ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಫೆಬ್ರವರಿ ,15,16,2017
Question 1 |
1. “ಎರಡನೇ ಅಂತಾರಾಷ್ಟ್ರೀಯ ಸ್ಪೈಸ್ (ಮಸಾಲೆ ಪದಾರ್ಥ) ಸಮಾವೇಶ” ಯಾವ ರಾಜ್ಯದಲ್ಲಿ ನಡೆಯಿತು?
ಕೇರಳ | |
ಮಹಾರಾಷ್ಟ್ರ | |
ತಮಿಳುನಾಡು | |
ಕರ್ನಾಟಕ |
ಕೇರಳದ ಕೊವಲಂನಲ್ಲಿ ಎರಡನೇ ಅಂತಾರಾಷ್ಟ್ರೀಯ ಸ್ಪೈಸ್ ಸಮಾವೇಶ ಫೆಬ್ರವರಿ 12 ರಂದು ಆರಂಭಗೊಂಡಿತು. ಆಲ್ ಇಂಡಿಯಾ ಸ್ಪೈಸಸ್ ಎಕ್ಸ್ ಪೋರ್ಟರ್ಸ್ ಫೋರಂ ಈ ಸಮಾವೇಶವನ್ನು ಆಯೋಜಿಸುತ್ತಿದೆ.
Question 2 |
2. ಈ ಮುಂದಿನ ಯಾವ ರಾಜ್ಯದಲ್ಲಿ “2017 UNESCO ನೈಸರ್ಗಿಕ ಪಾರಂಪರಿಕ ಉತ್ಸವವನ್ನು (Natural Heritage Festival)” ಆಯೋಜಿಸಲಾಗಿತ್ತು?
ರಾಜಸ್ತಾನ | |
ಹಿಮಾಚಲ ಪ್ರದೇಶ | |
ಸಿಕ್ಕಿಂ | |
ತೆಲಂಗಣ |
“2017 UNESCO ನೈಸರ್ಗಿಕ ಪಾರಂಪರಿಕ ಉತ್ಸವವನ್ನು ಹಿಮಾಚಲ ಪ್ರದೇಶದ ದಿ ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ ನಲ್ಲಿ ಆಯೋಜಿಸಲಾಗಿತ್ತು. ಭಾರತೀಯ ವನ್ಯಜೀವಿ ಸಂಸ್ಥೆ ಸಹಯೋಗದಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿತ್ತು.
Question 3 |
3. ಜರ್ಮನಿಯ ನೂತನ ಅಧ್ಯಕ್ಷರಾಗಿ ಈ ಕೆಳಗಿನ ಯಾರು ಆಯ್ಕೆಯಾಗಿದ್ದಾರೆ?
ಜೊಬಿನ್ ಗಾಕ್ | |
ಕ್ರಿಸ್ಚಿಯನ್ ವುಲ್ಫ್ | |
ಫ್ರಾಂಕ್ – ವಾಲ್ಟರ್ ಸ್ಟೈನ್ ಮಿಯರ್ | |
ಒಲಿವಿಯಾ ಜೋನ್ಸ್ |
ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಸದಸ್ಯ ಫ್ರಾಂಕ್ – ವಾಲ್ಟರ್ ಸ್ಟೈನ್ ಮಿಯರ್ ರವರು ಜರ್ಮನಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Question 4 |
4. ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ)ದ ನೂತನ ಅಧ್ಯಕ್ಷರು ಯಾರು?
ಅರುಣಾ ಭಾರ್ಗವ | |
ರವೀಶ್ ಚಂದ್ರ | |
ಸಂದೀಪ್ ಜಜೊಡಿಯ | |
ಸುನೀಲ್ ಕನೋರಿಯಾ |
ಮೊನ್ನೆಟ್ ಇಸ್ಪತ್ & ಎನರ್ಜಿ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ಸಂದೀಪ್ ಜಜೊಡಿಯ ಅವರು ಅಸೋಚಾಂನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಸುನೀಲ್ ಕನೋರಿಯಾ ಅವರ ಉತ್ತರಾಧಿಕಾರಿಯಾಗಿ ಸೇವೆ ನಿರ್ವಹಿಸಲಿದ್ದಾರೆ.
Question 5 |
5. 2017 ಬ್ರಿಕ್ಸ್ ಶೃಂಗಸಭೆಯ ಅತಿಥ್ಯ ವಹಿಸಲಿರುವ ದೇಶ _____________?
