ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,1, 2017

Question 1

1. ಇತ್ತೀಚೆಗೆ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಇ. ಅಹ್ಮದ್ ಅವರು ನಿಧನರಾದರು. ಅಹ್ಮದ್ ಅವರು ಯಾವ ರಾಜ್ಯದ ಲೋಕಸಭಾ ಸದಸ್ಯರಾಗಿದ್ದರು?

A
ಕೇರಳ
B
ತಮಿಳುನಾಡು
C
ಗುಜರಾತ್
D
ರಾಜಸ್ತಾನ
Question 1 Explanation: 
ಕೇರಳ

ಕೇರಳದ ಮಲ್ಲಾಪುರಂ ಲೋಕಸಭಾ ಕ್ಷೇತ್ರದ ಸಂಸದ ಇ. ಅಹ್ಮದ್ ಅವರು ಸಂಸತ್ ಕಲಾಪದ ವೇಳೆ ಹೃದಯಾಘಾತದಿಂದಾಗಿ ಕುಸಿದುಬಿದ್ದು ನಿಧನರಾಗಿದ್ದಾರೆ. ಅಹ್ಮದ್ ಅವರು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಅಹ್ಮದ್ ಅವರು ಅತ್ಯುತ್ತಮ ಲೇಖಕರು ಸಹ ಆಗಿದ್ದರು. “ದಿ ಲೀಡರ್ ಐ ನೊ”, “ಎ ಸ್ಟೋರಿ ಆಫ್ ಎ ರಿನೈಸನ್ಸ್ ಆಫ್ ಇಂಡಿಯನ್ ಮುಸ್ಲಿಂ” ಮತ್ತು “ಓನ್ ಫಾರಿನ್ ಜರ್ನಿ ಮತ್ತು ನ್ಯೂಮರಸ್ ಮೆಮೊರಿಸ್” ಇವರ ಪ್ರಸಿದ್ದ ಪುಸ್ತಕಗಳು.

Question 2

2. “ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ (SAARC)”ದ 53ನೇ ಪ್ರೋಗ್ರಾಮಿಂಗ್ ಸಮಿತಿಯ ಸಭೆ ಯಾವ ದೇಶದಲ್ಲಿ ನಡೆಯಿತು?

A
ಭಾರತ
B
ನೇಪಾಳ
C
ಪಾಕಿಸ್ತಾನ
D
ಶ್ರೀಲಂಕಾ
Question 2 Explanation: 
ನೇಪಾಳ

ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ (SAARC)”ದ 53ನೇ ಪ್ರೋಗ್ರಾಮಿಂಗ್ ಸಮಿತಿಯ ಸಭೆ ನೇಪಾಳದ ಕಠ್ಮಂಡುವಿನಲ್ಲಿ ಫೆಬ್ರವರಿ 1 ರಿಂದ ಆರಂಭಗೊಂಡಿತು. ಸಾರ್ಕ್ ನ ಎಂಟು ಸದಸ್ಯ ರಾಷ್ಟ್ರಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಭಾರತದಿಂದ ಸಾರ್ಕ್ ಜಂಟಿ ಕಾರ್ಯದರ್ಶಿ ಪ್ರಶಾಂತ್ ಅಗರವಾಲ್ ನೇತೃತ್ವದ ಪ್ರತಿನಿಧಿಗಳು ಭಾಗವಹಿಸಿದ್ದರು.

Question 3

3. ಈ ಕೆಳಗಿನ ಯಾವ ನಿಯತಕಾಲಿಕೆಯನ್ನು “ಬೈಬಲ್ ಆಫ್ ದಿ ಕ್ರಿಕೆಟ್ (Bible of the Cricket)” ಎಂಬ ಗೌರವವನ್ನು ಹೊಂದಿದೆ?

