ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,13,14,2017

Question 1

1. ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿಕೊಂಡ ಭಾರತದ ಮೊಟ್ಟಮೊದಲ ಯುದ್ದನೌಕೆ ಯಾವುದು?

A
ಐಎನ್ಎಸ್ ವಿದ್ಯಾಗಿರಿ
B
ಐಎನ್ಎಸ್ ಸರ್ವೇಕ್ಷಕ್
C
ಐಎನ್ಎಸ್ ಸಿಂಧೂದುರ್ಗ್
D
ಐಎನ್ಎಸ್ ಗೋದಾವರಿ
Question 1 Explanation: 
ಐಎನ್ಎಸ್ ಸರ್ವೇಕ್ಷಕ್

ಐಎನ್ಎಸ್ ಸರ್ವೇಕ್ಷಕ್ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿಕೊಂಡ ಭಾರತದ ಮೊಟ್ಟ ಮೊದಲ ಯುದ್ದನೌಕೆಯಾಗಿದೆ. ಸಂವಹನ ಸಾಧಕ, ಬ್ಯಾಟರಿ ಚಾರ್ಜಿಂಗ್ ಸೇರಿದಂತೆ ವಿವಿಧ ಕಾರ್ಯಾಚರಣೆಗೆ ಸೌರಶಕ್ತಿಯನ್ನು ಬಳಸಲಾಗುತ್ತಿದೆ.

Question 2

2. “ಅಮನ್-2017 (AMAN-2017)” ಯಾವ ದೇಶದ ಬಹು ರಾಷ್ಟ್ರ ನೌಕ ಸಮರಭ್ಯಾಸ ಆಗಿದೆ?

A
ಇಂಡೋನೇಷ್ಯಾ
B
ಪಾಕಿಸ್ತಾನ
C
ಬಾಂಗ್ಲದೇಶ
D
ಜಪಾನ್
Question 2 Explanation: 
ಪಾಕಿಸ್ತಾನ

ಅಮನ್-2017 ಪಾಕಿಸ್ತಾನ ಆಯೋಜಿಸುವ ನೌಕಸಮರಭ್ಯಾಸ. ಇತ್ತೀಚೆಗೆ ಇದರ ಐದನೇ ಆವೃತ್ತಿ ಕರಾಚಿಯ ನೌಕ ಬಂದರಿನಲ್ಲಿ ನಡೆಯಿತು. “ಟುಗೆದರ್ ಫಾರ್ ಪೀಸ್” ಧ್ಯೇಯವಾಕ್ಯದಡಿ ನಡೆದ ಸಮರಭ್ಯಾಸದಲ್ಲಿ 37 ರಾಷ್ಟ್ರಗಳು ಭಾಗವಹಿಸಿದ್ದವು.

Question 3

3. ಈ ಕೆಳಗಿನ ಯಾವ ದಿನದಂದು “ರಾಷ್ಟ್ರೀಯ ಜಂತುಹುಳು ನಿವಾರಣೆ ದಿನ”ವನ್ನು ಆಚರಿಸಲಾಗುತ್ತದೆ?

A
ಫೆಬ್ರವರಿ 09
B
ಫೆಬ್ರವರಿ 10
C
ಫೆಬ್ರವರಿ 11
D
ಫೆಬ್ರವರಿ 12
Question 3 Explanation: 
ಫೆಬ್ರವರಿ 10

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನವನ್ನು ಫೆಬ್ರವರಿ 10 ರಂದು ಪ್ರತಿ ವರ್ಷ ಆಚರಿಸುತ್ತದೆ. ಅಂಗನವಾಡಿ ಮತ್ತು ಶಾಲಾ ಮಕ್ಕಳಲ್ಲಿ ಜಂತು ಹುಳಗಳನ್ನು ನಿವಾರಿಸುವುದು ಈ ದಿನದ ಉದ್ದೇಶ.

Question 4

4. ಈ ಕೆಳಗಿನ ಯಾವುದು ವಿಶ್ವದ ಅತಿ ದೊಡ್ಡ ಏರ್ ಷೋ ಎಂದು ಖ್ಯಾತಿ ಪಡೆದಿದೆ?

A
ಬೆಂಗಳೂರು ಏರ್ ಷೋ
B
ಪ್ಯಾರಿಸ್ ಏರ್ ಷೋ
C
ಬೀಜಿಂಗ್ ಏರ್ ಷೋ
D
ಟೊಕಿಯೋ ಏರ್ ಷೋ
Question 4 Explanation: 
ಪ್ಯಾರಿಸ್ ಏರ್ ಷೋ

ಪ್ಯಾರಿಸ್ ಏರ್ ಷೋ ವಿಶ್ವದ ಅತಿದೊಡ್ಡ ಏರ್ ಷೋ. ಇದಕ್ಕೆ ವಿಶ್ವದ ಪುರಾತನ ಏರ್ ಷೋ ಎಂಬ ಖ್ಯಾತಿಯೂ ಇದೆ. 1909ರಲ್ಲೇ ಆರಂಭವಾದ ಪ್ಯಾರಿಸ್ ಏರ್ ಷೋ ನಿರಂತರವಾಗಿ ಮುಂದುವರಿದುಕೊಂಡು ಬಂದಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಉತ್ತರ ಪ್ಯಾರಿಸ್ನ ಲೇ ಬಾರ್ಕ್ವೆಟ್ ವಿಮಾನ ನಿಲ್ದಾಣದಲ್ಲಿ ನಡೆಯುವ ಷೋನಲ್ಲಿ ದೇಶ-ವಿದೇಶಗಳ ನೂರಾರು ಸಂಸ್ಥೆಗಳು ಭಾಗವಹಿಸುತ್ತವೆ. ರಕ್ಷಣಾ ಸಚಿವಾಲಯ ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ಏರೋ ಇಂಡಿಯಾ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಏರ್ ಷೋ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

Question 5

5. “ಎರಡನೇ ಗೇಟ್ ವೇ ಆಫ್ ಇಂಡಿಯಾ ಜಿಯೋ ಎಕಾನಮಿಕ್ ಡೈಲಾಗ್-2017 (2nd Gateway of India Geo Economic Dialogue)” ಅನ್ನು ಯಾವ ಸಚಿವಾಲಯ ಆಯೋಜಿಸುತ್ತಿದೆ?