ಚೀನಾ | |
ಬ್ರೆಜಿಲ್ | |
ದಕ್ಷಿಣ ಆಫ್ರಿಕಾ | |
ರಷ್ಯಾ |
9ನೇ ಬ್ರಿಕ್ಸ್ ಶೃಂಗಸಭೆ ಚೀನಾದ ಕ್ಸಿಯಮೆನ್ ನಲ್ಲಿ ಸೆಪ್ಟೆಂಬರ್ 2017 ರಲ್ಲಿ ನಡೆಯಲಿದೆ. “ಬ್ರಿಕ್ಸ್: ಸ್ಟ್ರಾಂಗರ್ ಪಾರ್ಟನರ್ ಷಿಪ್ ಫಾರ್ ಎ ಬ್ರೈಟರ್ ಪ್ಯೂಚರ್” ಶೃಂಗಸಭೆಯ ಧ್ಯೇಯವಾಕ್ಯ.
Question 6 |
6. 2017 ಗ್ರ್ಯಾಮಿ ಪ್ರಶಸ್ತಿಯಲ್ಲಿ ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದುಕೊಂಡ ಭಾರತೀಯ ಮೂಲದ ಅಮೆರಿಕ ಸಂಗೀತಗಾರ ಯಾರು?
ಸಂದೀಪ್ ದಾಸ್ | |
ಸುಚೇಂದ್ರ ಗುಪ್ತಾ | |
ಅರವಿಂದ್ | |
ಮಧುಕರ್ ನಾಯಕ್ |
ಖ್ಯಾತ ತಬಲಾ ವಾದಕ ಸಂದೀಪ್ ದಾಸ್ ಅವರು ಪ್ರತಿಷ್ಠೆಯ ಗ್ರ್ಯಾಮಿ ಪ್ರಶಸ್ತಿಯನ್ನು ಜಯಿಸಿದ್ದಾರೆ. ಸಂದೀಪ್ ದಾಸ್ ಅವರು ತಮ್ಮ ಸಿಲ್ಕ್ ರೋಡ್ ಎನ್ಸೆಂಬಲ್ ತಂಡದೊಂದಿಗೆ ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
Question 7 |
7. ಭಾರತದ ಮೊದಲ ತೇಲುವ ಪ್ರಾಥಮಿಕ ಶಾಲೆಯನ್ನು ಯಾವ ರಾಜ್ಯದಲ್ಲಿ ಆರಂಭಿಸಲಾಯಿತು?
ಮಣಿಪುರ | |
ಸಿಕ್ಕಿಂ | |
ಕೇರಳ | |
ಅಸ್ಸಾಂ |
ಮಣಿಪುರದಲ್ಲಿ ದೇಶದ ಮೊದಲ ತೇಲುವ ಪ್ರಾಥಮಿಕ ಶಾಲೆಯನ್ನು ತೆರೆಯಲಾಗಿದೆ. ಲೋಕ್ತಕ್ ಸರೋವರ ಮೀನುಗಾರರ ಒಕ್ಕೂಟ ಹಾಗೂ ಪೀಪಲ್ ರಿಸೋರ್ಸ್ ಡೆವೆಲಪ್ಮೆಂಟ್ ಅಸೋಸಿಯೇಷನ್ ಎನ್ಜಿಓ ಈ ಶಾಲೆಯನ್ನು ಆರಂಭಿಸಿದೆ.
Question 8 |
8. “Army and Nation: The Military and Indian Democracy since Independence” ಪುಸ್ತಕದ ಲೇಖಕರು ________?
ಸುನೀಲ್ ಲಂಬಾ | |
ವಿ. ಕೆ. ಸಿಂಗ್ | |
ಸ್ಟೆವೆನ್ ವಿಲ್ಕಿನ್ ಸನ್ | |
ಶಿವ ಕುನಲ್ ವರ್ಮಾ |
“Army and Nation: The Military and Indian Democracy since Independence” ಪುಸ್ತಕವನ್ನು ಯಾಲೆ ವಿಶ್ವವಿದ್ಯಾಲಯದ ಪ್ರೊಫೆಸರ್ ಸ್ಟೆವೆನ್ ವಿಲ್ಕಿನ್ ಸನ್ ಅವರು ಬರೆದಿದ್ದಾರೆ.
Question 9 |
9. ಪಾಕಿಸ್ತಾನದ ಮೊದಲ ಮಹಿಳಾ ವಿದೇಶಾಂಗ ಕಾರ್ಯದರ್ಶಿಯಾಗಿ ಈ ಮುಂದಿನ ಯಾರು ನೇಮಕಗೊಂಡಿದ್ದಾರೆ?