A
ಸ್ಪೋರ್ಟ್ಸ್ ಟುಡೇ
B
ದಿ ಕ್ರಿಕೆಟರ್
C
ವಿಸ್ಡೆನ್
D
ಮೇಲಿನ ಯಾವುದು ಅಲ್ಲ
Question 3 Explanation: 
ವಿಸ್ಡೆನ್

ವಿಸ್ಡೆನ್ ಕ್ರಿಕೆಟಿಗರ ಅಲ್ಮಾನ್ಯಾಕ್ (ಪಂಚಾಂಗ) (ವಿಸ್ಡೆನ್ ಎಂದೇ ಪ್ರಚಲಿತ) 'ಕ್ರಿಕೆಟ್ ಆಟದ ಬೈಬಲ್' ಎಂದು ಪರಿಗಣಿಸಲ್ಪಡುವ ಕ್ರಿಕೆಟ್ ಆಟಕ್ಕೆ ಸಂಭಂದಿಸಿದ ಮಾಹಿತಿ ಹೊಂದಿರುವ ಒಂದು ಪ್ರಸಿದ್ಧ ಮಾರ್ಗದರ್ಶಿಕೆ ಪುಸ್ತಕ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪೋಟೊವನ್ನು ವಿಸ್ಡೆನ್ ನಿಯತಕಾಲಿಕೆ ಮುಖಪುಟದಲ್ಲಿ ಪ್ರಕಟಿಸಲು ಆಯ್ಕೆಮಾಡಲಾಗಿದೆ. ಈ ಮೂಲಕ ಕೊಹ್ಲಿ ವಿಸ್ಡೆನ್ ಮುಖಪುಟದಲ್ಲಿ ಪ್ರಕಟಗೊಂಡ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. 2014ರಲ್ಲಿ ವಿಸ್ಡೆನ್, ಸಚಿನ್ ತೆಂಡೂಲ್ಕರ್ ಅವರ ಫೋಟೊವನ್ನು ತನ್ನ ಮುಖಪುಟದಲ್ಲಿ ಪ್ರಕಟಿಸಿತ್ತು.

Question 4

4. “2017 ದಕ್ಷಿಣ ಏಷ್ಯಾ ಸ್ಪೀಕರ್ ಗಳ ಶೃಂಗಸಭೆ (South Asia Speakers Summit)” ಅತಿಥ್ಯವನ್ನು ವಹಿಸಲಿರುವ ರಾಷ್ಟ್ರ ಯಾವುದು?

A
ಶ್ರೀಲಂಕಾ
B
ಚೀನಾ
C
ಭಾರತ
D
ಬಾಂಗ್ಲದೇಶ
Question 4 Explanation: 
ಭಾರತ

2017 ದಕ್ಷಿಣ ಏಷ್ಯಾ ಸ್ಪೀಕರ್ ಗಳ ಶೃಂಗಸಭೆ ಮಧ್ಯ ಪ್ರದೇಶದ ಇಂಧೋರ್ ನಲ್ಲಿ ಫೆಬ್ರವರಿ 18-19 ರಂದು ನಡೆಯಲಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳ ಸಂಸತ್ತಿನ ಸ್ಪೀಕರ್ ಗಳು ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ.

Question 5

5. ಮಾಹಿತಿ ತಂತ್ರಜ್ಞಾನದ ಸಾಮರ್ಥ್ಯಾಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಈ ಕೆಳಕಂಡ ಯಾವ ವೇದಿಕೆಯನ್ನು ಪ್ರಾರಂಭಿಸಲಿದೆ?

A
ಸಮರ್ಥ್
B
ಸ್ವದೇಶ್
C
ಸ್ವಯಂ
D
ಸಾಕ್ಷರ್
Question 5 Explanation: 
ಸ್ವಯಂ

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರವರು 2017-18 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಮಾಹಿತಿ ತಂತ್ರಜ್ಞಾನದ ಸಾಮರ್ಥ್ಯಾಭಿವೃದ್ಧಿಗಾಗಿ ‘ಸ್ವಯಂ’ ಎಂಬ ವೇದಿಕೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಇದರಲ್ಲಿ ಕನಿಷ್ಟ 350 ಅಂತರ್ಜಾಲ ಆಧಾರಿತ ಕೋರ್ಸ್ ಗಳು ಒಳಗೊಂಡಿರಲಿದೆ. ಈ ಮೂಲಕ ವಿದ್ಯಾರ್ಥಿಗಳು ಅಂತರ್ಜಾಲ ಮುಖಾಂತರ ವಾಸ್ತವವಾಗಿ ವಿಷಯತಜ್ಞರಿಂದ ಪಾಠ ಪ್ರವಚನದ ಸೌಲಭ್ಯ, ಉತ್ಕೃಷ್ಟ ಮಟ್ಟದ ವಾಚನಾಲಯ, ಗುಂಪು ಚರ್ಚೆ ಸೇರಿದಂತೆ ಪರೀಕ್ಷೆಯಲ್ಲಿ ಭಾಗವಹಿಸಿ ಪ್ರಮಾಣಪತ್ರ ತೆಗೆದುಕೊಳ್ಳಬಹುದಾಗಿದೆ.