A
ವಿದೇಶಾಂಗ ವ್ಯವಹಾರ ಸಚಿವಾಲಯ
B
ಗೃಹ ಸಚಿವಾಲಯ
C
ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ
D
ಹಣಕಾಸು ಸಚಿವಾಲಯ
Question 5 Explanation: 
ವಿದೇಶಾಂಗ ವ್ಯವಹಾರ ಸಚಿವಾಲಯ

“ಎರಡನೇ ಗೇಟ್ ವೇ ಆಫ್ ಇಂಡಿಯಾ ಜಿಯೋ ಎಕಾನಮಿಕ್ ಡೈಲಾಗ್-2017” ಮುಂಬೈ, ಮಹಾರಾಷ್ಟ್ರದಲ್ಲಿ ಫೆಬ್ರವರಿ 13-14 ರಂದು ನಡೆಯಲಿದ್ದು, ವಿದೇಶಾಂಗ ವ್ಯವಹಾರ ಸಚಿವಾಲಯ ಸಹಯೋಗದಡಿ ಆಯೋಜಿಸಲಾಗುತ್ತಿದೆ.

Question 6
6. “2017 ವಿಶ್ವ ರೇಡಿಯೋ ದಿನ” ದ ಧ್ಯೇಯವಾಕ್ಯ ________________?
A
Radio Is You
B
Radio for Communication
C
Radio for Better Communication
D
Radio for Lonely Time
Question 6 Explanation: 
Radio Is You

ವಿಶ್ವ ರೇಡಿಯೋ ದಿನವನ್ನು ಪ್ರತಿ ವರ್ಷ ಫೆಬ್ರವರಿ 13 ರಂದು ಆಚರಿಸಲಾಗುತ್ತಿದೆ. Radion Is You ಇದು ವಿಶ್ವ ರೇಡಿಯೋ ದಿನದ ಧ್ಯೇಯವಾಕ್ಯ.

Question 7

7. “ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಂಡ್ ಅಕೌಂಟ್ ಆಫ್ ಇಂಡಿಯಾ (ICAI)” ಅಧ್ಯಕ್ಷರು ಯಾರು?

A
ನಿಲೇಶ್ ವಿಕಮ್ಸೆ
B
ಸುರೇಶ್ ಚಂದ್ರ
C
ರಮಣ ಗೋಗುಲ
D
ಅಮೃತ್ ಅರೋರ
Question 7 Explanation: 
ನಿಲೇಶ್ ವಿಕಮ್ಸೆ

ನಿಲೇಶ್ ಶಿವ್ಜಿ ವಿಕಮ್ಸೆ ಅವರು “ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಂಡ್ ಅಕೌಂಟ್ ಆಫ್ ಇಂಡಿಯಾ (ICAI)”ದ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 2016-17 ರಿಂದ ವಿಕಮ್ಸೆ ಅವರು ಐಸಿಎಐ ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

Question 8
8. ಯಾವ ರಾಜ್ಯ ಫೆಬ್ರವರಿ 14 ರಂದು “ಮಾತೃ ಪಿತೃ ದಿನ”ವೆಂದು ಆಚರಿಸಲು ನಿರ್ಧರಿಸಿದೆ?
A
ಜಾರ್ಖಂಡ್
B
ಚತ್ತೀಸ್ ಘರ್
C
ಮಹಾರಾಷ್ಟ್ರ
D
ಅಸ್ಸಾಂ
Question 8 Explanation: 
ಚತ್ತೀಸ್ ಘರ್
Question 9

9. 2017 ಐಸಿಸಿ ಟಿ-20 ಅಂಧರ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿ ಗೆದ್ದ ರಾಷ್ಟ್ರ ಯಾವುದು?

A
ಭಾರತ
B
ಬಾಂಗ್ಲದೇಶ
C
ಪಾಕಿಸ್ತಾನ
D
ಶ್ರೀಲಂಕಾ
Question 9 Explanation: 
ಭಾರತ

ಬೆಂಗಳೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ 2017 ಐಸಿಸಿ ಟಿ-20 ಅಂಧರ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆ ಮೂಲಕ ಸತತ ಎರಡನೇ ಬಾರಿಗೆ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

Question 10

10. “ಇಂಟರ್ನ್ಯಾಷನಲ್ ಡೇ ಆಫ್ ವುಮೆನ್ ಅಂಡ್ ಗರ್ಲ್ಸ್ ಇನ್ ಸೈನ್ಸ್ (International Day of Women and Girls in Science)” ಯಾವ ದಿನದಂದು ಆಚರಿಸಲಾಗುತ್ತದೆ?

A
ಫೆಬ್ರವರಿ 11
B
ಫೆಬ್ರವರಿ 12
C
ಫೆಬ್ರವರಿ 13
D
ಫೆಬ್ರವರಿ 14
Question 10 Explanation: 
ಫೆಬ್ರವರಿ 11
There are 10 questions to complete.

[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-13142017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ 

Leave a Comment

This site uses Akismet to reduce spam. Learn how your comment data is processed.