ಬೆನಿಜಿರ್ ಖಾನ್ | |
ತೆಹ್ಮಿನಾ ಜಾಂಜುವಾ | |
ಬಹಮೀನ್ ಶರೀಫ್ | |
ಶಬೀನಾ ಜಾಂಜುವಾ |
ಪಾಕಿಸ್ತಾನದ ಹೊಸ ವಿದೇಶಾಂಗ ಕಾರ್ಯದರ್ಶಿಯಾಗಿ ಅಂಬಾಸಡರ್ ಮತ್ತು ವಿಶ್ವಸಂಸ್ಥೆಯಲ್ಲಿ ಪಾಕ್ನ ಖಾಯಂ ಪ್ರತಿನಿಧಿಯಾಗಿರುವ ತೆಹ್ಮಿನಾ ಜಾಂಜುವಾ ಅವರು ನೇಮಕಗೊಂಡಿದ್ದಾರೆ. ತೆಹ್ಮಿನಾ ಜಾಂಜುವಾ ಪಾಕ್ ನ ಮೊದಲ ಮಹಿಳಾ ವಿದೇಶಾಂಗ ಕಾರ್ಯದರ್ಶಿಯಾಗಿದ್ದಾರೆ. ಇಝಾಝ್ ಅಹ್ಮದ್ ಚೌಧರಿ ಅವರ ಸ್ಥಾನಕ್ಕೆ ತೆಹ್ಮಿನಾ ನೇಮಕಗೊಂಡಿದ್ದಾರೆ. ಅಹ್ಮದ್ ಚೌಧರಿ ಅವರು ವಿಶ್ವಸಂಸ್ಥೆಯ ಹೊಸ ಅಂಬಾಸಡರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ತೆಹ್ಮಿನಾ ವಿದೇಶಾಂಗ ಸೇವಾ ಅಧಿಕಾರಿಯಾಗಿ 32 ವರ್ಷಗಳ ಅನುಭವ ಹೊಂದಿದ್ದಾರೆ. ಅವರು ಇಟಲಿ ಅಂಬಾಸಡರ್ ಆಗಿ 2011ರಿಂದ 2015ರ ತನಕ ಸೇವೆ ಸಲ್ಲಿಸಿದ್ದರು. 2011ರಲ್ಲಿ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರೆ ಆಗಿ ಸೇವೆ ಸಲ್ಲಿಸಿದ್ದರು. ತೆಹ್ಮಿನಾ ಅವರು ಇಸ್ಲಾಮಾಬಾದ್ ಮತ್ತು ಕೊಲಂಬಿಯಾ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
Question 10 |
10. ಭಾರತದ ಮೊದಲ ನಗದು ರಹಿತ ಟೌನ್ ಷಿಪ್ ಎನಿಸಿರುವ GNFC ಟೌನ್ ಪಿಪ್ ಯಾವ ರಾಜ್ಯದಲ್ಲಿದೆ?
ರಾಜಸ್ತಾನ | |
ಗುಜರಾತ್ | |
ಮಧ್ಯ ಪ್ರದೇಶ | |
ಮಹಾರಾಷ್ಟ್ರ |
ಗುಜರಾತ್ ನರ್ಮದಾ ವ್ಯಾಲಿ ಫರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ (GNFC) ಟೌನ್ ಷಿಪ್ ದೇಶದ ಮೊದಲ ನಗದು ರಹಿತ ಟೌನ್ ಷಿಪ್ ಎಂಬ ಗೌರವವಕ್ಕೆ ಪಾತ್ರವಾಗಿದೆ. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು ಫೆಬ್ರವರಿ13, 2017 ರಂದು ಉದ್ಘಾಟಿಸಿದರು. ಇಲ್ಲಿನ ಎಲ್ಲಾ ಅಂಗಡಿಗಳು ತಮ್ಮ ವ್ಯವಹಾರವನ್ನು ನಗದು ರಹಿತವಾಗಿ ನಡೆಸುತ್ತಿವೆ.
[button link=”http://www.karunaduexams.com/wp-content/uploads/2017/03/ಸಾಮಾನ್ಯ-ಜ್ಞಾನ-ಮತ್ತು-ಪ್ರಚಲಿತ-ವಿದ್ಯಮಾನ-ಕ್ವಿಜ್-ಫೆಬ್ರವರಿ-15162017.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
super