ಮೊಟ್ಟ ಮೊದಲ ನದಿ ಜಲಚರ ಜೀವಿಗಳ ಸಮೀಕ್ಷೆಗೆ ಕೇಂದ್ರ ಸರ್ಕಾರ ಚಾಲನೆ
ಇದೇ ಮೊದಲ ಬಾರಿಗೆ ಗಂಗಾ ಡಾಲ್ಫಿನ್ ಸೇರಿದಂತೆ ಗಂಗಾ ನದಿಯಲ್ಲಿನ ಜಲಚರ ಜೀವಿಗಳಿಗೆ ಸಮೀಕ್ಷೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಗಂಗಾ ನದಿಯ ನೀರಿನ ಗುಣಮಟ್ಟವನ್ನು ಹೆಚ್ಚಿಸಲು ಸಮೀಕ್ಷೆಯ ಫಲಿತಾಂಶವನ್ನು ವೈಜ್ಞಾನಿಕ ಮಾಹಿತಿಯನ್ನಾಗಿ ಬಳಸಿಕೊಳ್ಳಲಾಗುವುದು.
ಪ್ರಮುಖಾಂಶಗಳು:
- ನಮಾಮಿ ಗಂಗಾ ಯೋಜನೆಯಡಿ ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಈ ಸಮೀಕ್ಷೆಯನ್ನು ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮೂಲಕ ನಡೆಸುತ್ತಿದೆ.
- ಮಾರ್ಚ್ 1, 2017 ರಲ್ಲಿ ಮೊದಲ ಹಂತದ ಸಮೀಕ್ಷೆಗೆ ಉತ್ತರ ಪ್ರದೇಶದ ನರೋರದಿಂದ ಬಿಜ್ನೊರ್ ವರೆಗೆ ಚಾಲನೆ ನೀಡಲಾಗಿದೆ (165 ಕಿ.ಮೀ ಉದ್ದ). ಇದರಡಿ ರಾಷ್ಟ್ರೀಯ ಜಲಚರ ಪ್ರಾಣಿ ಗಂಗಾ ಡಾಲ್ಫಿನ್ ಗಳ ಸಂಖ್ಯೆಯನ್ನು ಲೆಕ್ಕಚಾರ ಮಾಡಲಾಗುವುದು.
- ಮುಂದಿನ ಹಂತದ ಸಮೀಕ್ಷೆಯನ್ನು ಉತ್ತರ ಪ್ರದೇಶದ ಅಲಾಹಬಾದ್ ನಿಂದ ವಾರಣಾಸಿ ವರೆಗೆ ನಡೆಸಲಾಗುವುದು (250 ಕಿ.ಮೀ).
- ಡಾಲ್ಫಿನ್ ಗಳ ವಾಸಸ್ಥಳ, ಅಲ್ಲಿನ ಪರಿಸ್ಥಿತಿ ಹಾಗೂ ಅವುಗಳ ಸಂತತಿಗೆ ಎದುರಾಗಿರುವ ಸಂಕಷ್ಟಗಳ ಬಗ್ಗೆ ಸಮೀಕ್ಷೆಯಡಿ ಗಮನಿಸಲಾಗುವುದು.
- ಅಲ್ಲದೇ 2225 ಕಿ.ಮೀ ಉದ್ದದ ಗಂಗಾ ನದಿಯಲ್ಲಿ ಮೀನಿನ ಪ್ರಬೇಧಗಳ ಬಗ್ಗೆ ಅಧ್ಯಯ ನಡೆಸಲು ಉತ್ತರಖಂಡದ ಹರ್ಶಿಲ್ ನಲ್ಲಿ ಸಮೀಕ್ಷೆಯನ್ನು ಸಹ ಆರಂಭಿಸಲಾಗಿದೆ.
