ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,11,12,2017
Question 1 |
1. ಭಾರತದ ಮೊದಲ ಸಾಮಾಜಿಕ ನಾವೀನ್ಯತೆ ಕೇಂದ್ರ “ಕಾಕತೀಯ ಹಬ್ ಫಾರ್ ಸೋಶಿಯಲ್ ಇನ್ನೋವೇಶನ್” ಯಾವ ರಾಜ್ಯದಲ್ಲಿ ಆರಂಭಿಸಲಾಯಿತು?
ಆಂಧ್ರ ಪ್ರದೇಶ
| |
ತಮಿಳುನಾಡು | |
ತೆಲಂಗಣ | |
ಕರ್ನಾಟಕ |
ದೇಶದ ಮೊದಲ ಸಾಮಾಜಿಕ ನಾವೀನ್ಯತೆ ಕೇಂದ್ರ “ಕಾಕತೀಯ ಹಬ್ ಫಾರ್ ಸೋಶಿಯಲ್ ಇನ್ನೋವೇಶನ್” ಅನ್ನು ತೆಲಂಗಣದಲ್ಲಿ ಸ್ಥಾಪಿಸಲಾಗಿದೆ. ತೆಲಂಗಣ ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡಿರುವ ಈ ಕೇಂದ್ರವು ಗ್ರಾಮೀಣ ಮಟ್ಟದಲ್ಲಿ ಕೌಶಲ್ಯ ವೃದ್ದಿಸಲು ಕಾರ್ಯನಿರ್ವಹಿಸಲಿದೆ.
Question 2 |
ಲತಾ ಕೃಷ್ಣ ರಾವ್ | |
ಕಿರಣ್ ಮಜುಂದಾರ್ | |
ಜೆ.ಎಸ್.ದೀಪಕ್ | |
ನೀತು ಅಂಬಾನಿ |
Question 3 |
3. “ಹಾರ್ವರ್ಡ್ ಹ್ಯೂಮಾನಿಟೇರಿಯನ್ ಆಫ್ ದಿ ಇಯರ್” 2017 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವರು ಯಾರು?
ಆಂಗ್ ಸನ್ ಸೂಕಿ | |
ರಾಬಿನ್ ರಿಹಾನ ಫೆಂಟಿ | |
ಬರಾಕ್ ಒಬಾಮ | |
ಬಿಷಪ್ ಡೆಸ್ಮೆಂಡ್ ಟುಟು |
ಬಾರ್ಬೊಡೊಸ್ ದೇಶದ ಖ್ಯಾತ ಗೀತ ರಚನಕಾರ ಹಾಗೂ ಗಾಯಕ ರಾಬಿನ್ ರಿಹಾನ ಫೆಂಟಿ, ತಮ್ಮ ದೇಶದಲ್ಲಿ ಕ್ಯಾನ್ಸರ್ ರೋಗಕ್ಕೆ ನೀಡುವ ಚಿಕಿತ್ಸೆ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವುದಕ್ಕೆ ಶ್ರಮಿಸಿದಕ್ಕಾಗಿ, 2017 ರ “ಹಾರ್ವರ್ಡ್ ಹ್ಯೂಮಾನಿಟೇರಿಯನ್ ಆಫ್ ದಿ ಇಯರ್” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದಲ್ಲದೆ ಕೆರೆಬಿಯನ್ ವಿದ್ಯಾರ್ಥಿಗಳು ಅಮೆರಿಕಾದಲ್ಲಿ ಉನ್ನತ ಶಿಕ್ಷಣ ಪಡೆಯಲು ನೆರವಾಗಲು ಶಿಕ್ಷಣ ವೇತನವನ್ನು ಸಹಾ ನೀಡುತ್ತಿದ್ದಾರೆ. ಜನರ ಜೀವನ ಮಟ್ಟದಲ್ಲಿ ಸುಧಾರಣೆ ಮಾಡುವವರಿಗೆ ಮತ್ತು ಜನರು ಉನ್ನತ ಮಟ್ಟದ ಸಾಧನೆಗೆ ಪ್ರೋತ್ಸಾಹಿಸುವವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
Question 4 |
4. “ತೇಜಸ್ವಿನಿ” ಯೋಜನೆಗೆ ವಿಶ್ವ ಬ್ಯಾಂಕ್ ಎಷ್ಟು ಮೊತ್ತವನ್ನು ಸಾಲದ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಲಿದೆ?
