ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,3,4, 2017

Question 1

1. ಭಾರತದಲ್ಲಿ ನೋಟ್ ಅಮಾನ್ಯೀಕರಣದ ನಂತರದ ಅಕ್ರಮ ಹಣ ಜಮಾವಣೆಯನ್ನು ಕಂಡುಹಿಡಿಯುವ ಸಲುವಾಗಿ ವೃತ್ತಿ ತೆರಿಗೆ ಇಲಾಖೆಯು ಯಾವ ಕಾರ್ಯಚರಣೆಯನ್ನು ಪ್ರಾರಂಭಿಸಿದೆ?

A
ಆಪರೇಷನ್ ಟ್ರಾಕ್ ಮನಿ
B
ಆಪರೇಷನ್ ಬ್ಲಾಕ್ ಮನಿ
C
ಆಪರೇಷನ್ ಕ್ಲೀನ್ ಮನಿ
D
ಆಪರೇಷನ್ ಕ್ಲೌಡ್ ಮನಿ
Question 1 Explanation: 
ಆಪರೇಷನ್ ಕ್ಲೀನ್ ಮನಿ

ವೃತ್ತಿ ತೆರಿಗೆ ಇಲಾಖೆಯು ಭಾರತದಲ್ಲಿ ನೋಟ್ ಅಮಾನ್ಯೀಕರಣದ ನಂತರದ ಅಕ್ರಮ ಹಣ ಜಮಾವಣೆಯನ್ನು ಕಂಡುಹಿಡಿಯುವ ಸಲುವಾಗಿ, ಅಂದರೆ ನವಂಬರ್ 9 ರಿಂದ ಡಿಸಂಬರ್ 30 ರವರೆಗಿನ ದೊಡ್ಡ ಮೊತ್ತದ ಬ್ಯಾಂಕ್ ಜಮೆಯನ್ನು ಪರೀಕ್ಷಿಸುವ ಸಲುವಾಗಿ ‘ಆಪರೇಷನ್ ಕ್ಲೀನ್ ಮನಿ’ ಕಾರ್ಯಚರಣೆಯನ್ನು ಪ್ರಾರಂಭಿಸಿದೆ. ಮೊದಲ ಹಂತದಲ್ಲಿ ಸುಮಾರು 18 ಲಕ್ಷ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಿದ್ದಾರೆ.

Question 2

2. ರಾಜೀವ್ ಗಾಂಧಿ ರಾಷ್ಟ್ರೀಯ ವಿಮಾನಯಾನ ವಿಶ್ವವಿದ್ಯಾನಿಲಯ (RGNAU) ಯಾವ ರಾಜ್ಯದಲ್ಲಿದೆ?

A
ಮಹಾರಾಷ್ಟ್ರ
B
ಉತ್ತರ ಪ್ರದೇಶ
C
ತೆಲಂಗಾಣ
D
ಕೇರಳ
Question 2 Explanation: 
ಉತ್ತರಪ್ರದೇಶ
Question 3

3. ಸೇಂಟ್ ಪೀಟರ್ಸ್ ಬರ್ಗ್ ಅಂತರರಾಷ್ಟ್ರೀಯ ಆರ್ಥಿಕ ವಿಚಾರ ವೇದಿಕೆ 2017 ರಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿರುವ ಭಾರತೀಯ ವ್ಯಕ್ತಿ ಯಾರು?

A
ಸುಷ್ಮಾ ಸ್ವರಾಜ್
B
ಪ್ರಣಬ್ ಮುಖರ್ಜಿ
C
ನರೇಂದ್ರ ಮೋದಿ
D
ಮುರಳಿಮೋಹನ್ ದಾಸ್
Question 3 Explanation: 
ನರೇಂದ್ರ ಮೋದಿ

ಸೇಂಟ್ ಪೀಟರ್ಸ್ ಬರ್ಗ್ ಅಂತರರಾಷ್ಟ್ರೀಯ ಆರ್ಥಿಕ ವಿಚಾರ ವೇದಿಕೆ 2017 ನ ಗೌರವಾನ್ವಿತ ಅತಿಥಿ ರಾಷ್ಟ್ರವಾಗಿ ಭಾರತವನ್ನು ಆಹ್ವಾನಿಸಲಾಗಿದೆ. ರಷ್ಯಾದ ಸೆಂಟ್ ಪೀಟರ್ಸ್ ಬರ್ಗ್ ನಲ್ಲಿ ಜೂನ್ 1 ರಿಂದ 3, 2017 ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.

Question 4

4. “2017-ವಿಶ್ವ ತೇವಭೂಮಿ ದಿನ (Worlds Wetland Day)”ದ ಧ್ಯೇಯವಾಕ್ಯ __________?

