ಮಗ ಲೇಟ್ ಟಿ ಟಿ ವಾಸು ಅವರ ಕುರಿತ ಪುಸ್ತಕ ಇದಾಗಿದೆ.
Question 5 |
5. “2017-ಸೈಯದ್ ಮೋದಿ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ” ಮಹಿಳೆ ಹಾಗೂ ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದವರು ಯಾರು?
ಪಿ ವಿ ಸಿಂಧು ಮತ್ತು ಸಮೀರ್ ವರ್ಮಾ | |
ಸೈನಾ ನೆಹ್ವಾಲ್ ಮತ್ತು ಶ್ರೀಕಾಂತ್ ಕಿಡಂಬಿ | |
ಸೈನಾ ನೆಹ್ವಾಲ್ ಮತ್ತು ತರುಣ್ ಕೊನ | |
ಪಿ ವಿ ಸಿಂಧು ಮತ್ತು ಶ್ರೀಕಾಂತ್ ಕಿಡಂಬಿ |
ಭಾರತದ ಪಿ.ವಿ ಸಿಂಧು ಮತ್ತು ಸಮೀರ್ ವರ್ಮಾ ಸೈಯದ್ ಮೋದಿ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಜೇತರಾಗುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
Question 6 |
6. ಈ ಕೆಳಗಿನ ಯಾರು ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಟೂರ್ನಮೆಂಟ್-2017 ರಲ್ಲಿ ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು?
ವೀನಸ್ ವಿಲಿಯಮ್ಸ್ | |
ಸೆರೆನಾ ವಿಲಿಯಮ್ಸ್ | |
ಅಂಜೆಲಿನ ಕಿರ್ಬರ್ | |
ಮಾರ್ಟಿನಾ ಹಿಂಗಿಸ್ |
ಅಮೆರಿಕಾದ ಸೆರೆನಾ ವಿಲಿಯಮ್ಸ್ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ನಲ್ಲಿ ಟ್ರೋಫಿ ಗೆಲ್ಲುವ ಮೂಲಕ ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳಲ್ಲಿ ಹೆಚ್ಚು ಪ್ರಶಸ್ತಿ ಗೆದ್ದ ಹಿರಿಮೆಗೆ ಪಾತ್ರರಾಗಿದ್ದಾರೆ. ಫೈನಲ್ನಲ್ಲಿ ಸೆರೆನಾ 6–4, 6–4ರಲ್ಲಿ ಅಕ್ಕ ವೀನಸ್ ವಿಲಿಯಮ್ಸ್ ಅವರನ್ನು ಸೋಲಿಸಿ ವಿಜೇತರಾದರು. ಸೆರೆನಾ 23ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಜಯಿಸಿ ಜರ್ಮನಿಯ ಸ್ಟೆಫಿಗ್ರಾಫ್ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿದರು. ಅಲ್ಲದೇ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದರು.
Question 7 |
7. ಯಾವ ನಗರದಲ್ಲಿ ಮೊಟ್ಟ ಮೊದಲ “ಬ್ರಹ್ಮಪುತ್ರ ಸಾಹಿತ್ಯ ಉತ್ಸವ” ನಡೆಯಿತು?
ಗುವಾಹಟಿ | |
ಶಿಲ್ಲಾಂಗ್ | |
ದಿಸ್ ಪುರ್ | |
ಕೊಹಿಮಾ |
ಪ್ರಪ್ರಥಮ “ಬ್ರಹ್ಮಪುತ್ರ ಸಾಹಿತ್ಯ ಉತ್ಸವ” ಅಸ್ಸಾಂನ ಗುವಾಹಟಿಯಲ್ಲಿ ಜನವರಿ 28 ರಿಂದ ಆರಂಭಗೊಂಡಿತು. ದೇಶ ವಿದೇಶದಿಂದ ಆಗಮಿಸಿರುವ ಓದುಗರು ಹಾಗೂ ಲೇಖಕರ ನಡುವೆ ವಿಚಾರ ವಿನಿಮಯಕ್ಕೆ ಇದು ವೇದಿಕೆಯಾಗಲಿದೆ. ಈ ಉತ್ಸವನ್ನು ನ್ಯಾಷನಲ್ ಬುಕ್ ಟ್ರಸ್ಟ್ ಹಾಗೂ ಅಸ್ಸಾಂ ಸರ್ಕಾರ ಜಂಟಿಯಾಗಿ ಆಯೋಜಿಸುತ್ತಿದೆ.