$ 55 ಮಿಲಿಯನ್ | |
$ 63 ಮಿಲಿಯನ್ | |
$ 77 ಮಿಲಿಯನ್ | |
$ 85 ಮಿಲಿಯನ್ |
ಜಾರ್ಖಂಡ್ ರಾಜ್ಯದ ಹದಿಹರೆಯದ ಹೆಣ್ಣು ಮಕ್ಕಳ ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳಿಸುವ ಉದ್ದೇಶ ಹೊಂದಿದ “ತೇಜಸ್ವಿನಿ” ಯೋಜನೆಗೆ ವಿಶ್ವ ಬ್ಯಾಂಕ್ $63 ಮಿಲಿಯನ್ ಮೊತ್ತದ ಸಾಲವನ್ನು ಭಾರತ ಸರ್ಕಾರಕ್ಕೆ ನೀಡಲಿದೆ. ಜಾರ್ಖಂಡ್ ರಾಜ್ಯದ 17 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಿದ್ದು, ಜೂನ್ 30, 2021ಕ್ಕೆ ಯೋಜನೆ ಅಂತ್ಯಗೊಳ್ಳಲಿದೆ.
Question 5 |
5. ಇತ್ತೀಚೆಗೆ ಶಾಸನ ಬದ್ಧ ಸಂಸ್ಥೆಯೊಂದು ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಯಾದ ಬಿಬಿಸಿ (BBC) ಗೆ ನಿರ್ಬಂಧ ಹೇರಿದೆ, ಈ ಸಂಸ್ಥೆ ಯಾವುದು?
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ | |
ಗಿರ್ ರಕ್ಷಿತಾರಣ್ಯ ಪ್ರಾಧಿಕಾರ | |
ರಾಷ್ಟ್ರೀಯ ವನ್ಯಜೀವಿ ಸುರಕ್ಷಾ ಸಂಸ್ಥೆ | |
ಭಾರತೀಯ ಜೀವವೈವಿಧ್ಯ ಸಂಸ್ಥೆ |
ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಬಗ್ಗೆ ತನ್ನ ಸಾಕ್ಷಾಚಿತ್ರದಲ್ಲಿ ತಪ್ಪಾಗಿ ವರದಿ ಮಾಡಿದ ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪರೇಷನ್ ನ ಎಲ್ಲಾ ಪತ್ರಕರ್ತರಿಗೆ ಮತ್ತು ಮಾಧ್ಯಮದವರಿಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ 5 ವರ್ಷಗಳ ನಿಷೇಧ ಹೇರಿದೆ. ಬಿಬಿಸಿ ತನ್ನ ‘ಕಿಲ್ಲಿಂಗ್ ಫಾರ್ ಕನ್ಸರ್ವೆಷನ್’ ಎಂಬ ಸಾಕ್ಷಾಚಿತ್ರದಲ್ಲಿ ಕಳ್ಳಬೇಟೆ ಮಾಡುವವರನ್ನು ಅರಣ್ಯ ರಕ್ಷಕರು ಯಾವುದೇ ಪೂರ್ವಾನುಮತಿ ಇಲ್ಲದೆ ಹತ್ಯೆಗೈಯಬಹುದಾಗಿದೆ ಎಂದು ತಪ್ಪಾಗಿ ವರದಿ ಮಾಡಿತ್ತು. ಅಲ್ಲದೆ ಈ ವ್ಯವಸ್ಥೆ ಅರಣ್ಯ ವಾಸಿಗಳಿಗೆ ಮರಣ ಶಾಸನವಾಗಿ ಪರಿಣಮಿಸಿದೆ ಎಂದೂ ಸಹ ಪ್ರಸಾರ ಮಾಡಿತ್ತು
Question 6 |
6. 89 ನೇ ಆಸ್ಕರ್ ಅಕಾಡಮಿ ಪ್ರಶಸ್ತಿ ಸಮಾರಂಭದಲ್ಲಿ ‘ವಿದೇಶಿ ಭಾಷಾ ಚಲನಚಿತ್ರ’ ವಿಭಾಗದಲ್ಲಿ ಪ್ರಶಸ್ತಿಗಳಿಸಿದ ಚಿತ್ರ ಯಾವುದು?