ಕಲುಷಿತ ಪರಿಸರದಿಂದ ಪ್ರತಿ ವರ್ಷ 1.7 ಮಿಲಿಯನ್ ಮಕ್ಕಳು ಸಾವು
ವಿಶ್ವಸಂಸ್ಥೆ ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ ಪರಿಸರ ಮಾಲಿನ್ಯದಿಂದ ಪ್ರತಿ ವರ್ಷ 1.7 ಮಿಲಿಯನ್ ಮಕ್ಕಳು ಮರಣ ಹೊಂದುತ್ತಿರುವುದಾಗಿ ಹೇಳಲಾಗಿದೆ. ವಿಶ್ವಸಂಸ್ಥೆ ಹೊರತಂದಿರುವ “ಇನ್ ಹೆರಿಟಿಂಗ್ ಅ ಸಸ್ಟನೈಬಲ್ ವರ್ಲ್ಡ್: ಅಟ್ಲಾಸ್ ಆನ್ ಚಿಲ್ಡ್ರನ್ಸ್ ಹೆಲ್ತ್ ಅಂಡ್ ದಿ ಎನ್ವಿರನ್ಮೆಂಟ್” ಶೀರ್ಷಿಕೆಯಡಿ ಹೊರತಂದಿರುವ ವರದಿಯಡಿ ಈ ಅಂಶ ಬಯಲಾಗಿದೆ. ವರದಿಯಲ್ಲಿ ಪರಿಸರ ಮಾಲಿನ್ಯದಿಂದ ಅದರಲ್ಲೂ ಮುಖ್ಯವಾಗಿ ವಾಯು ಮಾಲಿನ್ಯದಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮದ ಬಗ್ಗೆ ಮುಖ್ಯವಾಗಿ ಕೇಂದ್ರಿಕರಿಸಲಾಗಿದೆ.
ಪ್ರಮುಖಾಂಶಗಳು:
- ಪ್ರತಿ ವರ್ಷ ಜಾಗತಿಕವಾಗಿ ಸಾವನ್ನಪ್ಪುವ ಐದು ವರ್ಷದೊಳಗಿನ ಮಕ್ಕಳಲ್ಲಿ ಶೇ 1/3 ರಷ್ಟು ಮಕ್ಕಳು ಹೊರ ಮತ್ತು ಒಳಾಂಗಣ ವಾಯು ಮಾಲಿನ್ಯ, ನೈರ್ಮಲ್ಯದ ಕೊರತೆ, ಅಶುದ್ದ ಕುಡಿಯುವ ನೀರಿನ ಬಳಕೆಯಿಂದ ಸಾವನ್ನಪ್ಪುತ್ತಿದ್ದಾರೆ.
- ಡಯೋರಿಯಾ, ಮಲೇರಿಯಾ ಹಾಗೂ ನ್ಯೂಮೋನಿಯಾ ಕಾಯಿಲೆಗಳು ಮಕ್ಕಳ ಸಾವಿಗೆ ಪ್ರಮುಖವಾಗಿ ಕಾರಣವಾದ ರೋಗಗಳು.
- ಹಾನಿಕಾರಿಕ ರಾಸಾಯನಿಕಗಳಿಗೆ ಒಡ್ಡುವುದು ಅವಧಿಪೂರ್ವ ಜನನಕ್ಕೆ ಕಾರಣವಾಗುತ್ತಿದೆ. ವಾಯು ಮಾಲಿನ್ಯದಿಂದಾಗಿ ಶಿಶುಗಳು ಹಾಗೂ ಶಾಲಾ ಮಕ್ಕಳಲ್ಲಿ ಅಸ್ತಮಾದಂತಹ ತೀವ್ರ ಉಸಿರಾಟ ಸಂಬಂಧಿತ ಕಾಯಿಲೆಗಳು ಹೆಚ್ಚಳವಾಗಲು ಕಾರಣವಾಗುತ್ತಿದೆ.
- ವಾಯು ಮಾಲಿನ್ಯದಿಂದ ಹೃದಯ ಸಂಬಂಧಿ ಕಾಯಿಲೆಗಳು, ಪಾರ್ಶ್ವವಾಯು ಮತ್ತು ಕ್ಯಾನ್ಸರ್ ನಂತಹ ರೋಗಗಳು ದುಪ್ಪಟ್ಟವಾಗುತ್ತಿವೆ.