Question 8 |
8. “2017 ನೇತ್ರವಿಜ್ಞಾನ ಹಾಲ್ ಆಫ್ ಫೇಮ್ (Ophthalmology Hall of Fame)”ಗೆ ಆಯ್ಕೆಯಾಗಿರುವ ಭಾರತದ ವೈದ್ಯ ಯಾರು?
ಬಸವರಾಜ್ ಪಾಟೀಲ್ | |
ವೈಭವ್ ಠಾಕೂರ್ | |
ಗುಲ್ಲಪಲ್ಲಿ ಎನ್ ರಾವ್ | |
ವಿಶ್ವೇಶ್ವರ ಆರಾಧ್ಯ |
ಹೈದ್ರಾಬಾದಿನ ಪ್ರಸಿದ್ದ ಕಣ್ಣಿನ ಆಸ್ಪತ್ರೆ ಎಲ್ ವಿ ಪ್ರಸಾದ್ ಕಣ್ಣಿನ ಸಂಸ್ಥೆ ಸಂಸ್ಥಾಪಕ ಹಾಗೂ ಅಧ್ಯಕ್ಷ ಗುಲ್ಲಪಲ್ಲಿ ಎನ್ ರಾವ್ ಅವರನ್ನು “2017 ನೇತ್ರ ವಿಜ್ಞಾನ ಹಾಲ್ ಆಫ್ ಫೇಮ್”ಗೆ ಸೇರ್ಪಡೆಗೊಳ್ಳಲು ಆಯ್ಕೆಯಾಗಿದ್ದಾರೆ. ಅಮೆರಿಕನ್ ಸೊಸೈಟಿ ಆಫ್ ಕ್ಯಾಟರಕ್ಟ್ ಅಂಡ್ ರಿಫ್ರಾಕ್ಟಿವ್ ಸರ್ಜರಿ (ASCRS) ನೇತ್ರವಿಜ್ಞಾನ ಹಾಲ್ ಆಫ್ ಫೇಮ್ ಅನ್ನು ಸ್ಥಾಪಿಸಿದೆ.
Question 9 |
9. ಸ್ವಚ್ಛ ಭಾರತ ಅಭಿಯಾನದ ನೂತನ ಪ್ರಚಾರ ರಾಯಭಾರಿಯಾಗಿ ಆಯ್ಕೆಗೊಂಡ ಬಾಲಿವುಡ್ ನಟಿ ಯಾರು?
ವಿದ್ಯಾ ಬಾಲನ್ | |
ಅಲಿಯಾ ಭಟ್ | |
ದೀಪಿಕಾ ಪಡುಕೋಣೆ | |
ಅನುಷ್ಕಾ ಶರ್ಮಾ |
ಬಾಲಿವುಡ್ ನ ಖ್ಯಾತ ನಟಿ ಅನುಷ್ಕಾ ಶರ್ಮಾ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಸ್ವಚ್ಛ ಭಾರತ ಅಭಿಯಾನದ ನೂತನ ಪ್ರಚಾರ ರಾಯಭಾರಿಯಾಗಿ ಆಯ್ಕೆಗೊಂಡಿದ್ದಾರೆ. ಮುಖ್ಯವಾಗಿ ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವಲ್ಲಿ ದೇಶಾದ್ಯಂತ ಪ್ರಚಾರ ಮಾಡಲಿದ್ದಾರೆ.
Question 10 |
10. ರಾಷ್ಟ್ರೀಯ ಮಾನವ ಹಕ್ಕುಗಳ ಆಯುಕ್ತಾಲಯದ ತನಿಖಾ ದಳದ ನೂತನ ಮಹಾ ನಿರ್ದೇಶಕರಾಗಿ ಯಾರನ್ನು ನೇಮಿಸಲಾಗಿದೆ?
ಪಿ.ವಿ.ಕೆ.ರೆಡ್ಡಿ | |
ರಾಧಾಕೃಷ್ಣ ತ್ರಿಪಾಟಿ | |
ರಘುರಾಂ ರೆಡ್ಡಿ | |
ಜೆ.ಎಸ್.ಮುಖರ್ಜಿ |
ಹಿರಿಯ ಐಪಿಎಸ್ ಅಧಿಕಾರಿ ಪಿ ವಿ ಕೆ ರೆಡ್ಡಿ ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯುಕ್ತಾಲಯದ ನೂತನ ಮಹಾ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ರೆಡ್ಡಿ ಅವರ ಅಧಿಕಾರ ಅವಧಿ 30.4.2017 ರ ತನಕ ಇರಲಿದೆ.
[button link=”http://www.karunaduexams.com/wp-content/uploads/2017/02/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಜನವರಿ3031-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