ಲಾ ಲಾ ಲ್ಯಾಂಡ್ | |
ಕೆರೆಬಿಯನ್ ಸೀ | |
ದಿ ಸೇಲ್ಸ್ ಮನ್ | |
ದಿ ಬ್ಲಡ್ ಬೇಬಿ |
ಅಸ್ಗರ್ ಫರ್ಹಾದಿ ನಿರ್ದೇಶನದ ಇರಾನಿ ಚಲನಚಿತ್ರ ‘ದಿ ಸೇಲ್ಸ್ ಮನ್’ 89 ನೇ ಆಸ್ಕರ್ ಅಕಾಡಮಿ ಪ್ರಶಸ್ತಿ ಸಮಾರಂಭದಲ್ಲಿ ‘ವಿದೇಶಿ ಭಾಷಾ ಚಲನಚಿತ್ರ’ ವಿಭಾಗದಲ್ಲಿ ಉತ್ತಮ ಚಿತ್ರವಾಗಿ ಹೊರಹೊಮ್ಮಿತು. ಅಸ್ಗರ್ ಫರ್ಹಾದಿ ಯವರಿಗೆ ಇದು ಎರಡನೇ ಆಸ್ಕರ್ ಪ್ರಶಸ್ತಿಯಾಗಿದೆ ಈ ಹಿಂದೆ ಅಂದರೆ 5 ವರ್ಷಗಳ ಹಿಂದೆ ‘ಎ ಸಪರೇಷನ್’ಎಂಬ ಚಿತ್ರಕ್ಕೆ ಅಕಾಡಮಿ ಪ್ರಶಸ್ತಿ ಲಭಿಸಿತ್ತು.
Question 7 |
7. ಭಾರತದ ಪ್ರಥಮ “ಅಂತ್ಯೋದಯ ಎಕ್ಸ್ ಪ್ರೆಸ್” ರೈಲ್ವೆ ಜಾಲವನ್ನು ಯಾವ ಎರಡು ನಗರಗಳ ನಡುವೆ ಪ್ರಾರಂಭಿಸಲಾಗಿದೆ?
ಎರ್ನಾಕುಲಂ ಮತ್ತು ಹೌರಾ | |
ಎರ್ನಾಕುಲಂ ಮತ್ತು ಅಲಹಾಬಾದ್ | |
ಲಕ್ನೌ ಮತ್ತು ತಿರುಚನಾಪಲ್ಲಿ | |
ನಿಜಾಮುದ್ದೇನ್ ಮತ್ತು ಪಲಕ್ಕಾಡ್ |
ಸಾಮಾನ್ಯ ಜನರಿಗಾಗಿ ಅತಿ ಹೆಚ್ಚು ಸಾಂದ್ರತೆ ಹೊಂದಿರುವ ಮಾರ್ಗದಲ್ಲಿ ‘ಮೀಸಲು ರಹಿತ’ ಬೋಗಿಗಳನ್ನು ಹೊಂದಿರುವ ಅತ್ಯಂತ ವೇಗದ ರೈಲ್ವೆ ಸೇವೆಯನ್ನು ಎರ್ನಾಕುಲಂ ಮತ್ತು ಹೌರಾ ನಗರಗಳ ನಡುವೆ ಭಾರತದ ಪ್ರಥಮ “ಅಂತ್ಯೋದಯ ಎಕ್ಸ್ ಪ್ರೆಸ್” ಗೆ ಚಾಲನೆ ನೀಡಲಾಯಿತು. ಈ ಬೋಗಿಗಳಲ್ಲಿ ಐಶಾರಾಮಿ ಬೋಗಿಗಳಲ್ಲಿರುವಂತೆ ಅತ್ಯಾಧುನಿಕ ಸೀಟು, ಎಲ್.ಇ.ಡಿ. ಬೆಳಕು ಮತ್ತು ಶೌಚಾಲಯ ವ್ಯವಸ್ಥೆ ಹೊಂದಿದ್ದು, ಕಡಿಮೆ ಟಿಕೆಟ್ ದರ ನಿಗದಿಪಡಿಸಲಾಗಿದೆ.
