ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ರೂಪಕ್ ಕುಮಾರ್ ದತ್ತಾ ನೇಮಕ

ಹಿರಿಯ ಐಪಿಎಸ್ ಅಧಿಕಾರಿ ರೂಪಕ್ ಕುಮಾರ್ ದತ್ತ ಅವರು ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ದತ್ತಾ ಅವರು ಇದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ.

ರೂಪಕ್ ಕುಮಾರ್ ದತ್ತಾ ಬಗ್ಗೆ:

  • ರೂಪಕ್ ಕುಮಾರ್ ದತ್ತಾ ಅವರು ಮೂಲತಃ ಉತ್ತರ ಪ್ರದೇಶ(ಯುಪಿ)ದವರು.
  • 1981ನೇ ಐಪಿಎಸ್ ಬ್ಯಾಚ್ನ ಕರ್ನಾಟಕ ಕೇಡರ್ನ ಪೊಲೀಸ್ ಅಧಿಕಾರಿಯಾಗಿ ಸೇವೆಯನ್ನು ಆರಂಭಿಸಿದರು.
  • ರೂಪಕ್ ಕುಮಾರ್ ದತ್ತಾ ಅವರು ಉತ್ತರ ಕನ್ನಡ, ದಾವಣಗೆರೆ ಜಿಲ್ಲೆಗಳಲ್ಲಿ ಎಸ್ಪಿಯಾಗಿ, ರಾಜ್ಯ ಗುಪ್ತದಳದ ಡಿಐಜಿಯಾಗಿ, ಉತ್ತರವಲಯ, ಈಶಾನ್ಯ ವಲಯದಲ್ಲಿ ಐಜಿಪಿಯಾಗಿ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗ ಹಾಗೂ ಲೋಕಾಯುಕ್ತದಲ್ಲಿ ಎಡಿಜಿಪಿಯಾಗಿ, ಕರ್ನಾಟಕದ ಸಿಐಡಿ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ.
  • ದತ್ತಾ ಅವರಿಗೆ ಸಿಬಿಐನಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಅನುಭವವಿದೆ.
  • ಇವರು ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಪೊಲೀಸ್ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

ಫ್ರಾನ್ಸ್ ನ ಐರಿಸ್ ಮಿಟನೀರ್ ಅವರಿಗೆ 2017ನೇ ಸಾಲಿನ ಮಿಸ್ ಯೂನಿವರ್ಸ್ ಕಿರೀಟ

ಫ್ರಾನ್ಸ್ ನ ದಂತವೈದ್ಯ ವಿದ್ಯಾರ್ಥಿನಿ ಐರಿಸ್ ಮಿಟನೀರ್ (Iris Mittenaere) ಅವರು 2017ನೇ ಸಾಲಿನ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾಗಿದ್ದಾರೆ. ಮನಿಲಾದಲ್ಲಿ ಜರುಗಿd ಮಿಸ್ ಯೂನಿರ್ವರ್ಸ್ ಆಯ್ಕೆ ಅಂತಿಮ ಸುತ್ತಿನಲ್ಲಿ ಅವರು, ಹೈಟಿಯ ಸುಂದರಿ ರಾಕ್ವೆಲ್ ಪೆಲಿಸಿಯರ್ ಹಾಗೂ ಕೊಲಂಬಿಯಾದ ಸುಂದರಿ ಆಂಡ್ರಿಯಾ ಟೋವರ್ ಅವರನ್ನು ಹಿಂದಿಕ್ಕಿ ಮಿಸ್ ಯೂನಿವರ್ಸ್ ಕಿರೀಟವನ್ನು ತಮ್ಮದಾಗಿಸಿಕೊಂಡರು.

  • ಐರಿಸ್ ಮಿಟನೀರ್ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡ ಫ್ರಾನ್ಸ್ ನ ಎರಡನೇಯವರು. 1953 ರಲ್ಲಿ ಕ್ರಿಸ್ಟಿಯಾನೆ ಮಾರ್ಟೆಲ್ ಮಿಸ್ ಯೂನಿವರ್ಸ್ ಕಿರೀಟವನ್ನು ಪಡೆದ ಫ್ರಾನ್ಸ್ ನ ಮೊದಲ ಸುಂದರಿ.
  • ಐರಿಸ್ ಮಿಟನೀರ್ ಅವರಿಗೆ 2016 ಮಿಸ್ ಫ್ರಾನ್ಸ್ ಕಿರೀಟ ಸಹ ಲಭಿಸಿದೆ..