Question 6

6. “ಬಿಟ್ವಿನ್ ಟು ವರ್ಲ್ಡ್ಸ್-ದಿ ಅಸ್ಸಾಮಿಸ್ ಸಿಖ್ಸ್ (Between Two Worlds- The Assamese Sikhs)” ಪುಸ್ತಕದ ಲೇಖಕರು ಯಾರು?

A
ಶರತ್ ಲಾಲ್
B
ಅಭಿಜಿತ್ ಭಂಡಾರಿ
C
ಸುರೇಂದ್ರ ನಾಥ್
D
ಬಿಮಲ್ ಪೂಕನ್
Question 6 Explanation: 
ಬಿಮಲ್ ಪೂಕನ್

“ಬಿಟ್ವಿನ್ ಟು ವರ್ಲ್ಡ್ಸ್-ದಿ ಅಸ್ಸಾಮಿಸ್ ಸಿಖ್ಸ್” ಪುಸ್ಕಕವನ್ನು ಬಿಮಲ್ ಪೂಕನ್ ಬರೆದಿದ್ದಾರೆ. ಪುಸ್ತಕದಲ್ಲಿ ಗುರು ತೇಗ್ ಬಹುದ್ದೂರ್ ಅವರು 1669 ರಲ್ಲಿ ಅಸ್ಸಾಂಗೆ ಭೇಟಿ ನೀಡಿದ್ದರ ಬಗ್ಗೆ ಬೆಳಕು ಚೆಲ್ಲಲಾಗಿದೆ.

Question 7

7. ಪಳೆಯುಳಿಕೆ ಇಂಧನ ಬಳಕೆಯನ್ನು ತ್ಯಜಿಸಿದ ವಿಶ್ವದ ಪ್ರಪ್ರಥಮ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ದೇಶ ಯಾವುದು?

A
ನಾರ್ವೆ
B
ಐರ್ಲೆಂಡ್
C
ಜಪಾನ್
D
ಫಿಲಿಫೈನ್ಸ್
Question 7 Explanation: 
ಐರ್ಲೆಂಡ್

ಐರ್ಲೆಂಡ್ ದೇಶವು ಮುಂದಿನ 5 ವರ್ಷಗಳಲ್ಲಿ ಪಳೆಯುಳಿಕೆ ಇಂಧನ ಬಳಕೆಯನ್ನು ಅಂದರೆ ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ತ್ಯಜಿಸಲು ತನ್ನ ಸಂಸತ್ತಿನಲ್ಲಿ ಕಾಯ್ದೆಯನ್ನು ಜಾರಿಗೊಳಿಸಿದ್ದು, ತನ್ಮೂಲಕ ಪಳೆಯುಳಿಕೆ ಇಂಧನ ಬಳಕೆಯನ್ನು ತ್ಯಜಿಸಿದ ವಿಶ್ವದ ಪ್ರಪ್ರಥಮ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Question 8

8. ಸೂರಜ್ ಕುಂಡ್ ಅಂತರರಾಷ್ಟ್ರೀಯ ಕರಕುಶಲ ಮೇಳ 2017 ರಲ್ಲಿ ಯಾವ ರಾಜ್ಯದ ವಿಷಯವನ್ನಾಧಾರವಾಗಿಟ್ಟು ಆಯೋಜಿಸಲಾಗಿತ್ತು?