Question 8 |
8. ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2017 ಯಾವ ನಗರದಲ್ಲಿ ಆಯೋಜನೆಗೊಂಡಿದೆ?
ಟೋಕಿಯೊ | |
ದೆಹಲಿ | |
ಶಾಂಗಾಯ್ | |
ಬಾರ್ಸಿಲೋನ |
2017 ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸ್ಪೇನ್ ನ ಬಾರ್ಸಿಲೋನದಲ್ಲಿ ಫೆಬ್ರವರಿ 27 ರಿಂದ ಮಾರ್ಚ್ 2 ರವರೆಗೆ ನಡೆಯಲಿದೆ. ಗ್ಲೋಬಲ್ ಸಿಸ್ಟಂ ಫಾರ್ ಮೊಬೈಲ್ ಅಸೋಸಿಯೇಷನ್ (GSMA) ಈ ಕಾಂಗ್ರೆಸ್ ಅನ್ನು ಆಯೋಜಿಸುತ್ತಿದೆ.
Question 9 |
9. ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಯಾವ ಸಮಿತಿಯನ್ನು ರಚಿಸಲಿದೆ?
ಮೀನಾ ಹೇಮಚಂದ್ರ ಸಮಿತಿ | |
ಸುಗುಣ ಚಂದ್ರಶೇಖರ್ ಸಮಿತಿ | |
ಹೆಚ್ ಆರ್ ಖಾನ್ ಸಮಿತಿ | |
ತುಷಾರ್ ಕೃಷ್ಣ ಸಮಿತಿ |
ಸೈಬರ್ ಭದ್ರತೆಗೆ ಸಂಬಂಧಿಸಿದ ವಿವಿಧ ಸವಾಲುಗಳು ಹಾಗೂ ಅವುಗಳನ್ನು ಎದುರಿಸಲು ಕೈಗೊಳ್ಳಬೇಕಾದ ಸೂಕ್ತ ಕ್ರಮಗಳನ್ನು ಶಿಫಾರಸ್ಸನ್ನು ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಮೀನಾ ಹೇಮಚಂದ್ರ ಸಮಿತಿಯನ್ನು ರಚಿಸಲಿದೆ.
Question 10 |
10. ‘ಸೆಕ್ಸ್ ರೇಷಿಯೊ ಮಾನಿಟರಿಂಗ್ ಡಾಷ್ ಬೋರ್ಡ್’ ಎಂಬ ಪ್ರಾಯೋಗಿಕ ಯೋಜನೆಯನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಿದೆ?
ಬಿಹಾರ | |
ಪಂಜಾಬ್ | |
ಹರಿಯಾಣ | |
ಪಶ್ಚಿಮ ಬಂಗಾಳ |
(ಮಗಳನ್ನು ಉಳಿಸಿ, ಮಗಳನ್ನು ಓದಿಸಿ ಕಾರ್ಯಕ್ರಮದಡಿ ಹರಿಯಾಣ ರಾಜ್ಯ ಸರ್ಕಾರ ‘ಸೆಕ್ಸ್ ರೇಷಿಯೊ ಮಾನಿಟರಿಂಗ್ ಡಾಷ್ ಬೋರ್ಡ್’ ಎಂಬ ಪ್ರಾಯೋಗಿಕ ಯೋಜನೆಯನ್ನು ರಾಷ್ಟ್ರೀಯ ಮಾಹಿತಿ ಕೇಂದ್ರದ ಸಹಕಾರದೊಂದಿಗೆ ಪ್ರಾರಂಭಿಸಿದೆ. ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರತಿ ತಿಂಗಳು ಎಲ್ಲಾ ಹಳ್ಳಿಗಳ ಲಿಂಗಾನುಪಾತದ ದತ್ತಾಂಶವನ್ನು ಪಡೆದು ಅಂತರ್ಜಾಲದಲ್ಲಿ ಅಳವಡಿಸಲಿದೆ.)
[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-11122017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