ಲೋಕಸಭಾ ಸದಸ್ಯ ಹಾಗೂ ಮಾಜಿ ಸಚಿವ ಇ. ಅಹಮದ್ ನಿಧನ

ಲೋಕಸಭಾ ಸದಸ್ಯ ಮತ್ತು ಕೇಂದ್ರದ ಮಾಜಿ ಸಚಿವ ಇ. ಅಹಮದ್‌ ನಿಧನರಾಗಿದ್ದಾರೆ. ಸಂಸತ್‌ನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಭಾಷಣ ಮಾಡುವ ಸಂದರ್ಭದಲ್ಲಿ ಸಂಸತ್‌ನಲ್ಲಿ ಹಠಾತ್ ಹೃದಯಸ್ತಂಭನಕ್ಕೆ ಒಳಗಾಗಿದ್ದ ವೇಳೆ ಅಹಮದ್ ಕುಸಿದು ಬಿದ್ದಿದ್ದರು. ಅಹಮದ್ ಅವರನ್ನು ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಮಹಮದ್ ಬಗ್ಗೆ:

  • ಮಹಮದ್ ಅವರು ಕೇರಳದ ಮಲ್ಲಾಪುರಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.
  • ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವರಾಗಿ, ರೈಲ್ವೆ ಮತ್ತು ಮಾನವ ಸಂಪನ್ಮೂಲ ರಾಜ್ಯ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.
  • ಲೋಕಸಭಾ ಸದಸ್ಯರಾಗಿದ್ದ ವೇಳೆ ಏಳು ಸಂಸದೀಯ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
  • ಅಹಮದ್ ಅವರು ಕೇರಳ ವಿಧಾನಸಭೆಗೆ ಐದು ಬಾರಿ ಆಯ್ಕೆಯಾಗಿದ್ದರು. ಕೇರಳ ಕೈಗಾರಿಕ ಸಚಿವರಾಗಿಯು ಕರ್ತವ್ಯ ನಿರ್ವಹಿಸಿದ್ದರು.
  • ಅಹಮದ್‌ ಅವರು ಭಾರತೀಯ ಮುಸ್ಲಿಂ ಲೀಗ್‌ನ ಅಧ್ಯಕ್ಷರಾಗಿದ್ದರು. ಲೇಖಕರಾಗಿ ಇವರು ಮೂರು ಪುಸ್ತಕಗಳನ್ನು ಇಂಗ್ಲೀಷ್ ಮತ್ತು ಮಲೆಯಾಳಂನಲ್ಲಿ ರಚಿಸಿದ್ದಾರೆ.

2016-17ನೇ ಸಾಲಿನ ಆರ್ಥಿಕ ಸಮೀಕ್ಷೆ: ಪ್ರಮುಖಾಂಶಗಳು

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ 2016-17ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ. ಆರ್ಥಿಕ ಸಮೀಕ್ಷೆಯನ್ನು ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣ್ಯಂ ಅವರು ಸಿದ್ದಪಡಿಸಿದ್ದಾರೆ.  ಸಮೀಕ್ಷೆಯ ಪ್ರಕಾರ 2017-18ರಲ್ಲಿ ದೇಶದ ಆರ್ಥಿಕ ಬೆಳವಣಿಗೆ 6.75% ರಿಂದ 7.25% ಇರಲಿದೆ. ಜಿಡಿಪಿ ಬೆಳವಣಿಗೆ ಮೇಲೆ ನೋಟು ರದ್ದು ಪರಿಣಾಮ ತಾತ್ಕಲಿಕ ಎನ್ನಲಾಗಿದೆ