A
ಅಸ್ಸಾಂ
B
ರಾಜಸ್ತಾನ
C
ಜಾರ್ಖಂಡ್
D
ತೆಲಂಗಾಣ
Question 8 Explanation: 
ಜಾರ್ಖಂಡ್

31ನೇ ಸೂರಜ್ ಕುಂಡ್ ಅಂತರರಾಷ್ಟ್ರೀಯ ಕರಕುಶಲ ಮೇಳ ಹರಿಯಾಣದ ಫರಿದಾಬಾದ್ ನಲ್ಲಿ ಫೆಬ್ರವರಿ 1 ರಿಂದ ಆರಂಭಗೊಂಡಿತು. ಹರಿಯಾಣ ಪ್ರವಾಸೋದ್ಯಮ ನಿಗಮ ಹಾಗೂ ಸೂರಜ್ ಕುಂಡ್ ಮೇಳ ಪ್ರಾಧಿಕಾರ ಈ ಮೇಳವನ್ನು ಆಯೋಜಿಸುತ್ತಿವೆ. ಸುಮಾರು 20 ರಾಷ್ಟ್ರಗಳು ಹಾಗೂ ದೇಶದ ಎಲ್ಲಾರಾಜ್ಯಗಳು ಮೇಳದಲ್ಲಿ ಭಾಗವಹಿಸಲಿವೆ. ಈಜಿಪ್ಟ್ ಈ ಬಾರಿಯ ಮೇಳದ ಪಾಲುದಾರಿಕೆ ರಾಷ್ಟ್ರವಾಗಿದ್ದು, ಜಾರ್ಖಂಡ್ ರಾಜ್ಯ ಥೀಮ್ ರಾಜ್ಯವಾಗಿದೆ.

Question 9

9. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯುಕ್ತಾಲಯದ ಈಗಿನ ಅಧ್ಯಕ್ಷರು ಯಾರು?

A
ಸ್ತುತಿ ನರೆನ್ ಕಾಕರ್
B
ಚಂದ್ರಪ್ರಭಾ
C
ಕುಶಾಲ್ ಸಿಂಗ್
D
ಕೆ.ಎಸ್.ಭಾರ್ಗವ
Question 9 Explanation: 
ಸ್ತುತಿ ನರೆನ್ ಕಾಕರ್
Question 10

10. ಭಾರತದ “ತಾಂತ್ರಿಕ ಶಿಕ್ಷಣ ಗುಣಮಟ್ಟ ಅಭಿವೃದ್ಧಿ ಕಾರ್ಯಕ್ರಮ” (TEQIP III) 3 ನೇ ಹಂತದ ಯೋಜನೆಗೆ ವಿಶ್ವ ಬ್ಯಾಂಕ್ ಎಷ್ಟು ಮೊತ್ತವನ್ನು ಮಂಜೂರು ಮಾಡಿದೆ?

A
$220.5 ಮಿಲಿಯನ್
B
$201.5 ಮಿಲಿಯನ್
C
$225.5 ಮಿಲಿಯನ್
D
$227.5 ಮಿಲಿಯನ್
Question 10 Explanation: 
$201.5 ಮಿಲಿಯನ್

ಭಾರತದ “ತಾಂತ್ರಿಕ ಶಿಕ್ಷಣ ಗುಣಮಟ್ಟ ಅಭಿವೃದ್ಧಿ ಕಾರ್ಯಕ್ರಮ” (TEQIP III) 3 ನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ವಿಶ್ವ ಬ್ಯಾಂಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದರನ್ವಯ ವಿಶ್ವ ಬ್ಯಾಂಕ್ $201.5 ಮಿಲಿಯನ್ ಧನಸಹಾಯ ನೀಡಲಿದೆ. ಉತ್ತರಾಖಂಡ, ಹಿಮಾಚಲ ಪ್ರದೇಶ, ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್ ಘಡ, ರಾಜಸ್ಥಾನ, 8 ಈಶಾನ್ಯ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬರ್ ರಾಜ್ಯಗಳ ಇಂಜಿನಿಯರಿಂಗ್ ಕಾಲೇಜುಗಳ ಶಿಕ್ಷಣ ಗುಣಮಟ್ಟವನ್ನು ಉನ್ನತೀಕರಿಸುವ ಮತ್ತು ಅಭಿವೃದ್ಧಿಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

There are 10 questions to complete.

[button link=”http://www.karunaduexams.com/wp-content/uploads/2017/02/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-1-2017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.