A
Wetlands for Better Future
B
Wetlands for Disaster Risk Reduction
C
Wetlands for Disaster Free Nature
D
Wetlands for Sustainable World
Question 4 Explanation: 
Wetlands for Disaster Risk Reduction

ವಿಶ್ವ ತೇವಭೂಮಿ ದಿನವನ್ನು ಪ್ರತಿವರ್ಷ ಫೆಬ್ರವರಿ 2 ರಂದು ಆಚರಿಸಲಾಗುತ್ತದೆ. ತೇವಭೂಮಿ ಸಂರಕ್ಷಣೆ ಒಪ್ಪಂದವನ್ನು ಫೆಬ್ರವರಿ 2, 1971 ರಲ್ಲಿ ಇರಾನಿನ ರಾಮಸರ್ ನಗರದಲ್ಲಿ ಅಳವಡಿಸಿಕೊಂಡರ ಸ್ಮರಣಾರ್ಥ ಈ ದಿನದಂದು ವಿಶ್ವ ತೇವಭೂಮಿ ದಿನವನ್ನು ಆಚರಿಸಲಾಗುತ್ತದೆ. 2017 ವಿಶ್ವ ತೇವಭೂಮಿ ದಿನವನ್ನು ಈ ಬಾರಿ ಮಧ್ಯ ಪ್ರದೇಶ ಸರ್ಕಾರದ ಸಹಯೋಗದೊಂದಿಗೆ ಭೋಜ್ ತೇವಭೂಮಿ ಪ್ರದೇಶದಲ್ಲಿ ಆಚರಿಸಲಾಗುತ್ತಿದೆ. ಭೋಜ್ ತೇವಭೂಮಿ ಪ್ರದೇಶ ಭಾರತದ 26 ರಾಮಸರ್ ತೇವಭೂಮಿ ಪ್ರದೇಶಗಳಲ್ಲಿ ಒಂದಾಗಿದೆ. Wetlands for Disaster Risk Reduction ಇದು ಈ ವರ್ಷದ ಧ್ಯೇಯವಾಕ್ಯ.

Question 5

5. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ನ ನೂತನ ಸಿಇಓ ಹಾಗೂ ಎಂಡಿ ಯಾಗಿ ಯಾರನ್ನು ನೇಮಕ ಮಾಡಲಾಗಿದೆ?

A
ವಿಕ್ರಂ ಲಿಮಯೆ
B
ವಿನೋದ್ ರೈ
C
ಅಮಿತಾಭ ಚೌಧರಿ
D
ಅರವಿಂದ್ ಭಟ್
Question 5 Explanation: 
ವಿಕ್ರಂ ಲಿಮಯೆ

ಐಡಿಎಫ್ ಸಿ ಬ್ಯಾಂಕಿನ ಸಿಇಓ ಆಗಿರುವ ವಿಕ್ರಂ ಲಿಮೆಯೆ ಅವರು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ನ ನೂತನ ಸಿಇಓ ಹಾಗೂ ಎಂಡಿ ಯಾಗಿ ನೇಮಕಗೊಂಡಿದ್ಧಾರೆ. ಚಿತ್ರಾ ರಾಮಕೃಷ್ಣ ಅವರು ದಿಡೀರ್ ರಾಜೀನಾಮೆ ನೀಡಿದ ಕಾರಣ ಈ ಸ್ಥಾನ ತೆರವಾಗಿತ್ತು.

Question 6

6. “ಭಾರತೀಯ ಕರಾವಳಿ ತೀರಾ ಪಡೆ ದಿನ (Indian Coast Guard Day)” ________ ರಂದು ಆಚರಿಸಲಾಗುತ್ತದೆ?

A
ಜನವರಿ 15
B
ಫೆಬ್ರವರಿ 1
C
ಫೆಬ್ರವರಿ 2
D
ಮಾರ್ಚ್ 2
Question 6 Explanation: 
ಫೆಬ್ರವರಿ 1

ಭಾರತೀಯ ಕರಾವಳಿ ತೀರಾ ಪಡೆ ದಿನವನ್ನು ಪ್ರತಿ ವರ್ಷ ಫೆಬ್ರವರಿ 1 ರಂದು ಆಚರಿಸಲಾಗುತ್ತದೆ. ಕರಾವಳಿ ತೀರಾ ಪಡೆಯನ್ನು ಫೆಬ್ರವರಿ 1, 1977 ರಂದು ಸ್ಥಾಪಿಸಲಾಯಿತು. ಅದರ ಸ್ಮರಣಾರ್ಥ ಫೆಬ್ರವರಿ 1 ರಂದು ಕರಾವಳಿ ತೀರಾ ಪಡೆ ದಿನವನ್ನು ಆಚರಿಸಲಾಗುತ್ತಿದೆ.

Question 7

7. ಭಾರತೀಯ ಸೇನೆಯ ನೂತನ “ಎಂಜನಿಯರ್-ಇನ್-ಚೀಫ್” ಆಗಿ ಯಾರನ್ನು ನೇಮಕ ಮಾಡಲಾಗಿದೆ?

