ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,5,6,2017
Question 1 |
1. ಯಾವ ರಾಜ್ಯ ಸರ್ಕಾರಿ ನೌಕರಿಯಲ್ಲಿ ಕ್ರೀಡಾಪಟುಗಳಿಗೆ ಶೇ 2% ಮೀಸಲಾತಿಯನ್ನು ನೀಡಲಿದೆ?
ಬಿಹಾರ | |
ಜಾರ್ಖಂಡ್ | |
ಪಶ್ಚಿಮ ಬಂಗಾಳ | |
ಹಿಮಾಚಲ ಪ್ರದೇಶ |
ಜಾರ್ಖಂಡ್ ಸರ್ಕಾರ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ 2% ಮೀಸಲಾತಿಯನ್ನು ಘೋಷಿಸಿದೆ. ಅಲ್ಲದೇ ಕ್ರೀಡಾಪಟುಗಳಿಗೆ ಪೌಷ್ಠಿಕ ಆಹಾರವನ್ನು ಸಹ ನೀಡುವುದಾಗಿ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಹೇಳಿದ್ದಾರೆ.
Question 2 |
2. “ಏಷ್ಯಾ ಸ್ಕ್ವಾಷ್ ಫೆಡರೇಷನ್ (Asia Squash Federation)”ನ ಉಪಾಧ್ಯಕ್ಷರಿಗೆ ಆಯ್ಕೆಯಾದ ಭಾರತೀಯ ಯಾರು?
ದೆಬೇಂದ್ರನಾಥ್ ಸಾರಂಗಿ | |
ಎನ್ ರಾಮಚಂದ್ರನ್ | |
ಸತ್ಯನಾರಾಯಣ್ ಘೋಷ್ | |
ಸಿದ್ದಾರ್ಥ್ ಮಲ್ಹೋತ್ರ |
ಸ್ಕ್ವಾಷ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ದೆಬೇಂದ್ರನಾಥ್ ಸಾರಂಗಿ ರವರು ಏಷ್ಯಾ ಸ್ಕ್ವಾಷ್ ಫೆಡರೇಷನ್ ಉಪಾಧ್ಯಕ್ಷರಿಗೆ ನೇಮಕಗೊಂಡರು. ಆ ಮೂಲಕ ಎನ್ ರಾಮಚಂದ್ರನ್ ನಂತರ ಈ ಹುದ್ದೆಯನ್ನು ಅಲಂಕರಿಸಿದ ಎರಡನೇ ಭಾರತೀಯ ಎಂಬ ಗೌರವಕ್ಕೆ ಪಾತ್ರರಾದರು.
Question 3 |
3. ಯಾವ ರಾಜ್ಯ ಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟ ಸೇವೆ ನೀಡಿದವರನ್ನು ಗುರುತಿಸಲು “ನಾಗರಿಕ ಸೇವಾ ಪ್ರಶಸ್ತಿ”ಗಳನ್ನು ಪ್ರಾರಂಭಿಸಿದೆ?
ಗುಜರಾತ್ | |
ರಾಜಸ್ತಾನ | |
ಅರುಣಾಚಲ ಪ್ರದೇಶ | |
ಹರಿಯಾಣ |
ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಅವರು ಸಾರ್ವಜನಿಕ ಆಡಳಿತದಲ್ಲಿ ಉತ್ಕೃಷ್ಟ ಸೇವೆ ನೀಡಿದವರಿಗೆ “ಅರುಣಾಚಲ ನಾಗರಿಕ ಸೇವಾ ಪ್ರಶಸ್ತಿಯನ್ನು” ಸ್ಥಾಪಿಸಿದ್ದಾರೆ. ಕಠಿಣ ಶ್ರಮ ಹಾಗೂ ನಾವೀನ್ಯತೆಯನ್ನು ತೋರಿದ ಸರ್ಕಾರಿ ನೌಕರರನ್ನು ಗುರುತಿಸುವ ಮೂಲಕ ನೈತಿಕತೆಯನ್ನು ಹೆಚ್ಚಿಸುವುದಲ್ಲದೆ, ಉತ್ಪಾದಕ ಕಾರ್ಯ ಸಂಸ್ಕೃತಿಯನ್ನು ರೂಪಿಸಲು ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಪ್ರಶಸ್ತಿಯು ಫಲಕ, ಪದಕ ಹಾಗೂ ವ್ಯಕ್ತಿಗತ ರೂ 1ಲಕ್ಷ ನಗದು, ಸಂಸ್ಥೆಗಳಿಗೆ ರೂ 5ಲಕ್ಷ ನಗದನ್ನು ಒಳಗೊಂಡಿದೆ.
Question 4 |
4. 2016 ರಾಷ್ಟ್ರೀಯ ವಾಣಿಜ್ಯೋದ್ಯಮ ಪ್ರಶಸ್ತಿಗಳಲ್ಲಿ “ಅತ್ಯುತ್ತಮ ಐಟಿ ಸ್ಟಾರ್ಟ್ ಆಪ್” ಪ್ರಶಸ್ತಿಯನ್ನು ಪಡೆದುಕೊಂಡ ಸ್ಟಾರ್ಟ್ ಆಪ್ ಯಾವುದು?