ವಿಶ್ವದ ಅತ್ಯಂತ ಹಳೆಯ ವಿಮಾನ ವಾಹಕ ನೌಕೆ ಐಎನ್ಎಸ್ ವಿರಾಟ್ ಗೆ ವಿದಾಯ
ಸರಿಸುಮಾರು ಆರು ದಶಕಗಳ ಕಾಲ ನೌಕಾಸೇನೆಯಲ್ಲಿ ಸೇವೆ ಸಲ್ಲಿಸಿದ ಸಮರ ವಿಮಾನ ವಾಹಕ ನೌಕೆ ಐಎನ್ಎಸ್ ವಿರಾಟ್ಗೆ ಮುಂಬೈ, ಮಹಾರಾಷ್ಟ್ರದಲ್ಲಿ ವಿದಾಯ ಹೇಳಲಾಯಿತು. ದೀರ್ಘಾವಧಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಹೊಂದಿರುವ ಈ ಯುದ್ಧನೌಕೆ ಸೇನೆಯ ಶಕ್ತಿಯ ಪ್ರತೀಕವಾಗಿತ್ತು. ಹಲವಾರು ಕಠಿಣ ಸಂದರ್ಭಗಳಲ್ಲಿ ದೇಶದ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿತ್ತು.
ಪ್ರಮುಖಾಂಶಗಳು:
- ದೀರ್ಘಕಾಲ ಸೇವೆ ಸಲ್ಲಿಸಿರುವ ವಿರಾಟ್ ವಿಮಾನ ವಾಹಕ ನೌಕೆ “ಗಿನ್ನಿಸ್ ದಾಖಲೆ”ಯನ್ನು ಹೊಂದಿದೆ. ಬ್ರಿಟಿಷರು ನಿರ್ಮಿಸಿ ಭಾರತ ನೌಕಪಡೆಯ ಸೇವೆಯಲ್ಲಿರುವ ಕೊನೆಯ ನೌಕೆ ಸಹ ಇದಾಗಿದೆ.
- 1943ರಲ್ಲಿ ಎರಡನೇ ವಿಶ್ವ ಮಹಾಯುದ್ದ ಸಂದರ್ಭದಲ್ಲಿ ನೌಕೆಯನ್ನು ನಿರ್ಮಿಸಲಾಯಿತು. ನವೆಂಬರ್ 1959ರಲ್ಲಿ ವಿರಾಟ್ ಬ್ರಿಟಿಷ್ ರಾಯಲ್ ನೌಕಾದಳದಲ್ಲಿ ಎಚ್ಎಂಎಸ್ ಹರ್ವೆಸ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು.
- 1982 ರಲ್ಲಿ ನಡೆದ ಫಲ್ಕಲ್ಯಾಂಡ್ ಯುದ್ದದಲ್ಲಿ ಐಎನ್ಎಸ್ ವಿರಾಟ್ ನೌಕೆ ಬ್ರಿಟಿಷ್ ರಾಯಲ್ ನೌಕಪಡೆಯನ್ನು ಮುನ್ನೆಡೆಸಿತ್ತು. 1985 ರಲ್ಲಿ 27 ವರ್ಷಗಳ ಸತತ ಸೇವೆಯ ನಂತರ ಬ್ರಿಟಿಷ್ ನೌಕಪಡೆ ನೌಕೆಯನ್ನು ಸೇವೆಯಿಂದ ಮುಕ್ತಗೊಳಿಸಿತು. ಐಎನ್ಎಸ್ ವಿರಾಟ್ ನೌಕಾಪಡೆಯ ‘ಗ್ರ್ಯಾಂಡ್ ಓಲ್ಡ್ ಲೇಡಿ’ ಅಂತಲೇ ಖ್ಯಾತಿ ಪಡೆದಿತ್ತು.
- ಆ ಬಳಿಕ 1987ರ ಮೇ 12ರಂದು ಭಾರತ ಸರ್ಕಾರ ಈ ಹಡಗನ್ನು5 ಕೋಟಿ ರೂಪಾಯಿಗಳಿಗೆ ಖರೀದಿಸಿ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿತು. ಆ ಮೂಲಕ ನೌಕಾಪಡೆಗೆ ಸೇರಿದ ಅತ್ಯಂತ ಹಳೆಯ ಹಡಗು ಎಂದು ಗಿನ್ನೆಸ್ ದಾಖಲೆಗೂ ಸೇರ್ಪಡೆಯಾಗಿ, ಅಂತಾರಾಷ್ಟ್ರೀಯ ವಲಯದಲ್ಲಿ ಸುದ್ದಿ ಮಾಡಿತು.