A
ಸುರೇಶ್ ಶರ್ಮಾ
B
ಅನುಪ್ ಭಂಡಾರಿ
C
ಉದಯ್ ಮೆಹ್ತಾ
D
ಸಚಿನ್ ಸಿಂಗ್
Question 7 Explanation: 
ಸುರೇಶ್ ಶರ್ಮಾ

ಲೆಫ್ಟಿನೆಂಟ್ ಜನರಲ್ ಸುರೇಶ್ ಶರ್ಮಾ ಅವರು ಭಾರತೀಯ ಸೇನೆಯ ನೂತನ “ಎಂಜನಿಯರ್-ಇನ್-ಚೀಫ್” ಆಗಿ ನೇಮಕಗೊಂಡಿದ್ದಾರೆ. ಸೇನೆಯ ಎಂಜನಿಯರ್ ಸೇವೆಗಳಿಗೆ ಸಂಬಂಧಿಸಿದಂತೆ ಭೂ ಸೇನೆ, ವಾಯು ಸೇನೆ ಹಾಗೂ ನೌಕ ಸೇನೆ ಮುಖ್ಯಸ್ಥರಿಗೆ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

Question 8

8. ಇತ್ತೀಚೆಗೆ ಯಾವ ರಾಜ್ಯ ಶಾಲಾ ಪರೀಕ್ಷೆಗಳಲ್ಲಿ ತೃತೀಯ ಲಿಂಗಿ ವಿಭಾಗವನ್ನು ಪರಿಚಯಿಸಿದೆ?

A
ಬಿಹಾರ
B
ರಾಜಸ್ತಾನ
C
ಕೇರಳ
D
ಮಹಾರಾಷ್ಟ್ರ
Question 8 Explanation: 
ಬಿಹಾರ

ಬಿಹಾರ ರಾಜ್ಯ ಸರ್ಕಾರ ಶಾಲಾ ಪರೀಕ್ಷೆಗಳಲ್ಲಿ ತೃತೀಯ ಲಿಂಗಿ ವಿಭಾಗವನ್ನು ಪರಿಚಯಿಸಿದೆ. 2014 ರಲ್ಲಿ ಸುಪ್ರೀಂ ಕೋರ್ಟ್ ಮಂಗಳಮುಖಿಯನ್ನು ತೃತೀಯ ಲಿಂಗಿಗಳೆಂದು ಪರಿಗಣಿಸುವಂತೆ ನೀಡಿದ ಆದೇಶದ ಅನ್ವಯ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.

Question 9

9. ಭಾರತದ “ಲಕ್ಷ್ಯ ಸೇನ್ (Lakshya Sen)” ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

A
ಕ್ರಿಕೆಟ್
B
ಬ್ಯಾಡ್ಮಿಂಟನ್
C
ಟೆನ್ನಿಸ್
D
ಗಾಲ್ಫ್
Question 9 Explanation: 
ಬ್ಯಾಡ್ಮಿಂಟನ್

ಲಕ್ಷ್ಯ ಸೇನ್ ಭಾರತದ ಉದಯೋನ್ಮಖ ಬ್ಯಾಡ್ಮಿಂಟನ್ ಆಟಗಾರ. ಇತ್ತೀಚೆಗೆ ಬಿಡುಗಡೆಗೊಂಡ ಬ್ಯಾಡ್ಮಿಂಟನ್ ವರ್ಲ್ದ್ ಫೆಡರೇಷನ್ ಶ್ರೇಯಾಂಕದಲ್ಲಿ ಸೇನ್ ವಿಶ್ವದ ನಂ.1 ಜೂನಿಯನ್ ಬ್ಯಾಡ್ಮಿಂಟನ್ ಆಟಗಾರರಾಗಿ ಹೊರಹೊಮ್ಮಿದ್ದಾರೆ.

Question 10

10. ವಿಶ್ವ ಕ್ಯಾನ್ಸರ್ ದಿನ _______________?

A
ಫೆಬ್ರವರಿ 1
B
ಫೆಬ್ರವರಿ 2
C
ಫೆಬ್ರವರಿ 3
D
ಫೆಬ್ರವರಿ 4
Question 10 Explanation: 
ಫೆಬ್ರವರಿ 4

ಪ್ರತಿ ವರ್ಷ ಫೆಬ್ರವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. “ವಿ ಕೆನ್ ಐ ಕೆನ್” ಇದು ಈ ವರ್ಷ ಕ್ಯಾನ್ಸರ್ ದಿನದ ಧ್ಯೇಯವಾಕ್ಯ.

There are 10 questions to complete.

[button link=”http://www.karunaduexams.com/wp-content/uploads/2017/02/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-342017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.