ಆರ್ಥಿಕ ಸಮೀಕ್ಷಾ ವರದಿಯ ಮುಖ್ಯಾಂಶಗಳು

  • ಪ್ರಸಕ್ತ ಹಣಕಾಸು ವರ್ಷದ ಬೆಳವಣಿಗೆ ಶೇಕಡ 6.5% ಇರಲಿದೆ. 2015-16 ರಲ್ಲಿ ಶೇ 7.5% ನಿರೀಕ್ಷಿಸಲಾಗಿತ್ತು.
  • 2017-18 ರಲ್ಲಿ ಆರ್ಥಿಕ ಬೆಳವಣಿಗೆ 6.75% ರಿಂದ 7.25% ಇರಲಿದೆ.
  • ಕೃಷಿ ವಲಯ 2016-17 ರಲ್ಲಿ 4.1% ರಷ್ಟು ಬೆಳವಣಿಗೆ ಆಗಲಿದೆ.
  • ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ದರ ಕಳೆದ ವರ್ಷದ ಶೇಕಡ 7.4ಕ್ಕೆ ಹೋಲಿಸಿದರೆ ಈ ವರ್ಷ ಶೇಕಡ 5.2ರ ದರದಲ್ಲಿ ಸಾಧಾರಣವಾಗಿದೆ
  • ಎಲ್ಲ ಅಧಿಕ ಆದಾಯದಾರರನ್ನು ಒಳಗೊಳ್ಳುತ್ತ ಆದಾಯ ತೆರಿಗೆ ಜಾಲ ವಿಸ್ತರಣೆಯಾಗಬಹುದು.
  • ಸೇವಾ ವಲಯ ಬೆಳವಣಿಗೆ 2016-17 ರಲ್ಲಿ 8.9% ರಷ್ಟು ಇರಲಿದೆ.
  • ಹೊಸ ನೋಟುಗಳು ಚಲಾವಣೆಗೆ ಬರುವುದರೊಂದಿಗೆ ಅರ್ಥ ವ್ಯವಸ್ಥೆ, ಬೆಳವಣಿಗೆಗಳು ಸಹಜ ಸ್ಥಿತಿಗೆ ಮರಳಲಿವೆ.
  • ಜಿಎಸ್​ಟಿ ಜಾರಿಯೊಂದಿಗೆ ವ್ಯವಸ್ಥೆಯ ಸುಧಾರಣೆಯಾಗಲಿದ್ದು, ಇದು ಬೆಳವಣಿಗೆ ದರವನ್ನು ಶೇಕಡ 8ರಿಂದ 10ಕ್ಕೆ ಏರಿಸಲಿದೆ.
  • ತೆರಿಗೆ: ವೈಯಕ್ತಿಕ ಆದಾಯ ತೆರಿಗೆ ದರ, ರಿಯಲ್ ಎಸ್ಟೇಟ್ ಮುದ್ರಾಂಕ ತೆರಿಗೆ ಇಳಿಕೆ ಪ್ರಸ್ತಾವನೆ. ಕಾರ್ಪೋರೆಟ್ ತೆರಿಗೆಯನ್ನು ಇಳಿಸಲು ಶ್ರೀಘ್ರವಾಗಿ ಕ್ರಮಕೈಗೊಳ್ಳಲಾಗುವುದು.
  • ಬ್ಯಾಂಕಿಂಗ್: ಬ್ಯಾಂಕುಗಳು ವಸೂಲಾಗದ ಸಾಲಗಳನ್ನು ನಿರ್ವಹಿಸಲು ಸಾರ್ವಜನಿಕ ವಲಯದ ಸ್ವತ್ತು ಪುನರ್ವಸತಿ ಸಂಸ್ಥೆ (PSARA) ಸ್ಥಾಪನೆಗೆ ಪ್ರಸ್ತಾವಿಸಲಾಗಿದೆ. ಸರ್ಕಾರದ ಬೆಂಬಲದೊಂದಿಗೆ, PSARA ವಸೂಲಾಗದ ಸಾಲಗಳನ್ನು ನಿರ್ವಹಿಸಲು ಸಹಾಯವಾಗಲಿದೆ.
  • ನೋಟು ರದ್ದತಿ: ಅನಾಣ್ಯೀಕರಣದ ಪರಿಣಾಮ ಬೆಳವಣಿಗೆ ದರದ ಮೇಲೆ ಶೇಕಡ 0.25ರಿಂದ ಶೇಕಡ 0.5ರಷ್ಟು ಆಗಿದೆಯಾದರೂ, ದೂರಗಾಮಿ ಪ್ರಯೋಜನಗಳಿವೆ. ಕೃಷಿ ಉತ್ಪನ್ನಗಳಾದ ಸಕ್ಕರೆ, ಹಾಲು, ಆಲೂಗಡ್ಡೆ, ಈರುಳ್ಳಿ ಮುಂತಾದವುಗಳ ಮೇಲೆ ಅನಾಣ್ಯೀಕರಣದ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. 2017ರ ಏಪ್ರಿಲ್ ವೇಳೆಗೆ ನೋಟುಗಳ ಕೊರತೆ ನೀಗಲಿದೆ.
  • ಸಾರ್ವತ್ರಿಕ ಮೂಲ ಆದಾಯ (Universal Base Income): ಬಡತನ ನಿವಾರಣೆ ಮಾಡುವ ನಿಟ್ಟಿನಲ್ಲಿ ಈಗ ಚಾಲ್ತಿಯಲ್ಲಿರುವ ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಪರ್ಯಾಯವಾಗಿ ಇದನ್ನು ಚಿಂತಿಸಲಾಗಿದೆ. ರಾಜ್ಯ ಸಹಾಯಧನಗಳಿಗೆ ಬದಲಾಗಿ ಸಾರ್ವತ್ರಿಕ ಮೂಲ ಆದಾಯ ಯೋಜನೆಯನ್ನು ಪರ್ಯಾಯವಾಗಿ ಚಿಂತಿಸಬಹುದಾಗಿದೆ.

 

3 Thoughts to “ಪ್ರಚಲಿತ ವಿದ್ಯಮಾನಗಳು-ಫೆಬ್ರವರಿ,1,2017”

  1. Sachin

    Nice information… Thanks Karunadu team

  2. viresh

    thnks for information sir

  3. ಬಸವರಾಜ

    ಸರ್ ಫೆಬ್ರವರಿ-2017 ಪ್ರಚಲಿತ ಘಟನೆಗಳ ಪಿಡಿಫ್ ಅಫಲೋಡ್ ಮಾಡಿ ಸರ್ ದಯವಿಟ್ಟು ನಿಮ್ಮ ಕರುನಾಡು ಟೀಮ್ ದಿನಾಲು ಓದುವ ವಿದ್ಯಾರ್ಥಿ ಸರ್……….

    ಬೇಗ ಻ಅಪಲೋಡ್ ಮಾಡಿ ಸರ್

    ಬಸವರಾಜ ಸಿ.ರೆಡ್ಡಿ.

Leave a Comment

This site uses Akismet to reduce spam. Learn how your comment data is processed.