- 1989 ರಲ್ಲಿ ಶ್ರೀಲಂಕಾದಲ್ಲಿ ಶಾಂತಿ ಸ್ಥಾಪಿಸುವ ಕಾರ್ಯಾಚರಣೆ “ಆಪರೇಷನ್ ಜುಪಿಟರ್” ಹಾಗೂ ಸಂಸತ್ತಿನ ಮೇಲಿನ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ “ಆಪರೇಷನ್ ಪರಾಕ್ರಮ್” ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿತ್ತು.
27 ಬಾರಿ ವಿಶ್ವಪರ್ಯಟನೆ!
ಐಎನ್ಎಸ್ ವಿರಾಟ್ 27 ಬಾರಿ ವಿಶ್ವ ಪರ್ಯಟನೆ ಮಾಡಿದ್ದು, 11 ಲಕ್ಷ ಕಿಲೋಮೀಟರ್ ದೂರವನ್ನು ಕ್ರಮಿಸಿದೆ. ಅಲ್ಲದೆ, 2,250 ದಿನಗಳನ್ನು ಸಮುದ್ರದಲ್ಲೇ ಕಳೆದಿದೆ.
ಟ್ರೇಡ್ ಮಾರ್ಕ್ ನಿಯಮ (Trade Mark Rule)-2017 ಜಾರಿಗೆ
ವ್ಯಾಪಾರ ಚಿನ್ಹೆ ಬಳಕೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವ ಟ್ರೇಡ್ ಮಾರ್ಕ್ ನಿಯಮ-2017 ಜಾರಿಗೆ ಬಂದಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕ ಸಚಿವಾಲಯ ಹೊಸ ನಿಯಮವನ್ನು ಬಿಡುಗಡೆಗೊಳಿಸಿದ್ದು, ಹಾಲಿ ಜಾರಿಯಲ್ಲಿದ್ದ 2002 ನಿಯಮದ ಬದಲಾಗಿ ಇದು ಜಾರಿಗೆ ಬಂದಿದೆ.
ನಿಯಮದ ಪ್ರಮುಖ ಅಂಶಗಳು:
- ಟ್ರೇಡ್ ಮಾರ್ಕ್ ನೋಂದಣಿ ಪ್ರತಿಗಳ ಸಂಖ್ಯೆಯನ್ನು 74 ರಿಂದ 8ಕ್ಕೆ ಇಳಿಸಲಾಗಿದೆ.
- ಇ-ನೋಂದಣಿಯನ್ನು ಪ್ರಸಿದ್ದಗೊಳಿಸಲು ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳುವವರಿಗೆ ಶೇ 10% ರಿಯಾಯತಿ ನೀಡಲಾಗಿದೆ.
- ಟ್ರೇಡ್ ಮಾರ್ಕ್ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಸಲುವಾಗಿ ದಾಖಲಾತಿ ಸಲ್ಲಿಕೆಯಿಂದ ನೋಂದಣಿ ಪ್ರಕ್ರಿಯೆ ವರೆಗೂ ಇ-ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
- ಅರ್ಜಿದಾರರ ವಿಳಾಸದಲ್ಲಿ ಇ-ಮೇಲ್ ಅನ್ನು ಕಡ್ಡಾಯಗೊಳಿಸಲಾಗಿದೆ. ಆ ಮೂಲಕ ಕಚೇರಿ ವ್ಯವಹಾರವನ್ನು ಇ-ಮೇಲ್ ಮೂಲಕ ತ್ವರಿತವಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
- ವಿಡಿಯೋ ಸಂವಾದದ ಮೂಲಕ ಚಿನ್ಹೆ ಹಂಚಿಕೆ ಸಂಬಂಧಿಸಿದ ವಿವಾದಗಳನ್ನು ಶೀಘ್ರವಾಗಿ ಬಗೆಹರಿಸಲಾಗುವುದು.
ಸರ್ ಫೇಬ್ರವರಿ-2017 ತಿಂಗಳ ಪ್ರಚಲಿತ ಘಟನೆಗಳುನ್ನು ದಯವಿಟ್ಟು ಪಿಡಿಎಫ್ ಕಳುಹಿಸಿ ಸರ್
ಇಂದ
ಬಿ.ಸಿ.ರೆಡ್ಡಿ
9900905046
sir its march but you are not yet to updated quiz upto march 9 plz sir its humble request
Sir please update February month current affairs and quiz and daily update news