ಲುಸಿಡಿಯಸ್ | |
ಮಿತ್ರ ಬಯೊಟೆಕ್ | |
ಆಕಾಶ್ | |
ಜೀವಂಕುಶ್ |
ಐಟಿ ರಿಸ್ಕ್ ವಿಮರ್ಶಿಸುವ ಹಾಗೂ ಡಿಜಿಟಲ್ ಭದ್ರತೆ ಸೇವೆಯನ್ನು ಒದಗಿಸುವ “ಲುಸಿಡಿಯಸ್’ ಸ್ಟಾರ್ಟ್ ಆಪ್ ಅತ್ಯುತ್ತಮ ಐಟಿ ಸ್ಟಾರ್ಟ್ ಆಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಭಾರತ ಸರ್ಕಾರದ ಆಧಾರ್ ಆಧರಿತ ಪಾವತಿ ವ್ಯವಸ್ಥೆ BHIM ಆ್ಯಪ್ ಗೆ ಲುಸಿಡಿಯಸ್ ಭದ್ರತೆಯನ್ನು ಒದಗಿಸುತ್ತಿದೆ.
Question 5 |
5. ಸಬ್ಸಿಡಿಗೆ ಸಂಬಂಧಿಸಿದಂತೆ ಹಜ್ ನಿಯಮವನ್ನು ಸುಧಾರಿಸಲು ಕೇಂದ್ರ ಸರ್ಕಾರ ಯಾವ ಸಮಿತಿಯನ್ನು ರಚಿಸಿದೆ?
ಅಫ್ಜಲ್ ಅಮಾನುಲ್ಲಾ ಸಮಿತಿ | |
ಶೇಖರ್ ಬಸು ಸಮಿತಿ | |
ರಾಜವರ್ಧನ್ ಸಿಂಗ್ ಸಮಿತಿ | |
ಸೈಯದ್ ಅನ್ವರ್ ಸಮಿತಿ |
ಭಾರತದ ಹಜ್ ನಿಯಮ ಹಾಗೂ ಸಬ್ಸಿಡಿ ಸಂಬಂಧಿತ ವಿಷಯದ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಕೇಂದ್ರ ಸರ್ಕಾರ ಆರು ಜನ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ. 2022ರ ವೇಳಗೆ ಹಂತ ಹಂತವಾಗಿ ಧಾರ್ಮಿಕ ಯಾತ್ರಾರ್ಥಿಗಳಿಗೆ ನೀಡುವ ಸಬ್ಸಿಡಿಯನ್ನು ಹಂತ ಹಂತವಾಗಿ ರುದ್ದಗೊಳಿಸುವಂತೆ 2012ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಅನುಸಾರ ಸಮಿತಿಯನ್ನ ರಚಿಸಲಾಗಿದೆ. ಜೆಡ್ಡಾದ ಕನ್ಸುಲೆಡ್ ಜನರಲ್ ಆಗಿದ್ದ ಅಫ್ಜಲ್ ಅಮಾನುಲ್ಲಾ ಅವರು ಸಮಿತಿಯ ಅಧ್ಯಕ್ಷರಾಗಿದ್ದಾರೆ.
Question 6 |
6. ಮೊಟ್ಟ ಮೊದಲ “BIMSTEC” ರಾಷ್ಟ್ರೀಯ ಭದ್ರತಾ ಮುಖ್ಯಸ್ಥರ ಸಭೆಯ ಅತಿಥ್ಯ ವಹಿಸಲಿರುವ ರಾಷ್ಟ್ರ ಯಾವುದು?
ಭಾರತ | |
ಥಾಯ್ಲೆಂಡ್ | |
ಶ್ರೀಲಂಕಾ | |
ನೇಪಾಳ |
ಮೊಟ್ಟ ಮೊದಲ BIMSTEC ರಾಷ್ಟ್ರೀಯ ಭದ್ರತಾ ಮುಖ್ಯಸ್ಥರ ಸಭೆ ಭಾರತದಲ್ಲಿ ಜರುಗಲಿದೆ. ಹೆಚ್ಚುತ್ತಿರುವ ಭಯೋತ್ಪಾದನೆ ಹಾಗೂ ಹಿಂಸಾಚಾರದ ವಿರುದ್ದ ಸೂಕ್ತ ಕ್ರಮಗಳನ್ನು ಜಾರಿಗೆ ತರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು.
Question 7 |
7. “ಇಂಡಿಯಾ-2017” ಮತ್ತು “ಭಾರತ್ 2017” ಪುಸ್ತಕವನ್ನು ಬಿಡುಗಡೆಗೊಳಿಸದ ಸಚಿವಾಲಯ ________?
ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯ | |
ಕೇಂದ್ರ ಗೃಹ ಸಚಿವಾಲಯ | |
ಕೇಂದ್ರ ಪ್ರವಾಸೋದ್ಯಮ ಸಚಿವಾಲಯ | |
ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯ |
ಕೇಂದ್ರ ಮಾಹಿತಿ ಹಾಗೂ ಪ್ರಸರಣ ಖಾತೆ ಸಚಿವ ವೆಂಕಯ್ಯ ನಾಯ್ಡು ಅವರು “ಇಂಡಿಯಾ-2017” ಮತ್ತು “ಭಾರತ್ 2017” ಪುಸ್ತಕವನ್ನು ಬಿಡುಗಡೆಗೊಳಿಸಿದರು. ದೇಶ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಮಗ್ರ ಮಾಹಿತಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪುಸ್ತಕಗಳು ಒಳಗೊಂಡಿವೆ.
Question 8 |
8. ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ BCAS ಎಂದರೆ ___________?
ಬ್ಯೂರೋ ಆಫ್ ಕಸ್ಟಮ್ ಅವಿಯೇಷನ್ ಸೆಕ್ಯೂರಿಟಿ | |
ಬ್ಯೂರೋ ಆಫ್ ಸಿವಿಲ್ ಅವಿಯೇಷನ್ ಸೆಕ್ಯೂರಿಟಿ | |
ಬ್ಯೂರೋ ಆಫ್ ಸೆನ್ಸಾರ್ ಅವಿಯೇಷನ್ ಸೆಕ್ಯೂರಿಟಿ | |
ಬ್ಯೂರೋ ಆಫ್ ಸಿಟಿಜನ್ ಅವಿಯೇಷನ್ ಸೆಕ್ಯೂರಿಟಿ |
Question 9 |
9. 2017 ಜೆನೆಸಿಸ್ (Genesis) ಪ್ರಶಸ್ತಿಯನ್ನು ಗೆದ್ದುಕೊಂಡ ಭಾರತೀಯ ಮೂಲದ ಬ್ರಿಟಿಷ್ ಶಿಲ್ಪಿ ಯಾರು?
ಅನೀಶ್ ಕಪೂರ್ | |
ರಾಜೇಂದ್ರ ಸಿಂಗ್ | |
ಅನಿಲ್ ಭಾವೆ | |
ನಿರಂಜನ್ ಯಾದವ್ |
ಪ್ರಖ್ಯಾತ ಭಾರತೀಯ ಮೂಲದ ಬ್ರಿಟಿಷ್ ಶಿಲ್ಪಿ ಹಾಗೂ ಸಿರಿಯಾ ನಿರಾಶ್ರಿತರ ಹಕ್ಕುಗಳ ಪ್ರಖರ ಪ್ರತಿಪಾದಕ, ಅನೀಶ್ ಕಪೂರ್ ಅವರು 10 ಲಕ್ಷ ಅಮೆರಿಕನ್ ಡಾಲರ್ಗಳ ಇಸ್ರೇಲಿನ ಪ್ರತಿಷ್ಠಿತ ಜೆನಿಸಿಸ್ ಬಹುಮಾನವನ್ನು ಗೆದ್ದುಕೊಂಡಿದ್ದಾರೆ. ಯಹೂದ್ಯ ಮೌಲ್ಯಗಳಿಗೆ ತೋರಿರುವ ಬದ್ಧತೆಗಾಗಿ ಅನೀಶ್ ಕಪೂರ್ಗೆ ಈ ಬಹುಮಾನ ಸಂದಿದೆ.ಯಹೂದ್ಯ ನೊಬೆಲ್ ಪ್ರಶಸ್ತಿ ಎಂದೇ ಪರಿಗಣಿತವಾಗಿರುವ ಇಸ್ರೇಲ್ನ ಈ ಉನ್ನತ ಬಹುಮಾನಕ್ಕೆ ಭಾಜನರಾಗಿರುವ 62ರ ಹರೆಯದ ಅನೀಶ್ ಕಪೂರ್, ಸಿರಿಯಾ ನಿರಾಶ್ರಿತರ ವಿರುದ್ಧದ ಸರಕಾರಿ ನೀತಿಗಳನ್ನು ತೀವ್ರವಾಗಿ ಖಂಡಿಸಿದರು. ಪ್ರಶಸ್ತಿ ಸಮಿತಿ ಅಧ್ಯಕ್ಷರಾಗಿರುವ ನತನ್ ಶರಾನ್ಸ್ಕಿ ಅವರು ಕಪೂರ್ ಅವರ ಕಲೆಗಾರಿಕೆಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿ ಸಮಕಾಲೀನ ನವಶೋಧಕ ಕಲಾವಿದರ ಪಾಲಿಗೆ ಕಪೂರ್ ಅವರು ಅತ್ಯಂತ ಪ್ರಭಾವಶಾಲಿಯಾಗಿದ್ದಾರೆ ಎಂದು ಹೇಳಿದ್ದಾರೆ.
Question 10 |
ಚೇತನ್ ಭಗತ್ | |
ರಚನಾ ಸಿಂಗ್ | |
ದೆಜುರಾಯ್ ದತ್ತಾ | |
ಪ್ರಮೋದ್ ನಾಯಕ್ |
[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-562017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